ಒಬ್ಬರದ್ದು ಕಣ್ಣೀರು, ಇನ್ನೊಬ್ಬರದ್ದು ಹರಟೆ; ಒಂದೇ ಬ್ಯಾರಕ್ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್
ನಟ ದರ್ಶನ್ ಅವರು ಸದ್ಯ ರೇಣುಕಾಸ್ವಾಮಿ ಕೇಸ್ನಲ್ಲಿ ಮತ್ತೆ ಜೈಲು ಸೇರಿದ್ದಾರೆ. ಈ ಪ್ರಕರಣದಲ್ಲಿ ಹಲವು ಸಾಕ್ಷಿಗಳು ಸಿಕ್ಕಿದ್ದು ದರ್ಶನ್ಗೆ ಮುಳುವಾಗಿದೆ. ಈಗ ದರ್ಶನ್ ಸೇರಿ ನಾಲ್ವರು ಒಂದೇ ಸೆಲ್ನಲ್ಲಿ ಇದ್ದಾರೆ. ಇದಕ್ಕೆ ಕಾರಣ ಕೂಡ ಇದೆ. ಆ ಬಗ್ಗೆ ಇಲ್ಲಿದೆ ವಿವರ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ (Darshan) ಹಾಗೂ ಇತರ ಏಳು ಆರೋಪಿಗಳ ಜಾಮೀನು ರದ್ದಾಗಿದೆ. ಈ ಬೆನ್ನಲ್ಲೇ ದರ್ಶನ್ ಸೇರಿದಂತೆ ಬೆಂಗಳೂರಿನಲ್ಲಿದ್ದ ಐವರನ್ನು ಬಂಧಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ರಾತ್ರಿ ಕಳೆದಿದೆ. ಒಂದೇ ಬ್ಯಾರಕ್ನಲ್ಲಿ ದರ್ಶನ್, ನಾಗರಾಜ್, ಲಕ್ಷ್ಮಣ್, ಪ್ರದೋಶ್ನ ಇಡಲಾಗಿದೆ. ಸದ್ಯ ಇವರು ಕ್ವಾರಂಟೈನ್ ಬ್ಯಾರಕ್ನಲ್ಲಿ ಇದ್ದಾರೆ. ಶೀಘ್ರವೇ ಇವರಿಗೆ ಕೈದಿ ಸಂಖ್ಯೆ ಸಿಗಲಿದೆ. ನಿನ್ನೆ ರಾತ್ರಿ ಆರೋಪಿಗಳಿಗೆ ಮುದ್ದೆ, ಚಪಾತಿ, ಅನ್ನಸಾಂಬರ್ ಊಟ ನೀಡಲಾಗಿದೆ. ರಾತ್ರಿ ಜೈಲಿನಲ್ಲಿ ನಿದ್ದೆ ಮಾಡದೆ ದರ್ಶನ್ ಮತ್ತು ನಾಗರಾಜ್ ಇತರರು ಹರಟೆ ಹೊಡೆದಿದ್ದಾರೆ. ಜೈಲಿನಲ್ಲಿ ತಡರಾತ್ರಿವರೆಗೂ ಪ್ರದೋಶ್ ಕಣ್ಣೀರು ಹಾಕಿದ್ದಾರೆ. ಜೈಲಿನ ಮಹಿಳಾ ಬ್ಯಾರಕ್ನಲ್ಲಿ ಪವಿತ್ರಾಗೌಡ ಅವರನ್ನು ಇರಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

