AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೀನ್’ ಸಿನಿಮಾ ಯಶಸ್ಸು: ಸಹನಟನಿಗೆ 9 ಲಕ್ಷ ರೂ. ಮೌಲ್ಯದ ವಾಚ್ ನೀಡಿದ ಸೂರ್ಯ

ನಟ ಸೂರ್ಯ ಅವರು ಈಗ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಅವರು ನಟಿಸಿದ ‘ಸೀನ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ಅವರು ಸಹನಟ ನಸ್ಲೆನ್‌ಗೆ 9 ಲಕ್ಷ ರೂ. ಮೌಲ್ಯದ ದುಬಾರಿ ವಾಚನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

‘ಸೀನ್’ ಸಿನಿಮಾ ಯಶಸ್ಸು: ಸಹನಟನಿಗೆ 9 ಲಕ್ಷ ರೂ. ಮೌಲ್ಯದ ವಾಚ್ ನೀಡಿದ ಸೂರ್ಯ
Suriya, Naslen
ಮದನ್​ ಕುಮಾರ್​
|

Updated on: Nov 19, 2026 | 1:21 PM

Share

ಕಾಲಿವುಡ್ ಸ್ಟಾರ್ ನಟ ಸೂರ್ಯ ಅವರಿಗೆ 2026ನೇ ವರ್ಷ ಅತ್ಯಂತ ಅದೃಷ್ಟದಾಯಕವಾಗಿದೆ. ಸತತ ಮೂರು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿರುವ ಸೂರ್ಯ ಅವರ ಇತ್ತೀಚಿನ ‘ಸೀನ್’ ಸಿನಿಮಾ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈ ಭರ್ಜರಿ ಯಶಸ್ಸಿನ ಸಂಭ್ರಮದಲ್ಲಿ ಸೂರ್ಯ ಅವರು ತಮ್ಮ ಸಹನಟ, ಮಲಯಾಳಂ ಯುವ ನಟ ನಸ್ಲೆನ್ ಅವರಿಗೆ ಅತ್ಯಂತ ದುಬಾರಿ ಉಡುಗೊರೆಯೊಂದನ್ನು ನೀಡಿದ್ದಾರೆ.

‘ಸೀನ್’ ಚಿತ್ರದಲ್ಲಿನ ನಸ್ಲೆನ್ ಅವರ ಅದ್ಭುತ ಅಭಿನಯವನ್ನು ಮೆಚ್ಚಿಕೊಂಡಿರುವ ಸೂರ್ಯ, ಪ್ರೀತಿಯ ಕಾಣಿಕೆಯಾಗಿ ‘ಕಾರ್ಟಿಯರ್’ ಕಂಪನಿಯ ವಾಚ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ‘ಕಾರ್ಟಿಯರ್ ಸ್ಯಾಂಟೋಸ್’ ವಾಚ್‌ನ ಬೆಲೆ ಬರೋಬ್ಬರಿ 9 ಲಕ್ಷದಿಂದ 12 ಲಕ್ಷ ರೂಪಾಯಿ ಎಂದು ವರದಿಯಾಗಿದೆ. ಇತ್ತೀಚೆಗೆ ತಮ್ಮ ಹೊಸ ಚಿತ್ರದ ಪ್ರಚಾರಕ್ಕಾಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಸ್ಲೆನ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ನಸ್ಲೆನ್ ಅವರಿಗೆ ಸೂರ್ಯ ನೀಡಿದ ವಾಚ್ ನೋಡಿದ ಸಹನಟ ಕುಂಚಾಕೋ ಬೋಬನ್ ಅಚ್ಚರಿಗೊಂಡು, ‘ನನಗೂ ಸೂರ್ಯ ಅವರ ಕಾಂಟ್ಯಾಕ್ಟ್ ನಂಬರ್ ಕೊಡು’ ಎಂದು ತಮಾಷೆ ಮಾಡಿದ್ದಾಗಿ ನಸ್ಲೆನ್ ನಗುತ್ತಾ ಹೇಳಿಕೊಂಡಿದ್ದಾರೆ. ಅಲ್ಲದೆ, ‘ಸೀನ್’ ಚಿತ್ರದ ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣದ ವೇಳೆ ಸೂರ್ಯ ತಮ್ಮನ್ನು ಸ್ವಂತ ಮಗನಂತೆ ನೋಡಿಕೊಂಡರು ಹಾಗೂ ಪ್ರತಿ ಶಾಟ್‌ಗೂ ಮುನ್ನ ಸುರಕ್ಷತಾ ಕವಚಗಳನ್ನು ಧರಿಸಿದ್ದೇನೆಯೇ ಎಂದು ಖಚಿತಪಡಿಸಿಕೊಳ್ಳುತ್ತಿದ್ದರು ಎಂದು ನಸ್ಲೆನ್ ಸ್ಮರಿಸಿದ್ದಾರೆ.

2019ರಲ್ಲಿ ‘ತಣ್ಣೀರ್ ಮಥನ್ ದಿನಂಗಳ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಸ್ಲೆನ್, 2024ರಲ್ಲಿ ಬಿಡುಗಡೆಯಾದ ‘ಪ್ರೇಮಲು’ ಚಿತ್ರದ ಮೂಲಕ ದಕ್ಷಿಣ ಭಾರತದಾದ್ಯಂತ ಮನೆಮಾತಾದರು. 2025ರಲ್ಲಿ ಕಲ್ಯಾಣಿ ಪ್ರಿಯದರ್ಶನ್ ಜೊತೆ ನಟಿಸಿದ ‘ಲೋಕಾ ಚಾಪ್ಟರ್ 1: ಚಂದ್ರ’ ಚಿತ್ರ ವಿಶ್ವಾದ್ಯಂತ 301 ಕೋಟಿ ರೂ. ಗಳಿಸಿ ದಾಖಲೆ ಬರೆದಿತ್ತು. ಇದೀಗ ‘ಸೀನ್’ ಮೂಲಕ ನಸ್ಲೆನ್ ತಮಿಳು ಚಿತ್ರರಂಗಕ್ಕೂ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ: ‘ಸೀನ್’ ಸಿನಿಮಾ ಮೂಲಕ ಈ ವರ್ಷದಲ್ಲಿ ಮೂರನೇ ಗೆಲುವು ಕಂಡ ನಟ ಸೂರ್ಯ

ಜಿತು ಮಾಧವನ್ ನಿರ್ದೇಶನದ ‘ಸೀನ್’ ಚಿತ್ರದಲ್ಲಿ ಸೂರ್ಯ ದೃಷ್ಟಿಹೀನ ಡಿಎಸ್‌ಪಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಜ್ರಿಯಾ ನಜೀಮ್, ಆನಂದರಾಜ್, ಲಾಲ್ ಮುಂತಾದವರು ನಟಿಸಿದ್ದಾರೆ. ಬಿಡುಗಡೆಯಾದ 13 ದಿನಗಳಲ್ಲಿ ಈ ಚಿತ್ರ ಭಾರತದಲ್ಲಿ 145 ಕೋಟಿ ರೂ. ಹಾಗೂ ವಿಶ್ವಾದ್ಯಂತ 256.50 ಕೋಟಿ ರೂ. ಗಳಿಸುವ ಮೂಲಕ ಸೂರ್ಯ ಅವರ ಹಿಂದಿನ ಚಿತ್ರ ‘ವಿಶ್ವನಾಥ್ ಆ್ಯಂಡ್ ಸನ್ಸ್’ ದಾಖಲೆಯನ್ನು ಮುರಿದಿದೆ. ಖ್ಯಾತ ನಿರ್ದೇಶಕ ಅಟ್ಲೀ ಕೂಡ ಈ ಚಿತ್ರವನ್ನು ಹಾಡಿಹೊಗಳಿದ್ದು, ನಸ್ಲೆನ್ ಅವರನ್ನು ಭವಿಷ್ಯದ ಸೂಪರ್‌ಸ್ಟಾರ್ ಎಂದು ಬಣ್ಣಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ
ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ
ಗುಜರಿ ವ್ಯಾಪಾರಿ ಹತ್ಯೆ ಪ್ರಕರಣ: ಕಾಂಗ್ರೆಸ್​​ ಮುಖಂಡ ಶರಣು
ಗುಜರಿ ವ್ಯಾಪಾರಿ ಹತ್ಯೆ ಪ್ರಕರಣ: ಕಾಂಗ್ರೆಸ್​​ ಮುಖಂಡ ಶರಣು
ಕಾಡಾನೆ ದಾಳಿಗೆ ರೈತ ಬಲಿ ಬೆನ್ನಲ್ಲೇ ಎನ್‌.ಆರ್‌.ಪುರ ಪಟ್ಟಣ ಸ್ತಬ್ಧ
ಕಾಡಾನೆ ದಾಳಿಗೆ ರೈತ ಬಲಿ ಬೆನ್ನಲ್ಲೇ ಎನ್‌.ಆರ್‌.ಪುರ ಪಟ್ಟಣ ಸ್ತಬ್ಧ
ಆರತಕ್ಷತೆ ದಿನವೇ ಮದುವೆಗೆ ನಿರಾಕರಿಸಿ ಮಾತ್ರೆ ನುಂಗಿದ ವರ; ಮುಂದೇನಾಯ್ತು
ಆರತಕ್ಷತೆ ದಿನವೇ ಮದುವೆಗೆ ನಿರಾಕರಿಸಿ ಮಾತ್ರೆ ನುಂಗಿದ ವರ; ಮುಂದೇನಾಯ್ತು
ಅಹಿಂದ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು
ಅಹಿಂದ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು
ಆಸಿಯಾ vs ಗಾನವಿ; ಯಾರಾಗ್ತಾರೆ ಬಿಗ್ ಬಾಸ್ ಮನೆಯ ಮಹಾರಾಣಿ?
ಆಸಿಯಾ vs ಗಾನವಿ; ಯಾರಾಗ್ತಾರೆ ಬಿಗ್ ಬಾಸ್ ಮನೆಯ ಮಹಾರಾಣಿ?
ತೀವ್ರ ಚಳಿ ನಡುವೆಯೂ ರಾತ್ರಿ ಫ್ರೀಡಂ ಪಾರ್ಕಲ್ಲೇ ಉಳಿದ ಆಶಾ ಕಾರ್ಯಕರ್ತೆಯರು
ತೀವ್ರ ಚಳಿ ನಡುವೆಯೂ ರಾತ್ರಿ ಫ್ರೀಡಂ ಪಾರ್ಕಲ್ಲೇ ಉಳಿದ ಆಶಾ ಕಾರ್ಯಕರ್ತೆಯರು