‘ರಾಬರ್ಟ್ ಪ್ಯಾಟಿನ್ಸನ್ ಅತ್ಯಂತ ಹೇಡಿ ಜೇಮ್ಸ್ ಬಾಂಡ್’: ಕ್ರಿಸ್ಟೋಫರ್ ನೋಲನ್ ಹೀಗೆ ಹೇಳಿದ್ದೇಕೆ?
ಹಾಲಿವುಡ್‌ನ ಖ್ಯಾತ ನಟ ರಾಬರ್ಟ್ ಪ್ಯಾಟಿನ್ಸನ್ ಅವರು ಹೊಸ ಜೇಮ್ಸ್ ಬಾಂಡ್ ಆಗಿ ಪ್ರೇಕ್ಷಕರ ಎದುರು ಬರಲಿದ್ದಾರೆ. ಅವರ ಆಯ್ಕೆಯ ಬಗ್ಗೆ ಪ್ರೇಕ್ಷಕರು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರು ಬಹಳ ತಮಾಷೆಯಾಗಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಡೇನಿಯಲ್ ಕ್ರೇಗ್ ಅವರ ನಂತರ ಮುಂದಿನ ಜೇಮ್ಸ್ ಬಾಂಡ್ ಪಾತ್ರಕ್ಕೆ ಆಯ್ಕೆಯಾಗಿರುವ ಹಾಲಿವುಡ್ ನಟ ರಾಬರ್ಟ್ ಪ್ಯಾಟಿನ್ಸನ್ ಅವರಿಗೆ ಬ್ರಾಡ್ ಪಿಟ್, ಎಲಿಜಬೆತ್ ಡೆಬಿಕಿ ಮತ್ತು ಜಾರ್ಜ್ ಲಾಜೆನ್ಬಿ ಸೇರಿದಂತೆ ಹಲವು ತಾರೆಯರು ಶುಭ ಹಾರೈಸಿದ್ದಾರೆ. ಆದರೆ, ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಮಾತ್ರ ಪ್ಯಾಟಿನ್ಸನ್ ಅವರ ಆ್ಯಕ್ಷನ್ ಕೌಶಲ್ಯದ ಬಗ್ಗೆ ತಮಾಷೆ ಮಾಡಿದ್ದು, ಅವರನ್ನು ‘ನೀವು ಇದುವರೆಗೆ ನೋಡಿರುವ ಅತ್ಯಂತ ಹೇಡಿ ಜೇಮ್ಸ್ ಬಾಂಡ್’ ಎಂದು ಕರೆದಿದ್ದಾರೆ.
ನೋಲನ್ ಮತ್ತು ಪ್ಯಾಟಿನ್ಸನ್ ಈ ಹಿಂದೆ ‘ಟೆನೆಟ್’ ಮತ್ತು ‘ದಿ ಆಡಸ್ಸಿ’ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ವೆಸ್ಟ್ ಹಾಲಿವುಡ್‌ನ ಡೈರೆಕ್ಟರ್ಸ್ ಗಿಲ್ಡ್ ಆಫ್ ಅಮೆರಿಕಾದಲ್ಲಿ ನಡೆದ ‘ದಿ ಆಡಸ್ಸಿ’ ಚಿತ್ರದ ವಿಶೇಷ ಪ್ರದರ್ಶನದ ನಂತರ, ಖ್ಯಾತ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ನಡೆಸಿಕೊಟ್ಟ ಸಂವಾದದಲ್ಲಿ ನೋಲನ್ ಈ ಹಾಸ್ಯ ಚಟಾಕಿ ಹಾರಿಸಿದ್ದಾರೆ. ‘ದಿ ಆಡಸ್ಸಿ’ ಚಿತ್ರದ ಅಂತ್ಯದಲ್ಲಿ ಬರುವ ಪ್ಯಾಟಿನ್ಸನ್ (ಆಂಟಿನೋಸ್) ಮತ್ತು ಮ್ಯಾಟ್ ಡೇಮನ್ (ಒಡಿಸ್ಸಿಯಸ್) ನಡುವಿನ ಆ್ಯಕ್ಷನ್ ದೃಶ್ಯವನ್ನು ಸ್ಪೀಲ್‌ಬರ್ಗ್ ಶ್ಲಾಘಿಸಿದಾಗ ಪ್ರತಿಕ್ರಿಯಿಸಿದ ನೋಲನ್, ‘ರಾಬ್ ಪ್ಯಾಟಿನ್ಸನ್ ನೀವು ಇದುವರೆಗೆ ನೋಡಿರುವ ಅತ್ಯಂತ ಹೇಡಿ ಜೇಮ್ಸ್ ಬಾಂಡ್’ ಎಂದು ನಗೆಚಟಾಕಿ ಹಾರಿಸಿದರು.
Christopher Nolan jokingly calls Robert Pattinson the ‘Most Cowardly James Bond Ever’ after his scene in The Odyssey:
Spielberg: I thought George Cottle, your stunt coordinator did an amazing job at the whole gaffing of the fight at the end. Yeah, was just phenomenal with Robert Pattinson, you know, it was just really something to behold.
Nolan: Yeah, Rob Pattinson is the most cowardly James Bond you’ve ever seen.
Spielberg: I wonder if your film influenced this casting.
Nolan: […] But because there is this, this business of, you know, Telemachus locking weapons up and then them not being appropriately locked up, and it’s ambiguous in the poem, as is the trial of the axis, right? So you have to sort of find a way to, to make sense of it, and that was our way. And then we just set loose Rob in the corner just watching it all happen and refusing to get involved with it in that great way. You know, it’s just a really fun thing to watch.
(video via George Cottle)
— Fansite | Robert Pattinson Photos (@pattinsonphotos) November 18, 2026
ಚಿತ್ರದ ಆ್ಯಕ್ಷನ್ ನಿರ್ದೇಶಕರು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ, ಸಾಕಷ್ಟು ಪೂರ್ವಾಭ್ಯಾಸದೊಂದಿಗೆ ಸಾಹಸ ದೃಶ್ಯಗಳನ್ನು ಯೋಜಿಸಿದ್ದರು ಎಂದು ನೋಲನ್ ವಿವರಿಸಿದರು. ಸಹನಟರಾದ ಮ್ಯಾಟ್ ಡೇಮನ್ ಮತ್ತು ಟಾಮ್ ಹಾಲೆಂಡ್ ಅವರನ್ನು ಅದ್ಭುತ ಅಥ್ಲೀಟ್ ಎಂದು ಹೊಗಳಿದ ಅವರು, ಪ್ಯಾಟಿನ್ಸನ್ ಮಾತ್ರ ಸೆಟ್‌ನಲ್ಲಿ ಸಾಹಸ ದೃಶ್ಯಗಳಲ್ಲಿ ಪಾಲ್ಗೊಳ್ಳುವ ಬದಲು ಮೂಲೆಯಲ್ಲಿ ಕುಳಿತು ಇತರರು ಫೈಟ್ ಮಾಡುವುದನ್ನು ನೋಡುತ್ತಾ ಖುಷಿಪಡುತ್ತಿದ್ದರು ಎಂದು ತಮಾಷೆಯಾಗಿ ಹೇಳಿದರು.
ನವೆಂಬರ್ 16ರಂದು ‘ಅಮೆಜಾನ್ ಎಂಜಿಎಂ ಸ್ಟುಡಿಯೋಸ್’ ರಾಬರ್ಟ್ ಪ್ಯಾಟಿನ್ಸನ್ ಅವರನ್ನು ಅಧಿಕೃತವಾಗಿ ಮುಂದಿನ ಜೇಮ್ಸ್ ಬಾಂಡ್ ಎಂದು ಘೋಷಿಸಿತು. ಈ ಮೂಲಕ ಅಧಿಕೃತ ಬಾಂಡ್ ಸರಣಿಯಲ್ಲಿ ಬ್ರಿಟಿಷ್ ಗೂಢಚಾರನ ಪಾತ್ರ ನಿರ್ವಹಿಸುತ್ತಿರುವ ಏಳನೇ ನಟ ಎಂಬ ಹೆಗ್ಗಳಿಕೆಗೆ 40ರ ಪ್ರಾಯದ ಪ್ಯಾಟಿನ್ಸನ್ ಪಾತ್ರರಾಗಿದ್ದಾರೆ. 2021ರ ‘ನೋ ಟೈಮ್ ಟು ಡೈ’ ಚಿತ್ರದ ನಂತರ ಡೇನಿಯಲ್ ಕ್ರೇಗ್ ಈ ಪಾತ್ರದಿಂದ ನಿವೃತ್ತರಾಗಿದ್ದರು.
ಇದನ್ನೂ ಓದಿ: ರಾಬರ್ಟ್ ಪ್ಯಾಟಿನ್ಸನ್ ಹೊಸ ಜೇಮ್ಸ್ ಬಾಂಡ್: ಖಳನಾಗಲು ಮುಂದೆ ಬಂದ ನಟ ಬ್ರಾಡ್ ಪಿಟ್
26ನೇ ಬಾಂಡ್ ಚಿತ್ರವನ್ನು ‘ಡ್ಯೂನ್’ ಮತ್ತು ‘ಬ್ಲೇಡ್ ರನ್ನರ್ 2049’ ಖ್ಯಾತಿಯ ಡೆನಿಸ್ ವಿಲ್ಲೆನ್ಯೂವ್ ನಿರ್ದೇಶಿಸಲಿದ್ದು, ‘ಪೀಕಿ ಬ್ಲೈಂಡರ್ಸ್’ ಖ್ಯಾತಿಯ ಸ್ಟೀವನ್ ನೈಟ್ ಚಿತ್ರಕಥೆ ಬರೆಯಲಿದ್ದಾರೆ. ‘ಟ್ವಿಲೈಟ್’ ಸರಣಿಯ ಮೂಲಕ ಜಾಗತಿಕ ಮನ್ನಣೆ ಗಳಿಸಿ, ನಂತರ ‘ದಿ ಬ್ಯಾಟ್‌ಮ್ಯಾನ್’, ‘ಟೆನೆಟ್’, ‘ದಿ ಲೈಟ್‌ಹೌಸ್’ ರೀತಿಯ ವಿಭಿನ್ನ ಚಿತ್ರಗಳ ಮೂಲಕ ಗಮನ ಸೆಳೆದಿರುವ ಪ್ಯಾಟಿನ್ಸನ್ ಅವರು, ಬಾಂಡ್ ಪಾತ್ರ ಸಿಕ್ಕಿರುವುದು ತಮ್ಮ ಜೀವನದ ಅತ್ಯಂತ ದೊಡ್ಡ ಗೌರವ ಎಂದು ಬಣ್ಣಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




