AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇವರೇ ನೋಡಿ ಹೊಸ ಜೇಮ್ಸ್ ಬಾಂಡ್, ಆಯ್ಕೆ ಅಧಿಕೃತ

ಜೇಮ್ಸ್ ಬಾಂಡ್​​ ಸರಣಿಯ ಪ್ರತಿ ಸಿನಿಮಾದ ಹಿಂದೆ ಅಪಾರ ಪ್ರತಿಭಾವಂತ ತಂತ್ರಜ್ಞರು ಕಲಾವಿದರು ಕೆಲಸ ಮಾಡುತ್ತಾರೆ. ಪ್ರತಿಯೊಬ್ಬರನ್ನೂ ಬಹಳ ಜಾಗರೂಕತೆಯಿಂದ ಆಯ್ಕೆ ಮಾಡಲಾಗುತ್ತದೆ. ಅದರಲ್ಲೂ ನಾಯಕ ಜೇಮ್ಸ್ ಬಾಂಡ್ ಪಾತ್ರ ನಿರ್ವಹಿಸುವ ನಟನ ಆಯ್ಕೆಯ ಬಗ್ಗೆ ನಿರ್ಮಾಣ ಸಂಸ್ಥೆ ಬಹಳ ಜಾಗರೂಕತೆವಹಿಸುತ್ತದೆ. ಹಲವು ಮಾನದಂಡಗಳ ಆಧಾರದ ಮೇಲೆ ಜೇಮ್ಸ್ ಬಾಂಡ್ ಸಿನಿಮಾದ ನಾಯಕನ ಆಯ್ಕೆ ಆಗುತ್ತದೆ. ಇದೀಗ ಹೊಸ ಜೇಮ್ಸ್ ಬಾಂಡ್ ಅನ್ನು ನಿರ್ಮಾಣ ಸಂಸ್ಥೆ ಆಯ್ಕೆ ಮಾಡಿದೆ.

ಇವರೇ ನೋಡಿ ಹೊಸ ಜೇಮ್ಸ್ ಬಾಂಡ್, ಆಯ್ಕೆ ಅಧಿಕೃತ
Robert Pattinson
ಮಂಜುನಾಥ ಸಿ.
|

Updated on: Nov 17, 2026 | 11:11 AM

Share

ಮುಖ್ಯಾಂಶಗಳು

  • ಹೊಸ ಜೇಮ್ಸ್ ಬಾಂಡ್ ಆಯ್ಕೆ ಆಗಿದೆ
  • ಹಾಲಿವುಡ್ ನಟ ರಾಬರ್ಟ್ ಪ್ಯಾಟಿಸನ್ ಆಯ್ಕೆ
  • ಶೀಘ್ರವೇ ಹೊಸ ಬಾಂಡ್ ಸಿನಿಮಾ ಚಿತ್ರೀಕರಣ

ಅತ್ಯಂತ ಹಳೆಯ ಸಿನಿಮಾ ಫ್ರಾಂಚೈಸ್ ಅಥವಾ ಸಿನಿಮಾ ಸರಣಿಗಳಲ್ಲಿ ಪ್ರಮುಖವಾದುದು ‘ಜೇಮ್ಸ್ ಬಾಂಡ್’ ಸರಣಿ. 1962 ರಲ್ಲಿ ಆರಂಭವಾದ ಜೇಮ್ಸ್ ಬಾಂಡ್ ಸಿನಿಮಾ ಸರಣಿ ಈಗಲೂ ನಿರ್ಮಾಣಗೊಂಡು ಬಿಡುಗಡೆ ಆಗುತ್ತಲೇ ಇದೆ. ಆರು ದಶಕಗಳ ಬಳಿಕವೂ ಸಹ ಸಿನಿಮಾ ಬೇಡಿಕೆ ಉಳಿಸಿಕೊಂಡಿರುವುದು ಮಾತ್ರವಲ್ಲ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗುತ್ತಿದೆ. ಜೇಮ್ಸ್ ಬಾಂಡ್​​ನ ಪ್ರತಿ ಸಿನಿಮಾದ ಹಿಂದೆ ಅಪಾರ ಪ್ರತಿಭಾವಂತ ತಂತ್ರಜ್ಞರು ಕಲಾವಿದರು ಕೆಲಸ ಮಾಡುತ್ತಾರೆ. ಪ್ರತಿಯೊಬ್ಬರನ್ನೂ ಬಹಳ ಜಾಗರೂಕತೆಯಿಂದ ಆಯ್ಕೆ ಮಾಡಲಾಗುತ್ತದೆ. ಅದರಲ್ಲೂ ನಾಯಕ ಜೇಮ್ಸ್ ಬಾಂಡ್ ಪಾತ್ರ ನಿರ್ವಹಿಸುವ ನಟನ ಆಯ್ಕೆಯ ಬಗ್ಗೆ ನಿರ್ಮಾಣ ಸಂಸ್ಥೆ ಬಹಳ ಜಾಗರೂಕತೆವಹಿಸುತ್ತದೆ. ಹಲವು ಮಾನದಂಡಗಳ ಆಧಾರದ ಮೇಲೆ ಜೇಮ್ಸ್ ಬಾಂಡ್ ಸಿನಿಮಾದ ನಾಯಕನ ಆಯ್ಕೆ ಆಗುತ್ತದೆ. ಇದೀಗ ಹೊಸ ಜೇಮ್ಸ್ ಬಾಂಡ್ ಅನ್ನು ನಿರ್ಮಾಣ ಸಂಸ್ಥೆ ಆಯ್ಕೆ ಮಾಡಿದೆ.

‘ಜೇಮ್ಸ್ ಬಾಂಡ್’ ಸಿನಿಮಾ ಸರಣಿಯ ಇತಿಹಾಸದ ಅತ್ಯುತ್ತಮ ಬಾಂಡ್​​ಗಳಲ್ಲಿ ಒಬ್ಬರೆನಿಸಿಕೊಂಡ ಡೇನಿಯಲ್ ಕ್ರೇಗ್ ಇನ್ನು ಮುಂದೆ ತಾವು ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ನಟನೆ ಮಾಡುವುದಿಲ್ಲ ಎಂದಿದ್ದಾರೆ. ಅವರ ನಿವೃತ್ತಿಯ ಬೆನ್ನಲ್ಲೆ ಹೊಸ ಜೇಮ್ಸ್ ಬಾಂಡ್ ಅನ್ನು ಹುಡುಕುವ ಕಾರ್ಯವನ್ನು ಎಂಜಿಎಂ ಸ್ಟುಡಿಯೋಸ್ ಆರಂಭಿಸಿತ್ತು. ಹಾಲಿವುಡ್​ ಮಾತ್ರವೇ ಅಲ್ಲದೆ ಬೇರೆ ಕೆಲವು ಚಿತ್ರರಂಗಗಳ ನಟರನ್ನು ಸಹ ಆಡಿಷನ್​​ ಮಾಡಲಾಯ್ತು. ಇದೀಗ ಅಧಿಕೃತವಾಗಿ ಹೊಸ ಜೇಮ್ಸ್ ಬಾಂಡ್ ಅನ್ನು ಆಯ್ಕೆ ಮಾಡಲಾಗಿದೆ. ಹಾಲಿವುಡ್​​ನಲ್ಲಿ ಈಗಾಗಲೇ ಕೆಲವು ಜನಪ್ರಿಯ ಸಿನಿಮಾಗಳಲ್ಲಿ ನಟನೆ ಮಾಡಿರುವ ಖ್ಯಾತ ನಟ ರಾಬರ್ಟ್ ಪ್ಯಾಟಿಸನ್ ಅವರೇ ಇನ್ನು ಮುಂದೆ ಜೇಮ್ಸ್ ಬಾಂಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

‘ಡೂನ್’, ‘ದಿ ಒಡಿಸ್ಸಿ’, ‘ದಿ ಬ್ಯಾಟ್‌ಮ್ಯಾನ್’ ನಂತಹ ಪ್ರಮುಖ ಪ್ರಾಜೆಕ್ಟ್‌ಗಳೊಂದಿಗೆ ರಾಬರ್ಟ್ ಪ್ಯಾಟಿನ್ಸನ್ ತಮ್ಮ ವೃತ್ತಿಜೀವನದಲ್ಲಿ ಅತ್ಯುತ್ತಮ ಯಶಸ್ಸನ್ನು ಕಾಣುತ್ತಿದ್ದಾರೆ. ಇದೀಗ ಅವರು ಐಕಾನಿಕ್ ಪಾತ್ರವಾದ ಜೇಮ್ಸ್ ಬಾಂಡ್​​ಗೆ ಆಯ್ಕೆ ಆಗುವ ಮೂಲಕ ವೃತ್ತಿ ಜೀವನದಲ್ಲಿ ಮತ್ತೊಂದು ಮೆಟ್ಟಿಲು ಹತ್ತಿದಂತಾಗಿದೆ. ಹೊಸ ಜೇಮ್ಸ್ ಬಾಂಡ್ ಆಗಿ ರಾಬರ್ಟ್ ಪ್ಯಾಟಿಸನ್ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಳ್ಳಲಾಗಿದ್ದು, ರಾಬರ್ಟ್ ಅವರ ಜೇಮ್ಸ್ ಬಾಂಡ್ ಲುಕ್​​ನ ಚಿತ್ರವನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ:ಖ್ಯಾತ ನಿರ್ದೇಶಕನ ಜೊತೆ ಭಿನ್ನಾಭಿಪ್ರಾಯ; ಸಿನಿಮಾದಿಂದ ಹೊರಬಂದ ಅನಿರುದ್ಧ್ ರವಿಚಂದರ್

ಮುಂಬರುವ ಜೇಮ್ಸ್ ಬಾಂಡ್ ಚಲನಚಿತ್ರವನ್ನು ‘ಡ್ಯೂನ್’ ಸಿನಿಮಾದ ನಿರ್ದೇಶಕ ಡೆನಿಸ್ ವಿಲ್ಲೆನ್ಯೂವ್ ನಿರ್ದೇಶಿಸಲಿದ್ದಾರೆ. ‘ಪೀಕಿ ಬ್ಲೈಂಡರ್ಸ್’ ಸಿನಿಮಾದ ಕತೆಗಾರ ಸ್ಟೀವನ್ ನೈಟ್ ಅವರು ಹೊಸ ಜೇಮ್ಸ್ ಬಾಂಡ್ ಸಿನಿಮಾಕ್ಕೆ ಚಿತ್ರಕತೆ ಬರೆದಿದ್ದಾರೆ. ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭ ಆಗಲಿದೆ. ರಾಬರ್ಟ್ ಪ್ಯಾಟಿನ್ಸನ್ ಅವರು ಜೇಮ್ಸ್ ಬಾಂಡ್ ಪಾತ್ರದಲ್ಲಿ ನಟಿಸಲಿರುವ ಏಳನೇ ನಟ ಎನಿಸಿಕೊಂಡಿದ್ದಾರೆ. ಶಾನ್ ಕಾನರಿ, ಜಾರ್ಜ್ ಲ್ಯಾಜೆನ್‌ಬಿ, ರೋಜರ್ ಮೂರ್, ಟಿಮೋತಿ ಡಾಲ್ಟನ್, ಪಿಯರ್ಸ್ ಬ್ರಾಸ್ನನ್, ಡೇನಿಯಲ್ ಕ್ರೇಗ್ ಅವರುಗಳು ಜೇಮ್ಸ್ ಬಾಂಡ್ ಪಾತ್ರದಲ್ಲಿ ನಟನೆ ಮಾಡಿದ್ದರು. ಈಗ ರಾಬರ್ಟ್ ಪ್ಯಾಟಿಸನ್ ಏಳನೇ ನಟ ಎನಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸ್ಟಿಂಗ್ ಪ್ರಕರಣ: ಪೊಲೀಸರಿಗೆ ಮೊಬೈಲ್ ನೀಡಲು ಕೃಪಾ ಆಳ್ವ ನಿರಾಕರಣೆ!
ಸ್ಟಿಂಗ್ ಪ್ರಕರಣ: ಪೊಲೀಸರಿಗೆ ಮೊಬೈಲ್ ನೀಡಲು ಕೃಪಾ ಆಳ್ವ ನಿರಾಕರಣೆ!
ಪ್ರಧಾನಿ ಮೋದಿ ಆಡಳಿತದ ಯಶೋಗಾಥೆ, ಯೋಜನೆಗಳ ಅಧ್ಯಯನ
ಪ್ರಧಾನಿ ಮೋದಿ ಆಡಳಿತದ ಯಶೋಗಾಥೆ, ಯೋಜನೆಗಳ ಅಧ್ಯಯನ
ವೀರಾಂಜನೇಯ ವಿಗ್ರಹಕ್ಕೆ ಲೇಪಿಸಿದ ಬೆಣ್ಣೆ 17 ದಿನ ಕಳೆದರೂ ಕರಗಿಲ್ಲ
ವೀರಾಂಜನೇಯ ವಿಗ್ರಹಕ್ಕೆ ಲೇಪಿಸಿದ ಬೆಣ್ಣೆ 17 ದಿನ ಕಳೆದರೂ ಕರಗಿಲ್ಲ
ಸೆಂಟ್ರಲ್ ಜೈಲಿನ ಬಳಿ ನಿಷಿದ್ಧ ವಸ್ತುಗಳು: ಕೈದಿಗಳಿಗೆ ತಲುಪಿಸುವ ಯತ್ನ ವಿಫಲ
ಸೆಂಟ್ರಲ್ ಜೈಲಿನ ಬಳಿ ನಿಷಿದ್ಧ ವಸ್ತುಗಳು: ಕೈದಿಗಳಿಗೆ ತಲುಪಿಸುವ ಯತ್ನ ವಿಫಲ
ವೃತ್ತಿಯಲ್ಲಿ ಬಡ್ತಿ, ಆರ್ಥಿಕ ಪ್ರಗತಿ ಹಾಗೂ ಅಪವಾದಗಳಿಂದ ಮುಕ್ತಿ
ವೃತ್ತಿಯಲ್ಲಿ ಬಡ್ತಿ, ಆರ್ಥಿಕ ಪ್ರಗತಿ ಹಾಗೂ ಅಪವಾದಗಳಿಂದ ಮುಕ್ತಿ
ಧರ್ಮಸ್ಥಳಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಕುಟುಂಬಕ್ಕೆ ಪೂರ್ಣಕುಂಭ ಸ್ವಾಗತ
ಧರ್ಮಸ್ಥಳಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಕುಟುಂಬಕ್ಕೆ ಪೂರ್ಣಕುಂಭ ಸ್ವಾಗತ
ಒಂದೇ ಪ್ರಕರಣ, ಎರಡು FIR: ಮೈಸೂರಿನಲ್ಲಿ ಎರಡು ಕೋಮಿನ ಮಧ್ಯೆ ನಡೆದಿದ್ದೇನು?
ಒಂದೇ ಪ್ರಕರಣ, ಎರಡು FIR: ಮೈಸೂರಿನಲ್ಲಿ ಎರಡು ಕೋಮಿನ ಮಧ್ಯೆ ನಡೆದಿದ್ದೇನು?
ಬಿಗ್ ಬಾಸ್ ಟಾಪ್ 5 ಯಾರು? ಗೆಲ್ಲೋದು ಯಾರು? ಭವಿಷ್ಯ ನುಡಿದ ಸೋನಿಕಾ
ಬಿಗ್ ಬಾಸ್ ಟಾಪ್ 5 ಯಾರು? ಗೆಲ್ಲೋದು ಯಾರು? ಭವಿಷ್ಯ ನುಡಿದ ಸೋನಿಕಾ
ಕಾಡಾನೆ ದಾಳಿಗೆ ವ್ಯಕ್ತಿ ಬಲಿ: ಎಲ್ಲಾ ಆನೆಗಳನ್ನ ಓಡಿಸುತ್ತೇವೆ ಎಂದ ಸಚಿವ
ಕಾಡಾನೆ ದಾಳಿಗೆ ವ್ಯಕ್ತಿ ಬಲಿ: ಎಲ್ಲಾ ಆನೆಗಳನ್ನ ಓಡಿಸುತ್ತೇವೆ ಎಂದ ಸಚಿವ
ಪ್ರತಿಭಟನೆಕಾರರ ನಡವಳಿಕೆಗೆ ಹಾಸನ ಡಿಸಿ ಬೇಸರ
ಪ್ರತಿಭಟನೆಕಾರರ ನಡವಳಿಕೆಗೆ ಹಾಸನ ಡಿಸಿ ಬೇಸರ