AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಧಿಕಾ ಆಪ್ಟೆ ವಿವಾದದಲ್ಲಿ ಕೀರ್ತಿ ಸುರೇಶ್ ಹೆಸರು; ಸ್ಪಷ್ಟನೆ ಕೊಟ್ಟ ನಟಿ

ರಾಧಿಕಾ ಆಪ್ಟೆ ನೀಡಿದ್ದ ವಿವಾದಾತ್ಮಕ ಹೇಳಿಕೆ ವೇಳೆ ನಕ್ಕಿದ್ದೇಕೆ ಎಂಬ ಬಗ್ಗೆ ನಟಿ ಕೀರ್ತಿ ಸುರೇಶ್ ಕಡೆಗೂ ಮೌನ ಮುರಿದಿದ್ದಾರೆ. ಸತ್ಯವಾನ್ ಸಾವಿತ್ರಿ ಸಿನಿಮಾ ಪ್ರಚಾರದ ವೇಳೆ ಮಾತನಾಡಿದ ಅವರು ಅಂದು ರಾಧಿಕಾ ಮಾತು ತಮಗೆ ತಕ್ಷಣಕ್ಕೆ ಅರ್ಥವಾಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ತಮ್ಮ ಸಂಸ್ಕೃತಿಯನ್ನು ಎಂದಿಗೂ ಅವಮಾನಿಸುವುದಿಲ್ಲ ಎಂದಿದ್ದಾರೆ.

ರಾಧಿಕಾ ಆಪ್ಟೆ ವಿವಾದದಲ್ಲಿ ಕೀರ್ತಿ ಸುರೇಶ್ ಹೆಸರು; ಸ್ಪಷ್ಟನೆ ಕೊಟ್ಟ ನಟಿ
ಕೀರ್ತಿ-ರಾಧಿಕಾ
ರಾಜೇಶ್ ದುಗ್ಗುಮನೆ
|

Updated on: Nov 19, 2026 | 11:29 AM

Share

ಮುಖ್ಯಾಂಶಗಳು

  • ರಾಧಿಕಾ ಆಪ್ಟೆ ವಿವಾದದ ಬಗ್ಗೆ ಕಡೆಗೂ ಮೌನ ಮುರಿದ ನಟಿ ಕೀರ್ತಿ ಸುರೇಶ್
  • ಸೋದರ ಮಾವನ ಮದುವೆ ವಿಚಾರಕ್ಕೆ ಅಂದು ನಕ್ಕಿದ್ದೇಕೆ ಎಂದು ಅಸಲಿ ಕಾರಣ ಬಿಚ್ಚಿಟ್ಟ ಮಹಾನಟಿ
  • ಕೀರ್ತಿ ಸ್ಪಷ್ಟನೆ ಬೆನ್ನಲ್ಲೇ ತಣ್ಣಗಾಗದ ವಿವಾದ

ನಟಿ ಕೀರ್ತಿ ಸುರೇಶ್ ಸದ್ಯ ತಮ್ಮ ಹೊಸ ಸಿನಿಮಾ ‘ಸತ್ಯವಾನ್ ಸಾವಿತ್ರಿ’ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ ಇದೇ ಶುಕ್ರವಾರ (ನವೆಂಬರ್ 20) ತಮಿಳು ಮತ್ತು ತೆಲುಗಿನಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರದ ಪ್ರಚಾರದಲ್ಲಿ ಅವರು ಬ್ಯುಸಿ ಇದ್ದಾರೆ. ಈಗ ಸಂದರ್ಶನವೊಂದರಲ್ಲಿ ರಾಧಿಕಾ ಆಪ್ಟೆ ವಿವಾದದ ಬಗ್ಗೆ ಕೀರ್ತಿ ಅವರಿಗೆ ಪ್ರಶ್ನೆ ಎದುರಾಯಿತು. ಈ ವೇಳೆ ಅಂದು ನೀಡಿದ್ದ ಪ್ರತಿಕ್ರಿಯೆಯ ಹಿಂದಿನ ಅಸಲಿ ಸತ್ಯವನ್ನು ಕೀರ್ತಿ ಬಿಚ್ಚಿಟ್ಟಿದ್ದಾರೆ.

ರಾಧಿಕಾ ಆಪ್ಟೆ ಮತ್ತು ಕೀರ್ತಿ ಸುರೇಶ್ ಒಟ್ಟಿಗೆ ನಟಿಸಿರುವ ನೆಟ್‌ಫ್ಲಿಕ್ಸ್‌ನ ‘ಅಕ್ಕ’ ವೆಬ್ ಸರಣಿಯ ಪ್ರಚಾರದ ವೇಳೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ರಾಧಿಕಾ ಹೇಳಿಕೆ ನೀಡಿದ್ದರು. ತಮ್ಮ ವೃತ್ತಿಜೀವನದಲ್ಲಿ ಎದುರಾದ ಅತ್ಯಂತ ಸವಾಲಿನ ಅಥವಾ ಕಷ್ಟಕರ ಪಾತ್ರ ಯಾ ವುದು ಎಂಬ ಪ್ರಶ್ನೆಗೆ ಉತ್ತರಿಸುತ್ತಾ ರಾಧಿಕಾ ಆಪ್ಟೆ, ‘ತೆಲುಗು ಸಿನಿಮಾವೊಂದರಲ್ಲಿ ತಾವು ಸೋದರ ಮಾವನನ್ನು ಮದುವೆಯಾಗುವ ಪಾತ್ರ ಮಾಡಬೇಕಾಗಿ ಬಂದಿತ್ತು. ಆ ಪಾತ್ರ ನನಗೆ ಇಷ್ಟವಿರಲಿಲ್ಲ ಮತ್ತು ತುಂಬಾ ಕಷ್ಟವಾಗಿತ್ತು’ ಎಂದು ವಿವರಿಸಿದ್ದರು.

ಭಾರತದ ಕೆಲವು ಸಮುದಾಯಗಳಲ್ಲಿ ಸೋದರ ಮಾವ-ಸೊಸೆ ಮದುವೆ ಅಥವಾ ಸಂಬಂಧದ ಪದ್ಧತಿ ಸಾಂಪ್ರದಾಯಿಕವಾಗಿ ಇರುವ ವಿಚಾರ. ಅದನ್ನು ಅತ್ಯಂತ ನಕಾರಾತ್ಮಕವಾಗಿ ಮತ್ತು ಕೀಳಾಗಿ ಬಿಂಬಿಸಲಾಗಿದೆ ಎಂದು ತೆಲುಗು ಸಿನಿಮಾ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಪಕ್ಕದಲ್ಲೇ ಕುಳಿತಿದ್ದ ಕೀರ್ತಿ ಸುರೇಶ್ ಮೊದಲು ನಕ್ಕು, ‘ತಮಿಳು ಮತ್ತು ತೆಲುಗಿನಲ್ಲಿ ಮಾವನನ್ನು ಮದುವೆಯಾಗುವುದು ಸಾಮಾನ್ಯ’ ಎಂಬಂತೆ ಹೇಳಿದ್ದು ಕೂಡ ಕೆಲವರಿಗೆ ಬೇಸರ ತರಿಸಿತ್ತು.

ಈಗ ಈ ಬಗ್ಗೆ ಕೀರ್ತಿ ಸುರೇಶ್ ಸ್ಪಷ್ಟನೆ ನೀಡಿದ್ದಾರೆ. ‘ರಾಧಿಕಾ ಮೊದಲ ಬಾರಿಗೆ ಮಾವನನ್ನು ಮದುವೆಯಾಗುವ ಬಗ್ಗೆ ಮಾತನಾಡಿದಾಗ ತಮಗೆ ಏನೂ ಅರ್ಥವಾಗಲಿಲ್ಲ. ತಮಿಳುನಾಡು ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿರುವ ಸಂಪ್ರದಾಯದ ಬಗ್ಗೆ ಅವರು ಹೇಳಿದ್ದರು ಎಂದು ನಂತರ ಅರ್ಥವಾಯಿತು. ಸಂಸ್ಕೃತಿಯನ್ನು ನಾನು ಎಂದಿಗೂ ಕೀಳಾಗಿ ಕಾಣುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಅಂತರಧರ್ಮೀಯ ಮದುವೆ ಬಗ್ಗೆ ಕೀರ್ತಿ ಸುರೇಶ್ ಮಾತು; ಸವಾಲುಗಳನ್ನು ಬಿಚ್ಚಿಟ್ಟ ನಟಿ

ಕೇರಳದಲ್ಲಿ ಇಂತಹ ಪದ್ಧತಿ ಇಲ್ಲ ಎಂಬುದನ್ನೂ ಕೀರ್ತಿ ಇದೇ ವೇಳೆ ತಿಳಿಸಿದ್ದಾರೆ. ಕೀರ್ತಿ ಸ್ಪಷ್ಟನೆ ನೀಡುವಷ್ಟರಲ್ಲಿ ಆ ಹಳೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕೆಲವು ನೆಟ್ಟಿಗರು ಚರ್ಚೆ ಶುರು ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More