AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತರಧರ್ಮೀಯ ಮದುವೆ ಬಗ್ಗೆ ಕೀರ್ತಿ ಸುರೇಶ್ ಮಾತು; ಸವಾಲುಗಳನ್ನು ಬಿಚ್ಚಿಟ್ಟ ನಟಿ

ನಟಿ ಕೀರ್ತಿ ಸುರೇಶ್ ಹಾಗೂ ಆಂಟೋನಿ ತಟ್ಟಿಲ್ ಅವರ 15 ವರ್ಷಗಳ ಪ್ರೇಮಕಥೆ ಮದುವೆ ಆಗಿ ಸುಖಾಂತ್ಯ ಕಂಡಿದೆ. ಅಂತರಧರ್ಮೀಯ ಮದುವೆಯಾದ್ದರಿಂದ ಆರಂಭದಲ್ಲಿ ಮನೆಯಲ್ಲಿ ಎದುರಾಗಿದ್ದ ಕಷ್ಟಗಳನ್ನು ಕೀರ್ತಿ ಬಿಚ್ಚಿಟ್ಟಿದ್ದಾರೆ. ತಾಯಿ ಮೇನಕಾಗೆ ಡೈರಿ ಮೂಲಕ ಪ್ರೀತಿ ವಿಚಾರ ತಿಳಿದಿತ್ತಂತೆ. ಪ್ರೀತಿಯ ಹಾದಿಯ ಆಸಕ್ತಿಕರ ವಿಷಯಗಳನ್ನು ಅವರು ಹಂಚಿಕೊಂಡಿದ್ದಾರೆ.

ಅಂತರಧರ್ಮೀಯ ಮದುವೆ ಬಗ್ಗೆ ಕೀರ್ತಿ ಸುರೇಶ್ ಮಾತು; ಸವಾಲುಗಳನ್ನು ಬಿಚ್ಚಿಟ್ಟ ನಟಿ
ಕೀರ್ತಿ ಹಾಗೂ ಅವರ ಪತಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 05, 2026 | 8:02 AM

Share

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಹಾಗೂ ಆಂಟೋನಿ ತಟ್ಟಿಲ್ ಅವರ ಸುದೀರ್ಘ 15 ವರ್ಷಗಳ ಪ್ರೇಮಕಥೆ ಕೊನೆಗೂ ಸುಖಾಂತ್ಯ ಕಂಡಿದ್ದು ಗೊತ್ತೇ ಇದೆ. ಸುಮಾರು ಒಂದೂವರೆ ದಶಕಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ 2024ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಇದೀಗ ತಮ್ಮ ಇಂಟರ್-ಫೇತ್ ಮದುವೆ ಮತ್ತು ಸುದೀರ್ಘ ಪ್ರೇಮಪಯಣದ ಸವಾಲುಗಳ ಬಗ್ಗೆ ಕೀರ್ತಿ ಸುರೇಶ್ ಬಹಿರಂಗವಾಗಿ ಮಾತನಾಡಿದ್ದಾರೆ.

ತಮ್ಮ ಪ್ರೇಮಕಥೆ ಮನೆಯಲ್ಲಿ ಬಯಲಾದ ರೋಚಕ ಪ್ರಸಂಗವನ್ನು ಕೀರ್ತಿ ಹಂಚಿಕೊಂಡಿದ್ದಾರೆ. 12ನೇ ತರಗತಿ ಮುಗಿದ ತಕ್ಷಣವೇ ಅಂದರೆ ಅವರ 17ನೇ ವಯಸ್ಸಿನಲ್ಲಿ ಪ್ರೀತಿ ಶುರುವಾಗಿತ್ತು. ಕಾಲೇಜು ದಿನಗಳಲ್ಲಿ ಕೀರ್ತಿ ಬರೆಯುತ್ತಿದ್ದ ಡೈರಿಯನ್ನು ಅವರ ತಾಯಿ ಮೇನಕಾ ಓದಿದ್ದರು. ಅದರಲ್ಲಿ ಪ್ರೀತಿಯ ಪ್ರತಿಯೊಂದು ವಿಷಯವೂ ಇತ್ತು. ಈ ಘಟನೆಯ ನಂತರ ಅವರು ಡೈರಿ ಬರೆಯುವುದನ್ನೇ ಸಂಪೂರ್ಣವಾಗಿ ನಿಲ್ಲಿಸಿಬಿಟ್ಟರು.

ಇಬ್ಬರ ನಡುವಿನ ಪ್ರೀತಿಯನ್ನು ಸೀಕ್ರೆಟ್ ಆಗಿಡುವುದು ಕೀರ್ತಿಗೆ ಕಷ್ಟವೆನಿಸಲಿಲ್ಲ. ಅವರು ಎಂದಿಗೂ ಇಬ್ಬರೇ ಪ್ರವಾಸಕ್ಕೆ ಹೋಗುತ್ತಿರಲಿಲ್ಲ. ಸದಾ ಸ್ನೇಹಿತರ ಬಳಗ ಜೊತೆಗಿರುತ್ತಿತ್ತು. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿದರೂ ಯಾರಿಗೂ ಅನುಮಾನ ಬರುತ್ತಿರಲಿಲ್ಲ. ಆದರೆ ಮದುವೆ ಘೋಷಣೆಯಾದ ಮೇಲೆ ಆಂಟೋನಿಗೆ ಪಾಪರಾಜಿಗಳ ಭಯ ಶುರುವಾಗಿತ್ತು.

ಕೀರ್ತಿ ಹಿಂದೂ ಮತ್ತು ಆಂಟೋನಿ ಕ್ರಿಶ್ಚಿಯನ್ ಆಗಿದ್ದರಿಂದ ಮನೆಯಲ್ಲಿ ಸಮಸ್ಯೆಗಳಾಗಿದ್ದವು. ಮನೆಯವರನ್ನು ಒಪ್ಪಿಸಲು ಕೀರ್ತಿ ಸಾಕಷ್ಟು ಕಷ್ಟಪಡಬೇಕಾಯಿತು. 2009ರ ಡಿಸೆಂಬರ್‌ನಲ್ಲಿ ಇವರ ಮೊದಲ ಭೇಟಿಯಾಗಿತ್ತು. 2010ರ ಜನವರಿಯಲ್ಲಿ ಪ್ರೀತಿ ಆರಂಭವಾಗಿತ್ತು. ಚಿತ್ರರಂಗಕ್ಕೆ ಬರುವ ಮೊದಲೇ ಆಂಟೋನಿಗೆ ಕೀರ್ತಿ ಪರಿಚಯವಿದ್ದರು.

ಇದನ್ನೂ ಓದಿ: ‘ಅಕ್ಕ’ ವೆಬ್ ಸರಣಿಯಲ್ಲಿ ಬೋಲ್ಡ್​ ಅವತಾರದಲ್ಲಿ ಮಿಂಚಿದ ಕೀರ್ತಿ ಸುರೇಶ್

15 ವರ್ಷಗಳ ಕಾಲ ಸಾಗಿದ ಈ ಪ್ರೀತಿ 2024 ಡಿಸೆಂಬರ್ 12ರಂದು ಮದುವೆಯಲ್ಲಿ ಅಂತ್ಯಗೊಂಡಿತು. ಗೋವಾದಲ್ಲಿ ತಮಿಳು ಬ್ರಾಹ್ಮಿಣ ಹಾಗೂ ಮಲಯಾಳಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ನಡೆಯಿತು. ಓಡಿಹೋಗಿ ಮದುವೆಯಾಗುವ ಭಯದ ಕನಸುಗಳು ಅವರಿಗೆ ಬೀಳುತ್ತಿದ್ದವು. ಕೊನೆಗೂ ಇಬ್ಬರ ಕನಸಿನಂತೆ ಮದುವೆ ನಡೆದು ಪ್ರೀತಿ ಗೆದ್ದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಈ ರಾಶಿಯವರ ಆದಾಯ ವೃದ್ಧಿ ಮತ್ತು ಜವಾಬ್ದಾರಿಗಳು ಹೆಚ್ಚಾಗಲಿ
ಈ ರಾಶಿಯವರ ಆದಾಯ ವೃದ್ಧಿ ಮತ್ತು ಜವಾಬ್ದಾರಿಗಳು ಹೆಚ್ಚಾಗಲಿ
ಮಳೆಯಬ್ಬರಕ್ಕೆ ಕೆರೆಯಂತಾದ ಎಲೆಕ್ಟ್ರಾನಿಕ್ ಸಿಟಿ ರಸ್ತೆಗಳು
ಮಳೆಯಬ್ಬರಕ್ಕೆ ಕೆರೆಯಂತಾದ ಎಲೆಕ್ಟ್ರಾನಿಕ್ ಸಿಟಿ ರಸ್ತೆಗಳು
ಡೆಹ್ರಾಡೂನ್-ದೆಹಲಿ ಹೈವೇಯಲ್ಲಿ ಭೀಕರ ಅಪಘಾತ; ನಾಲ್ವರ ಸಾವು, ಮಗು ಬಚಾವ್
ಡೆಹ್ರಾಡೂನ್-ದೆಹಲಿ ಹೈವೇಯಲ್ಲಿ ಭೀಕರ ಅಪಘಾತ; ನಾಲ್ವರ ಸಾವು, ಮಗು ಬಚಾವ್
ಅಮುಲ್​ನಿಂದಲೂ ಬೆಲೆ ಏರಿಕೆಯ ಶಾಕ್; ಹಾಲಿನ ದರ ಲೀಟರ್​​ಗೆ 2 ರೂ. ಹೆಚ್ಚಳ
ಅಮುಲ್​ನಿಂದಲೂ ಬೆಲೆ ಏರಿಕೆಯ ಶಾಕ್; ಹಾಲಿನ ದರ ಲೀಟರ್​​ಗೆ 2 ರೂ. ಹೆಚ್ಚಳ
ಹಾಸನಾಂಬೆ ಜಾತ್ರಾಮಹೋತ್ಸವ: ರಾತ್ರಿ 12ರಿಂದ ದೇವರ ದರ್ಶನಕ್ಕೆ ಅವಕಾಶವಿಲ್ಲ
ಹಾಸನಾಂಬೆ ಜಾತ್ರಾಮಹೋತ್ಸವ: ರಾತ್ರಿ 12ರಿಂದ ದೇವರ ದರ್ಶನಕ್ಕೆ ಅವಕಾಶವಿಲ್ಲ
ಸಿನಿಮಾ ಹಾಕಿ ಎಂದ ತಾಂಡವ್​​, ಐಡಿಯಾ ಕೊಟ್ಟ ಪ್ರಶಾಂತ್: ವಿಡಿಯೋ
ಸಿನಿಮಾ ಹಾಕಿ ಎಂದ ತಾಂಡವ್​​, ಐಡಿಯಾ ಕೊಟ್ಟ ಪ್ರಶಾಂತ್: ವಿಡಿಯೋ
ಬಾಗಲಕೋಟೆಯಲ್ಲೂ ಸ್ಟಿಂಗ್ ಸದ್ದು: ಕಾಶಪ್ಪನವರ, ಪಾಟೀಲ್​​ ಮಧ್ಯೆ ವಾಕ್ಸಮರ
ಬಾಗಲಕೋಟೆಯಲ್ಲೂ ಸ್ಟಿಂಗ್ ಸದ್ದು: ಕಾಶಪ್ಪನವರ, ಪಾಟೀಲ್​​ ಮಧ್ಯೆ ವಾಕ್ಸಮರ
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಶಾಲಾ ಮಕ್ಕಳಿಂದಲೇ ರಸ್ತೆ ದುರಸ್ತಿ!
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಶಾಲಾ ಮಕ್ಕಳಿಂದಲೇ ರಸ್ತೆ ದುರಸ್ತಿ!
ಮತ್ತೆ ಮಂತ್ರಿಯಾಗ್ತಾರಾ ಬಿ.ನಾಗೇಂದ್ರ?: ಮಾಜಿ ಸಚಿವ ಹೇಳಿದ್ದಿಷ್ಟು
ಮತ್ತೆ ಮಂತ್ರಿಯಾಗ್ತಾರಾ ಬಿ.ನಾಗೇಂದ್ರ?: ಮಾಜಿ ಸಚಿವ ಹೇಳಿದ್ದಿಷ್ಟು
ಆನೆ ಯಾವುದು ಅಂತಾನೇ ಹೇಳಿಲ್ಲ ಅಂದ್ರೆ ಅಂಬಾರಿ ಯಾಕೆ ಕೊಡಬೇಕು?
ಆನೆ ಯಾವುದು ಅಂತಾನೇ ಹೇಳಿಲ್ಲ ಅಂದ್ರೆ ಅಂಬಾರಿ ಯಾಕೆ ಕೊಡಬೇಕು?