AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Winter Tips: ಇಮ್ಮರ್ಶನ್‌ ವಾಟರ್‌ ಹೀಟರ್‌ ಬಳಸುವಾಗ ತೆಗೆದುಕೊಳ್ಳಲೇಬೇಕಾದ ಮುನ್ನೆಚ್ಚರಿಕೆ ಕ್ರಮಗಳು

ಚಳಿಗಾಲ ಆರಂಭವಾಗಿದೆ. ಕೊರೆಯುವ ಚಳಿಯಲ್ಲಿ ತಣ್ಣೀರಲ್ಲಿ ಸ್ನಾನ ಮಾಡೋದು ಸವಾಲಿನ ಸಂಗತಿ ಅಂತಾನೇ ಹೇಳ್ಬೋದು. ಅದಕ್ಕಾಗಿ ಹೆಚ್ಚಿನವರು ಇಮ್ಮರ್ಶನ್ ವಾಟರ್‌ ಹೀಟರ್‌ನಲ್ಲಿ ನೀರು ಬಿಸಿ ಮಾಡುತ್ತಾರೆ. ಈ ವಾಟರ್‌ ಹೀಟರ್‌ನಲ್ಲಿ ನೀರು ಬಿಸಿ ಮಾಡುವಾಗ ತೋರುವ ಸಣ್ಣ ಅಜಾಗರೂಕತೆ ಕೂಡ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು. ಆದ್ದರಿಂದ ಸ್ನಾನದ ನೀರು ಕಾಯಿಸಲು ಇಮ್ಮರ್ಶನ್ ವಾಟರ್‌ ಹೀಟರ್‌ ಬಳಸುವಾಗ ಈ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು.

Winter Tips: ಇಮ್ಮರ್ಶನ್‌ ವಾಟರ್‌ ಹೀಟರ್‌ ಬಳಸುವಾಗ ತೆಗೆದುಕೊಳ್ಳಲೇಬೇಕಾದ ಮುನ್ನೆಚ್ಚರಿಕೆ ಕ್ರಮಗಳು
ಸಾಂದರ್ಭಿಕ ಚಿತ್ರ Image Credit source: Social Media
ಮಾಲಾಶ್ರೀ ಅಂಚನ್​
|

Updated on: Nov 25, 2026 | 6:30 PM

Share

ಚಳಿಗಾಲದಲ್ಲಿ (Winter) ವಾತಾವರಣ ಮಾತ್ರವಲ್ಲ ಟ್ಯಾಂಕ್‌ನಲ್ಲಿರುವ ನೀರು ಕೂಡ ತುಂಬಾನೇ ತಂಪಾಗಿರುತ್ತೆ. ಹಾಗಾಗಿ ಈ ಶೀತ ವಾತಾವರಣದಲ್ಲಿ ಸ್ನಾನ ಮಾಡಲು ಬಿಸಿ ಬೀರು ಬೇಕೇಬೇಕಾಗುತ್ತದೆ. ಹಳ್ಳಿಗಳಲ್ಲಿ ಹಂಡೆ ಒಲೆಯಲ್ಲಿ ನೀರು ಕಾಯಿಸುತ್ತಾರೆ. ಇನ್ನೂ ಸಿಟಿಗಳಲ್ಲಿ ಸೋಲಾರ್‌, ಗೀಸರ್‌ ಬಳಸುತ್ತಾರೆ. ಇನ್ನೂ ಕೆಲವರು ಗ್ಯಾಸ್‌ನಲ್ಲಿ ನೀರು ಬಿಸಿ ಮಾಡುವುದುಂಟು. ಇದರಿಂದ ಗ್ಯಾಸ್‌ ಬೇಗನೆ ಖಾಲಿಯಾಗುತ್ತದೆ. ಹಾಗಾಗಿ ಅನೇಕರು ಇಮ್ಮರ್ಶನ್‌ ವಾಟರ್‌ ಹೀಟರ್‌ ಬಳಸುತ್ತಾರೆ. ಆದರೆ ಇದರಲ್ಲಿ ನೀರು ಬಿಸಿ ಮಾಡುವಾಗ ತುಂಬಾನೇ ಜಾಗರೂಕರಾಗಿರಬೇಕು.  ಸಣ್ಣ ಅಜಾಗರೂಕತೆಯೂ ದೊಡ್ಡ ಅಪಾಯವನ್ನು ಉಂಟು ಮಾಡಬಹುದು. ಆದ್ದರಿಂದ ನೀರು ಬಿಸಿ ಮಾಡಲು ವಾಟರ್‌ ಹೀಟರ್‌ ರಾಡ್‌  ಬಳಸುವಾಗ ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲೇಬೇಕಿ.

ವಾಟರ್‌ ಹೀಟರ್ ಬಳಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು:

ಪ್ಲಾಸ್ಟಿಕ್ ಬಕೆಟ್‌ಗಳಲ್ಲಿ ಮಾತ್ರ ಬಳಸಿ:

ಚಳಿಗಾಲದಲ್ಲಿ ಇಮ್ಮರ್ಶನ್ ರಾಡ್ ಬಳಸಿ ನೀರನ್ನು ಬಿಸಿ ಮಾಡುವಾಗ, ಯಾವಾಗಲೂ ಪ್ಲಾಸ್ಟಿಕ್ ಬಕೆಟ್‌ನಲ್ಲಿ ಬಿಸಿ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ಕಬ್ಬಿಣದ ಬಕೆಟ್‌ನಲ್ಲಿ ನೀರನ್ನು ಬಿಸಿ ಮಾಡುವುದು ಅಪಾಯಕಾರಿ, ಏಕೆಂದರೆ ಅದು ವಿದ್ಯುತ್ ಆಘಾತಕ್ಕೆ ಕಾರಣವಾಗಬಹುದು. ಅಲ್ಲದೆ ನೀರು ಬಿಸಿಯಾದಾಗ, ಬಕೆಟ್ ಕೂಡ ಬಿಸಿಯಾಗುತ್ತದೆ, ಇದರಿಂದ ಅದನ್ನು ಎತ್ತುವುದು ಅಸಾಧ್ಯ. ಆದ್ದರಿಂದ, ಪ್ಲಾಸ್ಟಿಕ್ ಬಕೆಟ್‌ನಲ್ಲಿ ವಾಟರ್ ಹೀಟರ್ ಇಮ್ಮರ್ಶನ್ ರಾಡ್‌ನೊಂದಿಗೆ ನೀರನ್ನು ಬಿಸಿ ಮಾಡುವುದು ಉತ್ತಮ.

ಬಕೆಟ್‌ ನೀರಿನಲ್ಲಿ ವಾಟರ್‌ ಹೀಟರ್‌ ರಾಡ್ ಹಾಕಿದ ಬಳಿಕವೇ ಸ್ವಿಚ್‌  ಆನ್ ಮಾಡಿ:

ನೀವು ಇಮ್ಮರ್ಶನ್ ರಾಡ್‌ನಿಂದ ನೀರನ್ನು ಬಿಸಿ ಮಾಡುವಾಗ, ಮೊದಲು ಬಕೆಟ್‌ಗೆ ನೀರು ಹಾಕಿ, ಅದರಲ್ಲಿ  ಇಮ್ಮರ್ಶನ್ ರಾಡ್ ಅನ್ನು ಸೇರಿಸಿ ನಂತರವೇ ಸ್ವಿಚ್ ಆನ್ ಮಾಡಿ. ಸ್ವಿಚ್ ಆನ್ ಮಾಡಿದ ನಂತರ, ಬಕೆಟ್ ಅನ್ನು ಮುಟ್ಟಬೇಡಿ. ಬಕೆಟ್‌ನಲ್ಲಿ ಕಡಿಮೆ ನೀರು ಇದೆ ಎಂದು ನೀವು ಭಾವಿಸಿದರೆ, ಯಾವುದೇ ನೀರನ್ನು ಸೇರಿಸಬೇಡಿ. ಇದು ವಿದ್ಯುತ್ ಆಘಾತಕ್ಕೆ ಕಾರಣವಾಗಬಹುದು. ಏನಾದರೂ ಬಕೆಟ್‌ಗೆ ಹೆಚ್ಚಿನ ನೀರನ್ನು ಸೇರಿಸಬೇಕಾದರೆ, ಮೊದಲು ಸ್ವಿಚ್  ಆಫ್ ಮಾಡಿ ಮತ್ತು ಅದನ್ನು ಅನ್‌ಪ್ಲಗ್ ಮಾಡಿ ನಂತರವೇ ನೀರನ್ನು ಸೇರಿಸಿ. ಬಳಿಕ ಮತ್ತೆ ಪ್ಲಗ್ ಮಾಡಿ ಮತ್ತು ಸ್ವಿಚ್ ಅನ್ನು ಆನ್ ಮಾಡಿ.

ನೀರು ಕಾಯಿಸುವಾಗ ಚಿಕ್ಕ ಮಕ್ಕಳನ್ನು ದೂರವಿಡಿ:

ಚಿಕ್ಕ ಮಕ್ಕಳು ಆಟವಾಡುವ ಪ್ರದೇಶಗಳಲ್ಲಿ ಇಮ್ಮರ್ಶನ್ ವಾಟರ್ ಹೀಟರ್‌ ಬಳಸಿ ನೀರು ಬಿಸಿ ಮಾಡಬೇಡಿ ಅಥವಾ ನೀರು ಬಿಸಿ ಮಾಡುವ ಸ್ಥಳಕ್ಕೆ ಮಕ್ಕಳು ಬರದಂತೆ ನೋಡಿಕೊಳ್ಳಿ. ಅಪ್ಪಿತಪ್ಪಿ ಸ್ವಿಚ್‌ ಆನ್‌ ಆಗಿರುವಾಗ ಮಕ್ಕಳು ಬಕೆಟ್‌ ಮುಟ್ಟಿದರೆ ದೊಡ್ಡ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಮ್ಮರ್ಶನ್‌ ವಾಟರ್‌ ಹೀಟರ್‌ ಬಳಸುವಾಗ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಗಮನ ನೀಡಿ.

ಸ್ನಾನಗೃಹದಲ್ಲಿ ನೀರು ಬಿಸಿ ಮಾಡಬೇಡಿ:

ಸ್ನಾನಗೃಹಗಳಲ್ಲಿ ಇಮ್ಮರ್ಶನ್ ವಾಟರ್ ಹೀಟರ್‌ಗಳನ್ನು ಬಳಸಬಾರದು, ಏಕೆಂದರೆ ತೇವಾಂಶವು ವಿದ್ಯುತ್ ಆಘಾತಕ್ಕೆ ಕಾರಣವಾಗಬಹುದು. ಆದ್ದರಿಂದ ಅಡುಗೆ ಕೋಣೆ ಅಥವಾ ಡೈನಿಂಗ್‌ ಹಾಲ್‌ನಲ್ಲಿ ಬಕೆಟ್‌ನಲ್ಲಿ ನೀರಿಟ್ಟು ಅಲ್ಲಿ ನೀರು ಕಾಯಿಸಿ.

ಇದನ್ನೂ ಓದಿ: ಅಡುಗೆಮನೆಯಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡಲು ಹೋಗ್ಬೇಡಿ

ಹೀಟರ್‌ ಆನ್‌ ಇರುವಾಗ ನೀರಿಗೆ ಕೈ ಹಾಕಬೇಡಿ:

ಹೆಚ್ಚಿನವರು ನೀರು ಬಿಸಿಯಾಗಿದೆಯೇ ಎಂದು ತಿಳಿಯಲು ನೀರಿಗೆ ಆಗಾಗ್ಗೆ ಕೈ ಹಾಕುತ್ತಾರೆ. ಈ ರೀತಿ ಇಮ್ಮರ್ಶನ್‌ ವಾಟರ್‌ ಹೀಟರ್‌ ಆನ್‌ ಇರುವಾಗ ನೀರಿಗೆ ಕೈ ಹಾಕಿದರೆ ವಿದ್ಯುತ್ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಹೀಟರ್‌ ಆನ್‌ ಇರುವಾಗ ನೀರಿಗೆ ಕೈ ಹಾಕಬೇಡಿ. ಜೊತೆಗೆ ಹೀಟರ್ ಆಫ್ ಮಾಡಿದ ತಕ್ಷಣ ನೀರಿನ ತಾಪಮಾನವನ್ನು ಪರಿಶೀಲಿಸಬೇಡಿ. ಬದಲಿಗೆ  ಹೀಟರ್ ಅನ್ನು ಸಂಪೂರ್ಣವಾಗಿ ಅನ್‌ಪ್ಲಗ್ ಮಾಡಿದ ನಂತರವೇ ನೀರಿನ ತಾಪಮಾನವನ್ನು ಪರಿಶೀಲಿಸಿ.

ಒದ್ದೆ ಕೈಯಲ್ಲಿ ವಾಟರ್‌ ಹೀಟರ್ ಮುಟ್ಟಬೇಡಿ:

ಒದ್ದೆಯಾದ ಕೈಗಳಿಂದ ವಾಟರ್ ಹೀಟರ್ ಅನ್ನು ಮುಟ್ಟುವುದನ್ನು ಅಥವಾ ಒದ್ದೆಯಾದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ, ಏಕೆಂದರೆ ಇದು ವಿದ್ಯುತ್ ಆಘಾತಕ್ಕೆ ಕಾರಣವಾಗಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಮತ್ತೆ ತಲೆ ಓಡಿಸಿದ ಯಶಸ್, ಗೊಂದಲದಲ್ಲಿ ಮನೆ ಮಂದಿ: ವಿಡಿಯೋ
ಮತ್ತೆ ತಲೆ ಓಡಿಸಿದ ಯಶಸ್, ಗೊಂದಲದಲ್ಲಿ ಮನೆ ಮಂದಿ: ವಿಡಿಯೋ
ಮರಿಗಳಿಗೆ ರಕ್ಷಣಾ ಕೋಟೆ ಕಟ್ಟಿ ಸಾಗುತ್ತಿರುವ 39 ಕಾಡಾನೆಗಳ ದಂಡು
ಮರಿಗಳಿಗೆ ರಕ್ಷಣಾ ಕೋಟೆ ಕಟ್ಟಿ ಸಾಗುತ್ತಿರುವ 39 ಕಾಡಾನೆಗಳ ದಂಡು
ಜಾಮೀನು ರದ್ದು: ಮನೆಯಿಂದ ಕಣ್ಣೀರು ಹಾಕುತ್ತಾ ಹೊರಬಂದ ವಿನಯ್ ಕುಲಕರ್ಣಿ
ಜಾಮೀನು ರದ್ದು: ಮನೆಯಿಂದ ಕಣ್ಣೀರು ಹಾಕುತ್ತಾ ಹೊರಬಂದ ವಿನಯ್ ಕುಲಕರ್ಣಿ
ಆಶಾ ಕಾರ್ಯಕರ್ತರ ಬಗ್ಗೆ ನೀಡಿದ್ದ ಹೇಳಿಕೆಗೆ ಸಚಿವ ನರೇಂದ್ರಸ್ವಾಮಿ ವಿಷಾದ
ಆಶಾ ಕಾರ್ಯಕರ್ತರ ಬಗ್ಗೆ ನೀಡಿದ್ದ ಹೇಳಿಕೆಗೆ ಸಚಿವ ನರೇಂದ್ರಸ್ವಾಮಿ ವಿಷಾದ
ವಿನಯ್ ಕುಲಕರ್ಣಿ ಜಾಮೀನು ರದ್ದು: ಸುಪ್ರೀಂ ಕೋರ್ಟ್ ತೀರ್ಪಿಗೆ ಹರ್ಷ
ವಿನಯ್ ಕುಲಕರ್ಣಿ ಜಾಮೀನು ರದ್ದು: ಸುಪ್ರೀಂ ಕೋರ್ಟ್ ತೀರ್ಪಿಗೆ ಹರ್ಷ
ಆಶಾ ಕಾರ್ಯಕರ್ತರ ಪ್ರತಿಭಟನೆಗೆ ತಾರಾ ಬೆಂಬಲ: ಗೌರವಧನ ಹೆಚ್ಚಳಕ್ಕೆ ಆಗ್ರಹ
ಆಶಾ ಕಾರ್ಯಕರ್ತರ ಪ್ರತಿಭಟನೆಗೆ ತಾರಾ ಬೆಂಬಲ: ಗೌರವಧನ ಹೆಚ್ಚಳಕ್ಕೆ ಆಗ್ರಹ
ಕಾರವಾರ: ದಿಶಾ ಸಮಿತಿ ಸಭೆಯಲ್ಲಿ 'ವಂದೇ ಮಾತರಂ' ಜಟಾಪಟಿ
ಕಾರವಾರ: ದಿಶಾ ಸಮಿತಿ ಸಭೆಯಲ್ಲಿ 'ವಂದೇ ಮಾತರಂ' ಜಟಾಪಟಿ
ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು
ಕಾಫಿತೋಟದಿಂದ ಇಳಿದು ಭತ್ತದ ಗದ್ದೆಗಳನ್ನ ದಾಟಿ ಹೋಗಿರುವ ಕಾಡಾನೆಗಳು
ವಿನಯ್ ಕುಲಕರ್ಣಿಗೆ ಮತ್ತೆ ಜೈಲು: ವಕೀಲರು ಹೇಳಿದ್ದೇನು ನೋಡಿ
ವಿನಯ್ ಕುಲಕರ್ಣಿಗೆ ಮತ್ತೆ ಜೈಲು: ವಕೀಲರು ಹೇಳಿದ್ದೇನು ನೋಡಿ
'ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದ್ರೆ ಒಳ್ಳೇದು ಅನ್ನಿಸುತ್ತೆ'
'ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದ್ರೆ ಒಳ್ಳೇದು ಅನ್ನಿಸುತ್ತೆ'