AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರಾಠಿ-ಕನ್ನಡ ಸಹೋದರ ಭಾಷೆಗಳು: ಬೆಳಗಾವಿಯಲ್ಲಿ ನಾಡದ್ರೋಹಿಗಳಿಗೆ ಸಾಮರಸ್ಯದ ಪಾಠ ಮಾಡಿದ ಮಹಾರಾಷ್ಟ್ರ ಸಿಎಂ ಫಡ್ನವೀಸ್

ಬೆಳಗಾವಿಯ ಧರ್ಮನಾಥ ಭವನದಲ್ಲಿ ಬಿಜೆಪಿ ವತಿಯಿಂದ ನಡೆದ ಪ್ರಜಾಪ್ರಭುತ್ವ ಉಳಿಸಿ ಸಮಾರಂಭದಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್​​ ಕನ್ನಡದಲ್ಲಿ ಭಾಷಣ ಮಾಡಿದರು. ಮರಾಠಿ ಮತ್ತು ಕನ್ನಡ ಸಹೋದರ ಭಾಷೆಗಳು ಎಂದರು. ಆ ಮೂಲಕ ಬೆಳಗಾವಿ ನೆಲದಲ್ಲಿ ನಿಂತುಕೊಂಡು ನಾಡದ್ರೋಹಿಗಳಿಗೆ ಸಾಮರಸ್ಯದ ಪಾಠ ಮಾಡಿದ್ದಾರೆ.

ಮರಾಠಿ-ಕನ್ನಡ ಸಹೋದರ ಭಾಷೆಗಳು: ಬೆಳಗಾವಿಯಲ್ಲಿ ನಾಡದ್ರೋಹಿಗಳಿಗೆ ಸಾಮರಸ್ಯದ ಪಾಠ ಮಾಡಿದ ಮಹಾರಾಷ್ಟ್ರ ಸಿಎಂ ಫಡ್ನವೀಸ್
ದೇವೇಂದ್ರ ಫಡ್ನವೀಸ್Image Credit source: x.com/Devendra Fadnavis
ಸಹದೇವ್​ ಮಾನೆ
| Edited By: |

Updated on: Nov 28, 2026 | 7:57 PM

Share

ಮುಖ್ಯಾಂಶಗಳು

  • ಮರಾಠಿ ಮತ್ತು ಕನ್ನಡ ಸಹೋದರ ಭಾಷೆಗಳು ಎಂದ ಫಡ್ನವೀಸ್
  • ದೇಶದಲ್ಲಿ ಬಹಳ ದೊಡ್ಡ ನ್ಯಾರೇಟಿವ್ ಹೋರಾಟ ನಡೆಯುತ್ತಿದೆ
  • ರಾಹುಲ್ ಗಾಂಧಿ ಪ್ರತಿ ದಿನವೂ ಯಾಕೆ ಸುಳ್ಳು ಹೇಳುತ್ತಾರೆ

ಬೆಳಗಾವಿ, ನವೆಂಬರ್​​ 28: ‘ಮಹಾರಾಷ್ಟ್ರ ಮತ್ತು ಕರ್ನಾಟಕ ನೆರೆಯ ಸಹೋದರ ರಾಜ್ಯಗಳು. ನಮ್ಮಿಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ಸಂಪೂರ್ಣ ಗೌರವವಿದೆ. ಮರಾಠಿ ಮತ್ತು ಕನ್ನಡ ಭಾಷೆಗಳು ಸಹೋದರಿಯರು ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಆ ಮೂಲಕ ಬೆಳಗಾವಿಯ ನೆಲದಲ್ಲಿ ನಿಂತುಕೊಂಡು ನಾಡದ್ರೋಹಿಗಳಿಗೆ ಸಾಮರಸ್ಯದ ಪಾಠ ಮಾಡಿದ್ದಾರೆ.

ಹೊಸ ವ್ಯವಸ್ಥೆ ಸೃಷ್ಟಿಸಲು ಹುನ್ನಾರ ನಡೆದಿದೆ ಎಂದ ಫಡ್ನವೀಸ್

ನಗರದ ಧರ್ಮನಾಥ ಭವನದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ‘ಪ್ರಜಾಪ್ರಭುತ್ವ ಉಳಿಸಿ’ ಸಮಾವೇಶದಲ್ಲಿ ಮಾತನಾಡಿದ  ದೇವೇಂದ್ರ ಫಡ್ನವೀಸ್​​​, ‘ದೇಶದಲ್ಲಿ ರಾಜಕೀಯ ಅಧಿಕಾರ, ಸರ್ಕಾರಗಳು ಬದಲಾಗುತ್ತವೆ. ಹೊಸ ವ್ಯವಸ್ಥೆ ಸೃಷ್ಟಿಸಲು ಹುನ್ನಾರ ನಡೆಯುತ್ತಿದೆ. ಸ್ಥಳೀಯ ರಾಜಕೀಯ, ನಾಯಕರು, ಸಂಘಟನೆಗಳನ್ನ ಇಟ್ಟುಕೊಂಡು ಪ್ರಯತ್ನ ನಡೆದಿದೆ. ಇದರಲ್ಲಿ ಸಾಮಾಜಿಕ ಜಾಲತಾಣದ ದುರುಪಯೋಗ ನಡೆಯುತ್ತಿದೆ’ ಎಂದರು.

ರಾಹುಲ್ ಗಾಂಧಿ ವಿರುದ್ಧ ಫಡ್ನವೀಸ್ ವಾಗ್ದಾಳಿ 

ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ಮಾಡಿದ ಫಡ್ನವೀಸ್, ‘ರಾಹುಲ್ ಗಾಂಧಿ ಪ್ರತಿ ದಿನವೂ ಯಾಕೆ ಸುಳ್ಳು ಹೇಳುತ್ತಾರೆ. ರಾಹುಲ್ ಕೆಂಪು ಬಣ್ಣದ ಸಂವಿಧಾನ ಪುಸ್ತಕ ಹಿಡಿದು ಓಡಾಡುತ್ತಿದ್ದಾರೆ. ಆದರೆ ಅಂಬೇಡ್ಕರ್ ಅವರ ಸಂವಿಧಾನದ ಪುಸ್ತಕ ನೀಲಿ ಬಣ್ಣದ್ದಿದೆ. ಸಿಎಂ ಡಿ.ಕೆ.ಶಿವಕುಮಾರ್​ರನ್ನೇ ರಾಹುಲ್ ಗಾಂಧಿ ಹಿಂದಕ್ಕೆ ತಳ್ಳಿದ್ರು. ರಾಹುಲ್ ಸಂವಿಧಾನವನ್ನು ಎಷ್ಟು ಪಾಲಿಸುತ್ತಾರೆಂದು ತೋರಿಸುತ್ತೆ. ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತ ಬಲಿಷ್ಠವಾಗಿದೆ. ಪ್ರಪಂಚದಲ್ಲಿ ಬಲಿಷ್ಠ ರಾಷ್ಟ್ರದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಆಶಾ ಕಾರ್ಯಕರ್ತೆಯರ ಜತೆಗಿನ ಸಿಎಂ ಸಂಧಾನ ಸಕ್ಸಸ್: 2 ಸಾವಿರ ರೂ. ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ

‘ರಾಹುಲ್ ಹೇಳಿಕೆ ನೋಡಿದರೆ ಗಜನಿಯಂತೆ ವರ್ತಿಸುತ್ತಾರೆ. ಅವರ ಮಾತುಗಳು ಅವರಿಗೇ ಗೊತ್ತಿರುವುದಿಲ್ಲ. ದೇಶ ಅಸ್ಥಿರಗೊಳಿಸಲು ರಾಹುಲ್ ಮುಖವಾಣಿ ಆಗಿದ್ದಾರೆ. ದೇಶ ಅಸ್ಥಿರಗೊಳಿಸುವ ಕುತಂತ್ರವನ್ನು ಪ್ರಧಾನಿ ತಡೆದರು. ಬಿಜೆಪಿ ಸಂವಿಧಾನ ಬದಲಿಸುತ್ತೆ ಅಂತಾ ಪ್ರಚಾರ ಮಾಡ್ತಾರೆ. ಭಾರತ ಜೋಡೋ ಯಾತ್ರೆ ಮೂಲಕ ದೇಶ ಅಸ್ಥಿರಗೊಳಿಸಲು ಯತ್ನಿಸಿದ್ದಾರೆ. ಈಗ ಅರಾಜಕತೆ ಸೃಷ್ಟಿಸುವ ಹುನ್ನಾರದ ಮುಖ ಕಳಚಿದೆ. ರಾಹುಲ್ ಸಂವಿಧಾನ ನಂಬಲ್ಲ, ಒಪ್ಪುವುದಿಲ್ಲ ಅಂತಾ ಹೇಳಲಿ, ಹಾಗೆ ಹೇಳಿದರೆ ರಾಹುಲ್ ಗಾಂಧಿಗೆ ಚಪ್ಪಲಿ ಎಸೆಯುತ್ತಾರೆ’ ಎಂದರು.

ಎಸ್‌ಐಆರ್ ಕುರಿತು ಕಾಂಗ್ರೆಸ್ ವಿರುದ್ಧ ಆರೋಪ

‘ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದರೆ ಇವಿಎಂ ಹ್ಯಾಕ್ ಅಂತಾರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದರೆ ಇವಿಎಂ ಓಕೆ ಅಂತಾರೆ. ಹರಿಯಾಣದಲ್ಲಿ ಬಿಜೆಪಿ ಗೆದ್ದರೆ ಇವಿಎಂ ಹ್ಯಾಕ್ ಅಂತಾರೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ 8 ಬಾರಿ SIR ಆಗಿದೆ. ಇವಾಗ ಎಸ್ಐಆರ್ ಬಗ್ಗೆ ಅಪ್ರಚಾರವನ್ನು ಮಾಡ್ತಿದ್ದಾರೆ’ ಎಂದು ದೇವೇಂದ್ರ ಫಡ್ನವೀಸ್​ ಕಿಡಿಕಾರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಸಹದೇವ್​ ಮಾನೆ
ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್‌: ಸಿಎಂ ಸಂಧಾನ ಸಕ್ಸಸ್‌
ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್‌: ಸಿಎಂ ಸಂಧಾನ ಸಕ್ಸಸ್‌
ಬಿಗ್​​ಬಾಸ್ ಸ್ಪರ್ಧಿಯ ಅನುಕರಣೆ ಮಾಡಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಬಿಗ್​​ಬಾಸ್ ಸ್ಪರ್ಧಿಯ ಅನುಕರಣೆ ಮಾಡಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಧರ್ಮ ದಂಗಲ್: ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದ ವಿಜಯೇಂದ್ರ
ಧರ್ಮ ದಂಗಲ್: ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದ ವಿಜಯೇಂದ್ರ
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು
ಯಶಸ್ ಚಾಣಾಕ್ಷತೆಗೆ ಮೆಚ್ಚಿದ ಸುದೀಪ್; ಕಿಚ್ಚನ ಚಪ್ಪಾಳೆ ಫಿಕ್ಸ್?
ಯಶಸ್ ಚಾಣಾಕ್ಷತೆಗೆ ಮೆಚ್ಚಿದ ಸುದೀಪ್; ಕಿಚ್ಚನ ಚಪ್ಪಾಳೆ ಫಿಕ್ಸ್?
ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ನಮ್ಮ ಧ್ವನಿ ಅಡಗಿಸಲಾಗಲ್ಲ: ಡಿಕೆಶಿ
ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ನಮ್ಮ ಧ್ವನಿ ಅಡಗಿಸಲಾಗಲ್ಲ: ಡಿಕೆಶಿ
ಸಿದ್ದರಾಮಯ್ಯ ಕುರಿತ ಸ್ಟಿಂಗ್​ ಆಪರೇಷನ್ ಪ್ರಕರಣಕ್ಕೆ ಕೇರಳ ನಂಟು
ಸಿದ್ದರಾಮಯ್ಯ ಕುರಿತ ಸ್ಟಿಂಗ್​ ಆಪರೇಷನ್ ಪ್ರಕರಣಕ್ಕೆ ಕೇರಳ ನಂಟು
ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ? ಇಂದು ದೆಹಲಿಗೆ ಸಿಎಂ
ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ? ಇಂದು ದೆಹಲಿಗೆ ಸಿಎಂ
ಸುದೀಪ್ ಪಾರ್ಟಿಗೆ ಬರ್ತಿಲ್ಲ; ದೂರಿದ ನಲಪಾಡ್
ಸುದೀಪ್ ಪಾರ್ಟಿಗೆ ಬರ್ತಿಲ್ಲ; ದೂರಿದ ನಲಪಾಡ್
ಸರ್ಕಾರಿ ಔಷಧಿ ಉಗ್ರಾಣದಲ್ಲಿ ಲಕ್ಷಾಂತರ ಮೌಲ್ಯದ ಅವಧಿ ಮೀರಿದ ಔಷಧಿ ಪತ್ತೆ
ಸರ್ಕಾರಿ ಔಷಧಿ ಉಗ್ರಾಣದಲ್ಲಿ ಲಕ್ಷಾಂತರ ಮೌಲ್ಯದ ಅವಧಿ ಮೀರಿದ ಔಷಧಿ ಪತ್ತೆ