ಗೋವಾ ಚಿತ್ರೋತ್ಸವ ಸಮಾರೋಪ: ನಟ ರಿಷಬ್ ಶೆಟ್ಟಿ ವಿಶೇಷ ಅತಿಥಿ
ಕಳೆದ ವರ್ಷ ನಡೆದ ಗೋವಾ ಚಿತ್ರೋತ್ಸವದಲ್ಲೂ ಸಹ ರಿಷಬ್ ಶೆಟ್ಟಿ ಭಾಗಿ ಆಗಿದ್ದರು. ಆದರೆ ಕಳೆದ ಬಾರಿ ನಟ ರಣ್ವೀರ್ ವೇದಿಕೆ ಮೇಲೆ ಮಾಡಿದ ಅವಾಂತರದಿಂದಾಗಿ ರಿಷಬ್ ಶೆಟ್ಟಿ ಅವರ ಉಪಸ್ಥಿತಿಗಿಂತಲೂ ವಿವಾದವೇ ಹೆಚ್ಚು ಸದ್ದಾಯ್ತು. ಈ ಬಾರಿ ಮತ್ತೊಮ್ಮೆ ರಿಷಬ್ ಶೆಟ್ಟಿ ಅವರಿಗೆ ಸರ್ಕಾರದ ವತಿಯಿಂದ ಆಹ್ವಾನ ನೀಡಲಾಗಿದ್ದು, ರಿಷಬ್ ಶೆಟ್ಟಿ ಅವರು ಇಂದು (ನವೆಂಬರ್ 28) ನಡೆದ ಸಮಾರೋಪ ಸಮಾರಂಭದಲ್ಲಿ ಪತ್ನಿ ಪ್ರಗತಿ ಶೆಟ್ಟಿ ಅವರೊಟ್ಟಿಗೆ ಭಾಗಿ ಆಗಿದ್ದಾರೆ.

ಮುಖ್ಯಾಂಶಗಳು
- ‘ಗೋವಾ ಚಲನಚಿತ್ರೋತ್ಸವ’ದಲ್ಲಿ ರಿಷಬ್ ಶೆಟ್ಟಿ ಭಾಗಿ
- ಸಮಾರೋಪ ಕಾರ್ಯಕ್ರಮದಲ್ಲಿ ರಿಷಬ್ ವಿಶೇಷ ಅತಿಥಿ
- ಗೋವಾ ಚಿತ್ರೋತ್ಸವ ಇಂದು ಮುಕ್ತಾಯ
ವಿಶ್ವದೆಲ್ಲೆಡೆ ನಡೆಯುವ ಹಲವಾರು ಚಲನಚಿತ್ರೋತ್ಸವಗಳಲ್ಲಿ ಪ್ರಮುಖವಾದ ಚಿತ್ರೋತ್ಸವ ಎನಿಸಿಕೊಂಡಿರುವ ಗೋವಾ ಚಲನಚಿತ್ರೋತ್ಸವ ಅಥವಾ ‘ಐಫಿ’ (IFFI) ಇಂದು (ನವೆಂಬರ್ 28) ಕೊನೆಯಾಗುತ್ತಿದೆ. ಕಳೆದ ಒಂಬತ್ತು ದಿನಗಳಿಂದಲೂ ನಡೆದ ಸಿನಿಮಾ ಉತ್ಸವಕ್ಕೆ ಇಂದು ತೆರೆ ಬೀಳಲಿದ್ದು, ಸಮಾರೋಪ ಸಮಾರಂಭದ ವಿಶೇಷ ಅತಿಥಿಗಳಲ್ಲಿ ಒಬ್ಬರಾಗಿ ಕನ್ನಡದ ಜನಪ್ರಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ಭಾಗಿಯಾಗಿದ್ದಾರೆ.
ಕಳೆದ ವರ್ಷ ನಡೆದ ಗೋವಾ ಚಿತ್ರೋತ್ಸವದಲ್ಲೂ ಸಹ ರಿಷಬ್ ಶೆಟ್ಟಿ ಭಾಗಿಯಾಗಿದ್ದರು. ಆದರೆ ಕಳೆದ ಬಾರಿ ನಟ ರಣವೀರ್ ವೇದಿಕೆ ಮೇಲೆ ಮಾಡಿದ ಅವಾಂತರದಿಂದಾಗಿ ರಿಷಬ್ ಶೆಟ್ಟಿ ಅವರ ಉಪಸ್ಥಿತಿಗಿಂತಲೂ ವಿವಾದವೇ ಹೆಚ್ಚು ಸದ್ದಾಯಿತು. ಈ ಬಾರಿ ಮತ್ತೊಮ್ಮೆ ರಿಷಬ್ ಶೆಟ್ಟಿ ಅವರಿಗೆ ಸರ್ಕಾರದ ವತಿಯಿಂದ ಆಹ್ವಾನ ನೀಡಲಾಗಿದ್ದು, ರಿಷಬ್ ಶೆಟ್ಟಿ ಅವರು ಇಂದು (ನವೆಂಬರ್ 28) ನಡೆದ ಸಮಾರೋಪ ಸಮಾರಂಭದಲ್ಲಿ ಪತ್ನಿ ಪ್ರಗತಿ ಶೆಟ್ಟಿ ಅವರೊಟ್ಟಿಗೆ ಭಾಗಿಯಾಗಿದ್ದಾರೆ.
ರಿಷಬ್ ಶೆಟ್ಟಿ, ಬಿಳಿ ಬಣ್ಣದ ಜುಬ್ಬ ಮತ್ತು ಕ್ರೀಂ ಬಣ್ಣದ ಪಂಚೆ ಉಟ್ಟು ಸಮಾರಂಭದಲ್ಲಿ ಭಾಗಿಯಾದರೆ, ಬಂಗಾರದ ಅಂಚು ಹೊಂದಿರುವ ನೀಲಿ ಬಣ್ಣದ ಸೀರೆಯುಟ್ಟು ಪ್ರಗತಿ ಶೆಟ್ಟಿ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ನಟಿ ಪ್ರಣಿತಾ ಸುಭಾಷ್ ಸಹ ಚಿತ್ರೋತ್ಸವದಲ್ಲಿ ಕಾಣಿಸಿಕೊಂಡಿದ್ದು, ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.
ಇದನ್ನೂ ಓದಿ:57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಧುರಂಧರ್’, ‘ರಾಮಾಯಣ’ ಚಿತ್ರಗಳಿಗೆ ಅಗ್ರಸ್ಥಾನ
ಈ ವರ್ಷ ಗೋವಾ ಚಿತ್ರೋತ್ಸವದ ಪನೊರಮಾ ವಿಭಾಗದಲ್ಲಿ ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಪ್ರದರ್ಶನ ಕಂಡಿದೆ. ‘ಕಾಂತಾರ 1’ ಮಾತ್ರವೇ ಅಲ್ಲದೆ, ಕನ್ನಡದ ಇನ್ನೂ ಕೆಲ ಸಿನಿಮಾಗಳು, ಡಾಕ್ಯುಮೆಂಟರಿಗಳು ಸಹ ಈ ಬಾರಿಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಗಳಿಸಿವೆ. ಸುಳ್ಯದ ಚಂದ್ರಶೇಖರ ಎಂಬುವವರ ಜೀವನ ಕುರಿತಾಗಿ ನಿರ್ಮಿಸಲಾದ ‘ದಿ ಹಗ್ ಆಫ್ ಎಂಪ್ಟಿನೆಸ್’ ಕನ್ನಡ ಸಾಕ್ಷ್ಯಚಿತ್ರ ಗೋವಾ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಗಮನ ಸೆಳೆದಿದೆ.
🌟 A POWERFUL PRESENCE, A CINEMATIC ICON!
Actor and filmmaker Rishab Shetty (@shetty_rishab) brings his star power to the IFFI 2026 Red Carpet, adding to the glitz and glamour of the grand celebration of cinema in #Goa! 🎬✨
#IFFI2026 #57IFFI #RedCarpet #IFFI @IFFIGoa @MIB_India
— PIB India (@PIB_India) November 28, 2026
ಇಂದು ನಡೆಯುತ್ತಿರುವ ಸಮಾರೋಪ ಸಮಾರಂಭದಲ್ಲಿ ಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನ ಕಂಡ ಸಿನಿಮಾಗಳ ಪೈಕಿ ಅತ್ಯುತ್ತಮ ಸಿನಿಮಾ, ಡಾಕ್ಯುಮೆಂಟರಿಗಳನ್ನು ಆಯ್ಕೆ ಮಾಡಿ ಅವುಗಳಿಗೆ ‘ಗೋಲ್ಡನ್ ಪೀಕಾಕ್’, ‘ಸಿಲ್ವರ್ ಪೀಕಾಕ್’ ಇನ್ನಿತರೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ರಿಷಬ್ ಶೆಟ್ಟಿ ಅವರೂ ಸಹ ವಿಜೇತರಿಗೆ ಪ್ರಶಸ್ತಿಗಳನ್ನು ವಿತರಣೆ ಮಾಡುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:19 pm, Sat, 28 November 26




