AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಧುರಂಧರ್’, ‘ರಾಮಾಯಣ’ ಚಿತ್ರಗಳಿಗೆ ಅಗ್ರಸ್ಥಾನ

57ನೇ IFFI ಚಿತ್ರೋತ್ಸವದಲ್ಲಿ ಬ್ರಿಕ್ಸ್ ಸಿನಿಮಾಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಭಾರತದ ‘ರಾಮಾಯಣ: ಪಾರ್ಟ್ 1’ ಚಿತ್ರದೊಂದಿಗೆ ಆರಂಭವಾಗಲಿರುವ ಈ ವಿಭಾಗದಲ್ಲಿ ಬ್ರಿಕ್ಸ್ ಒಕ್ಕೂಟದ ಎಲ್ಲಾ 11 ಸದಸ್ಯ ರಾಷ್ಟ್ರಗಳ ಹಾಗೂ ಪಾಲುದಾರ ರಾಷ್ಟ್ರಗಳ ವೈವಿಧ್ಯಮಯ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಆ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದೆ.

57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಧುರಂಧರ್’, ‘ರಾಮಾಯಣ’ ಚಿತ್ರಗಳಿಗೆ ಅಗ್ರಸ್ಥಾನ
Ramayana, Dhurandhar
ಮದನ್​ ಕುಮಾರ್​
|

Updated on: Nov 13, 2026 | 6:31 PM

Share

57ನೇ ಆವೃತ್ತಿಯ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಮುಖ ವಿಭಾಗಗಳಾದ ‘ಇಂಡಿಯನ್ ಪನೋರಮಾ’ ಮತ್ತು ‘ಬ್ರಿಕ್ಸ್’ ವಿಭಾಗಗಳ ಉದ್ಘಾಟನಾ ಚಿತ್ರಗಳು ಘೋಷಣೆಯಾಗಿವೆ. ಇಂಡಿಯನ್ ಪನೋರಮಾ ವಿಭಾಗವು ಬಾಲಿವುಡ್‌ನ ಜನಪ್ರಿಯ ಸಿನಿಮಾ ‘ಧುರಂಧರ್’ ಪ್ರದರ್ಶನದೊಂದಿಗೆ ಆರಂಭವಾದರೆ, ಬ್ರಿಕ್ಸ್ ದೇಶಗಳ ಸಿನಿಮಾಗಳ ವಿಶೇಷ ವಿಭಾಗವು ಇತ್ತೀಚೆಗೆ ಬಿಡುಗಡೆಯಾದ ‘ರಾಮಾಯಣ’ ಚಿತ್ರದೊಂದಿಗೆ ಉದ್ಘಾಟನೆಯಾಗಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಧೀರಜ್ ಸಿಂಗ್, ಆಯ್ಕೆ ಸಮಿತಿ ಮತ್ತು ತೀರ್ಪುಗಾರರು ಈ ಚಿತ್ರಗಳನ್ನು ಆಯಾ ವಿಭಾಗಗಳ ಆರಂಭಿಕ ಸಿನಿಮಾಗಳಾಗಿ ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು. ‘ಇಂಡಿಯನ್ ಪನೋರಮಾದ ಫೀಚರ್ ಫಿಲ್ಮ್ ವಿಭಾಗದಲ್ಲಿ ‘ಧುರಂಧರ್’ ಮೊದಲ ಚಿತ್ರವಾಗಿ ಪ್ರದರ್ಶನಗೊಳ್ಳಲಿದೆ. ಹಾಗೆಯೇ ಲಡಾಖಿ ಭಾಷೆಯ ‘ಬಿಕಮಿಂಗ್’ ಚಿತ್ರವು ನಾನ್-ಫೀಚರ್ ಫಿಲ್ಮ್ ವಿಭಾಗವನ್ನು ಉದ್ಘಾಟಿಸಲಿದೆ’ ಎಂದು ಅವರು ಮಾಹಿತಿ ನೀಡಿದರು.

IFFI ಚಿತ್ರೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಇಂಡಿಯನ್ ಪನೋರಮಾ ವಿಭಾಗವು ಭಾರತೀಯ ಚಿತ್ರರಂಗದ ಅತ್ಯುತ್ತಮ ಸಿನಿಮಾಗಳನ್ನು ಒಳಗೊಂಡಿರುತ್ತದೆ. ಮುಖ್ಯವಾಹಿನಿಯಿಂದ ಹೊರಗಿರುವ ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳಿಗೆ ಇಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತದೆ. ಈ ಬಾರಿ ಈ ವಿಭಾಗದಲ್ಲಿ 25 ಫೀಚರ್ ಫಿಲ್ಮ್‌ಗಳು ಮತ್ತು 20 ನಾನ್-ಫೀಚರ್ ಫಿಲ್ಮ್‌ಗಳು ಪ್ರದರ್ಶನಗೊಳ್ಳಲಿವೆ.

ಚಿತ್ರೋತ್ಸವದ ನಿರ್ದೇಶಕರಾಗಿ ನೇಮಕಗೊಂಡಿರುವ ಖ್ಯಾತ ನಿರ್ದೇಶಕ ಅಶುತೋಷ್ ಗೋವಾರಿಕರ್ ಮಾತನಾಡಿ, ಈ ವರ್ಷದ ಚಿತ್ರೋತ್ಸವವನ್ನು ‘ಗಡಿಗಳಿಲ್ಲದ ಕಥೆಗಳು’ ಎಂಬ ಥೀಮ್ ಅಡಿಯಲ್ಲಿ ಆಯೋಜಿಸಲಾಗುತ್ತಿದೆ ಎಂದರು. ‘ಇಂದು ಗಡಿಗಳು ಕೇವಲ ಭೂಪಟದ ಮೇಲಿನ ಗೆರೆಗಳಾಗಿ ಉಳಿದಿಲ್ಲ, ಅವು ನಮ್ಮ ಅಭ್ಯಾಸಗಳೂ ಆಗಿವೆ. ಪಾಸ್‌ಪೋರ್ಟ್ ಇಲ್ಲದೆಯೇ ಇಂತಹ ಗಡಿಗಳನ್ನು ದಾಟಬಲ್ಲ ಕೆಲವೇ ಕೆಲವು ಸಂಗತಿಗಳಲ್ಲಿ ಕಥೆಯೂ ಒಂದು. ಸಿನಿಮಾ ಮಾಡುವ ಅತ್ಯುತ್ತಮ ಕೆಲಸವೇ ಅದು’ ಎಂದು ಗೋವಾರಿಕರ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಕೇವಲ 8 ದಿನಕ್ಕೆ 1000 ಕೋಟಿ ರೂ. ಕ್ಲಬ್ ಸೇರಿದ ‘ರಾಮಾಯಣ’: ಯಶ್ ಹೊಸ ದಾಖಲೆ

ದಿನಾಂಕ ಮತ್ತು ಉದ್ಘಾಟನಾ ಚಿತ್ರ: ನವೆಂಬರ್ 20ರಿಂದ 28ರವರೆಗೆ ನಡೆಯಲಿರುವ ಈ ಚಿತ್ರೋತ್ಸವವು ಪಾವೆಲ್ ಪಾವ್ಲಿಕೋವ್ಸ್ಕಿ ನಿರ್ದೇಶನದ 2026ರ ಪೋಲಿಷ್ ಭಾಷೆಯ ಬಯೋಗ್ರಾಫಿಕಲ್ ಸಿನಿಮಾ ‘ಫಾದರ್‌ಲ್ಯಾಂಡ್’ ಪ್ರದರ್ಶನದೊಂದಿಗೆ ಆರಂಭವಾಗಲಿದೆ. ಸಿಂಗಾಪುರದ ‘ವಿ ಆರ್ ಆಲ್ ಸ್ಟ್ರೇಂಜರ್ಸ್’ ಸಮಾರೋಪ ಚಿತ್ರವಾಗಿರಲಿದೆ.

ಭಾಗವಹಿಸುವ ಸಿನಿಮಾಗಳು: 137 ದೇಶಗಳಿಂದ ಬಂದಿದ್ದ 1,900 ಅರ್ಜಿಗಳಲ್ಲಿ, ಒಟ್ಟು 87 ದೇಶಗಳ 159 ಅಂತಾರಾಷ್ಟ್ರೀಯ ಸಿನಿಮಾಗಳು ಮತ್ತು 18 ವಿವಿಧ ಭಾಷೆಗಳ 76 ಭಾರತೀಯ ಸಿನಿಮಾಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ.

ವಿಶೇಷ ದೇಶಗಳು: ಈ ಬಾರಿ ಸ್ಪೇನ್ ದೇಶಕ್ಕೆ ‘ಕಂಟ್ರಿ ಆಫ್ ಆನರ್’ ಗೌರವ ನೀಡಲಾಗಿದ್ದು, ಸ್ಪೇನ್‌ನ 4 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ರಷ್ಯಾ ಪಾಲುದಾರ ದೇಶವಾಗಿದ್ದು, ಅಲ್ಲಿನ 4 ವಿಶೇಷ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ.

ಎರಡು ಹೊಸ ವಿಭಾಗಗಳು: ಸಿನಿಮಾ ಪ್ರೇಮಿಗಳಿಗೆ ವಿಭಿನ್ನ ಅನುಭವ ನೀಡಲು ಈ ಬಾರಿ ‘ಅನಿಮೇಷನ್’ ಮತ್ತು ‘ಫಿಲ್ಮ್ಸ್ ಅಬೌಟ್ ಫಿಲ್ಮ್ಸ್’ ಎಂಬ ಎರಡು ಹೊಸ ವಿಭಾಗಗಳನ್ನು ಪರಿಚಯಿಸಲಾಗಿದ್ದು, ಎರಡೂ ವಿಭಾಗಗಳಲ್ಲಿ ತಲಾ 5 ಅತ್ಯುತ್ತಮ ಚಿತ್ರಗಳು ಪ್ರದರ್ಶನ ಕಾಣಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ವಿಶ್ವದ ಮೊದಲ 'ಟಿಲ್ಟೆಡ್ ಎಲ್‌ಇಡಿ ತಾರಾಲಯ' ಉದ್ಘಾಟಿಸಿದ ಪ್ರಧಾನಿ
ವಿಶ್ವದ ಮೊದಲ 'ಟಿಲ್ಟೆಡ್ ಎಲ್‌ಇಡಿ ತಾರಾಲಯ' ಉದ್ಘಾಟಿಸಿದ ಪ್ರಧಾನಿ
ವಿಶ್ವದ ಮೊದಲ ಟಿಲ್ಟೆಡ್ ಎಲ್​ಇಡಿ ತಾರಾಲಯ 'ಕಾಸ್ಮೋಸ್' ಉದ್ಘಾಟಿಸಿದ ಮೋದಿ
ವಿಶ್ವದ ಮೊದಲ ಟಿಲ್ಟೆಡ್ ಎಲ್​ಇಡಿ ತಾರಾಲಯ 'ಕಾಸ್ಮೋಸ್' ಉದ್ಘಾಟಿಸಿದ ಮೋದಿ
ಪ್ರಧಾನಿ ಮೋದಿ ಎದುರು ಸಾಲು ಸಾಲು ಬೇಡಿಕೆಯಿಟ್ಟ ಸಿಎಂ ಡಿ.ಕೆ. ಶಿವಕುಮಾರ್
ಪ್ರಧಾನಿ ಮೋದಿ ಎದುರು ಸಾಲು ಸಾಲು ಬೇಡಿಕೆಯಿಟ್ಟ ಸಿಎಂ ಡಿ.ಕೆ. ಶಿವಕುಮಾರ್
ಹೆಚ್​ಡಿ ದೇವೇಗೌಡರ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಹೆಚ್​​ಡಿ ಕುಮಾರಸ್ವಾಮಿ
ಹೆಚ್​ಡಿ ದೇವೇಗೌಡರ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಹೆಚ್​​ಡಿ ಕುಮಾರಸ್ವಾಮಿ
ಡಿಕೆ ಶಿವಕುಮಾರ್ ಕೈ ಹಿಡಿದು ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟಿಸಿದ ಮೋದಿ
ಡಿಕೆ ಶಿವಕುಮಾರ್ ಕೈ ಹಿಡಿದು ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟಿಸಿದ ಮೋದಿ
Live: ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ
Live: ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ
ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ಗೆಳೆಯರ ಗಲಾಟೆ: ಕುನ್ನಿ ಎಂದ ಗಗನ್​​ಗೆ ಖಡಕ್ ವಾರ್ನಿಂಗ್ ಕೊಟ್ಟ ತಾಂಡವ್
ಗೆಳೆಯರ ಗಲಾಟೆ: ಕುನ್ನಿ ಎಂದ ಗಗನ್​​ಗೆ ಖಡಕ್ ವಾರ್ನಿಂಗ್ ಕೊಟ್ಟ ತಾಂಡವ್
ಪ್ರಧಾನಿ ಮೋದಿಯಿಂದ ಪಿಂಕ್ ಲೈನ್ ಮೆಟ್ರೊ ಉದ್ಘಾಟನೆ ನೇರಪ್ರಸಾರ
ಪ್ರಧಾನಿ ಮೋದಿಯಿಂದ ಪಿಂಕ್ ಲೈನ್ ಮೆಟ್ರೊ ಉದ್ಘಾಟನೆ ನೇರಪ್ರಸಾರ
ನಾಗ ಚೌತಿ ಹಬ್ಬದ ದಿನವೇ ದೇವಾಲಯದಲ್ಲಿ ಪ್ರತ್ಯಕ್ಷವಾದ ಹಾವು
ನಾಗ ಚೌತಿ ಹಬ್ಬದ ದಿನವೇ ದೇವಾಲಯದಲ್ಲಿ ಪ್ರತ್ಯಕ್ಷವಾದ ಹಾವು