AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಬೇಹುಗಾರಿಕೆ ನೀಡಿದ ಮಾಹಿತಿಯಿಂದ ಬೆಚ್ಚಿಬಿದ್ದಿದ್ದರು ಆ್ಯಪಲ್ ಸಿಇಒ ಟಿಮ್ ಕುಕ್

CIA alerted Apple and other tech companies over possible invasion of Taiwan by China: 2-3 ವರ್ಷದ ಹಿಂದೆ ಅಮೆರಿಕದ ಟೆಕ್ ಕಂಪನಿಗಳ ಮುಖ್ಯಸ್ಥರೊಂದಿಗೆ ಸಿಐಎ ರಹಸ್ಯ ಸಭೆ ಕರೆದು, ತೈವಾನ್ ವಿಚಾರದ ಬಗ್ಗೆ ಮಾಹಿತಿ ಹೊರಗೆಡವಿತ್ತು. ಚೀನಾ ದೇಶವು ತೈವಾನ್ ಮೇಲೆ 2027ರಲ್ಲಿ ಆಕ್ರಮಣ ಮಾಡಬಹುದು ಎನ್ನುವುದು ಆ ಮಾಹಿತಿಯಾಗಿತ್ತು. ಸಭೆಯಲ್ಲಿ ಪಾಲ್ಗೊಂಡಿದ್ದ ಆ್ಯಪಲ್ ಸಿಇಒ ಟಿಮ್ ಕುಕ್, ಈ ಮಾಹಿತಿ ಕೇಳಿ ಕಂಗಾಲಾದರಂತೆ.

ಅಮೆರಿಕದ ಬೇಹುಗಾರಿಕೆ ನೀಡಿದ ಮಾಹಿತಿಯಿಂದ ಬೆಚ್ಚಿಬಿದ್ದಿದ್ದರು ಆ್ಯಪಲ್ ಸಿಇಒ ಟಿಮ್ ಕುಕ್
ಆ್ಯಪಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 25, 2026 | 5:26 PM

Share

ವಾಷಿಂಗ್ಟನ್, ಫೆಬ್ರುವರಿ 25: ಸುಮಾರು 2 ವರ್ಷದ ಆ್ಯಪಲ್ ಕಂಪನಿ ಅಮೆರಿಕದಲ್ಲಿ ಚಿಪ್ ತಯಾರಿಕೆಗೆ 100 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿತ್ತು. 100 ಬಿಲಿಯನ್ ಡಾಲರ್ ಎಂದರೆ ಸುಮಾರು 9 ಲಕ್ಷ ಕೋಟಿ ರೂ. ಆ್ಯಪಲ್ ಕಂಪನಿಯ ಈ ನಿರ್ಧಾರ ಸಾಧಾರಣದ್ದಾಗಿರಲಿಲ್ಲ. ಅಮೆರಿಕದಲ್ಲಿ ಮ್ಯಾನುಫ್ಯಾಕ್ಚರಿಂಗ್ ಅಂಟೇ ಬೇಡ ಎಂದು ಸುಮ್ಮನ್ನಿದ್ದ ಆ್ಯಪಲ್ ದಿಢೀರನೇ ನಿರ್ಧಾರ ಬದಲಿಸಿದ್ದ ಆಶ್ಚರ್ಯಪಡಬೇಕಾದ ಸಂಗತಿ. ಡೊನಾಲ್ಡ್ ಟ್ರಂಪ್ ಒತ್ತಡಕ್ಕೆ ಟಿಮ್ ಕುಕ್ ಒಳಗಾಗಿರಬಹುದು ಎನ್ನುವುದಕ್ಕೆ ಆಗಿನ್ನೂ ಟ್ರಂಪ್ ಅಧ್ಯಕ್ಷರಾಗಿರಲಿಲ್ಲ. ಹಾಗಿದ್ದರೆ ಆ್ಯಪಲ್ ಕಂಪನಿಯ ಆ ನಿರ್ಧಾರಕ್ಕೆ ಏನು ಕಾರಣ? ವರದಿಗಳ ಪ್ರಕಾರ, ರಹಸ್ಯ ಸಭೆಯೊಂದರಲ್ಲಿ ಟಿಮ್ ಕುಕ್​ಗೆ ಸಿಐಎ ಹೇಳಿದ ಸಂಗತಿಯೊಂದು ಇದಕ್ಕೆ ಕಾರಣ ಎನ್ನಲಾಗಿದೆ.

ಆ್ಯಪಲ್ ಕಂಪನಿ ಅಮೆರಿಕದಲ್ಲಿ ಚಿಪ್ ಮ್ಯಾನುಫ್ಯಾಕ್ಚರಿಂಗ್ ಮಾಡುವುದಾಗಿ ಘೋಷಣೆ ಮಾಡುವ ಸ್ವಲ್ಪ ಮೊದಲು, 2023ರ ಮಧ್ಯಭಾಗದಲ್ಲಿ ಕೆಲ ಪ್ರಮುಖ ಟೆಕ್ ಕಂಪನಿಗಳ ಸಿಇಒಗಳ ಜೊತೆ ಅಮೆರಿಕದ ಗುಪ್ತಚರ ಸಂಸ್ಥೆಯಾದ ಸಿಐಎ ರಹಸ್ಯ ಸಭೆ ನಡೆಸಿತ್ತು. ಆ್ಯಪಲ್ ಸಿಇಒ ಟಿಮ್ ಕುಕ್, ಎನ್​ವಿಡಿಯಾದ ಜೆನ್ಸೆನ್ ಹುವಾಂಗ್, ಎಎಂಡಿಯ ಲಿಸಾ ಸು ಅವರು ಈ ಸಭೆಯಲ್ಲಿ ಇದ್ದರು. ಕ್ವಾಲ್​ಕಾಮ್​ನ ಕ್ರಿಸ್ಟಿಯಾನೋ ಅಮೋನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಚೀನಾ 2027ರಲ್ಲಿ ತೈವಾನ್ ಅನ್ನು ಆಕ್ರಮಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಸಿಐಎ ಅಧಿಕಾರಿಗಳು ಆ ಸಭೆಯಲ್ಲಿ ಬಿಚ್ಚಿಟ್ಟಿದ್ದರು.

ಇದನ್ನೂ ಓದಿ: ‘ನೆಹರೂ, ಇಂದಿರಾ ಕಾಲದಲ್ಲಿ ವಿದೇಶೀ ಗುಪ್ತಚರರ ಕೈಲಿತ್ತು ಭಾರತ’: ಕಾಂಗ್ರೆಸ್​ಗೆ ಬಿಜೆಪಿ ತಿರುಗೇಟು; ಸುಧಾಂಶು ತ್ರಿವೇದಿ ಸರಣಿ ಟ್ವೀಟ್

ಗುಪ್ತಚರರು ನೀಡಿದ ಈ ಮಾಹಿತಿಯು ಅಮೆರಿಕದ ಟೆಕ್ ಕಂಪನಿಗಳ ಜಂಘಾಬಲ ಉಡುಗುವಂತೆ ಮಾಡಿತ್ತು. ವಿಶ್ವದ ಅತಿಮೌಲ್ಯದ ಮತ್ತು ಅತಿಶಕ್ತಿಶಾಲಿ ಚಿಪ್​ಗಳಲ್ಲಿ ಮ್ಯಾನುಫ್ಯಾಕ್ಚರಿಂಗ್ ಶೇ. 90ರಷ್ಟು ನಡೆಯುವುದು ತೈವಾನ್​ನಲ್ಲೇ. ಅದೇನಾದರೂ ಚೀನಾ ವಶವಾಗಿ ಹೋದರೆ ಚಿಪ್ ಸಪ್ಲೈ ಚೈನ್ ಬಂದ್ ಆದಂತೆಯೇ. ವಿಶ್ವದ ಟೆಕ್ ಸಾಮ್ರಾಜ್ಯದ ಅಧಿಪತಿಯಾಗಿ ಮುಂದುವರಿಯಲು ಅಮೆರಿಕಕ್ಕೆ ಸಾಧ್ಯವಾಗದೇ ಹೋಗುವ ಭಯ.

ಆ್ಯಪಲ್ ಸಿಇಒ ಟಿಮ್ ಕುಕ್ ಅಕ್ಷರಶಃ ಕಂಗಾಲಾಗಿದ್ದರು. ತೈವಾನ್​ನ ಟಿಎಸ್​ಎಂಸಿ (TSMC) ಕಂಪನಿಯು ಆ್ಯಪಲ್​ನ ಎಲ್ಲಾ ಉತ್ಪನ್ನಗಳಿಗೆ ಬೇಕಾದ ವಿಶೇಷ ವಿನ್ಯಾಸದ ಚಿಪ್​ಗಳನ್ನು ತಯಾರಿಸುತ್ತದೆ. ತೈವಾನ್ ಅನ್ನು ಚೀನಾ ಆಕ್ರಮಿಸಿಕೊಂಡರೆ ಆ್ಯಪಲ್ ಕಂಪನಿಯ ಬ್ಯುಸಿನೆಸ್ ಎಲ್ಲವೂ ಚೀನಾ ಮರ್ಜಿಗೆ ಬೀಳಬೇಕಾಗುತ್ತದೆ. ಹೀಗಾಗಿ, ಆ್ಯಪಲ್ ಕಂಪನಿ ಅಮೆರಿಕದೊಳಗೆಯೇ ಚಿಪ್ ತಯಾರಿಕೆಯ ಘಟಕಗಳನ್ನು ಸ್ಥಾಪಿಸಲು ಬಂಡವಾಳ ಹಾಕುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಧಾರವಾಡದಲ್ಲಿ ಜೈಲರ್ ಆತ್ಮಹತ್ಯೆ: ಅಲೋಕ್ ಕುಮಾರ್ ವಿರುದ್ಧ ಗಂಭೀರ ಆರೋಪ
ಧಾರವಾಡದಲ್ಲಿ ಜೈಲರ್ ಆತ್ಮಹತ್ಯೆ: ಅಲೋಕ್ ಕುಮಾರ್ ವಿರುದ್ಧ ಗಂಭೀರ ಆರೋಪ
ಆರ್‌ಟಿಒ ಕಚೇರಿಯಲ್ಲಿ ತಾಯಿಯ ಬದಲು ಮಗಳ ದರ್ಬಾರ್
ಆರ್‌ಟಿಒ ಕಚೇರಿಯಲ್ಲಿ ತಾಯಿಯ ಬದಲು ಮಗಳ ದರ್ಬಾರ್
ಬೆಂಗಳೂರಿನಲ್ಲಿ ಭಾರಿ ಮಳೆ: ದ್ವಿಚಕ್ರ ವಾಹನ ಸವಾರರ ಪರದಾಟ
ಬೆಂಗಳೂರಿನಲ್ಲಿ ಭಾರಿ ಮಳೆ: ದ್ವಿಚಕ್ರ ವಾಹನ ಸವಾರರ ಪರದಾಟ
ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್
ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?
ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್
ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್