AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೆಹರೂ, ಇಂದಿರಾ ಕಾಲದಲ್ಲಿ ವಿದೇಶೀ ಗುಪ್ತಚರರ ಕೈಲಿತ್ತು ಭಾರತ’: ಕಾಂಗ್ರೆಸ್​ಗೆ ಬಿಜೆಪಿ ತಿರುಗೇಟು; ಸುಧಾಂಶು ತ್ರಿವೇದಿ ಸರಣಿ ಟ್ವೀಟ್

BJP spokesperson Dr. Sudhanshu Trivedi says India was compromised during Nehru's and Indira's governance: ಅಮೆರಿಕದೊಂದಿಗೆ ಟ್ರೇಡ್ ಡೀಲ್ ಮಾಡಿಕೊಂಡು ರೈತರಿಗೆ ಮರಣ ಶಾಸನ ಬರೆದಿದ್ದಾರೆ ಎಂದು ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಮಾಡಿರುವ ಆರೋಪಕ್ಕೆ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಸರಣಿ ಟ್ವೀಟ್​ಗಳ ಮೂಲಕ ಉತ್ತರ ಕೊಟ್ಟಿದ್ದಾರೆ. ನೆಹರೂ ಮತ್ತು ಇಂದಿರಾ ಗಾಂಧಿ ಆಡಳಿತದ ಅವಧಿಯಲ್ಲಿ ಭಾರತದ ರಾಜಕೀಯ, ಆರ್ಥಿಕತೆ ಮತ್ತು ಭದ್ರತೆ ಹೇಗೆ ರಾಜಿಗೊಂಡಿತ್ತು ಎಂಬುದನ್ನು ದಾಖಲೆಗಳ ಸಮೇತ ವಿವರಿಸಿದ್ದಾರೆ.

‘ನೆಹರೂ, ಇಂದಿರಾ ಕಾಲದಲ್ಲಿ ವಿದೇಶೀ ಗುಪ್ತಚರರ ಕೈಲಿತ್ತು ಭಾರತ’: ಕಾಂಗ್ರೆಸ್​ಗೆ ಬಿಜೆಪಿ ತಿರುಗೇಟು; ಸುಧಾಂಶು ತ್ರಿವೇದಿ ಸರಣಿ ಟ್ವೀಟ್
ಇಂದಿರಾ ಗಾಂಧಿImage Credit source: INC
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 25, 2026 | 3:57 PM

Share

ನವದೆಹಲಿ, ಫೆಬ್ರುವರಿ 25: ಜವಾಹಾರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ಆಡಳಿತದ ವೇಳೆ ಭಾರತದ ಪೂರ್ಣ ನಿಯಂತ್ರಣವು ಅಮೆರಿಕ ಹಾಗೂ ರಷ್ಯನ್ ಗುಪ್ತಚರ ಸಂಸ್ಥೆಗಳ ಕೈಯಲ್ಲಿತ್ತು. ವಿದೇಶೀ ಬೇಹುಗಾರರಿಗೆ ದೇಶವನ್ನೇ ಮಾರಿಬಿಟ್ಟಿದ್ದರು ಎಂದು ಬಿಜೆಪಿ ವಕ್ತಾರ ಹಾಗೂ ರಾಜ್ಯಸಭಾ ಸಂಸದ ಸುಧಾಂಶು ತ್ರಿವೇದಿ ಗಂಭೀರ ಆರೋಪ ಮಾಡಿದ್ದಾರೆ. ಅಮೆರಿಕದೊಂದಿಗೆ ಟ್ರೇಡ್ ಡೀಲ್ ಮಾಡಿಕೊಂಡು ಭಾರತದ ಹಿತಾಸಕ್ತಿಯನ್ನು ಬಲಿಕೊಡಲಾಗಿದೆ. ಅಮೆರಿಕಕ್ಕೆ ಪ್ರಧಾನಿಗಳು ಶರಣಾಗಿದ್ದಾರೆ. ಒಪ್ಪಂದದ ಮೂಲಕ ಭಾರತೀಯ ರೈತರಿಗೆ ಮರಣ ಶಾಸನ ಬರೆದಿದ್ದಾರೆ ಎಂದು ರಾಹುಲ್ ಗಾಂಧಿ ಬಾರಿ ಬಾರಿ ಮಾಡುತ್ತಿರುವ ಆರೋಪಗಳಿಗೆ ಬಿಜೆಪಿ ವಕ್ತಾರರು ತಿರುಗೇಟು ಕೊಟ್ಟಂತಿದೆ.

ಎಕ್ಸ್​ನಲ್ಲಿ ಸರಣಿ ಪೋಸ್ಟ್​ಗಳನ್ನು ಹಾಕಿರುವ ಸುಧಾಂಶು ತ್ರಿವೇದಿ, ನೆಹರೂ, ಇಂದಿರಾ ಕಾಲದಲ್ಲಿ ದೇಶದ ಭದ್ರತೆಯನ್ನು ಅದೆಷ್ಟರಮಟ್ಟಿಗೆ ರಾಜಿ ಮಾಡಿಕೊಳ್ಳಲಾಗಿತ್ತು ಎನ್ನುವ ವಿವರವನ್ನು ಬಿಚ್ಚಿಟ್ಟಿದ್ದಾರೆ.

ಭಾರತ ಆಲಿಪ್ತ ನೀತಿ ಹೊಂದಿದ್ದರೂ ಅಮೆರಿಕದ ಸಿಐಎ ಹಾಗೂ ಸೋವಿಯತ್​ನ ಕೆಜಿಬಿ ನಿಯಂತ್ರಣದಲ್ಲಿ ವ್ಯವಸ್ಥೆ ಇತ್ತು. ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆಯಾಗಿರಲಿಲ್ಲ, ಶರಣಾಗತಿಯಾಗಿತ್ತು ಎಂದು ಬಿಜೆಪಿ ವಕ್ತಾರರು ತಮ್ಮ ಏಳು ಟ್ವೀಟ್​ಗಳ ಸರಣಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ನ್ಯಾಯಾಂಗಕ್ಕೆ ಕಳಂಕ ತರಲು ಬಿಡುವುದಿಲ್ಲ: ಶಾಲಾ ಪಠ್ಯದಲ್ಲಿ ನ್ಯಾಯಾಂಗ ಭ್ರಷ್ಟಾಚಾರ ಅಧ್ಯಾಯ ಕುರಿತು ಸುಪ್ರೀಂ ಗರಂ

‘ನೆಹರೂ ಅವರ ಪ್ರಧಾನಿ ಕಾರ್ಯಾಲಯವು ಸಿಐಎ ಪಾಲಿಗೆ ಓಪನ್ ಬುಕ್ ಆಗಿತ್ತು. ಅವರ ವಿಶೇಷ ಸಹಾಯಕರಾದ ಎಂ.ಒ. ಮಥಾಯ್ ಅವರು ಅಮೆರಿಕದ ಆಸ್ತಿಯಾಗಿದ್ದರು. ಪ್ರತಿಯೊಂದು ದಾಖಲೆಯನ್ನೂ ಲ್ಯಾಂಗ್ಲೇಗೆ (ಸಿಐಎ ಮುಖ್ಯ ಕಚೇರಿ) ನಕಲು ಮಾಡಿ ಕಳುಹಿಸಲಾಗುತ್ತಿತ್ತು. ಭಾರತದ ಯಾವುದೇ ದಾಖಲೆ ಬೇಕೆಂದರೂ ತೆಗೆಯಬಲ್ಲೆವು ಎಂದು ಅಮೆರಿಕದ ರಾಜತಾಂತ್ರಿಕರು ಹೇಳಿಕೊಳ್ಳುತ್ತಿದ್ದುಂಟು. ಭಾರತದ ಹೃದಯಭಾಗವೇ ಅಮೆರಿಕದ ಆಸ್ತಿಯಾಗಿತ್ತು’ ಎಂದು ಡಾ| ಸುಧಾಂಶು ತ್ರಿವೇದಿ ತಿಳಿಸಿದ್ದಾರೆ.

ಅಮೆರಿಕದವು ನೆಹರೂ ಪ್ರಧಾನಿ ಕಾರ್ಯಾಲಯದ ಮೇಲೆ ಕಣ್ಣಿಟ್ಟಿದ್ದರೆ, ರಷ್ಯಾದವರೇನು ಹಿಂದುಳಿದಿರಲಿಲ್ಲ. ರಷ್ಯಾದ ಕೆಜಿಬಿ (ಗುಪ್ತಚರ ಏಜೆನ್ಸಿ) ಭಾರತೀಯ ಸರ್ಕಾರದ ಪ್ರತಿಯೊಂದು ವಿಭಾಗದಲ್ಲೂ ಜನರನ್ನು ಇಟ್ಟಿತ್ತು. ಟ್ರೇಡ್ ಮಿಷನ್, ಸಾಂಸ್ಕೃತಿಕ ಸಂಬಂಧ ಇವೆಲ್ಲವೂ ಹೊರಗೆ ಕಾಣಿಸಲು ಇದ್ದ ಮುಖವಾಡ. ರಷ್ಯಾಗೆ ಬೇಹುಗಾರರು ಬೇಕಿರಲಿಲ್ಲ. ಇಡೀ ಸಿಸ್ಟಂ ಅನ್ನೇ ಅವರು ಕೊಂಡುಕೊಂಡಿದ್ದರು ಎಂದು ಬಿಜೆಪಿ ವಕ್ತಾರರು ಆಪಾದಿಸಿದ್ದಾರೆ.

ಇಂದಿರಾ ಅವಧಿಯಲ್ಲಿ ಸಿಐಎ ಪ್ರತೀ ಮೂಲೆಯನ್ನೂ ಹೊಕ್ಕಿತ್ತು. ಸಿಐಎಯಿಂದ ಹಣ ಪಡೆಯುತ್ತಿದ್ದರು. ಕಾಂಗ್ರೆಸ್ಸಿಗೆ ಕೋಟಿಗಟ್ಟಲೆ ಹಣ ಹರಿದು ಹೋಗುತ್ತಿತ್ತು. ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಇಂದಿರಾ ಗಾಂಧಿಗೆ ಒಂದು ಬಂಡಲ್ ಹೋಗಿ ತಲುಪಿತ್ತು. ವಿದೇಶೀ ಲಂಚಕ್ಕಾಗಿ ದೇಶವನ್ನು ಮಾರಿದ್ದರು ಎಂದು ರಾಜ್ಯಸಭಾ ಸಂಸದರೂ ಆಗಿರುವ ಅವರು ಟ್ವೀಟ್ ಮಾಡಿದ್ದಾರೆ.

ಸುಧಾಂಶು ತ್ರಿವೇದಿಯವರ ಸರಣಿ ಟ್ವೀಟ್​ಗಳು

ಇದನ್ನೂ ಓದಿ: ಎಂಟನೇ ತರಗತಿಯ ಹೊಸ ಪಠ್ಯದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಉಲ್ಲೇಖ

1976ರಲ್ಲಿ ಸೋವಿಯತ್​ಗೆ ಸಹಾಯವಾಗುವಂತೆ ರುಬಲ್ ಎದುರು ರುಪಾಯಿ ಮೌಲ್ಯವನ್ನು ಬದಲಿಸಿದ್ದರು ಇಂದಿರಾ ಗಾಂಧಿ. ಇದು ನೆಹರೂ ಹಾಗೂ ಇಂದಿರಾ ಆಡಳಿತದಲ್ಲಿ ದೇಶದ ಹಿತಾಸಕ್ತಿ ಬಲಿಕೊಟ್ಟ ಕಥೆ ಎಂದು ಡಾ. ಸುಧಾಂಶು ತ್ರಿವೇದಿ ವಿವರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:50 pm, Wed, 25 February 26

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ