AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವರ್ಷದ ಬಜೆಟ್ ಭಾಷಣದಲ್ಲಿ ಹೊಸತನ; 75 ವರ್ಷದ ಸಂಪ್ರದಾಯ ಮುರಿಯುತ್ತಾರಾ ನಿರ್ಮಲಾ ಸೀತಾರಾಮನ್?

Nirmala Sitharaman may break 75 year tradition in her 2026 budget speech: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026ರ ಫೆಬ್ರುವರಿ 1, ಭಾನವಾರದಂದು ಬಜೆಟ್ ಪ್ರಸ್ತುತಪಡಿಸುತ್ತಿದ್ದಾರೆ. ವರದಿಗಳ ಪ್ರಕಾರ ಈ ಬಾರಿಯ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಅವರು 75 ವರ್ಷದ ಸಂಪ್ರದಾಯ ಮುರಿಯಲಿದ್ದಾರೆ. ಬಜೆಟ್ ಭಾಷಣದ ಎರಡು ಭಾಗಗಳ ಪೈಕಿ ಎರಡನೇ ಭಾಗಕ್ಕೆ ಒತ್ತು ಕೊಡಲಾಗುತ್ತದೆ ಎನ್ನಲಾಗಿದೆ.

ಈ ವರ್ಷದ ಬಜೆಟ್ ಭಾಷಣದಲ್ಲಿ ಹೊಸತನ; 75 ವರ್ಷದ ಸಂಪ್ರದಾಯ ಮುರಿಯುತ್ತಾರಾ ನಿರ್ಮಲಾ ಸೀತಾರಾಮನ್?
ನಿರ್ಮಲಾ ಸೀತಾರಾಮನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 31, 2026 | 8:37 PM

Share

ನವದೆಹಲಿ, ಜನವರಿ 31: ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ನಾಳೆ ಭಾನುವಾರ ಮಂಡಿಸಲಿರುವ ಬಜೆಟ್ ಹಾಗೂ ಅವರ ಬಜೆಟ್ ಭಾಷಣ (Budget Speech) ವಿಭಿನ್ನವಾಗಿರಲಿದೆ ಎಂದು ಹೇಳಲಾಗುತ್ತಿದೆ. ಬಜೆಟ್ ಅನ್ನು ಪ್ರಸ್ತುತಪಡಿಸುವ ರೀತಿ ಬೇರೆ ರೀತಿ ಇರಲಿದೆ. 75 ವರ್ಷಗಳಿಂದ ಇದ್ದ ಬಜೆಟ್ ಭಾಷಣದ ಸ್ವರೂಪ ಬದಲಾಗಲಿದೆ. ಬಜೆಟ್ ಭಾಷಣದ ಎರಡು ಭಾಗಗಳ ಪೈಕಿ ಎರಡನೇ ಭಾಗಕ್ಕೆ ನಿರ್ಮಲಾ ಸೀತಾರಾಮನ್ ಅವರು ಹೆಚ್ಚು ಒತ್ತು ಕೊಡಲಿದ್ದಾರೆ ಎಂದು ಸರ್ಕಾರಿ ಮೂಲಗಳು ಹೇಳಿದ್ದಾಗಿ ನ್ಯೂಸ್18 ವರದಿ ಮಾಡಿದೆ.

ಬಜೆಟ್ ಭಾಷಣದಲ್ಲಿ ಎರಡು ಭಾಗ ಇರುತ್ತವೆ. ಹಿಂದಿನ ಬಜೆಟ್​ಗಳಲ್ಲಿ ಸಚಿವರು ಮೊದಲ ಭಾಗದಲ್ಲಿ ಆರ್ಥಿಕ ಪರಿಸ್ಥಿತಿ, ಹಣಕಾಸು ಸ್ಥಿತಿ, ಪ್ರಮುಖ ನೀತಿ ಘೋಷಣೆ ಇತ್ಯಾದಿ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಗುತ್ತಿತ್ತು. ಎರಡನೇ ಭಾಗದಲ್ಲಿ ತೆರಿಗೆ ಇತ್ಯಾದಿ ಅಂಕಿ ಅಂಶಗಳ ಪ್ರಸ್ತುತಿ ಹೆಚ್ಚಾಗಿ ಇರುತ್ತಿತ್ತು. 2026-27ರ ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದ ಎರಡನೇ ಭಾಗದಲ್ಲಿ ಸುದೀರ್ಘ ಮಾಹಿತಿ ಒದಗಿಸಲಿದ್ದಾರೆ.

ಇದನ್ನೂ ಓದಿ: ಆರ್ಥಿಕತೆಗೆ ಪುಷ್ಟಿ ಕೊಡಲು ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಹೆಚ್ಚು ಹಣ ವ್ಯಯಿಸಿ: ತಜ್ಞರ ಸಲಹೆ

ಎರಡನೇ ಭಾಗದ ಬಜೆಟ್ ಭಾಷಣದಲ್ಲಿ ತತ್​ಕ್ಷಣದ ಆರ್ಥಿಕ ಆದ್ಯತೆಗಳಿಗೆ ಒತ್ತು ಕೊಟ್ಟಂತೆ, ದೂರಗಾಮಿ ಅಭಿವೃದ್ಧಿ ಗುರಿಗಳಿಗೂ ಒತ್ತು ಕೊಡಲಾಗುತ್ತದೆ. ದೀರ್ಘಾವಧಿ ರಚನಾತ್ಮಕ ಸುಧಾರಣೆಗಳ ಮೂಲಕ ಸರ್ಕಾರ ಆರ್ಥಿಕ ಶಿಸ್ತು ಅಭಿವೃದ್ಧಿ, ಸಮಾಜ ಕಲ್ಯಾಣದ ಸಮತೋಲನ ಸಾಧಿಸಲು ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದರ ವಿವರ ಇದರಲ್ಲಿ ಇರುತ್ತದೆ ಎನ್ನಲಾಗಿದೆ.

ಜಾಗತಿಕ ಮತ್ತು ದೇಶೀಯ ಸವಾಲುಗಳ ಮಧ್ಯೆ ಭಾರತದ ಆರ್ಥಿಕ ದೃಷ್ಟಿಕೋನ ಹೇಗಿರುತ್ತದೆ ಎಂಬುದರ ಚಿತ್ರಣವನ್ನು ತೆರೆದಿಡಲಾಗುತ್ತದೆ. ದೇಶದ ಸದ್ಯದ ಆರ್ಥಿಕ ಸಾಮರ್ಥ್ಯಗಳೇನು, ವಿವಿಧ ವಲಯವಾರು ಅನುಕೂಲಗಳೇನು, ಭವಿಷ್ಯದ ಬೆಳವಣಿಗೆ ಅವಕಾಶಗಳೆಷ್ಟು ಎಂಬಿತ್ಯಾದಿಯನ್ನು ಅಂದಾಜಿಸುವ ಪ್ರಯತ್ನವಾಗಲಿದೆ.

ಇದನ್ನೂ ಓದಿ: ಬಲಿಷ್ಠ ಭಾರತಕ್ಕೆ ಬೇಕು ತಂತ್ರಜ್ಞಾನ ಪ್ರಾವೀಣ್ಯತೆ; ಬಜೆಟ್​ನಲ್ಲಿ ಟೆಕ್ ಸೆಕ್ಟರ್​ಗೆ ಏನು ಸಿಗುತ್ತೆ?

ಒಟ್ಟಾರೆ, ಬಜೆಟ್ ಭಾಷಣದ ದ್ವಿತೀಯಾರ್ಧದಲ್ಲಿ ಸರ್ಕಾರದ ಮಧ್ಯಮ ಮತ್ತು ದೂರಗಾಮಿ ಆರ್ಥಿಕ ಆದ್ಯತೆಗಳು ಹಾಗು ಸುಧಾರಣೆಗಳ ಝಲಕ್ ಹೇಗಿರುತ್ತೆ ಎಂಬುದರ ಸುಳಿವು ಕೊಡಲಾಗುತ್ತದೆ. ಇನ್ನುಳಿದಂತೆ ಹೊಸ ಯೋಜನೆಗಳ ಘೋಷಣೆ, ಬಂಡವಾಳ ವೆಚ್ಚ, ವಿವಿಧ ಇಲಾಖೆಗಳಿಗೆ ಅನುದಾನ ಹಂಚಿಕೆ, ಯೋಜನೆಗಳಿಗೆ ಅನುದಾನ ಹಂಚಿಕೆ ಇತ್ಯಾದಿ ಮೂಲಭೂತ ಬಜೆಟ್ ಅಂಶಗಳು ಇದ್ದೇ ಇರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ