AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಥಿಕತೆಗೆ ಪುಷ್ಟಿ ಕೊಡಲು ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಹೆಚ್ಚು ಹಣ ವ್ಯಯಿಸಿ: ತಜ್ಞರ ಸಲಹೆ

Union Budget 2026-27, infrastructure capex: ಕಳೆದ ಬಾರಿಯ ಬಜೆಟ್​ನಲ್ಲಿ ಸ್ಮಾರ್ಟ್ ಸಿಟಿ, ಹೆದ್ದಾರಿ ಪ್ರಾಜೆಕ್ಟ್​ಗಳಿಗೆ 1.5 ಲಕ್ಷ ಕೋಟಿ ರೂ ಅನುದಾನ ಕೊಡಲಾಗಿತ್ತು. 2026-27ರ ಬಜೆಟ್​ನಲ್ಲಿ ಸರ್ಕಾರದ ಈ ಬಂಡವಾಳ ವೆಚ್ಚ ಎರಡು ಪಟ್ಟು ಹೆಚ್ಚಾಗಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ದೇಶವು ಆರ್ಥಿಕವಾಗಿ ಪ್ರಬಲವಾಗಬೇಕಾದರೆ ಮೂಲಸೌಕರ್ಯಗಳು ದೃಢಗೊಳ್ಳಬೇಕು ಎಂಬುದು ಅವರ ಅನಿಸಿಕೆ.

ಆರ್ಥಿಕತೆಗೆ ಪುಷ್ಟಿ ಕೊಡಲು ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಹೆಚ್ಚು ಹಣ ವ್ಯಯಿಸಿ: ತಜ್ಞರ ಸಲಹೆ
ಇನ್​ಫ್ರಾಸ್ಟ್ರಕ್ಚರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 31, 2026 | 4:55 PM

Share

ನವದೆಹಲಿ, ಜನವರಿ 31: ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಬಜೆಟ್ (Union Budget) ಮಂಡಿಸುತ್ತಿದ್ದು ಉದ್ಯಮ ವಲಯದಲ್ಲಿ ಅಪಾರ ನಿರೀಕ್ಷೆಗಳಿವೆ. ಜಾಗತಿಕ ಸಂಕಷ್ಟಗಳ ನಡುವೆ ಆರ್ಥಿಕ ಬೆಳವಣಿಗೆಯ ವೇಗ ಹೆಚ್ಚಿಸಲು ಸರ್ಕಾರ ಸಂಕಲ್ಪ ತೊಟ್ಟಿದೆ. ಕಳೆದ ವರ್ಷದ ಬಜೆಟ್​ನಲ್ಲಿ (2025) ಹಲವಾರು ಸೆಕ್ಟರ್​ಗಳ ಮೂಲಸೌಕರ್ಯಕ್ಕಾಗಿ ಸರ್ಕಾರ ಬಹಳಷ್ಟು ಹಣ ವ್ಯಯಿಸಿತ್ತು. ಈ ಬಾರಿಯ ಬಜೆಟ್​ನಲ್ಲೂ ಇದೇ ನಿಲುವು ಮುಂದುವರಿಯಬಹುದು ಎಂದು ಉದ್ಯಮ ವಲಯ ನಿರೀಕ್ಷಿಸುತ್ತಿದೆ.

ಇನ್​ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್​ಗಳಿಗೆ 3 ಲಕ್ಷ ಕೋಟಿ ರೂ ಬರಲಿ

ಭಾರತವು ಜಾಗತಿಕ ಆರ್ಥಿಕ ಪ್ರಬಲ ಶಕ್ತಿಯಾಗಬೇಕಾದರೆ ಈ ಬಜೆಟ್​ನಲ್ಲಿ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಒತ್ತು ಕೊಡಬೇಕು ಎಂದು ಲಾಜಿಸ್ಟಿಕ್ಸ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ ನಡೆಸಿದ ಇತ್ತೀಚಿನ ಸಮೀಕ್ಷೆಯಲ್ಲಿ ಹೇಳಲಾಗಿದೆ. ಹೆದ್ದಾರಿ, ನಗರ ಸಾರಿಗೆ, ಸ್ಮಾರ್ಟ್​ಸಿಟಿ ನಿರ್ಮಾಣ ಯೋಜನೆಗಳಲ್ಲಿ ಹೂಡಿಕೆ ಮಾಡಲು, ಹಾಗೂ ರಾಜ್ಯಗಳಿಗೆ ಬಡ್ಡಿರಹಿತ ಸಾಲ ಕೊಡಲು ಕಳೆದ ವರ್ಷದ ಬಜೆಟ್​ನಲ್ಲಿ 1.5 ಲಕ್ಷ ಕೋಟಿ ರೂ ಹಣ ನೀಡಲಾಗಿತ್ತು. ಈ ಬಾರಿಯ ಬಜೆಟ್​ನಲ್ಲಿ ಅದು 3 ಲಕ್ಷ ಕೋಟಿ ರೂಗೆ ಏರಿಸಬೇಕು ಎಂದು ತಜ್ಞರು ಸಲಹೆ ಕೊಟ್ಟಿದ್ದಾರೆ.

‘ಉತ್ಪನ್ನತೆಗೆ ಪುಷ್ಟಿ ಕೊಡಲು, ಲಾಜಿಸ್ಟಿಕ್ಸ್​ನ ಕ್ಷಮತೆ ಸುಧಾರಿಸಲು, ನಮ್ಮ ಜನಸಂಖ್ಯಾ ಬಲವನ್ನು ಆರ್ಥಿಕ ಪ್ರಗತಿಗೆ ಅನುಕೂಲಕರವಾಗಿ ಮಾಡಿಕೊಳ್ಳಲು ಇನ್​ಫ್ರಾಸ್ಟ್ರಕ್ಚರ್ ಸಮರ್ಪಕವಾಗಿರುವುದು ಬಹಳ ಮುಖ್ಯ. ಮೂಲಸೌಕರ್ಯ ಯೋಜನೆಗಳಿಗೆ ಸರ್ಕಾರ ಮಾಡುವ ವೆಚ್ಚ ಒಂದೆರಡು ವರ್ಷಕ್ಕೆ ಸೀಮಿತವಾಗದೆ ಹಲವು ವರ್ಷಗಳು ನಿರಂತರವಾಗಿ ಹೂಡಿಕೆ ಆಗಬೇಕು’ ಎಂದು ಸಲಾಸರ್ ಟೆಕ್ನೋ ಎಂಜಿನಿಯರಿಂಗ್ ಕಂಪನಿಯ ಜಂಟಿ ಎಂಡಿಯಾದ ಶಶಾಂಕ್ ಅಗರ್ವಾಲ್ ಹೇಳುತ್ತಾರೆ.

ಇದನ್ನೂ ಓದಿ: ಬಲಿಷ್ಠ ಭಾರತಕ್ಕೆ ಬೇಕು ತಂತ್ರಜ್ಞಾನ ಪ್ರಾವೀಣ್ಯತೆ; ಬಜೆಟ್​ನಲ್ಲಿ ಟೆಕ್ ಸೆಕ್ಟರ್​ಗೆ ಏನು ಸಿಗುತ್ತೆ?

ಸಾಂಪ್ರದಾಯಿಕ ಮೂಲಸೌಕರ್ಯಗಳ ಜೊತೆಗೆ ಎಐ ಶಕ್ತ ಡಾಟಾ ಸೆಂಟರ್, ರೋಬೋಟಿಕ್ಸ್, ಎಡ್ಜ್ ಇಂಟೆಲಿಜೆನ್ಸ್, ಎಐ ಅಳವಡಿಕೆ ಇತ್ಯಾದಿ ಇನ್​ಫ್ರಾಸ್ಟ್ರಕ್ಚರ್​ಗೆ ಪುಷ್ಟಿ ನೀಡುವ ನೀತಿ ಬರಬೇಕು. ಆಗ ದೇಶದಲ್ಲಿ ಉತ್ಪನ್ನಶೀಲತೆ, ಆರ್ಥಿಕ ಕ್ಷಮತೆ, ಜಾಗತಕ ಸ್ಪರ್ಧಾತ್ಮಕತೆ ಗಣನೀಯವಾಗಿ ಹೆಚ್ಚಲು ಸಹಕಾರಿಯಾಗುತ್ತದೆ ಎಂದು ಗ್ಲೋಬಲ್​ಲಾಜಿಕ್​ನ ಪಿಯೂಶ್ ಝಾ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ನಾನು ತಂದೆ ಆಗ್ತಿರೋದು ಇನ್​​​ಸ್ಟಾಗ್ರಾಮ್​​​ಗೂ ಗೊತ್ತಾಗಿದೆ: ಧನಂಜಯ್
ನಾನು ತಂದೆ ಆಗ್ತಿರೋದು ಇನ್​​​ಸ್ಟಾಗ್ರಾಮ್​​​ಗೂ ಗೊತ್ತಾಗಿದೆ: ಧನಂಜಯ್
'ಹ್ಯಾಟ್ರಿಕ್' ಹೀರೋ ಸ್ಯಾಮ್ ಕರನ್
'ಹ್ಯಾಟ್ರಿಕ್' ಹೀರೋ ಸ್ಯಾಮ್ ಕರನ್
ಎಲ್ಲಾ ಲಿಂಗಾಯತರು, ಬ್ರಾಹ್ಮಣರು ಮಾಂಸ ತಿಂತಾರಾ ಎಂದು ಕೇಳೋದು ತಪ್ಪು; ಧನಂಜಯ
ಎಲ್ಲಾ ಲಿಂಗಾಯತರು, ಬ್ರಾಹ್ಮಣರು ಮಾಂಸ ತಿಂತಾರಾ ಎಂದು ಕೇಳೋದು ತಪ್ಪು; ಧನಂಜಯ