AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget 2026: ಟ್ಯಾಕ್ಸ್ ಡಿಡಕ್ಷನ್, ಡೆವಲಪರ್ಸ್​ಗೆ ಕಡಿಮೆ ದರದಲ್ಲಿ ಭೂಮಿ ಇತ್ಯಾದಿ ಕ್ರಮಗಳ ನಿರೀಕ್ಷೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ

Expectations of Real Estate from Union Budget 2026: ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಉತ್ತೇಜನ ನೀಡುವಂತಹ ಕ್ರಮಗಳನ್ನು ಸರ್ಕಾರ ಕಳೆದ ಕೆಲ ವರ್ಷಗಳಿಂದ ತೆಗೆದುಕೊಂಡು ಬಂದಿದೆ. ಸರ್ಕಾರದ ಈ ನೀತಿ ಹೀಗೆ ಮುಂದುವರಿಯಲಿ ಎಂದು ಈ ಸೆಕ್ಟರ್ ಅಪೇಕ್ಷಿಸುತ್ತಿದೆ. ಎರಡನೇ ಸ್ತರದ ನಗರಗಳಲ್ಲಿ ಕೈಗಾರಿಕಾ ಕಾರಿಡಾರ್​ಗಳು, ಮೂಲಸೌಕರ್ಯ ಪ್ರಾಜೆಕ್ಟ್​ಗಳನ್ನು ಕೈಗೊಳ್ಳಲಿ ಎಂಬುದು ಇದರ ಹಲವು ನಿರೀಕ್ಷೆಗಳಲ್ಲಿ ಒಂದು.

Budget 2026: ಟ್ಯಾಕ್ಸ್ ಡಿಡಕ್ಷನ್, ಡೆವಲಪರ್ಸ್​ಗೆ ಕಡಿಮೆ ದರದಲ್ಲಿ ಭೂಮಿ ಇತ್ಯಾದಿ ಕ್ರಮಗಳ ನಿರೀಕ್ಷೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ
ರಿಯಲ್ ಎಸ್ಟೇಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 30, 2026 | 6:30 PM

Share

ನವದೆಹಲಿ, ಜನವರಿ 30: ಕಳೆದ ಕೆಲ ವರ್ಷಗಳಿಂದ ಸರ್ಕಾರ ಇನ್​ಫ್ರಾಸ್ಟ್ರಕ್ಚರ್ ಕ್ಷೇತ್ರಕ್ಕೆ ಮುತುವರ್ಜಿ ತೋರುತ್ತಾ ಬರುತ್ತಿದೆ. ವಸತಿ ಪ್ರಾಜೆಕ್ಟ್​ಗಳು, ಕೈಗಾರಿಕಾ ಕಾರಿಡಾರ್​ಗಳು ಸಾಕಷ್ಟು ನಿರ್ಮಾಣ ಆಗಿವೆ, ಆಗುತ್ತಿವೆ. ಇನ್​ಫ್ರಾಸ್ಟ್ರಕ್ಚರ್ ಉತ್ತಮಗೊಂಡಂತೆ ರಿಯಲ್ ಎಸ್ಟೇಟ್ (Real Estate  sector) ಉದ್ಯಮವೂ ಗರಿಗೆದರುತ್ತಾ ಬಂದಿದೆ. ಸರ್ಕಾರದ ಈ ಸುಧಾರಣಾ ಕ್ರಮಗಳು ಸ್ಥಗಿತಗೊಳ್ಳದೆ ಮುಂದುವರಿಯುತ್ತಾ ಹೋಗಲಿ ಎಂಬುದು ಈ ಉದ್ಯಮವು ಬಜೆಟ್​ನಿಂದ ಮಾಡುತ್ತಿರುವ ನಿರೀಕ್ಷೆ.

ಉದ್ಯೋಗ ಸೃಷ್ಟಿ, ಯೋಜಿತ ನಗರೀಕರಣ, ದೀರ್ಘಕಾಲೀನ ಆರ್ಥಿಕ ಕ್ಷಮತೆ ಇವುಗಳಿಗೆ ರಿಯಲ್ ಎಸ್ಟೇಟ್ ಸೆಕ್ಟರ್ ಶಕ್ತಿ ತುಂಬಬೇಕಾದರೆ, ಅಭಿವೃದ್ಧಿ ಪೂರಕವಾದ ಮತ್ತು ಸಮತೋಲಿತವಾದ ಬಜೆಟ್​ನಿಂದ ಸಾಧ್ಯ ಎಂದು ಬೆಂಗಳೂರಿನ ಮನ ಪ್ರಾಜೆಕ್ಟ್ಸ್​ನ (Mana Projects) ಸಿಎಂಡಿ ಡಿ. ಕಿಶೋರ್ ರೆಡ್ಡಿ ಹೇಳುತ್ತಾರೆ.

ಸರ್ಕಾರದ ನೀತಿಗಳು ಮುಂದುವರಿಯಬೇಕು. ವಿವಿಧ ಹೌಸಿಂಗ್ ಸೆಗ್ಮೆಂಟ್​ಗಳಲ್ಲಿ ಗ್ರಾಹಕರ ವಿಶ್ವಾಸ ಮೂಡಿಸುವಂತಹ ಮತ್ತು ಭವಿಷ್ಯದ ದೃಷ್ಟಿಯಿಂದ ಮಾಡಲಾಗುವ ಸುಧಾರಣೆಗಳೂ ಬರಬೇಕು. ನಿರ್ಮಾಣ ಹಂತದಲ್ಲಿರುವ ಪ್ರಾಪರ್ಟಿಗಳ ಮೇಲೆ ಜಿಎಸ್​ಟಿ ದರ ಇಳಿಸಬೇಕು. ಗೃಹ ಸಾಲದ ಬಡ್ಡಿ ಮೇಲೆ ಡಿಡಕ್ಷನ್ ಮಿತಿಯನ್ನು ಹೆಚ್ಚಿಸಬೇಕು ಎಂದು ಕಿಶೋರ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಈ ಬಾರಿಯ ಬಜೆಟ್​ನಿಂದ ಇನ್ನಷ್ಟು ಸೂಕ್ಷ್ಮ ಕ್ರಮ ಎದುರು ನೋಡುತ್ತಿರುವ ಇನ್ಷೂರೆನ್ಸ್ ಸೆಕ್ಟರ್

ಉದಯೋನ್ಮುಖವಾಗಿರುವ ಹಾಗೂ ಎರಡನೇ ಸ್ತರದ ನಗರಗಳಲ್ಲಿ (ಟಯರ್-2 ಸಿಟಿ) ಇನ್​ಫ್ರಾಸ್ಟ್ರಕ್ಚರ್ ಮತ್ತು ನಗರ ಸಂಪರ್ಕತೆಯಲ್ಲಿ ಸತತ ಹೂಡಿಕೆ ಮಾಡಬೇಕು. ಇದರಿಂದ ಹೊಸ ವಸತಿ ಕಾರಿಡಾರ್​ಗಳು ಹೊರಹೊಮ್ಮಲು ಸಾಧ್ಯ. ಸಮತೋಲಿತವಾದ ನಗರ ಬೆಳವಣಿಗೆ ಸಾಧ್ಯ. ಹಾಗೆಯೇ, ಏಕ ಗವಾಕ್ಷಿ ಸಿಸ್ಟಂ ಮೂಲಕ ವೇಗವಾಗಿ ಪ್ರಾಜೆಕ್ಟ್​ಗಳ ಅನುಮೋದನೆ ಆಗಬೇಕು. ಎಫ್​ಡಿಐ ನಿಯಮಗಳಲ್ಲಿ ಸ್ಪಷ್ಟತೆ ಬರಬೇಕು ಎಂದೂ ಮನ ಪ್ರಾಜೆಕ್ಟ್ಸ್​ನ ಸಿಎಂಡಿ ಸಲಹೆ ನೀಡಿದ್ದಾರೆ.

ರಿಯಲ್ ಎಸ್ಟೇಟ್ ಮಾರುಕಟ್ಟೆ ನಿಧಾನಗೊಳ್ಳುತ್ತಿದೆಯಾ?

ವಿಎಸ್ ರಿಯಾಲ್ಟರ್ಸ್ ಸಂಸ್ಥೆಯ ಸಿಇಒ ವಿಜಯ್ ಹರ್ಷ್ ಪ್ರಕಾರ ರಿಯಲ್ ಎಸ್ಟೇಟ್ ಮಾರುಕಟ್ಟೆ ಮಂದಗೊಳ್ಳುತ್ತಿರುವ ಆರಂಭಿಕ ಸುಳಿವು ಇದೆ. ಪ್ರಾಪರ್ಟಿಗಳು ಮಾರಾಟವಾಗುತ್ತಿರುವ ಪ್ರಮಾಣ ಕಡಿಮೆ ಆಗುತ್ತಿದೆ. ಅದರಲ್ಲೂ ಅಧಿಕ ಬೇಡಿಕೆ ಇರುವ 1 ಕೋಟಿ ರೂ ಒಳಗಿನ ಮನೆಗಳ ಮಾರಾಟ ಕುಂಠಿತಗೊಳ್ಳುತ್ತಿದೆ ಎನ್ನುತ್ತಾರೆ ವಿಜಯ್ ಹರ್ಷ್.

ಇದನ್ನೂ ಓದಿ: ಬಜೆಟ್​ನಲ್ಲಿ ವಿತ್ತೀಯ ಶಿಸ್ತು ಕಾಯ್ದುಕೊಂಡು ಬಂಡವಾಳ ವೆಚ್ಚ ಹೆಚ್ಚಿಸಬಹುದು: ಜೆಎಂ ಫೈನಾನ್ಷಿಯಲ್ ನಿರೀಕ್ಷೆ

ಲ್ಯಾಂಡ್ ಡೆಲವಪರ್​ಗಳಿಗೆ ಕಡಿಮೆ ದರದಲ್ಲಿ ಭೂಮಿ ಸಿಗುವಂತಹ ವ್ಯವಸ್ಥೆ ಮಾಡಬೇಕು. ಮನೆ ಖರೀದಿದಾರರಿಗೆ ಗೃಹ ಸಾಲಗಳಿಗೆ ಡಿಡಕ್ಷನ್ ಇತ್ಯಾದಿ ತೆರಿಗೆ ರಿಯಾಯಿತಿ ಸೌಲಭ್ಯ ಕೊಟ್ಟರೆ ಈ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಚುರುಕು ಮುಟ್ಟಬಹುದು ಎನ್ನುತ್ತಾರೆ ವಿಎಸ್ ರಿಯಾಲ್ಟರ್ಸ್​ನ ಸಂಸ್ಥಾಪಕರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ