ಹೊಸ ಆಧಾರ್ ಆ್ಯಪ್ ಬಿಡುಗಡೆ; ಹೆಚ್ಚುವರಿ ಮಾಹಿತಿ ಹಂಚಿಕೆ ಇಲ್ಲದೆ ವಯಸ್ಸು ದೃಢೀಕರಣ ಸಾಧ್ಯ
New Aadhaar App launched by UIDAI: ಹೆಚ್ಚುವರಿ ಮಾಹಿತಿ ಹಂಚಿಕೆಗೆ ಅವಕಾಶ ಇಲ್ಲದೆ ಕೇವಲ ವಯಸ್ಸು ದೃಢೀಕರಣ ಮಾತ್ರ ಮಾಡುವಂತಹ ಫೀಚರ್ ಇರುವ ಹೊಸ ಆಧಾರ್ ಆ್ಯಪ್ ಬಿಡುಗಡೆ ಆಗಿದೆ. ಯುಐಡಿಎಐ ರೂಪಿಸಿರುವ ಈ ಆಧಾರ್ ಆ್ಯಪ್ನಲ್ಲಿ ಇತರ ಫೀಚರ್ಗಳೆಲ್ಲವೂ ಇರುತ್ತದೆ. ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಬಳಕೆದಾರರ ಏಜ್ ವೆರಿಫಿಕೇಶನ್ ಮಾಡಲು ಈ ಹೊಸ ಆ್ಯಪ್ ಸಹಾಯಕವಾಗುತ್ತದೆ.

ಯುಐಡಿಎಐ ಸಂಸ್ಥೆ ಹೊಸ ಆಧಾರ್ ಆ್ಯಪ್ (Aadhaar) ಬಿಡುಗಡೆ ಮಾಡಿದೆ. ಡಿಜಿಟಲ್ ವೈಯಕ್ತಿಕ ಡಾಟಾ ರಕ್ಷಣಾ ಕಾಯ್ದೆ ಅಡಿ ಯಾವುದೇ ಹೆಚ್ಚುವರಿ ಡಾಟಾ ಹಂಚಿಕೆ ಇಲ್ಲದೇ ಏಜ್ ವೆರಿಫಿಕೇಶನ್ ಮಾಡಲು ಈ ಹೊಸ ಆಧಾರ್ ಆ್ಯಪ್ ಸಹಾಯಕವಾಗಲಿದೆ. ಮೊನ್ನೆ ಬುಧವಾರ (ಜ. 28) ಈ ಆ್ಯಪ್ ಅನಾವರಣಗೊಂಡಿದೆ.
ಉತ್ತಮ ಆಡಳಿತಕ್ಕೆ ಆಧಾರ್ ದೃಢೀಕರಣ (ಸಮಾಜ ಕಲ್ಯಾಣ, ನಾವೀನ್ಯತೆ, ಜ್ಞಾನ) ಕಾಯ್ದೆಯ ನಿಯಮಗಳಿಗೆ (ಸ್ವಿಕ್ ರೂಲ್ಸ್) ತಿದ್ದುಪಡಿ ತರಲಾಗಿದೆ. ಈ ಕಾನೂನು ಅಡಿಯಲ್ಲಿ ಸುರಕ್ಷಿತ ರೀತಿಯಲ್ಲಿ ಆಧಾರ್ ಅಥೆಂಟಿಕೇಶನ್ ಬಳಸಿ ಸೇವೆ ಒದಗಿಲು ಖಾಸಗಿ ಸಂಸ್ಥೆಗಳಿಗೆ ಅನುವು ಮಾಡಿಕೊಡಲಾಗುತ್ತದೆ. ಈ ಮಾಹಿತಿಯನ್ನು ಹೊಸ ಆಧಾರ್ ಆ್ಯಪ್ ಬಿಡುಗಡೆ ಸಂದರ್ಭದಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಸಚಿವಾಲಯದ ಕಾರ್ಯದರ್ಶಿ ಎಸ್ ಕೃಷ್ಣನ್ ತಿಳಿಸಿದರು.
ಇದನ್ನೂ ಓದಿ: ಈ ಡೇಂಜರಸ್ ಆ್ಯಪ್ಗಳು ನಿಮ್ಮ ವೈಯಕ್ತಿಕ ಮಾಹಿತಿ ಕದಿಯಬಹುದು; ನಿಮ್ಮ ಫೋನ್ನಲ್ಲಿ ಇವು ಇವೆಯಾ ಪರಿಶೀಲಿಸಿ…
ಆಧಾರ್ ಅನ್ನು ವಯಸ್ಸು ದೃಢೀಕರಣಕ್ಕೆ ಬಳಸಲಾಗುತ್ತದೆ. ಈ ವೇಳೆ, ಆಧಾರ್ನ ಇತರ ಮಾಹಿತಿಯೂ ರವಾನೆಯಾಗುವ ಸಾಧ್ಯತೆ ಇರುತ್ತದೆ. ಹೊಸ ಆಧಾರ್ ಆ್ಯಪ್ನಲ್ಲಿ ವಯಸ್ಸಿನ ದೃಢೀಕರಣ ಮಾತ್ರವೇ ಮಾಡಬಹುದು. ಸೋಷಿಯಲ್ ಮೀಡಿಯಾ, ಗೇಮ್ಸ್, ಇಕಾಮರ್ಸ್ ಇತ್ಯಾದಿ ಆನ್ಲೈನ್ ಪ್ಲಾಟ್ಫಾರ್ಮ್ಗಳು ತಮ್ಮ ಬಳಕೆದಾರರ ವಯಸ್ಸನ್ನು ದೃಢೀಕರಿಸಲು ಆಧಾರ್ನ ಏಜ್ ಗೇಟಿಂಗ್ ಫೀಚರ್ ಬಳಸಬಹುದು.
ಏಜ್ ವೆರಿಫಿಕೇಶನ್ ಸಾಧ್ಯವಾದರೆ ಆನ್ಲೈನ್ ಪ್ಲಾಟ್ಫಾರ್ಮ್ಗಳು ಇನ್ನಷ್ಟು ಉಪಯುಕ್ತವಾಗಿ ಸರ್ವಿಸ್ ನೀಡಬಹುದು. ಬಳಕೆದಾರರು ಮಕ್ಕಳಾಗಿದ್ದರೆ ಅವರ ವಯಸ್ಸಿಗೆ ಸೂಕ್ತವಲ್ಲದ ಕಂಟೆಂಟ್ ಅಥವಾ ಪ್ರಾಡಕ್ಟ್ ಅನ್ನು ಪ್ರದರ್ಶಿಸದಿರಬಹುದು.
ಇದನ್ನೂ ಓದಿ: ಫ್ರಾನ್ಸ್ ಕೊಡಲ್ಲವೆಂದಾಗ ಹುಟ್ಟುಕೊಂಡ ಕಿಚ್ಚು; ಡಿಆರ್ಡಿಒ ವಿಜ್ಞಾನಿಗಳು ಗ್ಯಾನ್ ಚಿಪ್ ಟೆಕ್ನಾಲಜಿ ರಹಸ್ಯ ಭೇದಿಸಿದ ಕಥೆ
ಹೊಸ ಆಧಾರ್ ಆ್ಯಪ್ ಏಜ್ ಗೇಟಿಂಗ್ಗೆ ಮಾತ್ರವೇ ಬಳಕೆ ಆಗುವಂಥದ್ದಲ್ಲ. ವ್ಯಕ್ತಿಯ ಗುರುತಿನ ಕಾರ್ಡ್ ರೀತಿ ಡಿಜಿಟಲ್ ಅಗಿ ಬಳಸಬಹುದು. ಹೋಟೆಲ್, ಚಿತ್ರಮಂದಿರ ಇತ್ಯಾದಿ ಸ್ಥಳಗಳಲ್ಲಿ ವ್ಯಕ್ತಿಯ ಗುರುತನ್ನು ಪರಿಶೀಲಿಸಲು ಅವರ ಈ ಆಧಾರ್ ಆ್ಯಪ್ ಅನ್ನು ಪರಿಶೀಲಿಸಬಹುದು. ಭೌತಿಕವಾಗಿ ಆಧಾರ್ ದಾಖಲೆ ಕೇಳುವ ಯಾವುದೇ ಸಂಸ್ಥೆಗೂ ಡಿಜಿಟಲ್ ಆಗಿ ಆಧಾರ್ ದೃಢೀಕರಣ ಕೊಡಲು ಈ ಹೊಸ ಆ್ಯಪ್ ನೆರವಾಗುತ್ತದೆ. ಆಧಾರ್ ಕಾಯ್ದೆ ಪ್ರಕಾರ ಖಾಸಗಿ ಸಂಸ್ಥೆಗಳು ಯಾವುದೇ ವ್ಯಕ್ತಿಯ ಆಧಾರ್ ದತ್ತಾಂಶವನ್ನು ಸಂಗ್ರಹಿಸುವಂತಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




