AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಸೆಂಬರ್ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 8.1 ಹಿಗ್ಗಿರುವ ಸಾಧ್ಯತೆ: ಎಸ್​ಬಿಐ ವರದಿಯಲ್ಲಿ ಅಂದಾಜು

SBI report on India's GDP growth: 2025-26ರ ಮೂರನೇ ಕ್ವಾರ್ಟರ್ ಆದ ಅಕ್ಟೋಬರ್-ಡಿಸೆಂಬರ್​ನಲ್ಲಿ ಜಿಡಿಪಿ ಶೇ. 8.1ರಷ್ಟು ಹೆಚ್ಚಿರಬಹುದು ಎಂದು ಎಸ್​ಬಿಐ ವರದಿಯೊಂದರಲ್ಲಿ ಹೇಳಲಾಗಿದೆ. ಆಂತರಿಕವಾಗಿ ಉತ್ತಮವಾಗಿ ಕಂಡ ಅನುಭೋಗವು ಆರ್ಥಿಕತೆಯ ವೇಗ ಕುಸಿಯದಂತೆ ನೋಡಿಕೊಂಡಿದೆ ಎನ್ನುವುದು ಈ ವರದಿಯ ಅನಿಸಿಕೆ.

ಡಿಸೆಂಬರ್ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 8.1 ಹಿಗ್ಗಿರುವ ಸಾಧ್ಯತೆ: ಎಸ್​ಬಿಐ ವರದಿಯಲ್ಲಿ ಅಂದಾಜು
ಭಾರತದ ಆರ್ಥಿಕತೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 24, 2026 | 8:12 PM

Share

ನವದೆಹಲಿ, ಫೆಬ್ರುವರಿ 24: ಭಾರತದ ಆರ್ಥಿಕತೆ (Indian Economy) ಈ ವರ್ಷ ಉತ್ತಮ ವೇಗದಲ್ಲೇ ಸಾಗುತ್ತಿರುವಂತಿದೆ. ಈ ಹಣಕಾಸು ವರ್ಷದ ಮೊದಲೆರಡು ಕ್ವಾರ್ಟರ್​ಗಳಲ್ಲಿ ಸರಾಸರಿಯಾಗಿ ಶೇ. 8ರಷ್ಟು ಬೆಳವಣಿಗೆ ದಾಖಲಿಸಿದ್ದ ಜಿಡಿಪಿ, ಮೂರನೇ ಕ್ವಾರ್ಟರ್​ನಲ್ಲೂ ಉತ್ತಮ ಬೆಳವಣಿಗೆ ಕಾಣುವ ನಿರೀಕ್ಷೆ ಇದೆ. ಎಸ್​ಬಿಐ ರಿಸರ್ಚ್ ವರದಿ ಪ್ರಕಾರ ಡಿಸೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 8.1ರಷ್ಟು ಹಿಗ್ಗಿರಬಹುದು.

ಅಮೆರಿಕದ ಟ್ಯಾರಿಫ್ ಸೇರಿದಂತೆ ಜಾಗತಿಕವಾಗಿ ಹಲವು ಅಡೆತಡೆಗಳು ಇದ್ದಾಗ್ಯೂ ಭಾರತದ ಆರ್ಥಿಕತೆ ಉತ್ತಮ ಕ್ಷಮತೆ ತೋರಿದೆ. ಪ್ರಬಲ ಆಂತರಿಕ ಬೇಡಿಕೆ ಹಾಗೂ ವಿವಿಧ ಸೆಕ್ಟರ್​ಗಳಲ್ಲಿ ಸ್ಥಿರತೆ ಇರುವುದು ಆರ್ಥಿಕತೆ ಉತ್ತಮ ಗತಿಯಲ್ಲಿ ಬೆಳವಣಿಗೆ ದಾಖಲಿಸಲು ಸಾಧ್ಯವಾಗಿದೆ ಎನ್ನುವುದು ಎಸ್​ಬಿಐನ ಈ ಹೊಸ ವರದಿಯ ಅನಿಸಿಕೆ.

ಇದನ್ನೂ ಓದಿ: ಭಾರತ್ ಟ್ಯಾಕ್ಸಿಗೆ 500 ರೂ ನೀಡಿದರೆ ನೀವೇ ಡ್ರೈವರ್, ನೀವೇ ಮಾಲೀಕರು; ಈ ಕಂಪನಿಯ ಬ್ಯುಸಿನೆಸ್ ಮಾಡಲ್ ಹೇಗೆ?

ವರದಿ ಪ್ರಕಾರ, ಡಿಸೆಂಬರ್ ಕ್ವಾರ್ಟರ್​ನಲ್ಲಿ ಗ್ರಾಮೀಣ ಭಾಗದ ಅನುಭೋಗ ಉತ್ತಮವಾಗಿದೆ. ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳು ಉತ್ತಮವಾಗಿವೆ. ನಗರ ಭಾಗದಲ್ಲಿಯ ಅನುಭೋಗವೂ ಸ್ಥಿರವಾಗಿ ಹೆಚ್ಚುತ್ತಿದೆ. ಸರ್ಕಾರದ ಉತ್ತೇಜನಕಾರಿ ಕ್ರಮಗಳು, ಹಬ್ಬದ ಸೀಸನ್​ನಲ್ಲಿ ಜನರ ವೆಚ್ಚ ಇತ್ಯಾದಿ ಕಾರಣದಿಂದ ಅನುಭೋಗ ಹೆಚ್ಚಿದೆ. ಇದು ಜಿಡಿಪಿ ಹಿಗ್ಗಲು ಕಾರಣವಾಗಬಹುದು.

ಇಡೀ ಹಣಕಾಸು ವರ್ಷಕ್ಕೆ ಜಿಡಿಪಿ ದರ ಎಷ್ಟಿರಬಹುದು?

ಪ್ರಸಕ್ತ ಹಣಕಾಸು ವರ್ಷದಲ್ಲಿ (2025-26) ಆರ್ಥಿಕತೆ ಎಷ್ಟು ಬೆಳೆಯಬಹುದು ಎನ್ನುವ ಮುಂಗಡ ಅಂದಾಜಿನ ವರದಿ ಫೆಬ್ರುವರಿ 27ರಂದು ಬಿಡುಗಡೆಯಾಗಲಿದೆ. ಇದು ಎರಡನೇ ಅಡ್ವಾನ್ಸ್ ಎಸ್ಟಿಮೇಟ್ ಆಗಿರುತ್ತದೆ. ಈ ಹಿಂದೆ ಬಿಡುಗಡೆಯಾದ ಮೊದಲ ಅಡ್ವಾನ್ಸ್ ಎಸ್ಟಿಮೇಟ್ ಅಥವಾ ಮುಂಗಡ ಅಂದಾಜಿನ ಪ್ರಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7.4ರಷ್ಟು ಹೆಚ್ಚಬಹುದು ಎಂದಿತ್ತು. ಆದರೆ, ಮೊದಲ ಮೂರು ಕ್ವಾರ್ಟರ್​ಗಳಲ್ಲಿ ಆರ್ಥಿಕತೆ ಉತ್ತಮ ಬೆಳವಣಿಗೆ ಸಾಧಿಸಿರುವ ಕಾರಣ, ಇಡೀ ವರ್ಷದ ಬೆಳವಣಿಗೆ ಶೇ. 7.5 ಅನ್ನು ದಾಟುವ ಸಾಧ್ಯತೆ ಇಲ್ಲದಿಲ್ಲ. ಎರಡನೇ ಅಡ್ವಾನ್ಸ್ ಎಸ್ಟಿಮೇಟ್​ನಲ್ಲಿ ಹೆಚ್ಚುವರಿ ದತ್ತಾಂಶ, ಅಂದಾಜು ಪರಿಷ್ಕರಣೆಗಳನ್ನು ಒಳಗೊಳ್ಳಲಾಗುತ್ತದೆ.

ಇದನ್ನೂ ಓದಿ: ನಿಷ್ಕ್ರಿಯ ಇಪಿಎಫ್ ಅಕೌಂಟ್​ಗಳಲ್ಲಿರುವ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ?

ಮತ್ತೊಂದು ಕುತೂಹಲದ ಸಂಗತಿ ಎಂದರೆ ಭಾರತವು ಜಿಡಿಪಿಯ ಆಧಾರ ವರ್ಷವನ್ನು 2011-12ರಿಂದ 2022-23ಕ್ಕೆ ಬದಲಾಯಿಸಿದೆ. ಜಿಡಿಪಿ ಲೆಕ್ಕಾಚಾರದ ಕೆಲ ವಿಧಾನಗಳನ್ನೂ ಬದಲಾಯಿಸಿದೆ. ಇದು, ಎರಡನೇ ಅಡ್ವಾನ್ಸ್ ಎಸ್ಟಿಮೇಟ್​ನಲ್ಲಿ ಪ್ರತಿಫಲಿತವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!