AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ್ ಟ್ಯಾಕ್ಸಿಗೆ 500 ರೂ ನೀಡಿದರೆ ನೀವೇ ಡ್ರೈವರ್, ನೀವೇ ಮಾಲೀಕರು; ಈ ಕಂಪನಿಯ ಬ್ಯುಸಿನೆಸ್ ಮಾಡಲ್ ಹೇಗೆ?

Bharat Taxi business model explained: ಸಹಕಾರಿ ತತ್ವದಲ್ಲಿ ಭಾರತದ ಮೊದಲ ಟ್ಯಾಕ್ಸಿ ಕಂಪನಿ ಎನಿಸಿದ ಭಾರತ್ ಟ್ಯಾಕ್ಸಿಯ ಸೇವೆ ಆರಂಭವಾಗಿದೆ. ಚಾಲಕರು 500 ರೂ ಷೇರು ಖರೀದಿಸಿ ಈ ಪ್ಲಾಟ್​ಫಾರ್ಮ್​ಗೆ ಜೋಡಿತವಾಗಬಹುದು. ಪ್ರತೀ ರೈಡ್​ನಲ್ಲಿ ಗ್ರಾಹಕರಿಂದ ಸಿಗುವ ಎಲ್ಲಾ ಹಣವೂ ಚಾಲಕರಿಗೆ ಹೋಗುತ್ತದೆ. ಊಬರ್, ಓಲಾ ರೀತಿ ಪ್ಲಾಟ್​ಫಾರ್ಮ್ ಫೀ, ಕಮಿಷನ್ ಅನ್ನು ನೀಡುವ ಅಗತ್ಯವಿಲ್ಲ.

ಭಾರತ್ ಟ್ಯಾಕ್ಸಿಗೆ 500 ರೂ ನೀಡಿದರೆ ನೀವೇ ಡ್ರೈವರ್, ನೀವೇ ಮಾಲೀಕರು; ಈ ಕಂಪನಿಯ ಬ್ಯುಸಿನೆಸ್ ಮಾಡಲ್ ಹೇಗೆ?
ಭಾರತ್ ಟ್ಯಾಕ್ಸಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 24, 2026 | 2:58 PM

Share

ನವದೆಹಲಿ, ಫೆಬ್ರುವರಿ 24: ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ನಿನ್ನೆ ಸೋಮವಾರ (ಫೆ. 23) ಭಾರತ್ ಟ್ಯಾಕ್ಸಿ (Bhara Taxi) ಸೇವೆಗೆ ಚಾಲನೆ ನೀಡಿದ್ದಾರೆ. ಅಮೂಲ್ ನೇತೃತ್ವದಲ್ಲಿ ವಿವಿಧ ಸಹಕಾರಿ ಸಂಸ್ಥೆಗಳು ಸೇರಿ ಕಟ್ಟಿರುವ ಕಂಪನಿ ಇದು. ಅಮೂಲ್​ನ ರೀತಿಯಲ್ಲೇ ಭಾರತ್ ಟ್ಯಾಕ್ಸಿಯ ಬ್ಯುಸಿನೆಸ್ ಮಾಡಲ್ ಇದೆ. ಅಮುಲ್​ನಲ್ಲಿ ಹಾಲು ಉತ್ಪಾದಕರೇ ಮಾಲೀಕರಾಗಿದ್ದಾರೆ. ಭಾರತ್ ಟ್ಯಾಕ್ಸಿಯಲ್ಲಿ ಚಾಲಕರೇ ಮಾಲೀಕರಾಗಿರುತ್ತಾರೆ.

ಏನಿದು ಭಾರತ್ ಟ್ಯಾಕ್ಸಿ?

ಓಲಾ, ಊಬರ್, ರಾಪಿಡೋ, ನಮ್ಮ ಯಾತ್ರಿ ರೀತಿಯಲ್ಲಿ ಭಾರತ್ ಟ್ಯಾಕ್ಸಿ ಒಂದು ರೇಡ್ ಹೈಲಿಂಗ್ ಪ್ಲಾಟ್​ಫಾರ್ಮ್ ಆಗಿದೆ. ಓಲಾ, ಊಬರ್, ರಾಪಿಡೋ ಕಂಪನಿಗಳು ಡ್ರೈವರ್​ಗಳಿಂದ ಪ್ರತೀ ರೇಡ್​ನಲ್ಲಿ ಶೇ. 30ರಷ್ಟು ಕಮಿಷನ್ ಪಡೆಯುತ್ತವೆ. ಆದರೆ, ಭಾರತ್ ಟ್ಯಾಕ್ಸಿಯಲ್ಲಿ ಈ ಕಮಿಷನ್ ಮಾಡಲ್ ಇರೋದಿಲ್ಲ. ರೇಡ್​ನಲ್ಲಿ ಬರುವ ಹಣವೆಲ್ಲವೂ ಚಾಲಕರಿಗೆಯೇ ಸಂದಾಯವಾಗುತ್ತದೆ.

ಇದನ್ನೂ ಓದಿ: ನಿಷ್ಕ್ರಿಯ ಇಪಿಎಫ್ ಅಕೌಂಟ್​ಗಳಲ್ಲಿರುವ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ?

ಹಾಗೆಯೇ, ಊಬರ್, ಓಲಾ, ರಾಪಿಡೋದಲ್ಲಿ ಚಾಲಕರಿಗೆ ಕನಿಷ್ಠ ದರ (ಮಿನಿಮಮ್ ಬೇಸ್ ರೇಟ್) ನಿಗದಿಯಾಗಿರುವುದಿಲ್ಲ. ಅಂದರೆ, ಒಂದು ರೇಡ್​ನಲ್ಲಿ ಕನಿಷ್ಠ ಖಾತ್ರಿ ದರ ಎಂಬುದು ಡ್ರೈವರ್​ಗೆ ಖಾತ್ರಿ ಇರುವುದಿಲ್ಲ. ಆದರೆ, ಭಾರತ್ ಟ್ಯಾಕ್ಸಿಯಲ್ಲಿ ಇಂಥ ಫೀಚರ್ ಅನ್ನು ಅಳವಡಿಸಲಾಗಿದೆ.

ಭಾರತ್ ಟ್ಯಾಕ್ಸಿಗೆ ಆದಾಯ ಹೇಗೆ?

ಭಾರತ್ ಟ್ಯಾಕ್ಸಿ ಪ್ಲಾಟ್​ಫಾರ್ಮ್​ಗೆ ಜೋಡಿತ ಆಗಬಯಸುವ ಚಾಲಕರು 500 ರೂ ಮೌಲ್ಯದ ಷೇರುಗಳನ್ನು ಖರೀದಿಸಬೇಕು. ಇದು ಆದಲ್ಲಿ ಭಾರತ್ ಟ್ಯಾಕ್ಸಿಯಲ್ಲಿ ಚಾಲಕರಿಗೆ ಒಂದು ಸಣ್ಣ ಪಾಲು ಸಿಗುತ್ತದೆ. ಈ ಮೂಲಕ ಅವರು ಸಹ-ಮಾಲೀಕರಾದಂತೆ.

ಭಾರತ್ ಟ್ಯಾಕ್ಸಿ ಸಂಸ್ಥೆಯು ಮುಂದೆ ಲಾಭ ಗಳಿಸುತ್ತಾ ಹೋದಂತೆ, ಲಾಭದಲ್ಲಿ ಸಿಂಹಪಾಲನ್ನು ಚಾಲಕರಿಗೇ ಮರಳಿಸಲಾಗುವುದು. ನೂರು ರೂ ಲಾಭದಲ್ಲಿ 80 ರೂ ಅನ್ನು ಚಾಲಕರಿಗೆ ಕೊಡಲಾಗುತ್ತದೆ. ಉಳಿದ ಶೇ. 20ರಷ್ಟನ್ನು ಪ್ಲಾಟ್​ಫಾರ್ಮ್ ಅಭಿವೃದ್ಧಿ ಮತ್ತಿತರ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಐಡಿಯಾ ಯಾರದು ಅನ್ನೋದು ಮುಖ್ಯ ಅಲ್ಲ, ಅದನ್ನು ಜಾರಿಗೆ ತರೋನೇ ಜಾಣ: ಚ್ಯಾಟ್​ಜಿಪಿಟಿ ರೂವಾರಿ ಸ್ಯಾಮ್ ಆಲ್ಟ್​ಮ್ಯಾನ್ ಸಲಹೆ ಕೇಳಿ

ಇಲ್ಲಿ ಲಾಭದಲ್ಲಿ ಚಾಲಕರೆಲ್ಲರಿಗೆ ಸಮಾನವಾಗಿ ಹಂಚಲಾಗುವುದಿಲ್ಲ. ಚಾಲಕರು ಅವರು ಕ್ರಮಿಸಿರುವ ದೂರಕ್ಕೆ ಅನುಗುಣವಾಗಿ ಲಾಭ ಹಂಚಿಕೆ ಆಗುತ್ತದೆ.

ಭಾರತ್ ಟ್ಯಾಕ್ಸಿ ಸದ್ಯ ದೆಹಲಿ ಎನ್​​ಸಿಆರ್ ಮತ್ತು ರಾಜಕೋಟ್ ಈ ಎರಡು ನಗರಗಳಲ್ಲಿ ಚಾಲನೆಯಲ್ಲಿದೆ. ಮುಂಬರುವ ವರ್ಷಗಳಲ್ಲಿ ಬಹುತೇಕ ಎಲ್ಲಾ ನಗರ ಹಾಗೂ ಪಟ್ಟಣಗಳಲ್ಲಿ ಇದರ ಸೇವೆ ಬರಲಿದೆ. ಕೋಟಿಗೂ ಅಧಿಕ ಚಾಲಕರನ್ನು ಈ ಸೇವೆಗೆ ಜೋಡಿಸಿಕೊಳ್ಳುವ ಗುರಿ ಇದೆ. ಹಾಗೆಯೇ, ಸಹಕಾರ ತತ್ವದಲ್ಲಿ ಆರಂಭವಾಗಿರುವ ಮೊದಲ ಟ್ಯಾಕ್ಸಿ ಕಂಪನಿ ಇದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!