AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IMF: ಎಐ ಕ್ಷೇತ್ರದಲ್ಲಿ ಭಾರತದ ಹೆಜ್ಜೆಗಳನ್ನು ಶ್ಲಾಘಿಸಿದ ಐಎಂಎಫ್ ಮುಖ್ಯಸ್ಥೆ

IMF chief praises India's AI development path: ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಪ್ರಬಲ ಮುನ್ನಡೆಯಲ್ಲಿರುವ ದೇಶಗಳ ಸಾಲಿಗೆ ಭಾರತವೂ ಸೇರ್ಪಡೆಯಾಗುತ್ತಿದೆ ಎಂದು ಐಎಂಎಫ್ ಮುಖ್ಯಸ್ಥರು ಹೇಳಿದ್ದಾರೆ. ಐಟಿ ಸ್ಕಿಲ್ ಹೊಂದಿರುವ ಕೆಲಸಗಾರರ ಸಂಖ್ಯೆ ಬಹಳ ಹೆಚ್ಚಿದೆ. ಸರ್ಕಾರದಿಂದ ಉತ್ತಮ ಸುಧಾರಣಾ ಕ್ರಮಗಳು ಬರುತ್ತಿವೆ. ಭಾರತಕ್ಕೆ ಇದೇ ಬಲ ಒದಗಿಸಿದೆ ಎಂದು ಕ್ರಿಸ್ಟಾಲಿನಾ ಜಾರ್ಜಿಯೆವಾ ಹೇಳಿದ್ದಾರೆ.

IMF: ಎಐ ಕ್ಷೇತ್ರದಲ್ಲಿ ಭಾರತದ ಹೆಜ್ಜೆಗಳನ್ನು ಶ್ಲಾಘಿಸಿದ ಐಎಂಎಫ್ ಮುಖ್ಯಸ್ಥೆ
ಭಾರತ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 23, 2026 | 12:13 PM

Share

ನವದೆಹಲಿ, ಜನವರಿ 23: ಎಐ ಕ್ಷೇತ್ರದಲ್ಲಿ ಭಾರತ ಇಡುತ್ತಿರುವ ಹೆಜ್ಜೆಗಳಿಗೆ ಐಎಂಎಫ್ (IMF) ಶ್ಲಾಘನೆ ನೀಡಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ವಿಶ್ವದ ಪ್ರಮುಖ ಶಕ್ತಿಗಳಲ್ಲಿ ಭಾರತವೂ ಸೇರ್ಪಡೆಯಾಗುತ್ತಿದೆ. ಉತ್ತಮ ಸುಧಾರಣಾ ಕ್ರಮಗಳು, ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್, ಕೌಶಲ್ಯವಂತ ತಂತ್ರಜ್ಞಾನ ಕಾರ್ಮಿಕ ವರ್ಗವು ಭಾರತದ ಮುನ್ನಡೆಗೆ ಬಲ ಕೊಟ್ಟಿವೆ ಎಂದು ಐಎಂಎಫ್​ನ ನಿರ್ವಾಹಕ ನಿರ್ದೇಶಕಿ ಕ್ರಿಸ್ಟಾಲಿನಾ ಜಾರ್ಜಿಯೆವಾ (Kristalina Georgieva) ಅಭಿಪ್ರಾಯಪಟ್ಟಿದ್ದಾರೆ.

ಸ್ವಿಟ್ಜರ್​ಲ್ಯಾಂಡ್​ನ ಡಾವೋಸ್​ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂ ವೇದಿಕೆಯಲ್ಲಿ ಟಿವಿ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಐಎಂಎಫ್ ಮುಖ್ಯಸ್ಥೆ, ಭಾರತದ ಇತ್ತೀಚಿನ ಆರ್ಥಿಕ ಸುಧಾರಣೆಗಳ ಗುಣಮಟ್ಟ ಮತ್ತು ವೇಗದ ಬಗ್ಗೆ ಐಎಂಎಫ್​ಗೆ ಮೆಚ್ಚುಗೆ ಇದೆ. ಎಐ ಕ್ಷೇತ್ರದಲ್ಲಿ ಭಾರತದ ಶಕ್ತಿ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಎಐ ಟೆಕ್ನಾಲಜಿಯಲ್ಲಿ ಅಮೆರಿಕ, ಚೀನಾ ಸಮಕ್ಕೆ ಭಾರತ ಬೆಳೆಯಬಲ್ಲುದೆ? ಡಾವೊಸ್ ಸಮಿಟ್​ನಲ್ಲಿ ಭಾರತದ ಎಐ ಪ್ಲಾನ್ ಬಿಚ್ಚಿಟ್ಟ ಎ ವೈಷ್ಣವ್

ಭಾರತದ ಆರ್ಥಿಕ ವೇಗಕ್ಕೆ ಎಐನಿಂದ ಇನ್ನಷ್ಟು ಚುರುಕು: ಐಎಂಎಫ್

ಕೃತಕ ಬುದ್ಧಿಮತ್ತೆಯು ಜಾಗತಿಕ ಆರ್ಥಿಕ ಬೆಳವಣಿಗೆಯನ್ನು 0.8 ಪ್ರತಿಶತ ಅಂಕಗಳಷ್ಟು ಹೆಚ್ಚಿಸುವ ನಿರೀಕ್ಷೆ ಇದೆ. ಭಾರತದಂತಹ ಚುರುಕಿನ ಆರ್ಥಿಕತೆಗೆ ಎಐ ಇನ್ನೂ ದೊಡ್ಡ ಮಟ್ಟದ ಪುಷ್ಟಿ ಕೊಡಬಲ್ಲುದು. ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಹಾಗೂ ಐಟಿ ಕೌಶಲ್ಯವಂತ ಉದ್ಯೋಗಿಗಳ ದೊಡ್ಡ ಸಮೂಹವನ್ನು ಭಾರತ ಬಹಳ ವೇಗವಾಗಿ ಸಿದ್ಧಪಡಿಸಿದೆ. ಇದು ಭಾರತಕ್ಕಿರುವ ಪ್ರಮುಖ ಶಕ್ತಿ. ಎಐ ಅಭಿವೃದ್ಧಿಯಲ್ಲಿ ಭಾರತ ತನ್ನದೇ ಹಾದಿಯಲ್ಲಿ ಸಾಗುತ್ತಿರುವುದೂ ಶ್ಲಾಘನೀಯ ವಿಚಾರ ಎಂದು ಕ್ರಿಸ್ಟಿಯಾಲೆನಾ ಜಾರ್ಜಿಯೆವಾ ವಿವರಿಸಿದ್ದಾರೆ.

ಭಾರತ ಬೆಳ್ಳಿ ಚುಕ್ಕಿ

ಜಾಗತಿಕವಾಗಿ ಅನಿಶ್ಚಿತವೆನಿಸಿರುವ ಆರ್ಥಿಕ ವಾತಾವರಣದಲ್ಲಿ ಭಾರತವು ಬೆಳ್ಳಿ ಚುಕ್ಕಿಯಂತೆ ಕಾಣುತ್ತದೆ ಎಂದು ಹೇಳಿದ ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯ ಎಂಡಿ, ಭಾರತ ಹೇಗೆ ಅಭಿವೃದ್ಧಿ ಹೊಂದುತ್ತಿದೆ ಎಂದು ಕಣ್ಣಾರೆ ನೋಡಲು ಬಯಸುತ್ತಿದ್ದು, ಫೆಬ್ರುವರಿಯಲ್ಲಿ ಎಐ ಸಮಿಟ್​ಗೆ ಭಾರತಕ್ಕೆ ಹೋಗುತ್ತಿರುವುದಾಗಿ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಜವಾಬ್ದಾರಿಯುತ ದೇಶಗಳ ಸೂಚ್ಯಂಕ; ಅಮೆರಿಕ, ಚೀನಾಗಿಂತ ಭಾರತ ಮೇಲೆ; ಪಾಕಿಸ್ತಾನ ಮತ್ತಿತರ ದೇಶಗಳು ಹೇಗೆ?

ಎಐನಿಂದ ನಿರೀಕ್ಷೆಗಳು ಗಹನವಾಗಿವೆಯಾದರೂ, ಈ ನಿರೀಕ್ಷೆ ಈಡೇರುವುದು ವಿಫಲವಾದರೆ ಬಹಳ ಅಪಾಯ ಇರುತ್ತದೆ. ಇಂಥ ಪರಿಸ್ಥಿತಿಯಲ್ಲಿ ದೇಶಗಳು ಪ್ರಬಲ ಆರ್ಥಿಕ ಅಂಶಗಳಿಗೆ ಗಮನ ಕೊಡಬೇಕು. ನಿಮ್ಮ ಮನೆ ಸುವ್ಯವಸ್ಥಿತ ರೀತಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದೂ ಜಾರ್ಜಿಯೆವಾ ಅವರು ಸಲಹೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ