Video: ಟಿಫನ್ ಬಾಕ್ಸ್‌ನಲ್ಲಿದ್ದ ಊಟ ಹಾಕಿ ನಾಯಿಮರಿಯ ಹಸಿವು ನೀಗಿಸಿದ ಹೃದಯವಂತ, ವೈರಲ್ ಆಯ್ತು ದೃಶ್ಯ
ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ನಿಷ್ಕಲ್ಮಶ ಸಂಬಂಧವನ್ನು ವಿವರಿಸಲು ಅಸಾಧ್ಯ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಇಲ್ಲೊಬ್ಬ ವ್ಯಕ್ತಿ ನಾಯಿಮರಿಗೆ ತನ್ನ ಟಿಫನ್ ಬಾಕ್ಸ್ ನಲ್ಲಿದ್ದ ಆಹಾರ ಹಾಕಿ ಅದರ ಹಸಿವು ನೀಗಿಸುವ ಕೆಲಸ ಮಾಡಿದ್ದಾನೆ. ಈ ಹೃದಯಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಮೂಕ ಪ್ರಾಣಿಗಳ ಹಸಿವು ನೀಗಿಸುವ, ದಾಹ ತೀರಿಸುವ ಮನುಷ್ಯನ ಒಳ್ಳೆತನಕ್ಕೆ ಯಾರಾದ್ರೂ ಫಿದಾ ಆಗುತ್ತೇವೆ. ಇದೀಗ ಒಳ್ಳೆಯ ಮನಸ್ಸಿನ ವ್ಯಕ್ತಿಯ ವಿಡಿಯೋ ನೆಟ್ಟಿಗರ ಗಮನ ಸೆಳೆದಿದ್ದಾನೆ. ಹಸಿವಿನಿಂದ ಬಳಲಿದ್ದ ನಾಯಿಮರಿಗೆ (Puppy) ಊಟ ಹಾಕಿ ಅದರ ಹಸಿವು ನೀಗಿಸಿ ಹೃದಯ ಶ್ರೀಮಂತಿಕೆ ಮೆರೆದಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಯುವಕನ ಒಳ್ಳೆತನಕ್ಕೆ ಫಿದಾ ಆಗಿದ್ದಾರೆ.
ನಾಯಿಮರಿಯ ಹಸಿವು ನೀಗಿಸಿದ ಹೃದಯವಂತ
ರೋಹನ್ ಸತೀಗಿ (Rohan Sathigi) ಹೆಸರಿನ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಆಫೀಸಿಗೆ ಹೊರಟ ವ್ಯಕ್ತಿಯೊಬ್ಬ ರಸ್ತೆಯಲ್ಲಿದ್ದ ನಾಯಿ ಮರಿಯನ್ನು ಗಮನಿಸಿದ್ದಾನೆ. ತನ್ನ ಟಿಫನ್ ಬಾಕ್ಸ್ ನಲ್ಲಿದ್ದ ಊಟವನ್ನು ನಾಯಿ ಮರಿಗೆ ಹಾಕುತ್ತಿರುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ: ಬೀದಿ ನಾಯಿಗಳಿಗೆ ಬೊಗಸೆಯಲ್ಲಿ ನೀರು ಕುಡಿಸಿ ದಾಹ ತೀರಿಸಿದ ಯುವಕ
ಈ ವಿಡಿಯೋ ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮ್ಗೆ ಒಳ್ಳೆಯದಾಗಲಿ ಸರ್ ಎಂದರೆ ಮತ್ತೊಬ್ಬರು ದಯವಿಟ್ಟು ಆ ನಾಯಿಮರಿ ಯಾರಾದ್ರೂ ತೆಗೆದುಕೊಂಡಿ ಹೋಗಿ ಮನವಿ ಮಾಡಿದ್ದಾರೆ. ಇನ್ನೊಬ್ಬರು, ಆಹಾರ ಹಾಕಿ ಅದರ ಹಸಿವು ನೀಗಿಸಿದ ನಿಮಗೆ ನನ್ನದೊಂದು ಸಲ್ಯೂಟ್ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




