AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆವತ್ತು ಭಾರತಕ್ಕೆ ಶಾಪ ಹಾಕಿದ್ದ ಟ್ರಂಪ್ ಇವತ್ತು ಮಾಡಿದ್ದೇನು? ಅಮೆರಿಕ, ರಷ್ಯಾ, ಚೀನಾ ನಾಯಕರ ಭೇಟಿ ಮತ್ತು ಟ್ರಂಪ್ ಸೋಗಲಾಡಿತನ

ಚೀನಾದ ಶೆನ್‌ಜೆನ್‌ನಲ್ಲಿ ನಡೆದ ಅಪೆಕ್ (APEC) ಶೃಂಗಸಭೆಯ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೊದಲ ಬಾರಿಗೆ ತ್ರಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಕಳೆದ ವರ್ಷ ರಷ್ಯಾ-ಚೀನಾ ಜೊತೆಗಿನ ಭೇಟಿಗಾಗಿ ಭಾರತವನ್ನು ಟೀಕಿಸಿದ್ದ ಟ್ರಂಪ್, ಇದೀಗ ತಾವೇ ಆ ದೇಶಗಳೊಂದಿಗೆ ಕೈಜೋಡಿಸಿರುವುದು ಜಾಗತಿಕ ರಾಜತಾಂತ್ರಿಕತೆಯಲ್ಲಿ ಹಾಗೂ ಭಾರತದ ದೃಷ್ಟಿಕೋನದಲ್ಲಿ ಮಹತ್ವದ ಚರ್ಚೆಗೆ ಕಾರಣವಾಗಿದೆ.

ಆವತ್ತು ಭಾರತಕ್ಕೆ ಶಾಪ ಹಾಕಿದ್ದ ಟ್ರಂಪ್ ಇವತ್ತು ಮಾಡಿದ್ದೇನು? ಅಮೆರಿಕ, ರಷ್ಯಾ, ಚೀನಾ ನಾಯಕರ ಭೇಟಿ ಮತ್ತು ಟ್ರಂಪ್ ಸೋಗಲಾಡಿತನ
ರಷ್ಯಾ, ಚೀನಾ, ಅಮೆರಿಕ ಮುಖಂಡರುImage Credit source: AP
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 19, 2026 | 5:40 PM

Share

ಬೀಜಿಂಗ್, ನವೆಂಬರ್ 19: ಚೀನಾದ ಶೆನ್‌ಜೆನ್‌ನಲ್ಲಿ ನಡೆಯುತ್ತಿರುವ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆಯ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಐತಿಹಾಸಿಕ ತ್ರಿಪಕ್ಷೀಯ ಸಭೆಯಲ್ಲಿ ಭಾಗವಹಿಸಿದರು. ಉಕ್ರೇನ್ ಸಂಘರ್ಷ, ಇರಾನ್ ಬಿಕ್ಕಟ್ಟು, ಅಣ್ವಸ್ತ್ರ ನಿಯಂತ್ರಣ, ಇಂಧನ ಪೂರೈಕೆ ಮತ್ತು ವಿಶ್ವಸಂಸ್ಥೆಯ ಸುಧಾರಣೆಗಳ ಕುರಿತು ಮೂರು ರಾಷ್ಟ್ರಗಳ ನಾಯಕರು ಚರ್ಚೆ ನಡೆಸಿರುವುದು ತಿಳಿದುಬಂದಿದೆ. ಈ ಭೇಟಿ ಬಳಿಕ ಟ್ರಂಪ್ ಅವರು ಚೀನಾ ತೊರೆದು ತಮ್ಮ ದೇಶಕ್ಕೆ ಮರಳಿದ್ದಾರೆ. ಈ ನಡುವೆ ಟ್ರಂಪ್ ಅವರು ಭಾರತದ ವಿರುದ್ಧ ತಳೆದ ನಿಲುವು ಮತ್ತು ಈಗಿನ ಬೆಳವಣಿಗೆಯು ಅವರ ವಿರೋಧಾಭಾಸ ಧೋರಣೆಯನ್ನು ತೋರಿಸುತ್ತದೆ.

ಕಳೆದ ವರ್ಷ (2025) ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ವೇಳೆ ಭಾರತ ಮತ್ತು ರಷ್ಯಾ ನಾಯಕರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಕಾಣಿಸಿಕೊಂಡಿದ್ದಾಗ ಟ್ರಂಪ್ ತಗಾದೆ ಎತ್ತಿದ್ದರು. ಭಾರತ ಮತ್ತು ರಷ್ಯಾ ಚೀನಾದ ಪ್ರಭಾವಕ್ಕೆ ಸಿಲುಕಿವೆ (“lost to China”) ಎಂದು ಅಮೆರಿಕ ಅಧ್ಯಕ್ಷ ಅವರು ತೀಕ್ಷ್ಣವಾಗಿ ಟೀಕಿಸಿದ್ದರು. ಆದರೆ, ಇದೀಗ ಸ್ವತಃ ಟ್ರಂಪ್ ಅವರೇ ಕ್ಸಿ ಜಿನ್‌ಪಿಂಗ್ ಮತ್ತು ಪುಟಿನ್ ಅವರೊಂದಿಗೆ ಚೀನಾದಲ್ಲಿ ವೇದಿಕೆ ಹಂಚಿಕೊಂಡು, ದ್ವಿಪಕ್ಷೀಯ ಮತ್ತು ತ್ರಿಪಕ್ಷೀಯ ಮಾತುಕತೆಗಳಲ್ಲಿ ತೊಡಗಿರುವುದು ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಗಮನ ಸೆಳೆದಿದೆ.

ಮೈಕೇಲ್ ಕುಗೆಲ್ಮನ್ ಟೀಕೆ

ಅಮೆರಿಕದ ರಾಜಕೀಯ ವಿಶ್ಲೇಷಕ ಮತ್ತು ದಕ್ಷಿಣ ಏಷ್ಯಾ ರಾಜಕೀಯ ವಿಚಾರಗಳ ಪರಿಣಿತರೆನಿಸಿರುವ ಮೈಕೇಲ್ ಕುಜೆಲ್ಮನ್ ಅವರು ಟ್ರಂಪ್​ರ ರಾಜಕೀಯ ವಿರೋಧಾಭಾಸದ ಸಂಗತಿಯನ್ನು ಎತ್ತಿ ತೋರಿಸಿ ಕುಟುಕಿದ್ದಾರೆ.

ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ಟ್ರಂಪ್, ಷಿ ಜಿನ್‌ಪಿಂಗ್, ಪುಟಿನ್: ಜಾಗತಿಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ

‘2025ರಲ್ಲಿ ಮೋದಿ, ಷಿ ಮತ್ತು ಪುಟಿನ್ ಚೀನಾದಲ್ಲಿ ಸಭೆ ಸೇರಿದ್ದಾಗ ಟ್ರಂಪ್ ಟೀಕಿಸಿದ್ದರು. ಗುರುವಾರ ಷಿ ಮತ್ತು ಪುಟಿನ್ ಅವರನ್ನು ಚೀನಾದಲ್ಲಿ ಖುದ್ದಾಗಿ ಭೇಟಿಯಾಗುತ್ತಿದ್ದಾರೆ. ಈ ಸಭೆಯು ಭಾರತಕ್ಕೆ ಶಂಕೆ ಮೂಡಿಸುವಂಥದ್ದು’ ಎಂದು ಮೈಕೇಲ್ ಕುಗೆಲ್ಮನ್ ಎಕ್ಸ್ ಪೋಸ್ಟ್​ವೊಂದರಲ್ಲಿ ತಿಳಿಸಿದ್ದಾರೆ.

ಟ್ರಂಪ್, ಷಿ, ಪುಟಿನ್ ಭೇಟಿಯಿಂದ ಭಾರತದ ಮೇಲೇನು ಪರಿಣಾಮ?

  • ನಿರ್ಬಂಧಗಳ ಒತ್ತಡ ತಗ್ಗುವ ನಿರೀಕ್ಷೆ: ಉಕ್ರೇನ್ ಯುದ್ಧದ ಶಾಂತಿ ಮಾತುಕತೆಯಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಕಂಡುಬಂದರೆ, ರಷ್ಯಾ ಹಾಗೂ ಅದರ ಪಾಲುದಾರ ರಾಷ್ಟ್ರಗಳಾದ ಭಾರತದ ಮೇಲೆ ಅಮೆರಿಕ ಮತ್ತಷ್ಟು ಆರ್ಥಿಕ ನಿರ್ಬಂಧಗಳನ್ನು ಹೇರುವ ಸಾಧ್ಯತೆ ಕಡಿಮೆಯಾಗಬಹುದು ಎಂಬ ವಿಶ್ಲೇಷಣೆಗಳಿವೆ.
  • ಇಂಧನ ಮತ್ತು ವ್ಯಾಪಾರ ಸಮತೋಲನ: ಹಾರ್ಮುಜ್ ಜಲಸಂಧಿಯಲ್ಲಿ ತೈಲ ಪೂರೈಕೆ ನಿರಂತರವಾಗಿರಬೇಕು ಎಂಬ ಅಮೆರಿಕ-ಚೀನಾ ಒಮ್ಮತ ಮತ್ತು ಜಾಗತಿಕ ಇಂಧನ ಹರಿವಿನ ಚರ್ಚೆಗಳು ಇಂಧನ ಆಮದು ಅವಲಂಬಿತ ಭಾರತಕ್ಕೆ ಮಹತ್ವದ್ದಾಗಿವೆ. ಅಲ್ಲದೆ, ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧದ ತಾತ್ಕಾಲಿಕ ಶಮನ (trade truce) ಮುಂದುವರಿಯುವ ಸೂಚನೆಗಳು ಭಾರತದ ಆರ್ಥಿಕ ವಾತಾವರಣದ ಮೇಲೂ ಪರಿಣಾಮ ಬೀರಬಲ್ಲವು.
  • ಕ್ವಾಡ್ ಮತ್ತು ಬಹುಧ್ರುವೀಯ ಜಗತ್ತು: ಅಮೆರಿಕವು ಚೀನಾದೊಂದಿಗೆ ಸ್ಥಿರ ಸಂಬಂಧ ಕಾಯ್ದುಕೊಳ್ಳಲು ಆದ್ಯತೆ ನೀಡುತ್ತಿರುವ ನಡುವೆ, ಕ್ವಾಡ್ (ಭಾರತ, ಅಮೆರಿಕ, ಜಪಾನ್, ಆಸ್ಟ್ರೇಲಿಯಾ) ಕೂಟದ ಗಮನ ಮತ್ತು ವೇಗದ ಕುರಿತು ರಾಜತಾಂತ್ರಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಹಾಗಿದ್ದರೂ, ‘ಸ್ಟ್ರಾಟೆಜಿಕ್ ಆಟಾನಮಿ’ (ಕಾರ್ಯತಂತ್ರದ ಸ್ವಾಯತ್ತತೆ) ಹೊಂದಿರುವ ಭಾರತಕ್ಕೆ, ಪ್ರಮುಖ ಶಕ್ತಿಗಳ ನಡುವಿನ ನೇರ ಮಾತುಕತೆಗಳು ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಹೊಸ ಅವಕಾಶಗಳನ್ನೂ ತೆರೆಯುತ್ತವೆ.

ಇದನ್ನೂ ಓದಿ: ಚಿಪ್ ಕಳ್ಳಸಾಗಣೆ ವಿವಾದದಲ್ಲಿ ಎನ್‌ವಿಡಿಯಾದ ಮಾಜಿ ಉನ್ನತ ಅಧಿಕಾರಿ ಜಯ್ ಪುರಿ ಪತ್ನಿ ಹೆಸರು

ಕೆಲ ವಿಶ್ಲೇಷಣೆಗಳ ಪ್ರಕಾರ, ಅಮೆರಿಕ, ಚೀನಾ ಮತ್ತು ರಷ್ಯಾ ನಾಯಕರ ಈ ಭೇಟಿಯಿಂದ ಯಾವ ಮಹತ್ತರ ಫಲವೂ ಬರುವುದಿಲ್ಲ. ಇದೆಲ್ಲಾ ಸುಮ್ಮನೆ ತೋರಿಕೆಗೆ ಎಂಬಂತೆ ಕಾಣುತ್ತದೆ. 90 ನಿಮಿಷಗಳ ಕಾಲ ನಡೆದ ಈ ಮಾತುಕತೆಯಿಂದ ಏನು ಪರಿಣಾಮ ಆಗಬಹುದು ಎನ್ನುವ ಸುಳಿವು ಮುಂದಿನ ದಿನಗಳಲ್ಲಿ ಸಿಗಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ
ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ
ಗುಜರಿ ವ್ಯಾಪಾರಿ ಹತ್ಯೆ ಪ್ರಕರಣ: ಕಾಂಗ್ರೆಸ್​​ ಮುಖಂಡ ಶರಣು
ಗುಜರಿ ವ್ಯಾಪಾರಿ ಹತ್ಯೆ ಪ್ರಕರಣ: ಕಾಂಗ್ರೆಸ್​​ ಮುಖಂಡ ಶರಣು
ಕಾಡಾನೆ ದಾಳಿಗೆ ರೈತ ಬಲಿ ಬೆನ್ನಲ್ಲೇ ಎನ್‌.ಆರ್‌.ಪುರ ಪಟ್ಟಣ ಸ್ತಬ್ಧ
ಕಾಡಾನೆ ದಾಳಿಗೆ ರೈತ ಬಲಿ ಬೆನ್ನಲ್ಲೇ ಎನ್‌.ಆರ್‌.ಪುರ ಪಟ್ಟಣ ಸ್ತಬ್ಧ
ಆರತಕ್ಷತೆ ದಿನವೇ ಮದುವೆಗೆ ನಿರಾಕರಿಸಿ ಮಾತ್ರೆ ನುಂಗಿದ ವರ; ಮುಂದೇನಾಯ್ತು
ಆರತಕ್ಷತೆ ದಿನವೇ ಮದುವೆಗೆ ನಿರಾಕರಿಸಿ ಮಾತ್ರೆ ನುಂಗಿದ ವರ; ಮುಂದೇನಾಯ್ತು