AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಟೆಲ್ ರೂಮ್‌ಗಳಲ್ಲಿ ಬೆಡ್ ಮುಂದೆ ಕನ್ನಡಿ ಅಳವಡಿಸಿರುವುದರ ಹಿಂದಿದೆ ಈ ಕಾರಣ

ನೀವು ಐಷಾರಾಮಿ ಹೋಟೆಲ್, ಲಾಡ್ಜ್‌ಗೆ ಹೋದಾಗ ಈ ಸೂಕ್ಷ್ಮ ವಿಚಾರಗಳನ್ನು ಗಮನಿಸಿರುತ್ತೀರಿ. ಹೌದು, ಹೋಟೆಲ್ ರೂಮ್‌ಗಳಲ್ಲಿ ಹಾಸಿಗೆಯ ಮುಂಭಾಗದಲ್ಲಿಯೇ ಕನ್ನಡಿ ಇಟ್ಟಿರುತ್ತಾರೆ. ಇದು ಸ್ಥಳದ ಅಭಾವವನ್ನು ಕಡಿಮೆ ಮಾಡಿ ಕೊಠಡಿಯನ್ನು ದೊಡ್ಡದಾಗಿ ಕಾಣುವಂತೆ ಮಾಡುತ್ತದೆ. ಈ ವಿನ್ಯಾಸವು ಬೆಳಕನ್ನು ಹೆಚ್ಚಿಸುತ್ತದೆ. ಈ ಕುರಿತಾದ ಕಂಪ್ಲೀಟ್‌ ಮಾಹಿತಿ ಇಲ್ಲಿದೆ.

ಹೋಟೆಲ್ ರೂಮ್‌ಗಳಲ್ಲಿ ಬೆಡ್ ಮುಂದೆ ಕನ್ನಡಿ ಅಳವಡಿಸಿರುವುದರ ಹಿಂದಿದೆ ಈ ಕಾರಣ
ಸಾಂದರ್ಭಿಕ ಚಿತ್ರImage Credit source: Getty Images
ಸಾಯಿನಂದಾ
|

Updated on:Aug 04, 2026 | 2:28 PM

Share

ಮುಖ್ಯಾಂಶಗಳು

  • ಹೋಟೆಲ್ ರೂಮ್‌ಗಳಲ್ಲಿ ಬೆಡ್‌ ಮುಂದೆ ಕನ್ನಡಿ ಅಳವಡಿಸಲಾಗಿರುತ್ತದೆ
  • ಹೋಟೆಲ್‌ ರೂಮ್‌ಗಳ ಈ ವಿನ್ಯಾಸದ ಹಿಂದೆ ಕೆಲ ಕಾರಣಗಳು ಅಡಗಿವೆ
  • ಸಣ್ಣ ಕೋಣೆಯನ್ನು ದೊಡ್ಡದಾಗಿ ಹಾಗೂ ವಿಶಾಲವಾಗಿ ಕಾಣುವಂತೆ ಮಾಡುತ್ತದೆ

ಸಾಮಾನ್ಯವಾಗಿ ಟ್ರಾವೆಲ್, ಟ್ರಿಪ್ ಎಂದು ಹೊರಗಡೆ ಹೋಟೆಲ್ ರೂಮ್ (Hotel Room) ಅಥವಾ ಲಾಡ್ಜ್ ಬುಕ್ ಮಾಡುವುದು ಸಹಜ. ವಿಶ್ರಾಂತಿ ಪಡೆಯಲೆಂದು ಹೋಟೆಲ್ ರೂಮ್‌ಗೆ ಹೋಗಿ ಬೆಡ್ ಮೇಲೆ ಕುಳಿತುಕೊಂಡಾಗ ಕಣ್ಣ ಮುಂದೆ ಕಾಣುವುದೇ ಈ ಫಳ ಫಳ ಹೊಳೆಯುವ ಕನ್ನಡಿ. ಬೆಡ್ ಮುಂದೆಯೆ ಯಾಕೆ ಕನ್ನಡಿ ಅಳವಡಿಸಲಾಗಿರುತ್ತದೆ ಎಂಬ ಬಗ್ಗೆ ಯಾರು ಕೂಡ ಯೋಚನೆ ಮಾಡಲ್ಲ. ಹೋಟೆಲ್ ರೂಮ್‌ನಲ್ಲಿ ಮಿರರ್‌ಗಳನ್ನು ಅಳವಡಿಸುವುದರ ಹಿಂದೆ ಕೆಲ ಕಾರಣಗಳಿವೆ. ಈ ಮಿರರ್‌ಗಳು ಬೆಳಕನ್ನು ರೂಮ್ ಒಳಗೆ ಬರುವಂತೆ ಮಾಡುತ್ತದೆ.  ಹೋಟೆಲ್‌ ರೂಮ್‌ಗಳು ಕಡಿಮೆ ಸ್ಥಳವಕಾಶ ಹೊಂದಿದ್ರು, ದೊಡ್ಡದಾಗಿ ಕಾಣುವಂತೆ ಮಾಡಲು ಇದು ಸಹಕಾರಿಯಾಗಿದೆ.

ಬೆಡ್ ಮುಂದೆ ಕನ್ನಡಿ ಅಳವಡಿಸುವುದು ಏಕೆ?

ಬೆಡ್ ಮುಂದೆ ಕನ್ನಡಿ ಅಳವಡಿಸುವುದರಿಂದ ಸಣ್ಣ ಕೋಣೆಯನ್ನು ದೊಡ್ಡದಾಗಿ ಹಾಗೂ ವಿಶಾಲವಾಗಿ ಕಾಣುವಂತೆ ಮಾಡುತ್ತದೆ. ಹೋಟೆಲ್ ರೂಮ್‌ಗಳಲ್ಲಿ ಗೋಡೆಗಳು ಕಡಿಮೆ ಇರುವುದರಿಂದ ವಾರ್ಡ್ರೋಬ್, ಡ್ರೆಸ್ಸಿಂಗ್ ಟೇಬಲ್‌ನ್ನು ಹಾಸಿಗೆಯ ಎದುರುಗಡೆ ಇರಿಸುವುದು ಅನಿವಾರ್ಯ. ಅದಲ್ಲದೇ, ಈ ಕೊಠಡಿಯ ಕಿಟಕಿಯಿಂದ ಬರುವ ಸಹಜ ಬೆಳಕನ್ನು ಕನ್ನಡಿ ಪ್ರತಿಫಲಿಸಸುತ್ತದೆ. ಹೆಚ್ಚುವರಿ ಲೈಟ್ಸ್ ಬಳಸದೆಯೇ ಕೋಣೆ ತುಂಬಾ ಪ್ರಕಾಶಮಾನವಾಗಿ ಆಕರ್ಷಕವಾಗಿ ಕಾಣುತ್ತದೆ.

ಇದನ್ನೂ ಓದಿ: ಐಷಾರಾಮಿ ಹೋಟೆಲ್‌ಗಳಲ್ಲಿ ಗಾಜಿನ ಬಾತ್ ರೂಮ್ ಇರುವುದರ ಹಿಂದಿದೆ ಈ ಕಾರಣ

ಸುರಕ್ಷತೆ ದೃಷ್ಟಿಯಿಂದ ಈ ಕೆಲಸ ತಪ್ಪದೇ ಮಾಡಿ

ನೀವು ಹೋಟೆಲ್ ಗೆ ತಂಗಲು ಹೋದಾಗ ಕನ್ನಡಿಯನ್ನು ಸೂಕ್ಷ್ಮವಾಗಿ ಗಮನಿಸಿ. ನಿಮ್ಮ ಸುರಕ್ಷತೆ ದೃಷ್ಟಿಯಿಂದ ಕನ್ನಡಿಗಳು ಸಾಮಾನ್ಯವಾದದ್ದೇ ಅಥವಾ ಟು-ವೇ ಮಿರರ್ ಗಳೇ ಎಂದು ಪರೀಕ್ಷಿಸಿಕೊಳ್ಳಿ. ನೀವು ಈ ಕನ್ನಡಿಯ ಮೇಲೆ ನಿಮ್ಮ ಬೆರಳನ್ನು ಇಟ್ಟಾಗ, ಬೆರಳಿಗೆ ಹಾಗೂ ಪ್ರತಿಬಿಂಬಕ್ಕೆ ಮಧ್ಯೆ ಸಣ್ಣ ಅಂತರ ಕಂಡುಬಂದರೆ ಯಾವುದೇ ಸಮಸ್ಯೆಯಿಲ್ಲ, ಸುರಕ್ಷಿತವಾಗಿದೆ ಎಂದರ್ಥ. ನಿಮ್ಮ ಬೆರಳಿನ ತುದಿ ಯಾವುದೇ ಅಂತರವಿಲ್ಲದೇ ಪ್ರತಿಬಿಂಬವನ್ನು ಮುಟ್ಟಿದರೆ, ನೀವು ತಕ್ಷಣವೇ ಎಚ್ಚೆತ್ತುಕೊಳ್ಳುವುದು ಅವಶ್ಯಕ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:17 pm, Tue, 4 August 26

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಫ್ಲೈದುಬೈ ಪ್ರಕರಣ: ಸಹ ಪೈಲಟ್ ಕೃತ್ಯವನ್ನು ಶ್ಲಾಘಿಸಿದ ಅಲ್-ಖೈದಾ
ಫ್ಲೈದುಬೈ ಪ್ರಕರಣ: ಸಹ ಪೈಲಟ್ ಕೃತ್ಯವನ್ನು ಶ್ಲಾಘಿಸಿದ ಅಲ್-ಖೈದಾ