Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧವೆ ಎಂದು ಬಾಳು ಕೊಟ್ಟವನ ಬದುಕಲ್ಲಿ ವಿಧಿಯಾಟ: ಮದ್ವೆಯಾದ 15 ದಿನಕ್ಕೆ ಪತ್ನಿ ಜೂಟ್​

ತಂದೆ ತಾಯಿ ಇಲ್ಲದ ಅನಾಥ ಯುವಕ. ಬಡತನ ನಡುವೆ ಕಷ್ಟಪಟ್ಟು ಆ ಯುವಕ ಸ್ವಾವಲಂಬಿಯಾಗಿ ಬೆಳೆಯುತ್ತಿದ್ದ. ಬ್ರೋಕರ್ ಮೂಲಕ ಚಿಕ್ಕಮಗಳೂರಿನ ವಿಧವೆ ಮಹಿಳೆಯು ಈತನ ಜೊತೆ ಸೆಕೆಂಡ್ ಮದುವೆಯಾಗಿದ್ದಳು. ಆದ್ರೆ, ಮದುವೆಯಾಗಿ ಒಂದೇ ತಿಂಗಳಿಗೆ ಯುವಕನಿಗೆ ಕೈಕೊಟ್ಟು ಹೋಗಿದ್ದಾಳೆ. ಮದುವೆಯಾಗಿ ಎರಡೇ ದಿನಕ್ಕೆ ತವರು ಮನೆ ಸೇರಿದ್ದವಳು 15 ದಿನಕ್ಕೆ ಕೈಕೊಟ್ಟಿದ್ದಾಳೆ. ಈ ದಂಪತಿ ಬಾಳಲ್ಲಿ ಪೊಲೀಸಪ್ಪ ಹುಳಿ ಹಿಂಡಿರುವ ಆರೋಪ ಕೇಳಿಬಂದಿದೆ.

ವಿಧವೆ ಎಂದು ಬಾಳು ಕೊಟ್ಟವನ ಬದುಕಲ್ಲಿ ವಿಧಿಯಾಟ: ಮದ್ವೆಯಾದ 15 ದಿನಕ್ಕೆ ಪತ್ನಿ ಜೂಟ್​
ಮೌನೇಶ್, ದೀಪಿಕಾ
Follow us
Basavaraj Yaraganavi
| Updated By: ರಮೇಶ್ ಬಿ. ಜವಳಗೇರಾ

Updated on: Mar 14, 2025 | 8:10 PM

ಶಿವಮೊಗ್ಗ, (ಮಾರ್ಚ್​ 14): ಮದುವೆ ಎನ್ನುವುದು ಏಳೇಳು ಜನುಮಗಳ ಅನುಬಂಧ ಅಂತಾರೆ. ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಎನ್ನಲಾಗುತ್ತೆ. ಹೌದು.. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಹೊಸಕೊಪ್ಪ ಮೌನೇಶ್, ಗಂಡನನ್ನು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದ 32 ವರ್ಷದ ವಿಧವೆ ದೀಪಿಕಾಳನ್ನು ಮದ್ವೆಯಾಗಿ ಬಾಳು ಕೊಟ್ಟಿದ್ದ. ಆದ್ರೆ, ಇಲ್ಲಿ ವಿಧವೆ ಎಂದು ಬಾಳು ಕೊಟ್ಟು ಮದುವೆಯಾದ ಯುವಕನ ಜೀವನದಲ್ಲಿ ಕೇವಲ ಐದಿನೈದೇ ದಿನಕ್ಕೆ ಬರಸಿಡಿಲು ಬಡಿದಿದೆ. ಮದ್ವೆ ಬಳಿಕ ಬೈಕ್‌ನಲ್ಲಿ ಸುತ್ತಾಡುವುದೇನು, ಒಬ್ಬರನ್ನೊಬ್ಬರು ಅಪ್ಪಿಕೊಂಡು ಪೋಸ್ ಕೊಡುವುದೇನು, ರೀಲ್ಸ್ ವಿಡಿಯೋಗಳೇನು. ಅಬ್ಬಬ್ಬಾ ಈ ಜೋಡಿ ಮಾದರಿ ಜೋಡಿ ಎನ್ನುವಂತಿತ್ತು. ಆದ್ರೆ, ನೂರ್ಕಾಲ ಜತೆಯಾಗಿ ಇರುತ್ತೇನೆ ಎಂದು ಮಾತುಕೊಟ್ಟು ಸಪ್ತಪದಿ ತುಳಿದವಳು 15ದಿನಕ್ಕೆ ಗಂಡನ ಬಿಟ್ಟು ಪರಾರಿಯಾಗಿದ್ದಾಳೆ. ವಿಧವೆ ಅಂತಾ ಬಾಳು ಕೊಟ್ಟವನ ಬದುಕಲ್ಲಿ ಚೆಲ್ಲಾಟವಾಡಿದ್ದಾಳೆ.

ಅಂದಾಗೆ ಈ ಜೋಡಿಯ ಹೆಸರು ಮೌನೇಶ್ ಮತ್ತು ದೀಪಿಕಾ. ತಂದೆ ತಾಯಿ ಇಲ್ಲದ ಅನಾಥನಾಗಿರುವ ಮೌನೇಶ್ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಹೊಸಕೊಪ್ಪದಲ್ಲಿ ಕೆಲಸ ಮಾಡಿಕೊಂಡಿದ್ದ. ಇನ್ನು ದೀಪಿಕಾಗೆ ಈಗಾಗಲೇ ಮದ್ವೆಯಾಗಿದ್ದು, ಒಂದು ಮಗುವಿನ ತಾಯಿಯಾಗಿದ್ದಾಳೆ. ಆದ್ರೆ, 10 ವರ್ಷಗಳ ಹಿಂದೆಯೇ ಗಂಡನನನ್ನು ಕಳೆದುಕೊಂಡಿದ್ದಾಳೆ. ಆದರೂ ಸಹ ಮೌನೇಶ್, 32ವರ್ಷದ ವಿಧವೆ ದೀಪಿಕಾ ಎನ್ನುವಳಿಗೆ ಬಾಳುಕೊಟ್ಟಿದ್ದ. ಫೆಬ್ರವರಿ 7ರಂದು ನವುಲೆಯ ಚೌಡೇಶ್ವರಿ ದೇವಾಲಯದಲ್ಲಿ ಸರವಾಗಿ ವಿವಾಹವಾಗಿದ್ದರು. ಇಬ್ಬರು ಧರ್ಮಸ್ಥಳ ಸೇರಿ ವಿವಿಧ ದೇವಾಲಯಗಳಿಗೆ ಹೋಗಿ ಬಂದಿದ್ರು. ಆದ್ರೆ, ಮದುವೆಯಾದ 2 ದಿನಕ್ಕೆ ತವರು ಮನೆ ಸೇರಿದ್ದವಳು 15ದಿನಕ್ಕೆ ಗಂಡನಿಗೆ ಕೈಕೊಟ್ಟ ಎಸ್ಕೇಪ್ ಆಗಿದ್ದಾಳೆ.

ಇದನ್ನೂ ಓದಿ: ಕಟ್ಟಿಕೊಂಡವಳನ್ನ ಬಿಟ್ಟು ಇನ್ಸ್ಟಾಗ್ರಾಮ್ ಸುಂದ್ರಿ ಜೊತೆ ಹೋಗಿ ಹೆಣವಾದ..!

ದಂಪತಿ ಬಾಳಲ್ಲಿ ಹುಳಿ ಹಿಂಡಿದ್ನಾ ಪೊಲೀಸಪ್ಪ?

ಇನ್ನು ದೀಪಿಕಾ ಪರಾರಿ ಕೇಸ್‌ಗೆ ಟ್ವಿಸ್ಟ್‌ಸಿಕ್ಕಿದ್ದು, ಮೌನೇಶ್​ ಹಾಗೂ ದೀಪಿಕಾ ದಂಪತಿ ದಂಪತಿ ಬಾಳಲ್ಲಿ ಚಿಕ್ಕಮಗಳೂರು ತಾಲೂಕಿನ ಕಳಸ ಠಾಣೆ ಎಎಸ್ಐ ಪೂರ್ಣೇಶ್‌ ಹುಳಿ ಹಿಂಡಿರುವ ಆರೋಪ ಕೇಳಿಬಂದಿದೆ. ಪೂರ್ಣೇಶ್‌ ಎನ್ನುವರು ಕೆಲ ವರ್ಷಗಳಿಂದ ದೀಪಿಕಾ ಪರಿಚಯ ಇದ್ದು. ದೀಪಿಕಾ ಹೆಸರಲ್ಲಿ 2 ಎಕರೆ ಜಮೀನು ಸಹ ಇತ್ತು. ಇದರ ಮೇಲೆ ಕಣ್ಣಿಟ್ಟಿರುವ ಎಸ್‌ಎಐ ಪೂರ್ಣೇಶ್, ಈಕೆ ಜತೆ ಸಂಬಂಧ ಇಟ್ಟುಕೊಂಡು ನಮ್ಮಿಬ್ಬರ ನಡುವೆ ತಂದಿಟ್ಟಿದ್ದಾನೆ ಎಂದು ಮೌನೇಶ್ ಆರೋಪಿಸಿದ್ದಾರೆ.

ಇದನ್ನೂ ಓದಿ
Image
ಕಟ್ಟಿಕೊಂಡವಳನ್ನ ಬಿಟ್ಟು ಇನ್ಸ್ಟಾಗ್ರಾಮ್ ಸುಂದ್ರಿ ಜೊತೆ ಹೋಗಿ ಹೆಣವಾದ..!
Image
ಮಂಡ್ಯದಲ್ಲೊಂದು ಮನಕಲಕುವ ಘಟನೆ: ಲವ್ ಸೆಕ್ಸ್ ದೋಖಾಕ್ಕೆ ತಾಯಿ-ಮಗಳು ಬಲಿ..!
Image
ಹಾವೇರಿಯಲ್ಲಿ ಸ್ವಾತಿ ಭೀಕರ ಹತ್ಯೆ: ಬೆಚ್ಚಿಬೀಳಿಸುವಂತಿದೆ ನಯಾಜ್​ನ ಕ್ರೌರ್ಯ
Image
ಬಿಜೆಪಿ ಮುಖಂಡನ ವಿಡಿಯೋ: 20 ಲಕ್ಷಕ್ಕೆ ಡಿಮ್ಯಾಂಡ್‌, ಮಾಯಾಂಗನೆ ಲಾಕ್

ಕೆಲ ಯುವಕರ ಕರೆತಂದು ನನ್ನ ಮೇಲೆ ಹಲ್ಲೆ ಮಾಡಿದ್ದಲ್ಲದೇ, ನನ್ನ ಪತ್ನಿಯಿಂದಲೇ ನನ್ನ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ಕೊಡಿಸಿದ್ದಾನೆ. ಎಎಸ್‌ಐ ಪೂರ್ಣೇಶ್ ವಿರುದ್ಧ ಆರೋಪಿಸಿದ್ದಾನೆ. ಅಲ್ಲದೇ ಎಸ್‌ಪಿಗೂ ದೂರು ಕೊಡುವುದಾಗಿ ಹೇಳಿದ್ದಾನೆ ಮೌನೇಶ್ ಅಳಲು ತೋಡಿಕೊಂಡಿದ್ದಾನೆ.

ಒಟ್ಟಿನಲ್ಲಿ ವಿಧವೆಗೆ ಬಾಳು ಕೊಟ್ಟ ಅನಾಥ ಯುವಕ ಮೌನೇಶ್ ಸಂಕಷ್ಟಕ್ಕೆ ಸಿಲುಕಿದ್ದು, ಪತ್ನಿ ಆದಷ್ಟು ಬೇಗ ವಾಪಸ್ ಬರಲಿ ಎಂದು ಕಾಯುತ್ತಿದ್ದಾನೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಗೋರಖ್‌ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ
ಗೋರಖ್‌ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
‘ಅಪ್ಪು’ ಮರು ಬಿಡುಗಡೆ: ಅಣ್ಣಾವ್ರ ಅಭಿಮಾನಿಗಳಿಂದ ಮತ್ತೊಂದು ಬೇಡಿಕೆ
‘ಅಪ್ಪು’ ಮರು ಬಿಡುಗಡೆ: ಅಣ್ಣಾವ್ರ ಅಭಿಮಾನಿಗಳಿಂದ ಮತ್ತೊಂದು ಬೇಡಿಕೆ
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ