Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಟ್ಟಿಕೊಂಡವಳನ್ನ ಬಿಟ್ಟು ಇನ್ಸ್ಟಾಗ್ರಾಮ್ ಸುಂದ್ರಿ ಜೊತೆ ಹೋಗಿ ಹೆಣವಾದ..!

ವ್ಯಕ್ತಿಯೋರ್ವ ಕಟ್ಟಿಕೊಂಡವಳನ್ನ ಬಿಟ್ಟು ಇಟ್ಟುಕೊಂಡವಳ ಜೊತೆ ಹೋಗಿ ಹೆಣವಾದ್ದಾನೆ. ಹೌದು.. ಶಾಸ್ತ್ರೋಕ್ತವಾಗಿ ಮದುವೆಯಾದ ಪತ್ನಿಯನ್ನ ಬಿಟ್ಟು ಇನ್​ಸ್ಟ್ರಾಮ್​​ನಲ್ಲಿ ಪರಿಚಯವಾದ ಯುವತಿ ಜೊತೆ ಹೋದವನು ಕೊಲೆಯಾಗಿದ್ದಾನೆ. ಅಕ್ರಮ ಸಂಬಂಧ ಬೆಳೆಸಿಕೊಂಡವ ಬರ್ಬರವಾಗಿ ಹತ್ಯೆಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಮೃತ ದೇಹ ಪತ್ತೆಯಾಗಿದ್ದು,ಕೃತ್ಯ ನಡೆದ ನಂತರ ಇನ್ಸ್ಟಾಗ್ರಾಮ್ ಯುವತಿ ನಾಪತ್ತೆಯಾಗಿದ್ದು,ಇದೀಗ ಆಕೆಯ ಸುತ್ತ ಅನುಮಾನದ ಹುತ್ತ ಬೆಳೆದಿದೆ.

ಕಟ್ಟಿಕೊಂಡವಳನ್ನ ಬಿಟ್ಟು ಇನ್ಸ್ಟಾಗ್ರಾಮ್ ಸುಂದ್ರಿ ಜೊತೆ ಹೋಗಿ ಹೆಣವಾದ..!
Mysuru Surya
Follow us
ದಿಲೀಪ್​, ಚೌಡಹಳ್ಳಿ
| Updated By: ರಮೇಶ್ ಬಿ. ಜವಳಗೇರಾ

Updated on: Mar 14, 2025 | 6:36 PM

ಮೈಸೂರು, (ಮಾರ್ಚ್​ 14): ಮದುವೆಯಾಗಿದ್ದರೂ ಹೆಂಡ್ತಿಯನ್ನು ಬಿಟ್ಟು ಇನ್ಸ್ಟ್ರಗ್ರಾಮ್‌ನಲ್ಲಿ ಪರಿಚಯವಾದ ಸುಂದರಿ ಹಿಂದೆ ಹೋಗಿ ದುರಂತ ಅಂತ್ಯಕಂಡಿದ್ದಾನೆ. ದೊರೆಸ್ವಾಮಿ ಅಲಿಯಾಸ್ ಸೂರ್ಯ ಮೃತ ವ್ಯಕ್ತಿ. ಈತ ಮೈಸೂರು ತಾಲ್ಲೂಕಿನ ಅನುಗನಹಳ್ಳಿಯ ನಿವಾಸಿಯಾಗಿದ್ದು, ಆರೇಳು ವರ್ಷಗಳ ಹಿಂದ ಮೈಸೂರಿನ ಹಿನಕಲ್‌ನ ನಿವಾಸಿ ದೀಪಿಕಾಳ ಮದುವೆಯಾಗಿದ್ದಾನೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೂ ಸಹ ಇನ್ಸ್ಟ್ರಗ್ರಾಮ್‌ನಲ್ಲಿ ಪರಿಚಯವಾದ ಶ್ವೇತಾ ಎನ್ನುವ ಸುಂದರಿಯ ಬಲೆಗೆ ಬಿದ್ದು ಇದೀಗ ಕೊಲೆಯಾಗಿದ್ದಾನೆ.

ನಿನ್ನೆ (ಮಾರ್ಚ್ 14) ರಾತ್ರಿ ಕೂಡ ಅನುಗನಹಳ್ಳಿಯ ತೋಟದ ಮನೆಯಲ್ಲಿ ಶ್ವೇತಾ ಹಾಗೂ ಸೂರ್ಯ ಜೊತೆಯಲ್ಲೆ ಇದ್ದರು ಆದ್ರೆ, ಬೆಳಗಾಗುವಷ್ಟರಲ್ಲಿ ರೌಡಿ ಶೀಟರ್ ಸೂರ್ಯ ಕೊಲೆಯಾಗಿದ್ದಾನೆ. ಆದ್ರೆ, ಶ್ವೇತಾ ಮಾತ್ರ ಪರಾರಿಯಾಗಿದ್ದಾಳೆ. ಇನ್ನು ಕೊಲೆಯಾಗಿರೋ ಸ್ಥಳದಲ್ಲಿ ಹೋಟೆಲ್‌ನಿಂದ ತಂದ ಆಹಾರ ಪದಾರ್ಥಗಳು ಬಿದ್ದಿವೆ. ಇನ್ನು ಪ್ರೇಯಸಿ ಶ್ವೇತಾಳಿಗೆ ಸಂಬಂಧಿಸಿದ ವಸ್ತುಗಳು ಪತ್ತೆಯಾಗಿವೆ. ಹೀಗಾಗಿ ಈ ಕೃತ್ಯದ ಹಿಂದೆ ಶ್ವೇತಾಳ ಕೈವಾಡ ಇದೆ ಎನ್ನುವ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: ಮಂಡ್ಯದಲ್ಲೊಂದು ಮನಕಲಕುವ ಘಟನೆ: ಯುವಕನ ಲವ್ ಸೆಕ್ಸ್ ದೋಖಾಕ್ಕೆ ತಾಯಿ-ಮಗಳು ಬಲಿ..!

ಮನೆ ಬಿಟ್ಟು ಹೋಗಿದ್ದ ಹೆಂಡ್ತಿ- ತಾಯಿ

ಸೂರ್ಯ ಹಾಗೂ ದೀಪಿಕಾ ಅನ್ಯೋನ್ಯ ಜೀವನ ಸಾಗಿಸುತ್ತಿದ್ದ ಟೈಮಲ್ಲಿ ಸೋಷಿಯಲ್​ ಮೀಡಿಯಾ ಮೂಲಕ ಪರಿಚಿತಳಾದ ಶ್ವೇತಾ ಎಂಬಾಕೆ‌ ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿದ್ದಾಳೆ. ಅವಳ ಜೊತೆ ಸಂಬಂಧದಲ್ಲಿದ್ದ ಸೂರ್ಯ, ಶ್ವೇತಾಳನ್ನ ಆಗಾಗ ಮನೆಗೂ ಕರೆದಯಕೊಂಡು ಬರುತ್ತಿದ್ದನಂತೆ. ಇಬ್ಬರು ಜೊತೆ ಇರುವ ಖಾಸಗಿ ಪೋಟೋಗಳನ್ನ ಸ್ಟೇಟಸ್ ಗೆ ಹಾಕಿದ್ದ. ಈ ವಿಷಯ ಗೊತ್ತಾದ ಮೇಲೆ ಸೂರ್ಯ ಪತ್ನಿ ದೀಪಿಕಾ, ತಾಯಿ ಪುಷ್ಪ ಮನೆ ಬಿಟ್ಟು ತವರು ಮನೆ ಸೇರಿದ್ದಾರೆ‌.

ಇದನ್ನೂ ಓದಿ
Image
ಮಂಡ್ಯದಲ್ಲೊಂದು ಮನಕಲಕುವ ಘಟನೆ: ಲವ್ ಸೆಕ್ಸ್ ದೋಖಾಕ್ಕೆ ತಾಯಿ-ಮಗಳು ಬಲಿ..!
Image
ಹಾವೇರಿಯಲ್ಲಿ ಸ್ವಾತಿ ಭೀಕರ ಹತ್ಯೆ: ಬೆಚ್ಚಿಬೀಳಿಸುವಂತಿದೆ ನಯಾಜ್​ನ ಕ್ರೌರ್ಯ
Image
ಬಿಜೆಪಿ ಮುಖಂಡನ ವಿಡಿಯೋ: 20 ಲಕ್ಷಕ್ಕೆ ಡಿಮ್ಯಾಂಡ್‌, ಮಾಯಾಂಗನೆ ಲಾಕ್
Image
ಬಾಲಕಿಯನ್ನು ಪುಸಲಾಯಿಸಿ ಗರ್ಭಿಣಿ ಮಾಡಿದ 2 ಮಕ್ಕಳ ತಂದೆ ಅರೆಸ್ಟ್

ಆಸ್ತಿಗಾಗಿ ಸೂರ್ಯನಿಗೆ ಶ್ವೇತಾ ಟಾರ್ಚರ್​

ಸೂರ್ಯನಿಗೆ ದಿನಗಳೆದಂತೆ ಶ್ವೇತಾ ಹಣ ಅಸ್ತಿಗಾಗಿ ಪೀಡಿಸುತ್ತಿದ್ದಾಳೆ. ಹೀಗಾಗಿ ಆಸ್ತಿ ಮಾರಾಟ ಮಾಡೋಕೆ ಸೂರ್ಯ ಮನೆಯವರಿಗೆ ಕಿರುಕುಳ ನೀಡಿದ್ದಾನೆ. ಆದ್ರೆ ಮನೆಯವರು ಆಸ್ತಿ ಮಾರಾಟಕ್ಕೆ ಒಪ್ಪಿಗೆ ನೀಡಿಲ್ಲ. ಆದರೂ ಶ್ವೇತಾ ಆಸ್ತಿ ಮಾರಾಟ ಮಾಡಿ ಹಣ ತೊಂಗೊಂಡು ಬಾ ಬೆಂಗಳೂರಲ್ಲಿ ಸೆಟಲ್ ಆಗೋಣ ಎಂದು ಟಾರ್ಚರ್ ಕೊಡುತ್ತಿದ್ದಳು . ಬಗ್ಗೆ ಸೂರ್ಯ ಸಹ ಮನೆಯವರ ಬಳಿ ಹೇಳಿಕೊಂಡಿದ್ದನಂತೆ. ಆಗಾಗ ಕುಟುಂಬಸ್ಥರಿಗೆ ಪೋನ್ ಮಾಡಿ, ವಾಯ್ಸ್ ಮೆಸೆಜ್ ಕಳುಹಿಸಿ ಕಷ್ಟ ಹೇಳಿಕೊಳ್ಳುತ್ತಿದ್ದ.

ಆದ್ರೆ ಸೂರ್ಯ ಏನು ಹೇಳಿದ್ರು ಕುಟುಂಬಸ್ಥರು ತಲೆ ಕೆಡಿಸಿಕೊಂಡಿರಲಿಲ್ಲ. ಯಾಕಂದ್ರೆ ಸೂರ್ಯ ಮನೆಯವರಿಗೂ ಪ್ರತಿನಿತ್ಯ ದುಡ್ಡು ಕೊಡಿ, ಜಮೀನು ಮಾರಾಟ ಮಾಡಿ ಎಂದು ಟಾರ್ಚರ್ ಕೊಟ್ಟಿದ್ದಾನೆ. ಅಷ್ಟೇ ಅಲ್ಲದೇ ತನ್ನ ಸ್ವಂತ ಅಕ್ಕ, ಅಮ್ಮ ಎಲ್ಲರಿಗೂ ಚಾಕು ತೋರಿಸಿ ಸಾಯಿಸೋ ಬೆದರಿಕೆ ಹಾಕಿದ್ದ. ಈ ಭಯದಿಂದ ಸೂರ್ಯ ವಿರುದ್ಧ ಜಯಪುರ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ಕೂಡ ದೂರು ನೀಡಿದ್ದರು. ಕೊನೆಗೆ ಆಸ್ತಿ ಹಣಕ್ಕಾಗಿ ಪೀಡಿಸಿದ್ದ ಸೂರ್ಯನ ಕಾಟ ತಾಳಲಾರದೆ ಅಕ್ಕ ಸುವರ್ಣ ತವರು ಮನೆಗೆ ಬರುವುದನ್ನೇ ಬಿಟ್ಟಿದ್ದರಂತೆ.

ಸೂರ್ಯನ ಟಾರ್ಚರ್‌ನಿಂದ ನೊಂದಿದ್ದ ಕುಟುಂಬಸ್ಥರು ಯಾವುದೇ ವಿಚಾರಕ್ಕೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಕುಟುಂಬಸ್ಥರು ಪ್ರತಿಕ್ರಿಯಿಸದಿದ್ದರೂ ಸಹ ಮಾತ್ರ ಸೂರ್ಯ ಮೆಸೆಜ್ ಮಾಡುತ್ತಿದ್ದ. ಅದಕ್ಕೆ ಸಾಕ್ಷಿ ಎಂಬಂತೆ ಶ್ವೇತಾಳಿಂದ ಆಗುತ್ತಿದ್ದ ಟಾರ್ಚರ್ ಬಗ್ಗೆ ಸೂರ್ಯ ಕಳ್ಸಿರೋ ಆಡಿಯೋ ಕೂಡ ಲಭ್ಯವಾಗಿದೆ. ನಾನೂ ಏನು ಮಾಡಿಕೊಂಡರು ಶ್ವೇತಾ ಕಾರಣ. ನಾನು ಮಾತ್ರೆ ತೆಗೆದುಕೊಳ್ಳುತ್ತದ್ದೇನೆ. ಶ್ವೇತಾಳ ಕಾಲ್ ಡೀಟೇಲ್ಸ್ ತೆಗೆಸಿದರೆ ಅವಳ ವಿಳಾಸ ಗೊತ್ತಾಗುತ್ತೆ ಎಂದು ಕೆಲದಿನಗಳ ಹಿಂದೆ ಆಡಿಯೋ ಮೆಸೆಜ್ ಕಳುಹಿಸಿದ್ದ. ಇದರಿಂದ ಸೂರ್ಯನ ತಾಯಿ ಪುಷ್ಪ, ಕೊಲೆಯನ್ನ ಶ್ವೇತಾಳೆ ಮಾಡಿದ್ದಾಳೆ ಎಂದು ಆರೋಪ ಮಾಡಿದ್ದಾರೆ.

ಒಟ್ಟಾರೆ. ಇಂತಹ ಭೀಕರ ಕೊಲೆ ಮಾಡೋಕೆ ಕೇವಲ ಶ್ವೇತಾಳಿಂದ ಮಾತ್ರ ಸಾಧ್ಯವಿಲ್ಲ.ಕೃತ್ಯಕ್ಕೆ ಶ್ವೇತಾ ಕೆಲವರು ಸಾಥ್ ಕೊಟ್ಟಿರುವ ಶಂಕೆ ಇದೆ‌. ಇದು ಆಸ್ತಿಗಾಗಿ ನಡೆದಿರುವ ಕೊಲೆಯಾ..? ಅಥವಾ ಇನ್ಯಾವುದಾದರೂ ಕಾರಣಕ್ಕೆ ನಡೆದಿರಬಹುದಾ..? ಎಂಬ ಪ್ರಶ್ನೆ ಪೊಲೀಸರನ್ನ ಕಾಡುತ್ತಿದ್ದು, ಶ್ವೇತಾ ಸಿಕ್ಕ ಬಳಿಕವೇ ಸಂಪೂರ್ಣ ಮಾಹಿತಿ ತಿಳಿಯಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ