Holi Puja: ಹೋಳಿ ಹಬ್ಬದಂದು ಶಿವಲಿಂಗದ ಮೇಲೆ ಈ ವಸ್ತುಗಳನ್ನು ಅರ್ಪಿಸಿ
ಹೋಳಿ ಹಬ್ಬದಂದು ಶಿವನ ಪೂಜೆಯು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಹೋಳಿಕಾ ದಹನದ ಭಸ್ಮ ಮತ್ತು ನೀಲಿ-ಕೆಂಪು ಗುಲಾಲನ್ನು ಶಿವಲಿಂಗಕ್ಕೆ ಅರ್ಪಿಸುವುದರಿಂದ ಸಂತೋಷ, ಸಮೃದ್ಧಿ ಮತ್ತು ನಕಾರಾತ್ಮಕತೆಯಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ. ಈ ಲೇಖನದಲ್ಲಿ ಶಿವನ ಆಶೀರ್ವಾದ ಪಡೆಯಲು ಹೋಳಿ ಹಬ್ಬದಂದು ಶಿವನಿಗೆ ಯಾವ ವಸ್ತುಗಳನ್ನು ಅರ್ಪಿಸಬೇಕು ಎಂಬುದನ್ನು ವಿವರಿಸಲಾಗಿದೆ.

ಹೋಳಿ ಹಬ್ಬವನ್ನು ಹಿಂದೂ ಧರ್ಮದಲ್ಲಿ ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಹೋಳಿ ಹಬ್ಬವು ಪರಸ್ಪರ ಸಹೋದರತ್ವ ಮತ್ತು ಪ್ರೀತಿಯ ಸಂಕೇತವಾಗಿದೆ. ಹೋಳಿ ಹಬ್ಬವು ಶತ್ರುವನ್ನೂ ಮಿತ್ರನನ್ನಾಗಿ ಮಾಡುತ್ತದೆ ಎಂದು ನಂಬಲಾಗಿದೆ. ಜೊತೆಗೆ ದೇಶಾದ್ಯಂತ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ.
ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ, ಹೋಳಿ ಹಬ್ಬದ ದಿನದಂದು ಶಿವನನ್ನು ಪೂಜಿಸುವುದು ತುಂಬಾ ಒಳ್ಳೆಯದು. ನಂಬಿಕೆಗಳ ಪ್ರಕಾರ, ಹೋಳಿ ಹಬ್ಬದ ದಿನದಂದು ಶಿವಲಿಂಗಕ್ಕೆ ಕೆಲವು ವಿಶೇಷ ವಸ್ತುಗಳನ್ನು ಅರ್ಪಿಸುವುದರಿಂದ, ಶಿವನು ಸಂತೋಷಗೊಂಡು ತನ್ನ ವಿಶೇಷ ಆಶೀರ್ವಾದಗಳನ್ನು ನೀಡುತ್ತಾನೆ. ಹಾಗಾದರೆ ಹೋಳಿ ಹಬ್ಬದ ದಿನದಂದು ಶಿವನಿಗೆ ಯಾವ ವಸ್ತುಗಳನ್ನು ಅರ್ಪಿಸಬೇಕು ಎಮಬುದನ್ನು ಇಲ್ಲಿ ತಿಳಿದುಕೊಳ್ಳಿ.
ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷದ ಫಾಲ್ಗುಣ ಮಾಸದ ಹುಣ್ಣಿಮೆ ಪ್ರಾರಂಭವಾಗಿದೆ. ಫಾಲ್ಗುಣ ಪೂರ್ಣಿಮೆ ನಿನ್ನೆ ಬೆಳಿಗ್ಗೆ 10:35 ಕ್ಕೆ ಪ್ರಾರಂಭವಾಗಿದೆ. ಇಂದು ಅಂದರೆ ಮಾರ್ಚ್ 14 ರಂದು ಮಧ್ಯಾಹ್ನ 12:23 ಕ್ಕೆ ಕೊನೆಗೊಳ್ಳುತ್ತದೆ.
ಶಿವಲಿಂಗದ ಮೇಲೆ ಈ ವಸ್ತುಗಳನ್ನು ಅರ್ಪಿಸಿ:
ಹೋಳಿಕಾ ದೀಪೋತ್ಸವ:
ಹೋಳಿ ಹಬ್ಬದ ದಿನದಂದು, ಹೋಳಿಕಾ ದಹನದಿಂದ ತಂದ ಚಿತಾಭಸ್ಮವನ್ನು ಶಿವಲಿಂಗದ ಮೇಲೆ ಅರ್ಪಿಸಬೇಕು. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಹೋಳಿ ಹಬ್ಬದ ದಿನದಂದು ಶಿವಲಿಂಗದ ಮೇಲೆ ಹೋಳಿಕಾ ದಹನದ ಚಿತಾಭಸ್ಮವನ್ನು ಅರ್ಪಿಸುವವರ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಳಿಯುತ್ತದೆ. ನಕಾರಾತ್ಮಕತೆಯು ಮನೆಯಿಂದ ದೂರವಾಗುತ್ತದೆ. ಅಲ್ಲದೆ ಕುಟುಂಬದ ಸದಸ್ಯರು ರೋಗ ಮುಕ್ತರಾಗುತ್ತಾರೆ.
ಇದನ್ನೂ ಓದಿ: ಹೋಳಿ ಹಬ್ಬದಂದೇ ಚಂದ್ರಗ್ರಹಣ; ಈ 4 ರಾಶಿಯವರು ಜಾಗರೂಕರಾಗಿರಿ!
ನೀಲಿ ಮತ್ತು ಕೆಂಪು ಬಣ್ಣದ ಗುಲಾಲ್:
ಹೋಳಿ ಹಬ್ಬದ ದಿನದಂದು ಶಿವಲಿಂಗದ ಮೇಲೆ ನೀಲಿ ಮತ್ತು ಕೆಂಪು ಬಣ್ಣದ ಗುಲಾಲ್ ಅನ್ನು ಸಹ ಅರ್ಪಿಸಬೇಕು. ಹೋಳಿ ಹಬ್ಬವನ್ನು ಹುಣ್ಣಿಮೆಯಂದು ಆಚರಿಸಲಾಗುತ್ತದೆ, ಆದ್ದರಿಂದ ಈ ದಿನದಂದು ಶಿವಲಿಂಗಕ್ಕೆ ಗುಲಾಲ್ ಅರ್ಪಿಸುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ.
ಮತ್ತಷ್ಟು ಅಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:39 am, Fri, 14 March 25