Birds Vastu Tips: ಮನೆ ಸುತ್ತ ಮುತ್ತ ಹಕ್ಕಿ ಗೂಡು ಕಟ್ಟಿದೆಯೇ? ಹಾಗಿದ್ರೆ ಈ ವಿಷ್ಯ ತಿಳಿದುಕೊಳ್ಳಿ
ಮನೆಯ ಸಮೀಪ ಪಕ್ಷಿ ಗೂಡು ಕಟ್ಟಿದ್ದರೆ ಅನೇಕರು ಅದನ್ನು ಕೆಡವಲು ಮುಂದಾಗುತ್ತಾರೆ. ಆದರೆ ಜ್ಯೋತಿಷ್ಯದ ಪ್ರಕಾರ ಮನೆ ಸುತ್ತಮುತ್ತ ಹಕ್ಕಿ ಗೂಡು ಕಟ್ಟಿದ್ದರೆ ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ. ಗೀಜಗ, ಗುಬ್ಬಚ್ಚಿ ಗೂಡುಗಳು ಸಮೃದ್ಧಿ, ಸಂತೋಷ ಮತ್ತು ಶಾಂತಿಯ ಸಂಕೇತ. ಇದು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸುತ್ತದೆ ಮತ್ತು ಶನಿ, ರಾಹು, ಕೇತು ದೋಷಗಳಿಂದ ಪರಿಹಾರ ನೀಡುತ್ತದೆ ಎಂದು ನಂಬಲಾಗಿದೆ.

ಮನೆಯ ಸುತ್ತಮುತ್ತಲು ಹಕ್ಕಿ ಗೂಡು ಕಟ್ಟಿದ್ದರೆ, ಸಾಕಷ್ಟು ಜನರು ಜನರು ಅದನ್ನು ಕೆಡವಲು ಮುಂದಾಗುತ್ತಾರೆ. ಆದರೆ ಜ್ಯೋತಿಷ್ಯ (Astrology) ಶಾಸ್ತ್ರದಲ್ಲಿ ಪಶು-ಪಕ್ಷಿಗಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಶಾಸ್ತ್ರಗಳ ಪ್ರಕಾರ ಹಕ್ಕಿಯ ಗೂಡನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಗೀಜಗ, ಗುಬ್ಬಚ್ಚಿ ಗೂಡುಗಳು ತುಂಬಾ ಕಲಾತ್ಮಕವಾಗಿ ಕಾಣುತ್ತವೆ. ಮನೆಯಲ್ಲಿ ಅವುಗಳ ಗೂಡುಗಳು ಸಂತೋಷ ಮತ್ತು ಶಾಂತಿಯನ್ನು ತರುತ್ತವೆ ಎಂದು ನಂಬಲಾಗಿದೆ. ಜೊತೆಗೆ ಹಕ್ಕಿಗಳ ಗೂಡುಗಳನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಗೀಜಗ, ಗುಬ್ಬಚ್ಚಿ ಎಲ್ಲೆಲ್ಲಿ ಗೂಡು ಕಟ್ಟುತ್ತದೋ ಅಲ್ಲೆಲ್ಲಾ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ಇರುತ್ತದೆ ಎಂದು ಹೇಳಲಾಗುತ್ತದೆ.
ಮನೆಯ ಸುತ್ತಮುತ್ತ ಹಕ್ಕಿಗಳ ಚಿಲಿಪಿಲಿ ಕಲರವ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಜೊತೆಗೆ ಆ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ದಾಂಪತ್ಯ ಜೀವನದಲ್ಲಿ ಸಂಬಂಧಗಳು ಮಧುರವಾಗುತ್ತವೆ. ಶನಿ ದೋಷದಿಂದ ಬಳಲುತ್ತಿರುವ ಮನೆಯಲ್ಲಿ ಗೀಜಗ ಗೂಡು ಕಟ್ಟುವುದು ಶುಭವೆಂದು ಪರಿಗಣಿಸಲಾಗಿದೆ. ಇದಲ್ಲದೇ ಜಾತಕದಲ್ಲಿ ರಾಹು ಅಥವಾ ಕೇತುವಿನ ಪ್ರಭಾವ ನಕಾರಾತ್ಮಕವಾಗಿದ್ದರೆ, ಈ ಪ್ರಭಾವದಿಂದ ರಕ್ಷಿಸಿಕೊಳ್ಳಲು ಗೂಡು ಸಹ ಉಪಯುಕ್ತವಾಗಿದೆ.
ಇದನ್ನೂ ಓದಿ: ಶಾಸ್ತ್ರದ ಪ್ರಕಾರ, ಯಾವ ದಿನ ಕೂದಲು ಕತ್ತರಿಸುವುದು ಶುಭ?
ಮನೆಯಲ್ಲಿ ಪಕ್ಷಿಧಾಮವಿದ್ದರೆ ಪ್ರಕೃತಿಯೊಂದಿಗಿನ ನಿಮ್ಮ ಸಂಪರ್ಕ ಹೆಚ್ಚಾಗುತ್ತದೆ. ಹಕ್ಕಿಯ ಗೂಡನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ಇದು ಮನಸ್ಸಿಗೆ ತಾಜಾತನ ಮತ್ತು ಸಂತೋಷವನ್ನು ತರುತ್ತದೆ. ಹಕ್ಕಿಯ ಗೂಡು ನಿಮ್ಮನ್ನು ದುಷ್ಟ ಕಣ್ಣಿನಿಂದ ರಕ್ಷಿಸುತ್ತದೆ. ಮನೆಯ ಮುಖ್ಯ ದ್ವಾರ ಅಥವಾ ಬಾಲ್ಕನಿಯಲ್ಲಿ ಪಕ್ಷಿ ಗೂಡು ಇಡುವುದರಿಂದ ಶತ್ರುಗಳ ಪ್ರಭಾವ ಮತ್ತು ನಕಾರಾತ್ಮಕ ಶಕ್ತಿಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ.
ಮತ್ತಷ್ಟು ಅಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ