Holi Gift: ಹೋಳಿ ಹಬ್ಬದಂದು ಗಿಫ್ಟ್ ಮಾಡಿ 6000mAh ಬ್ಯಾಟರಿಯ ಶಕ್ತಿಶಾಲಿ ಸ್ಮಾರ್ಟ್ಫೋನ್: ಬೆಲೆ ಕೂಡ ಕಡಿಮೆ
Holi Gift Smartphone: ಭಾರತದಾದ್ಯಂತ ಹೋಳಿ ಹಬ್ಬವನ್ನು ಭರ್ಜರಿ ಆಗಿ ಆಚರಿಸಲಾಗುತ್ತಿದೆ. ಈ ಸಂದರ್ಭ ನೀವು ನಿಮ್ಮ ಸ್ನೇಹಿತರಿಗೆ ಅಥವಾ ಕುಟುಂಬ ಸದಸ್ಯರಿಗೆ ಉಡುಗೊರೆಗಳನ್ನು ನೀಡಲು ಬಯಸಿದರೆ, 6000mAh ಬ್ಯಾಟರಿಯನ್ನು ಹೊಂದಿರುವ, 15 ಸಾವಿರ ರೂ. ಗಿಂತ ಕಡಿಮೆ ಬೆಲೆಯ ಉತ್ತಮ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನ ಇಲ್ಲಿ ನೀಡಲಾಗಿದೆ.

ಬೆಂಗಳೂರು (ಮಾ. 14): ಹೋಳಿ (Holi 2025) ಹಬ್ಬದ ಋತು ಆರಂಭವಾಗಿದೆ. ಒಬ್ಬರು ಇನ್ನೊಬ್ಬರಿಗೆ ಬಣ್ಣದಿಂದ ಹೋಳಿ ಹಾಕುವುದು, ಮೈಗೆಲ್ಲ ಬಣ್ಣದ ಕಲರವು ಆ ದಿನದ ಹೋಳಿ ಹಬ್ಬಕ್ಕೆ ಕಳೆಯನ್ನು ನೀಡುತ್ತದೆ. ಇದು ಸಂತೋಷದ ಹಬ್ಬವಾಗಿದ್ದು, ಜನರು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಖುಷಿಯ ಸಮಯ ಕಳೆಯುತ್ತಾರೆ. ಪರಸ್ಪರ ಉಡುಗೊರೆಗಳನ್ನು ಸಹ ನೀಡುತ್ತಾರೆ. ನೀವು ಹೋಳಿಯಂದು ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ಉಡುಗೊರೆಗಳನ್ನು ನೀಡಲು ಬಯಸಿದರೆ, 6000mAh ಬ್ಯಾಟರಿಯನ್ನು ಹೊಂದಿರುವ, 15 ಸಾವಿರ ರೂ. ಗಿಂತ ಕಡಿಮೆ ಬೆಲೆಯ ಉತ್ತಮ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನ ಇಲ್ಲಿ ನೀಡಲಾಗಿದೆ. ಅಲ್ಲದೆ, ಇವು ಬಜೆಟ್ ಬೆಲೆಯಲ್ಲಿ ಬರುವ ಉತ್ತಮ ಫೀಚರ್ಸ್ ಹೊಂದಿರುವ ಫೋನ್ ಆಗಿದೆ.
ವಿವೋ T4x
ಆರಂಭಿಕ ಬೆಲೆ- ರೂ 12,999
ವಿವೋ T4x 5G 6.72-ಇಂಚಿನ ಪೂರ್ಣ HD+ ಡಿಸ್ಪ್ಲೇಯನ್ನು ಹೊಂದಿದ್ದು, ಇದು 120Hz ರಿಫ್ರೆಶ್ ದರ ಬೆಂಬಲದೊಂದಿಗೆ ಬರುತ್ತದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್ ಬೆಂಬಲದೊಂದಿಗೆ ಬರುತ್ತದೆ. ಆಂಡ್ರಾಯ್ಡ್ 15 ಆಧಾರಿತ ಫನ್‌ಟಚ್ ಓಎಸ್ 15 ನಲ್ಲಿ ಕಾರ್ಯನಿರ್ವಹಿಸುತ್ತದೆ. 50MP ಪ್ರಾಥಮಿಕ ಕ್ಯಾಮೆರಾ ಮತ್ತು 2MP ಬೊಕೆ ಕ್ಯಾಮೆರಾವನ್ನು ಹೊಂದಿದೆ. ಫೋನ್‌ನ ಮುಂಭಾಗದಲ್ಲಿ 8MP ಕ್ಯಾಮೆರಾ ಇದೆ. 44W ಫ್ಲ್ಯಾಶ್‌ಚಾರ್ಜ್ ಬೆಂಬಲ ಮತ್ತು 6500mAh ಬ್ಯಾಟರಿ ಬೆಂಬಲದೊಂದಿಗೆ ಬರುತ್ತದೆ. ಈ ಫೋನ್ 2 ವರ್ಷಗಳ ಆಂಡ್ರಾಯ್ಡ್ ಮತ್ತು 3 ವರ್ಷಗಳ ಭದ್ರತಾ ನವೀಕರಣಗಳೊಂದಿಗೆ ಬರುತ್ತದೆ.
Tech Tips: ನಿಮ್ಮ ನಂಬರ್ ಕಾಣದಂತೆ ರಹಸ್ಯವಾಗಿ ಕಾಲ್, ಮೆಸೇಜ್ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್
ರಿಯಲ್ ಮಿ 14x
ಆರಂಭಿಕ ಬೆಲೆ ರೂ 14,999
ಈ ಫೋನ್ 6.6-ಇಂಚಿನ ಪೂರ್ಣ HD ಪ್ಲಸ್ IPS LCD ಪ್ಯಾನಲ್ ಅನ್ನು ಹೊಂದಿದೆ. 120Hz ರಿಫ್ರೆಶ್ ದರ ಬೆಂಬಲದೊಂದಿಗೆ ಬರುತ್ತದೆ. ಆಂಡ್ರಾಯ್ಡ್ 15 ಆಧಾರಿತ ರಿಯಲ್ ಮಿ UI 5.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್‌ನಲ್ಲಿ 50MP ಪ್ರಾಥಮಿಕ ಕ್ಯಾಮೆರಾ ಸಂವೇದಕವನ್ನು ಒದಗಿಸಲಾಗುತ್ತದೆ. ಅಲ್ಲದೆ, 8MP ಮುಂಭಾಗದ ಕ್ಯಾಮೆರಾ ಸಂವೇದಕವನ್ನು ಒದಗಿಸಲಾಗುವುದು. ಇದು ಸೈಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ನ ಬೆಂಬಲವನ್ನು ಹೊಂದಿದೆ. ರಿಯಲ್ ಮಿ 14x 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಫೋನ್ 45W SUPERVOOC ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.
ಮೋಟೋ ಜಿ64
ಆರಂಭಿಕ ಬೆಲೆ – ರೂ 14,999
ಈ ಫೋನ್ 6.5-ಇಂಚಿನ FHD+ ಡಿಸ್ಪ್ಲೇಯನ್ನು ಹೊಂದಿದ್ದು, ಇದು 120Hz ರಿಫ್ರೆಶ್ ದರ ಬೆಂಬಲದೊಂದಿಗೆ ಬರುತ್ತದೆ. ಅಲ್ಲದೆ, 240Hz ಟಚ್ ಸ್ಯಾಂಪ್ಲಿಂಗ್ ದರ ಲಭ್ಯವಿರುತ್ತದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 7025 ಚಿಪ್‌ಸೆಟ್‌ನೊಂದಿಗೆ ಬರಲಿದೆ. ಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಮೋಟೋ ಜಿ64 3 ವರ್ಷಗಳ ಭದ್ರತಾ ನವೀಕರಣಗಳೊಂದಿಗೆ ಬರುತ್ತದೆ. 8MP ಮುಖ್ಯ ಕ್ಯಾಮೆರಾ ಮತ್ತು 50MP ಹಿಂಭಾಗ ಕ್ಯಾಮೆರಾವನ್ನು ಹೊಂದಿದೆ. ಇದು 33W ಚಾರ್ಜರ್ ಬೆಂಬಲದೊಂದಿಗೆ 6000mAh ಬ್ಯಾಟರಿಯನ್ನು ಹೊಂದಿರುತ್ತದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್ 15
ಆರಂಭಿಕ ಬೆಲೆ – ರೂ 14,999
ಈ ಫೋನ್ 6.5 ಇಂಚಿನ ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿದೆ. 50MP ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರಲಿದೆ. ಸೆಲ್ಫಿಗಳಿಗಾಗಿ ಫೋನ್‌ನಲ್ಲಿ 13MP ಮುಂಭಾಗದ ಕ್ಯಾಮೆರಾ ಲಭ್ಯವಿರುತ್ತದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್ 15 6000mAh ಬ್ಯಾಟರಿ ಬೆಂಬಲದೊಂದಿಗೆ ಬರಲಿದ್ದು, ಇದು 25W ಸೂಪರ್-ಫಾಸ್ಟ್ ಚಾರ್ಜಿಂಗ್‌ನೊಂದಿಗೆ ಬರಲಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಚಿಪ್‌ಸೆಟ್ ಬೆಂಬಲವು ಫೋನ್‌ನಲ್ಲಿ ಲಭ್ಯವಿರುತ್ತದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ