Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟಾರ್​ಲಿಂಕ್ ಇಂಟರ್ನೆಟ್ ಬೇಕೆಂದರೆ ತಿಂಗಳಿಗೆ 5,000 ರೂ ನೀಡಬೇಕಾ? ಉಪಕರಣ ವೆಚ್ಚ ಇನ್ನೂ ದುಬಾರಿ

Approximate cost of Starlink Internet service in India: ಇಲಾನ್ ಮಸ್ಕ್ ಮಾಲಕತ್ವದ ಸ್ಟಾರ್​​ಲಿಂಕ್ ಸೆಟಿಲೈಟ್ ಇಂಟರ್ನೆಟ್ ಸೇವೆ ಭಾರತಕ್ಕೆ ಬರುವುದು ಸನ್ನಿಹಿತವಾಗುತ್ತಿದೆ. ಯಾವುದೋ ಕುಗ್ರಾಮದ ಮೂಲೆಗೆ ಹೋದರೂ ಇದರ ಇಂಟರ್ನೆಟ್ ಸಿಗುತ್ತದೆ. ಆದರೆ, ಸ್ಟಾರ್​ಲಿಂಕ್ ಇಂಟರ್ನೆಟ್ ಬೆಲೆ ಎಷ್ಟಾಗಬಹುದು? ಸದ್ಯ ಭಾರತಕ್ಕೆ ಇದರ ಸಬ್​​ಸ್ಕ್ರಿಪ್ಷನ್ ದರ ನಿಗದಿ ಮಾಡಲಾಗಿಲ್ಲ. ಭೂತಾನ್​ನಲ್ಲಿರಿರುವ ದರ ಗಮನಿಸಿದರೆ ಭಾರತದಲ್ಲಿ ಇದರ ಮಾಸಿಕ ಸಬ್​​ಸ್​ಕ್ರಿಪ್ಷನ್ 5,000 ರೂನಿಂದ ಆರಂಭವಾಗಬಹುದು ಎನ್ನಲಾಗುತ್ತಿದೆ.

ಸ್ಟಾರ್​ಲಿಂಕ್ ಇಂಟರ್ನೆಟ್ ಬೇಕೆಂದರೆ ತಿಂಗಳಿಗೆ 5,000 ರೂ ನೀಡಬೇಕಾ? ಉಪಕರಣ ವೆಚ್ಚ ಇನ್ನೂ ದುಬಾರಿ
ಸೆಟಿಲೈಟ್ ಇಂಟರ್ನೆಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 13, 2025 | 12:43 PM

ನವದೆಹಲಿ, ಮಾರ್ಚ್ 13: ಸ್ಪೇಸ್​ಎಕ್ಸ್ ಸಂಸ್ಥೆಯ ಸ್ಟಾರ್ಲಿಂಕ್ ಸೆಟಿಲೈಟ್ ಇಂಟರ್ನೆಟ್ ಸರ್ವಿಸ್ ಭಾರತದಲ್ಲಿ ಲಭ್ಯವಾಗುತ್ತಿದೆ. ಸ್ವತಂತ್ರವಾಗಿ ಅದು ಸರ್ವಿಸ್ ನೀಡುತ್ತಿದೆ. ಜೊತೆಗೆ, ಏರ್ಟೆಲ್ ಮತ್ತು ರಿಲಾಯನ್ಸ್ ಜಿಯೋ ಜೊತೆಗೂ ಸ್ಟಾರ್ಲಿಂಕ್ ಒಪ್ಪಂದ ಮಾಡಿಕೊಂಡಿದೆ. ಸ್ಟಾರ್​​ಲಿಂಕ್ ಇಂಟರ್ನೆಟ್ ಬಂದರೆ ಭಾರತದ ಜಿಯೋ, ಏರ್ಟೆಲ್ ಪ್ರಾಬಲ್ಯ ನಶಿಸಿದಂತೆ ಎಂದು ಭಯ ಪಟ್ಟವರುಂಟು. ಅದರ ಇಂಟರ್ನೆಟ್ ದರ ಅಷ್ಟೊಂದು ಕಡಿಮೆ ಇರುತ್ತದಾ? ಸ್ಟಾರ್​​ಲಿಂಕ್ ಈಗಾಗಲೇ 30ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯ ಇದೆ. ಅಲ್ಲಿರುವ ದರ ಗಮನಿಸಿದರೆ ಸ್ಟಾರ್​​ಲಿಂಕ್ ಅಗ್ಗದ ಬೆಲೆಗಂತೂ ಸಿಕ್ಕೋದಿಲ್ಲ. ವರ್ಷಗಳಿಂದ ಇರುವ ಇಂಟರ್ನೆಟ್​​ಗಿಂತ ಸ್ಟಾರ್​​ಲಿಂಕ್​​ನದ್ದು ದುಬಾರಿ ಬೆಲೆ ಎನ್ನಲಾಗುತ್ತಿದೆ.

ಭಾರತದಲ್ಲಿ ಸ್ಟಾರ್​​ಲಿಂಕ್ ಇನ್ನೂ ಸೇವೆ ಆರಂಭಿಸಿಲ್ಲ. ಭಾರತ ಸರ್ಕಾರದಿಂದ ಅನುಮತಿ ಪಡೆಯುವುದು ಬಾಕಿ ಇದೆ. ಅನುಮತಿ ಸಿಗುವುದು ಬಹುತೇಕ ಖಚಿತ. ಭಾರತದಲ್ಲಿ ಇದರ ಸಬ್​​ಸ್ಕ್ರಿಪ್ಷನ್ ದರ ಎಷ್ಟಿರಬಹುದು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಆದರೆ, ಈಗಾಗಲೇ ಇದರ ಸರ್ವಿಸ್ ಲಭ್ಯ ಇರುವ 30ಕ್ಕೂ ಹೆಚ್ಚು ದೇಶಗಳಲ್ಲಿರುವ ದರಗಳನ್ನು ಗಮನಿಸಿ ಅಂದಾಜು ಮಾಡಬಹುದು. ಈ ಮೂವತ್ತು ದೇಶಗಳಲ್ಲಿ ಭಾರತದ ನೆರೆಯ ಭೂತಾನ್ ದೇಶವೂ ಇದೆ. ಹೀಗಾಗಿ, ಭೂತಾನ್​ನಲ್ಲಿರುವ ಸ್ಟಾರ್ಲಿಂಕ್ ಸರ್ವಿಸ್​ನ ದರವನ್ನು ಗಮನಿಸಿದರೆ, ಭಾರತದಲ್ಲಿ ಅದು ಯಾವ ದರದಲ್ಲಿ ಸಬ್​​ಸ್ಕ್ರಿಪ್ಷನ್ ನೀಡಬಹುದು ಎಂದು ಅಂದಾಜಿಸಲು ಸಾಧ್ಯವಾಗಬಹುದು.

ಭೂತಾನ್​​ನಲ್ಲಿ ಸ್ಟಾರ್​ಲಿಂಕ್ ದರ ತಿಂಗಳಿಗೆ 3,000 ರೂನಿಂದ 4,200 ರೂ

ಭೂತಾನ್​​ನಲ್ಲಿ ಸ್ಟಾರ್​​ಲಿಂಕ್ ಎರಡು ರೀತಿಯ ಸಬ್​​ಸ್ಕ್ರಿಪ್ಷನ್ ಆಯ್ಕೆ ನೀಡುತ್ತದೆ. ಸ್ಟಾರ್​​ಲಿಂಕ್ ರೆಸಿಡೆನ್ಷಿಯಲ್ ಮತ್ತು ಸ್ಟಾರ್​​ಲಿಂಕ್ ರೆಸಿಡೆನ್ಷಿಯಲ್ ಲೈಟ್ ಎನ್ನುವ ಆಯ್ಕೆಗಳಿವೆ. ರೆಸಿಡೆನ್ಷಿಯಲ್ ಆಯ್ಕೆಯಲ್ಲಿ ಅನ್​ಲಿಮಿಟೆಡ್ ಡಾಟಾ ಮತ್ತು ಗರಿಷ್ಠ ಇಂಟರ್ನೆಟ್ ಸಿಗುತ್ತದೆ. ಲೈಟ್​ನಲ್ಲಿ ಸೀಮಿತ ಡಾಟಾ ಮತ್ತು ಇಂಟರ್ನೆಟ್ ಸ್ಪೀಡ್ ಸಿಗುತ್ತದೆ.

  • ಸ್ಟಾರ್​​ಲಿಂಕ್ ರೆಸಿಡೆನ್ಷಿಯಲ್ ಪ್ಲಾನ್​​ನ ಬೆಲೆ ತಿಂಗಳಿಗೆ 4,200 ಬಿಟಿಎನ್.
  • ಸ್ಟಾರ್​ಲಿಂಕ್ ರೆಸಿಡೆನ್ಷಿಯಲ್ ಲೈಟ್ ಪ್ಲಾನ್​​ನ ಬೆಲೆ ತಿಂಗಳಿಗೆ 3,000 ಬಿಟಿಎನ್.

ಇದನ್ನೂ ಓದಿ: ಏರ್ಟೆಲ್ ಆಯ್ತು, ಈಗ ಜಿಯೋ ಕೂಡ ಸ್ಟಾರ್​ಲಿಂಕ್ ಜೊತೆ ಒಪ್ಪಂದ; ಏನಿದು ಸ್ಟಾರ್​​ಲಿಂಕ್ ಇಂಟರ್ನೆಟ್?

ಇಲ್ಲಿ ಬಿಟಿಎನ್ ಎನ್ನುವುದು ಭೂತಾನ್ ಕರೆನ್ಸಿ ಭೂತಾನೀಸ್ ನಗುಲ್​​ಟ್ರುಮ್. ಭಾರತದ ರುಪಾಯಿಗೂ ಈ ಬಿಟಿಎನ್​ಗೂ ಮೌಲ್ಯದಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲ. ಹೀಗಾಗಿ, ರೆಸಿಡೆನ್ಷಿಯಲ್ ಪ್ಲಾನ್ ಬೆಲೆ ತಿಂಗಳಿಗೆ 4,200 ರೂ, ಹಾಗೂ ರೆಸಿಡೆನ್ಷಿಯಲ್ ಲೈಟ್ ಪ್ಲಾನ್ ಬೆಲೆ 3,000 ರೂ ಆಗುತ್ತದೆ.

ಸ್ಟಾರ್​​ಲಿಂಕ್ ಹಾರ್ಡ್​​ವೇರ್ ಬಲು ದುಬಾರಿ

ಸ್ಟಾರ್​ಲಿಂಕ್​​ನ ಸೆಟಿಲೈಟ್ ಇಂಟರ್ನೆಟ್ ಸೇವೆ ಪಡೆಯಲು ವಿಶೇಷ ಉಪಕರಣ ಖರೀದಿಸಬೇಕು. ಎರಡು ರೀತಿಯ ಹಾರ್ಡ್​​ವೇರ್ ಲಭ್ಯ ಇವೆ. ಸ್ಟಾರ್​​ಲಿಂಕ್ ಮಿನಿ ಮತ್ತು ಸ್ಟಾರ್​​ಲಿಂಕ್ ಸ್ಟ್ಯಾಂಡರ್ಡ್. ಸ್ಟಾರ್​​ಲಿಂಕ್ ಮಿನಿ ಉಪಕರಣದ ಬೆಲೆ ಅಂದಾಜು 17,000 ರೂ ಆಗುತ್ತದೆ. ಸ್ಟಾರ್​​ಲಿಂಕ್ ಸ್ಟ್ಯಾಂಡರ್ಡ್ ಉಪಕರಣದ ಬೆಲೆ ಸುಮಾರು 33,000 ರೂ ಆಗಬಹುದು.

ಇದನ್ನೂ ಓದಿ: ನಿನ್ನೆ ಪ್ರಪಾತಕ್ಕೆ ಬಿದ್ದಿದ್ದ ಇಂಡಸ್​​ಇಂಡ್ ಬ್ಯಾಂಕ್ ಷೇರುಬೆಲೆ ಇವತ್ತು ಸಖತ್ ಏರಿಕೆ; ಬಿದ್ದಿದ್ಯಾಕೆ, ಏಳುತ್ತಿರುವುದ್ಯಾಕೆ?

ಭಾರತದಲ್ಲಿ 5,000ರಿಂದ 7,000 ರೂ ಸಬ್​​ಸ್ಕ್ರಿಪ್ಷನ್?

ಈ ಮೇಲಿನವು ಭೂತಾನ್​​ನಲ್ಲಿ ಇರುವ ಸ್ಟಾರ್​​ಲಿಂಕ್ ಇಂಟರ್ನೆಟ್ ಸೇವೆಯ ದರವಾಗಿದೆ. ಬೇರೆ ಕೆಲ ಪಶ್ಚಿಮ ದೇಶಗಳಲ್ಲಿ ಇದರ ಬೆಲೆ ಇನ್ನೂ ಹೆಚ್ಚಿದೆ. ಭಾರತದಲ್ಲಿ ಸ್ಟಾರ್​​ಲಿಂಕ್ ಬಂದಲ್ಲಿ ಭೂತಾನ್​ನಲ್ಲಿರುವುದಕ್ಕಿಂತ ತುಸು ಹೆಚ್ಚಿನ ಬೆಲೆ ಇರುವ ಸಾಧ್ಯತೆ ಇದೆ ಎಂದು ಕೆಲ ವರದಿಗಳು ಹೇಳುತ್ತಿವೆ.

ಈ ವರದಿಗಳ ಪ್ರಕಾರ, ಭಾರತದಲ್ಲಿ ಸ್ಟಾರ್​​ಲಿಂಕ್ ಇಂಟರ್ನೆಟ್ ಸರ್ವಿಸ್​ನ ಸಬ್​​ಸ್ಕ್ರಿಪ್ಷನ್ ತಿಂಗಳಿಗೆ 5,000 ರೂನಿಂದ 7,000 ರೂಗೆ ಲಭ್ಯ ಇರಬಹುದು. ಇದರ ಹಾರ್ಡ್​​ವೇರ್ ಬೆಲೆ 20,000 ರೂ ಮತ್ತು 38,000 ರೂ ಇರಬಹುದು ಎಂದು ಹೇಳಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ