Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೆಬ್ರುವರಿಯಲ್ಲಿ ಹಣದುಬ್ಬರ ಶೇ 3.61ಕ್ಕೆ ಇಳಿಕೆ; ನಿರೀಕ್ಷೆಗಿಂತ ಕೆಳಗಿಳಿದ ಬೆಲೆ ಏರಿಕೆ ದರ

Retail inflation in February 2025: ರೀಟೇಲ್ ಹಣದುಬ್ಬರ ಫೆಬ್ರುವರಿ ತಿಂಗಳಲ್ಲಿ ಶೇ. 3.61ಕ್ಕೆ ಇಳಿದಿದೆ ಎಂದು ಸರ್ಕಾರ ಬುಧವಾರ ಬಿಡುಗಡೆ ಮಾಡಿದ ಅಂಕಿ ಅಂಶದಿಂದ ತಿಳಿದುಬಂದಿದೆ. ಇದು ಕಳೆದ ಏಳು ತಿಂಗಳಲ್ಲೇ ಕನಿಷ್ಠ ಹಣದುಬ್ಬರ ದರವಾಗಿದೆ. 2024ರ ಮೇ ತಿಂಗಳ ಬಳಿಕ ಕಂಡ ಕನಿಷ್ಠ ಬೆಲೆ ಏರಿಕೆ ದರ. ಆರ್​​ಬಿಐ ಮತ್ತು ವಿವಿಧ ಆರ್ಥಿಕ ತಜ್ಞರು ನಿರೀಕ್ಷಿಸಿಸುದಕ್ಕಿಂತಲೂ ಕಡಿಮೆ ಹಣದುಬ್ಬರ ದರ ಇದಾಗಿದೆ.

ಫೆಬ್ರುವರಿಯಲ್ಲಿ ಹಣದುಬ್ಬರ ಶೇ 3.61ಕ್ಕೆ ಇಳಿಕೆ; ನಿರೀಕ್ಷೆಗಿಂತ ಕೆಳಗಿಳಿದ ಬೆಲೆ ಏರಿಕೆ ದರ
ಹಣದುಬ್ಬರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 12, 2025 | 5:50 PM

ನವದೆಹಲಿ, ಮಾರ್ಚ್ 12: ಭಾರತದ ಗ್ರಾಹಕ ಬೆಲೆ ಅನುಸೂಚಿ ಆಧಾರಿತ ರೀಟೇಲ್ ಹಣದುಬ್ಬರ (Retail Inflation) ಫೆಬ್ರುವರಿಯಲ್ಲಿ ಶೇ. 3.61ರಷ್ಟಿದೆ. ಇದು ಸರ್ಕಾರ ಹಾಗೂ ವಿವಿಧ ಆರ್ಥಿಕ ತಜ್ಞರು ಮಾಡಿದ್ದ ನಿರೀಕ್ಷೆಗಿಂತಲೂ ಕಡಿಮೆ ದರವಾಗಿದೆ. ಹಿಂದಿನ ತಿಂಗಳಾದ ಜನವರಿಯಲ್ಲಿ ಹಣದುಬ್ಬರ ಶೇ. 4.31ರಷ್ಟಿತ್ತು. ಹಿಂದಿನ ವರ್ಷದ ಫೆಬ್ರುವರಿಯಲ್ಲಿ ಹಣದುಬ್ಬರ ದರ ಶೇ. 5.09 ಇತ್ತು. ಅದಕ್ಕೆ ಹೋಲಿಸಿದರೆ ಈ ಫೆಬ್ರುವರಿಯಲ್ಲಿ ಹಣದುಬ್ಬರ ಸಾಕಷ್ಟು ನಿಯಂತ್ರಣಕ್ಕೆ ಬಂದಿದೆ. ಸರ್ಕಾರ ಇಂದು ಬುಧವಾರ ಈ ದತ್ತಾಂಶ ಬಿಡುಗಡೆ ಮಾಡಿದೆ. ಶೇ. 3.61ರ ಹಣದುಬ್ಬರವು ಕಳೆದ ಏಳು ತಿಂಗಳಲ್ಲೇ ಕನಿಷ್ಠ ದರ ಎನಿಸಿದೆ.

ಕಳೆದ ಕೆಲ ದಿನಗಳ ಹಿಂದೆ ನಡೆದ ವಿವಿಧ ಪೋಲ್​​ಗಳಲ್ಲಿ ಹಣದುಬ್ಬರ ಫೆಬ್​ರುವರಿಯಲ್ಲಿ ಶೇ. 3.50ರಿಂದ ಶೇ. 4.50ರವರೆಗೂ ಇರಬಹುದು ಎನ್ನುವ ಅಭಿಪ್ರಾಯ ಬಂದಿತ್ತು. ರಾಯ್ಟರ್ಸ್ ಪೋಲ್​​ನಲ್ಲಿ ಆರ್ಥಿಕ ತಜ್ಞರ ಸರಾಸರಿ ಅಭಿಪ್ರಾಯ ಶೇ. 3.98ರಷ್ಟು ಹಣದುಬ್ಬರ ಇರಬಹುದು ಎಂದಿತ್ತು. ಅದೇ ಸಿಎನ್​​ಬಿಸಿ ನಡೆಸಿದ ಸಮೀಕ್ಷೆಯಲ್ಲಿ ಹಣದುಬ್ಬರ ಶೇ. 3.85ರಷ್ಟಿರಬಹುದು ಎನ್ನುವ ಅಂದಾಜು ಸಿಕ್ಕಿತ್ತು.

ಇದನ್ನೂ ಓದಿ: 1929ರಲ್ಲಿ ಷೇರುಪೇಟೆ ಮಹಾಕುಸಿತದ ಪರಿಣಾಮ ಭೀಕರ; ಈ ಬಾರಿ ಅದನ್ನೂ ಮೀರಿಸಿದ ಕುಸಿತವಾ?

ಇದನ್ನೂ ಓದಿ
Image
ಇಂಡಸ್​​ಇಂಡ್ ಬ್ಯಾಂಕ್​​ನ ವಿವಾದವೇನು?
Image
ಪಿಎಂ ಸೂರ್ಯಘರ್; 10 ಲಕ್ಷ ಸೋಲಾರ್ ಘಟಕಗಳ ಸ್ಥಾಪನೆ
Image
ಭಾರತಕ್ಕೆ ಮರಳುತ್ತಿರುವ 70ಕ್ಕೂ ಹೆಚ್ಚು ಸ್ಟಾರ್ಟಪ್​​ಗಳು
Image
ಹೆಚ್ಚು ಸಾಲ ಹೊಂದಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕದ ಸ್ಥಾನ?

ಆಹಾರವಸ್ತುಗಳ ಬೆಲೆಗಳು ಗಣನೀಯವಾಗಿ ಇಳಿಕೆ ಆಗಿರುವುದು ಫೆಬ್ರುವರಿಯಲ್ಲಿ ಒಟ್ಟಾರೆ ರೀಟೇಲ್ ಹಣದುಬ್ಬರ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಜನವರಿಯಲ್ಲಿ ಶೇ 6.02ರಷ್ಟಿದ್ದ ಆಹಾರ ಹಣದುಬ್ಬರ ಫೆಬ್ರುವರಿಯಲ್ಲಿ ಶೇ. 3.75ಕ್ಕೆ ಇಳಿದಿದೆ. ತರಕಾರಿಗಳ ಬೆಲೆಯಂತೂ ಗಣನೀಯವಾಗಿ ತಗ್ಗಿದೆ. ಜನವರಿಯಲ್ಲಿ ಶೇ 11.35ರಷ್ಟು ಹೆಚ್ಚಾಗಿದ್ದ ತರಕಾರಿ ಬೆಲೆ ಈಗ ಶೇ. 1.07ಕ್ಕೆ ಇಳಿದಿದೆ.

ನಗರ ಭಾಗದಲ್ಲಿ ಹಣದುಬ್ಬರವು ಶೇ 3.87ರಷ್ಟು ಇದ್ದದ್ದು ಶೇ. 3.32ಕ್ಕೆ ಇಳಿದಿದೆ. ಗ್ರಾಮೀಣ ಭಾಗದ ಹಣದುಬ್ಬರವು ಶೇ. 4.59ರಿಂದ ಶೇ. 3.79ಕ್ಕೆ ಇಳಿದಿದೆ.

ಇದನ್ನೂ ಓದಿ: ಪಿಎಂ ಸೂರ್ಯಘರ್: ಕೇವಲ 13 ತಿಂಗಳಲ್ಲಿ 10 ಲಕ್ಷ ಮೈಲಿಗಲ್ಲು ಮುಟ್ಟಿದ ರೂಫ್​​ಟಾಪ್ ಸೋಲಾರ್ ಸ್ಕೀಮ್

ಫೆಬ್ರುವರಿಯಲ್ಲಿ ಹಣದುಬ್ಬರ ಇಳಿಕೆ ಆಗಬಹುದು ಎಂದು ಆರ್​ಬಿಐ ನಿರೀಕ್ಷಿಸಿತ್ತು. ಆದರೆ, ಇಷ್ಟೊಂದು ಕಡಿಮೆ ಆಗುವ ನಿರೀಕ್ಷೆ ಇರಲಿಲ್ಲ. ಮುಂಬರುವ ಹಣಕಾಸು ವರ್ಷದಲ್ಲಿ ಹಣದುಬ್ಬರ ಕೆಳಮಟ್ಟದಲ್ಲೇ ಇರಬಹುದು ಎಂದೂ ಆರ್​ಬಿಐ ನಿರೀಕ್ಷಿಸಿದೆ. 2025-26ರಲ್ಲಿ ಹಣದುಬ್ಬರ ಶೇ. 4.2ರಷ್ಟಿರಬಹುದು ಎಂಬುದು ಅದರ ಅಂದಾಜು. ಒಟ್ಟಾರೆ ಹಣದುಬ್ಬರ ಶೇ. 4ರಷ್ಟು ಇರಬೇಕು ಎಂದು ಗುರಿ ನಿಗದಿ ಮಾಡಿರುವ ಆರ್​​ಬಿಐ, ತಾಳಿಕೆ ಮಿತಿಯಾಗಿ ಶೇ 2ರಿಂದ 6ರ ದರವನ್ನು ನಿಗದಿ ಮಾಡಿದೆ. ಅಂದರೆ, ಹಣದುಬ್ಬರವು ಈ ವ್ಯಾಪ್ತಿಯೊಳಗೇ ಇರುವಂತೆ ಹೇಗಾದರೂ ಮಾಡಿ ನೋಡಿಕೊಳ್ಳಬೇಕು ಎನ್ನುವುದು ಆರ್​ಬಿಐನ ಟಾರ್ಗೆಟ್.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯುವತಿಯರೊಂದಿಗೆ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಕುಣಿದ ಗೃಹಿಣಿಯರು
ಯುವತಿಯರೊಂದಿಗೆ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಕುಣಿದ ಗೃಹಿಣಿಯರು
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ
‘ಅಪ್ಪು ಹವಾ’: ಸ್ಟಾರ್ ನಟರ ಹೊಸ ಸಿನಿಮಾಕ್ಕೂ ಸಿಗಲ್ಲ ಇಂಥಾ ಸ್ವಾಗತ
‘ಅಪ್ಪು ಹವಾ’: ಸ್ಟಾರ್ ನಟರ ಹೊಸ ಸಿನಿಮಾಕ್ಕೂ ಸಿಗಲ್ಲ ಇಂಥಾ ಸ್ವಾಗತ
ಅಧ್ಯಕ್ಷರು ಊಟಕ್ಕೆ ಕರೆದರೆ ಹೋಗದಿರಲಾಗುತ್ತದೆಯೇ? ಸತೀಶ್ ಜಾರಕಿಹೊಳಿ
ಅಧ್ಯಕ್ಷರು ಊಟಕ್ಕೆ ಕರೆದರೆ ಹೋಗದಿರಲಾಗುತ್ತದೆಯೇ? ಸತೀಶ್ ಜಾರಕಿಹೊಳಿ
ಬೆಂಗಳೂರಿನ ರೈಲಿನೊಳಗೆ ಯುವಕನಿಂದ ಮೂತ್ರ ವಿಸರ್ಜನೆ; ವಿಡಿಯೋ ವೈರಲ್
ಬೆಂಗಳೂರಿನ ರೈಲಿನೊಳಗೆ ಯುವಕನಿಂದ ಮೂತ್ರ ವಿಸರ್ಜನೆ; ವಿಡಿಯೋ ವೈರಲ್
ಪ್ರತಿದಿನ ಮಾಧ್ಯಮಗಳೊಂದಿಗೆ ಮಾತಾಡುವ ರೇಣುಕಾಚಾರ್ಯಗೆ ವಿಷಯಗಳು ಸಿಗುತ್ತಿಲ್ಲ
ಪ್ರತಿದಿನ ಮಾಧ್ಯಮಗಳೊಂದಿಗೆ ಮಾತಾಡುವ ರೇಣುಕಾಚಾರ್ಯಗೆ ವಿಷಯಗಳು ಸಿಗುತ್ತಿಲ್ಲ