Sign In

By signing in or creating an account, you agree with Associated Broadcasting Company's Terms & Conditions and Privacy Policy.

IndusInd Crisis: ನಿನ್ನೆ ಪ್ರಪಾತಕ್ಕೆ ಬಿದ್ದಿದ್ದ ಇಂಡಸ್​​ಇಂಡ್ ಬ್ಯಾಂಕ್ ಷೇರುಬೆಲೆ ಇವತ್ತು ಸಖತ್ ಏರಿಕೆ; ಬಿದ್ದಿದ್ಯಾಕೆ, ಏಳುತ್ತಿರುವುದ್ಯಾಕೆ?

IndusInd bank crisis explained: ಇಂಡಸ್​ಇಂಡ್ ಬ್ಯಾಂಕ್​​ನ ಷೇರುಬೆಲೆ ನಿನ್ನೆ ಶೇ. 27ರಷ್ಟು ನಷ್ಟ ಕಂಡಿತು. ಇವತ್ತು ಶೇ. 5ರಷ್ಟು ಮೇಲೇರಿದೆ. ಈ ಬ್ಯಾಂಕ್ ತನ್ನ ಡಿರೈವೇಟಿವ್ಸ್ ಪೋರ್ಟ್​​ಫೋಲಿಯೋದಲ್ಲಿ ತಪ್ಪು ಲೆಕ್ಕಾಚಾರ ಅಥವಾ ತಪ್ಪು ಅಂದಾಜು ಮಾಡಲಾಗಿರುವುದನ್ನು ಒಪ್ಪಿಕೊಂಡಿದೆ. ಈ ತಪ್ಪು ಎಣಿಕೆಯಿಂದಾಗಿ ಬ್ಯಾಂಕ್​ನ ಲಾಭದಲ್ಲಿ ಕತ್ತರಿ ಬೀಳುವ ಸಾಧ್ಯತೆ ಇದೆ. ಇದಕ್ಕಿಂತ ಹೆಚ್ಚಾಗಿ ಬ್ಯಾಂಕು ಈ ವಿಚಾರವನ್ನು ತುಂಬಾ ದಿನ ಮುಚ್ಚಿಟ್ಟುಕೊಂಡಿದ್ದು ಹೂಡಿಕೆದಾರರಿಗೆ ಇರಿಸುವು ಮುರುಸು ತಂದಿರಬಹುದು.

IndusInd Crisis: ನಿನ್ನೆ ಪ್ರಪಾತಕ್ಕೆ ಬಿದ್ದಿದ್ದ ಇಂಡಸ್​​ಇಂಡ್ ಬ್ಯಾಂಕ್ ಷೇರುಬೆಲೆ ಇವತ್ತು ಸಖತ್ ಏರಿಕೆ; ಬಿದ್ದಿದ್ಯಾಕೆ, ಏಳುತ್ತಿರುವುದ್ಯಾಕೆ?
ಇಂಡಸ್​​ಇಂಡ್ ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 12, 2025 | 3:04 PM

ನವದೆಹಲಿ, ಮಾರ್ಚ್ 12: ಕಳೆದ ಒಂದೆರಡು ವರ್ಷದಿಂದ ಭಾರತದ ಷೇರು ಮಾರುಕಟ್ಟೆಯ ಭರ್ಜರಿ ಓಟದಲ್ಲಿ ಮುಂಚೂಣಿಯಲ್ಲಿದ್ದ ಬ್ಯಾಂಕಿಂಗ್ ವಲಯ ಈ ವರ್ಷ ಸಾಕಷ್ಟು ತೊಡಕುಗಳನ್ನು ಎದುರಿಸುತ್ತಿರುವಂತೆ ತೋರುತ್ತಿದೆ. ಷೇರುಮಾರುಕಟ್ಟೆ ಕುಸಿತದಲ್ಲಿ (stock market crash) ಬ್ಯಾಂಕಿಂಗ್ ಸೆಕ್ಟರ್ ಕುಸಿತವೂ ಗಮನಾರ್ಹವಾಗಿದೆ. ಈ ಮಧ್ಯೆ ಇಂಡಸ್​​ಇಂಡ್ ಬ್ಯಾಂಕ್ ನಿನ್ನೆ ಮಂಗಳವಾರ ಒಂದೇ ದಿನ ಶೇ. 27ರಷ್ಟು ಕುಸಿತ ಕಂಡಿತು. ಅದರ ಇತಿಹಾಸದಲ್ಲೇ ಅದು ಕಂಡ ಅತಿ ಹೀನಾಯ ಕುಸಿತ. ಕಳೆದ ಆರು ತಿಂಗಳಲ್ಲಿ ಅದರ ಷೇರುಮೌಲ್ಯ ಅರ್ಧದಷ್ಟು ಕುಸಿದು ಹೋಗಿತ್ತು. ನಿನ್ನೆ ಡಿಢೀರ್ ಕುಸಿತ ಕಂಡಿದ್ದ ಇಂಡಸ್​​​ಇಂಡ್ ಬ್ಯಾಂಕ್ (IndusInd Bank) ಷೇರು ಇವತ್ತು ಅಷ್ಟೇ ವೇಗವಾಗಿ ತಿರುಗಿ ನಿಂತಿದೆ. ಶೇ. 5-6ರಷ್ಟು ಏರಿಕೆ ಕಂಡಿದೆ. ಮಧ್ಯಾಹ್ನ 2:30ರ ವೇಳೆ ಇದರ ಷೇರುಬೆಲೆ 690 ರೂ ಆಸುಪಾಸಿನಲ್ಲಿತ್ತು.

ಇಂಡಸ್​​ಇಂಡ್ ಬ್ಯಾಂಕ್ ಷೇರು ಕುಸಿದಿದ್ದು ಯಾಕೆ? ಡಿರೈವೇಟಿವ್ಸ್ ಗೊಂದಲ…

ತನ್ನ ಡಿರೈವೇಟಿವ್ಸ್ ಪೋರ್ಟ್​ಫೋಲಿಯೋದಲ್ಲಿ ಲೆಕ್ಕಾಚಾರ ತುಸು ವ್ಯತ್ಯಾಸವಾಗಿ ಹೋಗಿದೆ. ಹಿಂದಿನ ಫಾರೆಕ್ಸ್ ಟ್ರಾನ್ಸಾಕ್ಷನ್​​ಗಳಿಗೆ ಹೆಡ್ಜಿಂಗ್ ಮಾಡಲು ಎಷ್ಟು ವೆಚ್ಚವಾಗಬಹುದು ಎಂದು ಅಂದಾಜು ಮಾಡುವಲ್ಲಿ ವ್ಯತ್ಯಾಸವಾಗಿದೆ. ಅಂದರೆ, ಕಡಿಮೆ ಹೆಡ್ಜಿಂಗ್ ವೆಚ್ಚವನ್ನು ಅಕೌಂಟ್​​ಗಳಲ್ಲಿ ತೋರಿಸಲಾಗಿದೆ. ಇದರಿಂದ ಇಂಡಸ್​​​ಇಂಡ್ ಬ್ಯಾಂಕ್​ನ ಮೌಲ್ಯ ಶೇ. 2.35ರಷ್ಟು ಕಡಿಮೆ ಆಗಬಹುದು. ಅಂದರೆ, 1,600ರಿಂದ 2,000 ಕೋಟಿ ರೂನಷ್ಟು ನೆಟ್ ವರ್ತ್ ಕಡಿಮೆ ಆಗಬಹುದು ಎಂಬುದನ್ನು ಸ್ವತಃ ಬ್ಯಾಂಕ್ ಒಪ್ಪಿಕೊಂಡಿತು.

ಇದನ್ನೂ ಓದಿ: ಪಿಎಂ ಸೂರ್ಯಘರ್: ಕೇವಲ 13 ತಿಂಗಳಲ್ಲಿ 10 ಲಕ್ಷ ಮೈಲಿಗಲ್ಲು ಮುಟ್ಟಿದ ರೂಫ್​​ಟಾಪ್ ಸೋಲಾರ್ ಸ್ಕೀಮ್

ಇದನ್ನೂ ಓದಿ
Image
ಸ್ಟಾರ್​​ಲಿಂಕ್ ಜೊತೆ ಏರ್ಟೆಲ್, ಜಿಯೋ ಒಪ್ಪಂದ
Image
ಡಿವಿಡೆಂಡ್ ಯೀಲ್ಡ್ ಮ್ಯೂಚುವಲ್ ಫಂಡ್​​ಗಳ ಸಾಧಕ-ಬಾಧಕಗಳು
Image
ಲೋನ್ ಆ್ಯಪ್ ಗಾಳಕ್ಕೆ ಬಿದ್ದಾಗ ಏನು ಮಾಡಬೇಕು?
Image
ಏರ್ಪೋರ್ಟ್​​ನಲ್ಲಿ 10 ರೂಗೆ ಚಹಾ ಮಾರುವ ಉಡಾನ್ ಕೆಫೆ

ಆರ್​ಬಿಐ ನಿರ್ದೇಶನದ ಮೇರೆಗೆ ಪರಿಶೀಲನೆ ನಡೆಸಿದಾಗ 2024ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಈ ತಪ್ಪು ಲೆಕ್ಕಾಚಾರಗಳು ನಡೆದಿರುವುದು ತಿಳಿದುಬಂದಿವೆ. ಮಾರ್ಚ್ 10, ಸೋಮವಾರ ಇಂಡಸ್​ಇಂಡ್ ಬ್ಯಾಂಕ್ ತನ್ನ ಎಕ್ಸ್​​ಚೇಂಜ್ ಫೈಲಿಂಗ್​​ನ್ಲಲಿ ಈ ಮಾಹಿತಿಯನ್ನು ಪ್ರಕಟಿಸಿತು.

ಇಂಡಸ್​ಇಂಡ್ ಬ್ಯಾಂಕ್​ನ ಷೇರು ಮಾರ್ಚ್ 5ರಿಂದಲೇ ಕುಸಿಯಲು ಆರಂಭಿಸಿತು. ಯಾವಾಗ ಈ ಬ್ಯಾಂಕು ತನ್ನ ಡಿರೈವೇಟಿವ್ಸ್​​ನ ತಪ್ಪು ಲೆಕ್ಕಾಚಾರ ಮಾಡಿರುವುದನ್ನು ಒಪ್ಪಿಕೊಂಡಿತೋ, ಹೂಡಿಕೆದಾರರ ಜಂಘಾಬಲವೇ ಉಡುಗಿ ಹೋದಂತಾಗಿತ್ತು. ಮಾರ್ಚ್ 11, ನಿನ್ನೆ ಮಂಗಳವಾರ ಶೇ. 27ರಷ್ಟು ಷೇರುಕುಸಿತವಾಯಿತು. ಹಿಂದೆಯೇ ಈ ದೋಷಗಳು ಆಗಿದ್ದು ಗೊತ್ತಾದರೂ ಇಷ್ಟು ದಿನ ಮುಚ್ಚಿಟ್ಟಿದ್ದು ಯಾಕೆ ಎಂಬುದು ಹೂಡಿಕೆದಾರರ ಪ್ರಶ್ನೆಯಾಗಿದ್ದಿರಬಹುದು.

ಇದನ್ನೂ ಓದಿ: ಏರ್ಟೆಲ್ ಆಯ್ತು, ಈಗ ಜಿಯೋ ಕೂಡ ಸ್ಟಾರ್​ಲಿಂಕ್ ಜೊತೆ ಒಪ್ಪಂದ; ಏನಿದು ಸ್ಟಾರ್​​ಲಿಂಕ್ ಇಂಟರ್ನೆಟ್?

ಇವತ್ತು ಇಂಡಸ್​​ಇಂಡ್ ಬ್ಯಾಂಕ್ ಷೇರು ಚೇತರಿಸಿಕೊಂಡಿದ್ದು ಯಾಕೆ?

ಇಂಡಸ್​​ಇಂಡ್ ಬ್ಯಾಂಕ್ ಹಿಂದೂಜಾ ಗ್ರೂಪ್ ಕಂಪನಿಗೆ ಸೇರಿದ ಬ್ಯಾಂಕು. ಬ್ಯಾಂಕ್​​ನ ಹಣಕಾಸು ಪರಿಸ್ಥಿತಿ ಉತ್ತಮವಾಗಿದೆ. ಬ್ಯಾಂಕಿಗೆ ಎಷ್ಟೇ ಬಂಡವಾಳದ ಅಗತ್ಯಬಿದ್ದರೂ ತಾವು ವ್ಯವಸ್ಥೆ ಮಾಡುವುದಾಗಿ ಮಾಲೀಕರಾದ ಅಶೋಕ್ ಹಿಂದೂಜಾ ನಿನ್ನೆ ಸಂಜೆ ಭರವಸೆ ನೀಡಿದ್ದರು. ಇದು ಹೂಡಿಕೆದಾರರ ವಿಶ್ವಾಸ ಮರಳಿ ಸಿಗುವಂತೆ ಮಾಡಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:50 pm, Wed, 12 March 25

ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ಹೋರಿ ಹಬ್ಬ ಅವಳಿಗೆ ಪಂಚಪ್ರಾಣ: ಕೊಲೆಯಾದ ಸ್ವಾತಿ ನೆನೆದು ಗೆಳತಿ ಕಣ್ಣೀರು
ಹೋರಿ ಹಬ್ಬ ಅವಳಿಗೆ ಪಂಚಪ್ರಾಣ: ಕೊಲೆಯಾದ ಸ್ವಾತಿ ನೆನೆದು ಗೆಳತಿ ಕಣ್ಣೀರು
ಚಕ್ರಗಳನ್ನು ಕದಿಯಲು ಕಳ್ಳರು ಬಂದಿದ್ದು ಇನ್ನೋವಾ ಕಾರಲ್ಲಂತೆ!
ಚಕ್ರಗಳನ್ನು ಕದಿಯಲು ಕಳ್ಳರು ಬಂದಿದ್ದು ಇನ್ನೋವಾ ಕಾರಲ್ಲಂತೆ!
ಅಯ್ಯೋ ಕರ್ಮವೇ..ನಿಂತ ಕಾರಿನ ನಾಲ್ಕು ಟೈರ್ ಬಿಚ್ಚಿಕೊಂಡು ಹೋದ ಖದೀಮರು!
ಅಯ್ಯೋ ಕರ್ಮವೇ..ನಿಂತ ಕಾರಿನ ನಾಲ್ಕು ಟೈರ್ ಬಿಚ್ಚಿಕೊಂಡು ಹೋದ ಖದೀಮರು!
ಪುನೀತ್ ಸಮಾಧಿಗೆ ಶಿವಣ್ಣ-ಗೀತಕ್ಕ ಭೇಟಿ; ಭಾವುಕರಾದ ದಂಪತಿ
ಪುನೀತ್ ಸಮಾಧಿಗೆ ಶಿವಣ್ಣ-ಗೀತಕ್ಕ ಭೇಟಿ; ಭಾವುಕರಾದ ದಂಪತಿ
ಯುವ ಪದಾಧಿಕಾರಿಗಳಿಗೆ ಶಿಸ್ತಿನ ಮಹತ್ವ ಬೋಧಿಸಿದ ಶಿವಕುಮಾರ್
ಯುವ ಪದಾಧಿಕಾರಿಗಳಿಗೆ ಶಿಸ್ತಿನ ಮಹತ್ವ ಬೋಧಿಸಿದ ಶಿವಕುಮಾರ್