Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಲಭ ಸಾಲದ ಆಸೆಗೆ ಬಿದ್ದು ನಕಲಿ ಲೋನ್ ಆ್ಯಪ್ ಜಾಲಕ್ಕೆ ಬೀಳದಿರಿ; ಈ ಅಂಶಗಳು ತಿಳಿದಿರಲಿ

Cyber crime portal: ಯಾವುದೇ ದಾಖಲೆ ಇಲ್ಲದೇ ನಿಮಗೆ ತ್ವರಿತವಾಗಿ ಸಾಲ ನೀಡುತ್ತೇವೆಂದು ಆಕರ್ಷಿಸಿ ನಿಮ್ಮನ್ನು ವಂಚಿಸುವ ಜಾಲ ವ್ಯಾಪಕವಾಗಿದೆ. ನಕಲಿ ಲೋನ್ ಆ್ಯಪ್​​ಗಳ ಕಾಟ ವಿಪರೀತವಾಗಿದೆ. ಹಲವೆಡೆ ಜನರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ. ಮೊಬೈಲ್​​ನಲ್ಲಿರುವ ನಿಮ್ಮ ತೀರಾ ಖಾಸಗಿ ಮಾಹಿತಿ ಕದ್ದು ಬ್ಲ್ಯಾಕ್​ಮೇಲ್ ಮಾಡಬಹುದು ಈ ದುರುಳರು. ಇವರಿಂದ ದೂರ ಇರಲು ಏನು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬಹುದು, ಇಲ್ಲಿದೆ ಡೀಟೇಲ್ಸ್

ಸುಲಭ ಸಾಲದ ಆಸೆಗೆ ಬಿದ್ದು ನಕಲಿ ಲೋನ್ ಆ್ಯಪ್ ಜಾಲಕ್ಕೆ ಬೀಳದಿರಿ; ಈ ಅಂಶಗಳು ತಿಳಿದಿರಲಿ
ನಕಲಿ ಲೋನ್ ಆ್ಯಪ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 11, 2025 | 6:51 PM

Finding out fake loan apps: ಇವತ್ತಿನ ಡಿಜಿಟಲ್ ಯುಗದಲ್ಲಿ ಹೆಚ್ಚಿನ ಚಟುವಟಿಕೆ ಆನ್‌ಲೈನ್​ನಲ್ಲೇ ಆಗುತ್ತದೆ. ಈ ಡಿಜಿಟಲೀಕರಣವು ಹಲವು ಪ್ರಯೋಜನಗಳನ್ನು ಹೊಂದಿರುವುದರ ಜೊತೆಗೆ ಕೆಲವು ಅಪಾಯಗಳನ್ನು ಸಹ ಹೊಂದಿದೆ. ಭೌತಿಕ ಜಗತ್ತಿನಲ್ಲಿ ಕಳ್ಳಕಾಕರ ಕಾಟ ಇರುವಂತೆ, ಸೈಬರ್ ಜಗತ್ತಿನಲ್ಲೂ ವಂಚಕರು, ಕಳ್ಳರೂ ಸೃಷ್ಟಿಯಾಗಿದ್ದಾರೆ. ಆನ್​ಲೈನ್ ಅಮಾಯಕರನ್ನು ಹುಡುಕಿ, ಬಣ್ಣ ಬಣ್ಣದ ಆಮಿಷಗಳನ್ನು ಒಡ್ಡಿ ವಂಚಿಸುವುದು ಇವರ ಕಾಯಕ. ಅದೆಷ್ಟೋ ಜನರು ತಮ್ಮ ಜೀವಮಾನದ ಸೇವಿಂಗ್ಸ್ ಅನ್ನು ಕಳೆದುಕೊಂಡಿದ್ದಾರೆ. ಈ ಸೈಬರ್ ಕ್ರಿಮಿನಲ್​​​ಗಳು ವಂಚಿಸಲು ಉಪಯೋಗಿಸುವ ಪ್ರಮುಖ ಮಾರ್ಗಗಳಲ್ಲಿ ಲೋನ್ ಆ್ಯಪ್ ಕೂಡ ಒಂದು. ಸಾಲ ನೀಡುತ್ತೇವೆ ಎಂದು ಹೇಳಿ ದೊಡ್ಡ ಖೆಡ್ಡಾಗೆ ಕೆಡವುತ್ತಾರೆ ಈ ಅಪರಾಧಿಗಳು.

ಒಂದೇ ಕ್ಲಿಕ್​​ನಲ್ಲಿ ಸಾಲ ನೀಡುತ್ತೇವೆ. ಯಾವ ದಾಖಲೆ ಇಲ್ಲದಿದ್ದರೂ ಪರವಾಗಿಲ್ಲ, ಕ್ರೆಡಿಟ್ ಸ್ಕೋರ್ ಹಳ್ಳ ಹಿಡಿದಿದ್ದರೂ ಪರವಾಗಿಲ್ಲ, ನಾವು ಸುಲಭವಾಗಿ ಸಾಲ ನೀಡುತ್ತೇವೆ ಎಂದು ಈ ನಕಲಿ ಲೋನ್ ಆ್ಯಪ್​್ಗಳು ಪ್ರಲೋಬನೆ ಒಡ್ಡುತ್ತವೆ. ಅಷ್ಟೇ ಅಲ್ಲ, ಕಡಿಮೆ ಬಡ್ಡಿದರ ತೋರಿಸಿ, ಷರತ್ತುಗಳನ್ನು ಮರೆ ಮಾಚಬಹುದು. ಈ ರೀತಿ ಆಮಿಷ ತೋರಿದರೆ ಯಾರು ತಾನೇ ಆಕರ್ಷಿತರಾಗೋದಿಲ್ಲ..?

ವಂಚಕರ ಅಸಲಿ ಆಟ ಶುರುವಾಗುವುದು…

ಕೂತಲ್ಲೇ ಎಲ್ಲವೂ ಸಿಗುತ್ತದೆ ಎಂದು ನಂಬಿ, ವಂಚಕರು ಹೇಳುವ ಅಪ್ಲಿಕೇಶನ್​​ಗಳನ್ನು ಜನರು ಡೌನ್​​ಲೋಡ್ ಮಾಡಿಕೊಳ್ಳುತ್ತಾರೆ. ಹೆಚ್ಚಿನ ನಕಲಿ ಆ್ಯಪ್​್ಗಳು ಪ್ಲೇ ಸ್ಟೋರ್​​ನಲ್ಲಿ ಇರುವುದಿಲ್ಲ. ಎಪಿಕೆ ಫೈಲ್ ಡೌನ್​​ಲೋಡ್ ಲಿಂಕ್ ಅನ್ನು ಕಳುಹಿಸಲಾಗುತ್ತದೆ. ಸುಲಭ ಸಾಲದ ಉಮೇದಿನಲ್ಲಿರುವ ಜನರು ಈ ಆ್ಯಪ್ ವಿಶ್ವಾಸಾರ್ಹವಾ ಅಲ್ಲವಾ ಎಂದು ಗುರುತಿಸದಾಗದಷ್ಟು ಅಂಧರಾಗಿ ಹೋಗಿರುತ್ತಾರೆ. ಕೆಲ ನಕಲಿ ಆ್ಯಪ್​​ಗಳು ಪ್ಲೇ ಸ್ಟೋರ್​ನ್ಲಿ ಲಿಸ್ಟ್ ಕೂಡ ಆಗಿರಬಹುದು. ಈ ಆ್ಯಪ್​​ಗಳು ಡೌನ್​ಲೋಡ್ ಆದ ಬಳಿಕ ವಂಚಕರ ಅಸಲಿ ಆಟ ಶುರುವಾಗುತ್ತದೆ.

ಇದನ್ನೂ ಓದಿ: ಪೋಸ್ಟ್ ಪೇಯ್ಡ್ ಬಿಲ್ ಮಿಸ್ ಆದ್ರೆ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ? ಇಲ್ಲಿದೆ ಡೀಟೇಲ್ಸ್

ಮೊದಲಿಗೆ ಈ ದುರುಳರು ನಿಮ್ಮ ಎಣಿಕೆಯಂತೆ ಬಹಳ ಬೇಗನೇ ಸಣ್ಣ ಮೊತ್ತದ ಸಾಲ ನೀಡಿಬಿಡಬಹುದು. ಇದರಿಂದ ನೀವು ಈ ಆ್ಯಪ್ ಬಗ್ಗೆ ಮತ್ತಷ್ಟು ನಂಬಿಕಸ್ಥರಾಗಿಬಿಡುತ್ತೀರಿ. ನಂತರ ನಿಮಗೆ ದೊಡ್ಡ ಮೊತ್ತದ ಸಾಲ ನೀಡುತ್ತಾರೆ. ಅತಿಯಾದ ಬಡ್ಡಿ ವಿಧಿಸಲಾಗುತ್ತದೆ. ಮೊದಲಿಗೆ ನಿಮಗೆ ಹೇಳುವ ಬಡ್ಡಿ ಬೇರೆ, ಕೊನೆಗೆ ವಿಧಿಸಲಾಗುವ ಬಡ್ಡಿಯೇ ಬೇರೆ. ಬಡ್ಡಿ ಹಣಕ್ಕಾಗಿ ಬೆನ್ನು ಬೀಳುತ್ತಾರೆ. ನೀವು ಕೊಡದೇ ಹೋದಾಗ ಇವರ ಇನ್ನೊಂದು ಚಹರೆ ಕಾಣಿಸುತ್ತದೆ. ಅದುವೇ ನಿಮ್ಮ ಡಾಟಾ ಕಳ್ಳತನ. ನೀವು ಇವರ ಆ್ಯಪ್​​ಗೆ ನಿಮ್ಮ ಮೊಬೈಲ್​​ನ ಸಕಲ ಭಾಗದ ಅಕ್ಸೆಸ್ ಅನುಮತಿಯನ್ನು ಕೊಟ್ಟುಬಿಟ್ಟಿರುತ್ತೀರಿ. ಈಗ ಇವರು ಮೊಬೈಲ್​​ನಲ್ಲಿರುವ ನಿಮ್ಮ ಖಾಸಗಿ ಫೋಟೋ, ವಿಡಿಯೋ, ಫೋನ್ ರೆಕಾರ್ಡ್ ಇತ್ಯಾದಿಯನ್ನು ಕದ್ದಿರುತ್ತಾರೆ. ಮುಜುಗರ ಆಗಿರುವಂಥ ಫೋಟೋ, ವಿಡಿಯೋ ಇದ್ದರೆ ಇವರಿಗದು ದೊಡ್ಡ ಬಂಡವಾಳ. ಅದನ್ನು ಇಟ್ಟುಕೊಂಡು ನಿಮ್ಮನ್ನು ಬ್ಲ್ಯಾಕ್​ಮೇಲ್ ಮಾಡುತ್ತಾರೆ. ಅಥವಾ, ಬೇರೆ ಯಾವುದರ ರೀತಿಯಲ್ಲಾದರೂ ನಿಮ್ಮ ಮೊಬೈಲ್​​ನಲ್ಲಿರುವ ಡಾಟಾವನ್ನು ದುರುಪಯೋಗಿಸಿಕೊಳ್ಳಬಹುದು.

ಸೈಬರ್ ವಂಚನೆ ತಡೆಯುವುದು ಹೇಗೆ?

ಸೈಬರ್ ಕ್ರಿಮಿನಲ್​​ಗಳಿಂದ ದೂರ ಇರಬೇಕೆಂದರೆ ಈ ಕೆಳಗಿನ ಕ್ರಮಗಳನ್ನು ಅನುಸರಿಸಲು ಯತ್ನಿಸಿ:

  • ಆರ್‌ಬಿಐನಿಂದ ಮಾನ್ಯತೆ ಪಡೆದ ಬ್ಯಾಂಕುಗಳು/ಎನ್‌ಬಿಎಫ್‌ಸಿಗಳಿಂದ ಮಾತ್ರ ಸಾಲ ಪಡೆಯಿರಿ.
  • ಅಪರಿಚಿತ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವುದನ್ನು ತಪ್ಪಿಸಿ
  • ಪ್ಲೇಸ್ಟೋರ್​​ನಲ್ಲಿ ಆ ಆ್ಯಪ್ ಇದ್ದರೆ ಅದರ ರಿವ್ಯೂಗಳನ್ನು ಗಮನಿಸಿ
  • ಯಾವುದೇ ಅಪ್ಲಿಕೇಶನ್ ಆದರೂ ಅದಕ್ಕೆ ಅನಗತ್ಯವಾದ ಪರ್ಮಿಷನ್​​ಗಳನ್ನು ನೀಡಬೇಡಿ.
  • ವಂಚನೆ ಇರಬಹುದು ಎನಿಸಿದಲ್ಲಿ, ಸೈಬರ್ ಕ್ರೈಮ್ ಸಹಾಯವಾಣಿ 1930 ಗೆ ದೂರು ನೀಡಿ.

ಇದನ್ನೂ ಓದಿ: ಜ್ಯಾಕ್​ಪಾಟ್ ತರುವ ಮಲ್ಟಿಬ್ಯಾಗರ್ ಷೇರು ಪತ್ತೆ ಮಾಡುವುದು ಹೇಗೆ? ಕ್ರಿಸ್ ಮೇಯರ್ ಫಾರ್ಮುಲಾ ಇದು

ಸೈಬರ್ ಕ್ರೈಮ್ ಪೋರ್ಟಲ್ ಸಂಪರ್ಕಿಸಿ…

  • ಯಾವುದೇ ಅಪ್ಲಿಕೇಶನ್‌ನಿಂದ ಸಾಲ ಪಡೆಯುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಎಂದು ರಾಷ್ಟ್ರೀಯ ಸೈಬರ್ ಕ್ರೈಮ್ ಪೋರ್ಟಲ್ ಎಚ್ಚರಿಸಿದೆ.
  • ರಾಷ್ಟ್ರೀಯ ಸೈಬರ್ ಕ್ರೈಮ್ ಪೋರ್ಟಲ್‌ ವಿಳಾಸ: cybercrime.gov.in/Default.aspx
  • ಮುಖ್ಯಪುಟದ ಮುಖ್ಯಮೆನುನಲ್ಲಿ Report & Check Suspect ಟ್ಯಾಬ್ ಅಡಿ “SUSPECT REPOSITORY” ಕ್ಲಿಕ್ ಮಾಡಿ
  • ಅಲ್ಲಿ ಅಪ್ಲಿಕೇಶನ್‌ನ ಹೆಸರನ್ನು ನಮೂದಿಸಿ.
  • ಅಪ್ಲಿಕೇಶನ್ ವಿರುದ್ಧ ಈಗಾಗಲೇ ಯಾವುದೇ ದೂರು ದಾಖಲಾಗಿದ್ದರೆ, ಅದರ ಮಾಹಿತಿಯು ಗೋಚರಿಸುತ್ತದೆ. ಇಲ್ಲದಿದ್ದರೆ, “Record not found” ಎಂಬ ಸಂದೇಶವನ್ನು ಪ್ರದರ್ಶಿಸಲಾಗುತ್ತದೆ.

ಹಾಗೆಯೇ, ನಿಮಗೆ ಒಂದು ಅ್ಯಪ್ ವಿರುದ್ಧ ಅನುಮಾನ ದಾಖಲಿಸಬೇಕೆಂದಿದ್ದರೆ ಅದೇ Report & Check Suspect ಟ್ಯಾಬ್ ಅಡಿಯಲ್ಲಿ ರಿಪೋರ್ಟ್ ಸಸ್ಪೆಕ್ಟ್ ಅನ್ನು ಕ್ಲಿಕ್ ಮಾಡಿ, ಆ ಮೂಲಕ ಆ್ಯಪ್ ಹೆಸರನ್ನು ಸಸ್ಪೆಕ್ಟ್ ಲಿಸ್ಟ್​​​ಗೆ ಸೇರಿಸಲು ಯತ್ನಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪತಿಯೊಂದಿಗೆ ಜಗಳವಾಡಿ ಬೆಂಕಿ ಹಚ್ಚಿಕೊಂಡು ಹೆಂಡತಿ ಆತ್ಮಹತ್ಯೆ
ಪತಿಯೊಂದಿಗೆ ಜಗಳವಾಡಿ ಬೆಂಕಿ ಹಚ್ಚಿಕೊಂಡು ಹೆಂಡತಿ ಆತ್ಮಹತ್ಯೆ
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ರಾಜಣ್ಣಗೆ ಮಾತ್ರವಲ್ಲ ಪುತ್ರನಿಗೂ ಹನಿಟ್ರ್ಯಾಪ್​​​​​ ಬಲೆಗೆ ಬೀಳಿಸುವ ಸಂಚು!
ರಾಜಣ್ಣಗೆ ಮಾತ್ರವಲ್ಲ ಪುತ್ರನಿಗೂ ಹನಿಟ್ರ್ಯಾಪ್​​​​​ ಬಲೆಗೆ ಬೀಳಿಸುವ ಸಂಚು!
ಹನಿಟ್ರ್ಯಾಪ್ ಕೇಸ್ ಉನ್ನತ ಮಟ್ಟದ ತನಿಖೆಗೆ: ಸದನದಲ್ಲೇ ಘೋಷಿಸಿದ ಗೃಹ ಸಚಿವ
ಹನಿಟ್ರ್ಯಾಪ್ ಕೇಸ್ ಉನ್ನತ ಮಟ್ಟದ ತನಿಖೆಗೆ: ಸದನದಲ್ಲೇ ಘೋಷಿಸಿದ ಗೃಹ ಸಚಿವ