AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತಿಶ್ರೀಮಂತರ ಪಟ್ಟಿಯಲ್ಲಿ ಅಂಬಾನಿ, ಅದಾನಿ ನಂತರ 42 ವರ್ಷದ ರೋಷನಿ ಮಲ್ಹೋತ್ರಾ

Roshni Nadar Malhotra of HCL tech becomes richest Indian woman: ಎಚ್​​ಸಿಎಲ್ ಟೆಕ್ನಾಲಜೀಸ್​ನ ಛೇರ್ಮನ್ ರೋಷನಿ ಮಲ್ಹೋತ್ರಾ ಈಗ ಅಂಬಾನಿ, ಅದಾನಿ ಸಾಲಿಗೆ ಸೇರಿದ್ದಾರೆ. ದೇಶದ ಟಾಪ್-3 ಶ್ರೀಮಂತರಲ್ಲಿ ರೋಷನಿ ಒಬ್ಬರಾಗಿದ್ದಾರೆ. ಎಚ್​ಸಿಎಲ್ ಸಂಸ್ಥಾಪಕ ಶಿವ್ ನಾದರ್ ತಮ್ಮ ಶೇ. 47ರಷ್ಟು ಷೇರುಗಳನ್ನು ಏಕೈಕ ಮಗಳಾದ ರೋಷನಿಗೆ ಧಾರೆ ಎರೆದುಕೊಟ್ಟಿದ್ದಾರೆ. ಇದರೊಂದಿಗೆ ಕಂಪನಿಯ ನಿರ್ವಹಣೆಗೆ ಅಗತ್ಯ ಅಧಿಕಾರ ರೋಷನಿಗೆ ಪ್ರಾಪ್ತವಾಗಿದೆ.

ಅತಿಶ್ರೀಮಂತರ ಪಟ್ಟಿಯಲ್ಲಿ ಅಂಬಾನಿ, ಅದಾನಿ ನಂತರ 42 ವರ್ಷದ ರೋಷನಿ ಮಲ್ಹೋತ್ರಾ
ರೋಷನಿ ನಾದರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 11, 2025 | 1:55 PM

Share

ನವದೆಹಲಿ, ಮಾರ್ಚ್ 11: ನಿರೀಕ್ಷೆಯಂತೆ ಎಚ್​​ಸಿಎಲ್ ಟೆಕ್ನಾಲಜೀಸ್​ನ ಸಂಸ್ಥಾಪಕ ಶಿವ್ ನಾದರ್ ಅವರು ತಮ್ಮ ಮಗಳಿಗೆ ಕಂಪನಿಯ ಎಲ್ಲಾ ಅಧಿಕಾರ ಮತ್ತು ವ್ಯವಹಾರವನ್ನೂ ಒಪ್ಪಿಸಿದ್ದಾರೆ. ಎಚ್​ಸಿಎಲ್ ಕಾರ್ಪೊರೇಶನ್ ಮತ್ತು ವಾಮ ಸುಂದರಿ ಇನ್ವೆಸ್ಟ್​​ಮೆಂಟ್ಸ್ (Vama Sundari Investments) ಈ ಎರಡೂ ಸಂಸ್ಥೆಗಳಲ್ಲಿ ಬಹುಸಂಖ್ಯಾ ಷೇರು ಒಡೆತನ ಹೊಂದಿದ್ದ ಶಿವ ನಾದರ್ ಅವರು ಶೇ. 47ರಷ್ಟು ಷೇರುಗಳನ್ನು ಮಗಳಾದ ರೋಷನಿ ನಾದರ್ ಮಲ್ಹೋತ್ರಾಗೆ ವರ್ಗಾಯಿಸಿದ್ದಾರೆ. ನಾಲ್ಕೈದು ವರ್ಷದಿಂದ ಎಚ್​ಸಿಎಲ್ ಟೆಕ್ನಾಲಜೀಸ್ ಸಂಸ್ಥೆಯನ್ನು ಛೇರ್ಮನ್ ಅಗಿ ನಿಭಾಯಿಸುತ್ತಾ ಬಂದಿರುವ ರೋಷನಿ ಮಲ್ಹೋತ್ರಾಗೆ (Roshni Malhotra) ಈಗ ಸಂಸ್ಥೆಯನ್ನು ನಿಭಾಯಿಸುವ ಗರಿಷ್ಠ ಅಧಿಕಾರ ಸಿಕ್ಕಂತಾಗಿದೆ. ಹಾಗೆಯೇ, ಭಾರತದ ಮೂರನೇ ಅತಿಶ್ರೀಮಂತ ವ್ಯಕ್ತಿಯೂ ಎನಿಸಿದ್ದಾರೆ. ಮುಕೇಶ್ ಅಂಬಾನಿ, ಗೌತಮ್ ಅದಾನಿ ಬಳಿಕ 42 ವರ್ಷದ ರೋಷನಿ ಭಾರತದ ಅತೀ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಶಿವ್ ನಾದರ್ ಅವರಿಗೆ ಗಂಡು ಮಕ್ಕಳಿಲ್ಲ. ರೋಷನಿ ಏಕೈಕ ಪುತ್ರಿಯಾಗಿದ್ಧಾರೆ. ಹೀಗಾಗಿ, ವಾರಸುದಾರಿಕೆ ಯಾರಿಗೆ ಹೋಗಬೇಕೆಂಬುದು ಮೊದಲೇ ಸ್ಪಷ್ಟವಾಗಿತ್ತು. ಪದ್ಮಭೂಷಣ ಪ್ರಶಸ್ತಿಯ ಗೌರವ ಪಡೆದಿರುವ ಶಿವ ನಾದರ್ ಅವರ ಪತ್ನಿ ಕಿರಣ ನಾದರ್ ಅವರು ಕಲಾ ವಸ್ತುಗಳ ಸಂಗ್ರಹಣೆ, ದಾನ ಧರ್ಮಕಾರ್ಯಗಳಿಗೆ ಹೆಸರಾಗಿದ್ದಾರೆ. ಅವರು ಉತ್ತಮ ಕಾಂಟ್ರ್ಯಾಕ್ಟ್ ಬ್ರಿಡ್ಜ್ ಆಟಗಾರ್ತಿಯೂ ಹೌದು. 2018ರ ಏಷ್ಯನ್ ಗೇಮ್ಸ್​​ನಲ್ಲಿ ಕಂಚನ ಪದಕವನ್ನೂ ಜಯಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ಒಮ್ಮಿಂದೊಮ್ಮೆ ಕರಗಿದ ಷೇರುಸಂಪತ್ತು ಭಾರತದ ಜಿಡಿಪಿಗೆ ಸಮ; ಯಾಕಿಷ್ಟು ಹೊಡೆತ?

ಇದನ್ನೂ ಓದಿ
Image
ಮಲ್ಟಿಬ್ಯಾಗರ್ ಷೇರು ಗುರುತಿಸಲು ಬೇಕು ಈ ಅಂಶಗಳು
Image
ನಂಬರ್ ಒನ್ ಸ್ಟಾಕ್ ಬ್ರೋಕರ್ ಮಾಲೀಕನಿಗೆ ಇನ್ಸ್​ಟಾ ಗೊಂದಲ
Image
ಏರ್ಪೋರ್ಟ್​​ನಲ್ಲಿ 10 ರೂಗೆ ಚಹಾ ಮಾರುವ ಉಡಾನ್ ಕೆಫೆ
Image
ಲಲಿತ್ ಮೋದಿ ಕೈತಪ್ಪಿದ ವಾನೋಟೂ ಪಾಸ್​ಪೋರ್ಟ್

ಎಚ್​​ಸಿಎಲ್ ಟೆಕ್ನಾಲಜೀಸ್ ಭಾರತದ ಮೊದಲ ಐಟಿ ಕಂಪನಿಗಳಲ್ಲಿ ಒಂದು. 1976ರಲ್ಲಿ ಶಿವ್ ನಾದರ್ ಈ ಕಂಪನಿಯನ್ನು ಸ್ಥಾಪಿಸಿದ್ದರು. ಭಾರತದಲ್ಲಿ ಐಟಿ ಕ್ಷೇತ್ರದ ಬೆಳವಣಿಗೆಯಲ್ಲಿ ಎಚ್​ಸಿಎಲ್ ಮಿಳಿತಗೊಂಡಿದೆ. 2020ರಲ್ಲಿ ರೋಷನಿ ನಾದರ್ ಅವರು ಕಂಪನಿಯ ಚೇರ್ಮನ್ ಆಗಿ ನೇಮಕವಾಗುವ ಮೂಲಕ ಅಪ್ಪನ ವ್ಯವಹಾರ ಮುಂದುವರಿಸಿಕೊಂಡು ಸಮರ್ಥವಾಗಿ ಜವಾಬ್ದಾರಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.

1982ರಲ್ಲಿ ದೆಹಲಿಯಲ್ಲಿ ಜನಿಸಿದ ರೋಷನಿ ನಾದರ್, ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಿ ಬಂದವರು. ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಶಾಸ್ತ್ರೀಯ ಸಂಗೀತ ಕಲಿತಿರುವ ರೋಷನಿ ಅವರು ಶಿಖರ್ ಮಲ್ಹೋತ್ರಾ ಎನ್ನುವವರನ್ನು ವರಿಸಿದ್ದಾರೆ. ಈ ದಂಪತಿಗೆ ಅರ್ಮಾನ್ ಮತ್ತು ಜಹಾನ್ ಎಂಬಿಬ್ಬರು ಗಂಡುಮಕ್ಕಳಿದ್ದಾರೆ.

ಇದನ್ನೂ ಓದಿ: 65,000 ಕೋಟಿ ರೂ ಮೌಲ್ಯದ ಕಂಪನಿಯ ಸಿಇಒಗೆ ಇನ್ಸ್​​ಟಾಗ್ರಾಮ್ ಬಳಸಲು ಕನ್​ಫ್ಯೂಷನ್

ರೋಷನಿ ನಾದರ್ ಮಲ್ಹೋತ್ರಾ ಅವರ ಸಂಪತ್ತು ಎಷ್ಟಿದೆ?

​​ಬ್ಲೂಮ್​ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್​​ನಲ ಭಾರತದ ಪಟ್ಟಿಯಲ್ಲಿ ಮುಕೇಶ್ ಅಂಬಾನಿ, ಗೌತಮ್ ಅದಾನಿ ನಂತರದ ಸ್ಥಾನದಲ್ಲಿ ಶಿವ್ ನಾದರ್ ಇದ್ದರು. ಅಂಬಾನಿ ಬಳಿ 88 ಬಿಲಿಯನ್ ಡಾಲರ್, ಅದಾನಿ ಬಳಿ 69 ಬಿಲಿಯನ್ ಡಾಲರ್, ಶಿವ್ ನಾದರ್ ಬಳಿ 36 ಬಿಲಿಯನ್ ಡಾಲರ್ ಆಸ್ತಿ ಇದೆ. ಈಗ ಶಿವ್ ನಾದರ್ ಸ್ಥಾನವನ್ನು ಅವರ ಮಗಳಾದ ರೋಷನಿ ನಾದರ್ ತುಂಬುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:54 pm, Tue, 11 March 25

25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್