Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದಲ್ಲಿ ಒಮ್ಮಿಂದೊಮ್ಮೆ ಕರಗಿದ ಷೇರುಸಂಪತ್ತು ಭಾರತದ ಜಿಡಿಪಿಗೆ ಸಮ; ಯಾಕಿಷ್ಟು ಹೊಡೆತ?

US stock markets crash: ಅಮೆರಿಕದ ಷೇರು ಮಾರುಕಟ್ಟೆ ಸೋಮವಾರದ ವಹಿವಾಟಿನಲ್ಲಿ ಅತೀವ ಹಿನ್ನಡೆ ಕಂಡಿದೆ. ಫೆಬ್ರುವರಿಯಲ್ಲಿ ಗರಿಷ್ಠ ಮಟ್ಟಕ್ಕೆ ಹೋಗಿದ್ದ ಮಾರುಕಟ್ಟೆ ಇದೀಗ 4 ಟ್ರಿಲಿಯನ್ ಡಾಲರ್​​ನಷ್ಟು ನಷ್ಟ ಮಾಡಿಕೊಂಡಿದೆ. ಅದರಲ್ಲೂ ಟೆಕ್ನಾಲಜಿ ಸ್ಟಾಕ್​​​ಗಳು ಅತೀವ ಕುಸಿತ ಕಂಡಿವೆ. ಡೊನಾಲ್ಡ್ ಟ್ರಂಪ್ ನೀತಿಗಳು ಹೂಡಿಕೆದಾರರನ್ನು ಧೃತಿಗೆಡಿಸಿರಬಹುದು. ಭಾರತದ ಷೇರು ಮಾರುಕಟ್ಟೆ ಮೇಲೂ ಇದರ ಪರಿಣಾಮಗಳಾಗುತ್ತಿವೆ.

ಅಮೆರಿಕದಲ್ಲಿ ಒಮ್ಮಿಂದೊಮ್ಮೆ ಕರಗಿದ ಷೇರುಸಂಪತ್ತು ಭಾರತದ ಜಿಡಿಪಿಗೆ ಸಮ; ಯಾಕಿಷ್ಟು ಹೊಡೆತ?
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 11, 2025 | 11:43 AM

ನವದೆಹಲಿ, ಮಾರ್ಚ್ 11: ಅಮೆರಿಕ ಷೇರು ಮಾರುಕಟ್ಟೆ (US stock market) ಕುಸಿತ ಕಾಣತೊಡಗಿದೆ. ಪ್ರಮುಖ ಎಕ್ಸ್​​ಚೇಂಜ್​​ಗಳಾದ ನಾಸ್ಡಾಕ್, ನ್ಯೂಯಾರ್ಕ್ ಸ್ಟಾಕ್ ಎಕ್ಸ್​ಚೇಂಜ್ ಕುಸಿತ ಕಂಡಿವೆ. ನಾಸ್ಡಾಕ್ ಕಾಂಪೊಸಿಟ್ (Nasdaq composite), ಸ್ಟಾಂಡರ್ಡ್ ಅಂಡ್ ಪೂರ್ಸ್ 500 (Standard and Poor’s), ಡೌ ಜೋನ್ಸ್ ಇಂಡಸ್ಟ್ರಿಯಲ್ ಆ್ಯವರೇಜ್, ಎಸ್ ಅಂಡ್ ಪಿ 500 (S&P500) ಸೂಚ್ಯಂಕಗಳು ನಷ್ಟ ಕಂಡಿವೆ. ಅಮೆರಿಕದ ಅಗ್ರ 500 ಕಂಪನಿಗಳ ಷೇರುಗಳನ್ನು ಟ್ರ್ಯಾಕ್ ಮಾಡುವ ಎಸ್ ಅಂಡ್ ಪಿ 500 ಸೂಚ್ಯಂಕದಲ್ಲಿ ಹೂಡಿಕೆದಾರರು ಒಂದೇ ದಿನದಲ್ಲಿ 4 ಟ್ರಿಲಿಯನ್ ಡಾಲರ್ ನಷ್ಟ ಅನುಭವಿಸಿದ್ದಾರೆ. ಅಂದರೆ, ಬರೋಬ್ಬರಿ 300 ಲಕ್ಷ ಕೋಟಿ ರೂಪಾಯಿಗಿಂತಲೂ ಅಧಿಕ ಹಣ. ಭಾರತದ ಹಾಲಿ ಜಿಡಿಪಿಗಿಂತಲೂ ಹೆಚ್ಚು ಸಂಪತ್ತು ಒಂದೇ ದಿನದಲ್ಲಿ ಮುರುಟಿಹೋಗಿದೆ.

ಅಮೆರಿಕದ ತಂತ್ರಜ್ಞಾನ ಕಂಪನಿಗಳ ಷೇರುಗಳು ನಿನ್ನೆಯ ಟ್ರೇಡಿಂಗ್ ದಿನ ಬಹಳ ಅತಿಹೆಚ್ಚು ಹಿನ್ನಡೆ ಕಂಡವು. 2022ರ ಬಳಿಕ ಇಂಟ್ರಾಡೇ ಟ್ರೇಡಿಂಗ್​​ನಲ್ಲಿ ಅತಿಹೆಚ್ಚು ನಷ್ಟ ಕಂಡಿವೆ ಈ ಟೆಕ್ನಾಲಜಿ ಸ್ಟಾಕ್​​ಗಳು. ಷೇರುಗಳು ಮಾತ್ರವಲ್ಲ, ಬೇರೆ ಬೇರೆ ಆಸ್ತಿಗಳೂ ಕೂಡ ಹಿನ್ನಡೆ ಕಂಡಿವೆ. ಕಾರ್ಪೊರೇಟ್ ಬಾಂಡ್, ಅಮೆರಿಕದ ಡಾಲರ್, ಕ್ರಿಪ್ಟೋಕರೆನ್ಸಿ ಇತ್ಯಾದಿ ವರ್ಗದ ಆಸ್ತಿಗಳೂ ಕೂಡ ನಷ್ಟ ಕಂಡಿವೆ. ನೈಜ ಸಂಪತ್ತುಗಳೆನಿಸಿದ ಚಿನ್ನ, ಬೆಳ್ಳಿ ಇತ್ಯಾದಿಗಳು ಮಾತ್ರವೇ ಮೌಲ್ಯ ಹೆಚ್ಚಿಸಿಕೊಂಡಿದ್ದು.

ಅಮೆರಿಕದ ಷೇರು ಮಾರುಕಟ್ಟೆ ಹೀನಾಯ ಪ್ರದರ್ಶನ ನೀಡುತ್ತಿರುವುದು ಯಾಕೆ?

ಎಲ್ಲರ ನಿರೀಕ್ಷೆಯಂತೆ ಅಮೆರಿಕದ ಷೇರು ಮಾರುಕಟ್ಟೆಯ ಕುಸಿತಕ್ಕೆ ಡೊನಾಲ್ಡ್ ಟ್ರಂಪ್ ಅವರ ನೀತಿಗಳೇ ಪ್ರಮುಖ ಕಾರಣವಾಗಿವೆ. ತಮ್ಮ ಟ್ಯಾರಿಫ್ ಹೇರಿಕೆಯ ನೀತಿಯನ್ನು ಆಚರಣೆಗೆ ತರಲು ಬದ್ಧರಾಗಿರುವುದಾಗಿ ಟ್ರಂಪ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದು ಹೂಡಿಕೆದಾರರಿಗೆ ಇದ್ದ ಒಂದು ಭರವಸೆಯ ಕಿರಣ ನಶಿಸಿಹೋದಂತಾಗಿದೆ.

ಇದನ್ನೂ ಓದಿ
Image
ಮಲ್ಟಿಬ್ಯಾಗರ್ ಷೇರು ಗುರುತಿಸಲು ಬೇಕು ಈ ಅಂಶಗಳು
Image
W ಆಕಾರದಲ್ಲಿ ಚಲಿಸುತ್ತಿದೆಯಾ ನಿಫ್ಟಿ? ಹಾಗಂದರೇನು?
Image
ಶಿಸ್ತುಬದ್ಧ ಹೂಡಿಕೆದಾರರಿಗೆ ಇದು ಅಮೃತಕಾಲ: ತಜ್ಞರು
Image
ಬೇರ್ ಮಾರ್ಕೆಟ್​​ನಿಂದ ಜಾಣರ ಸೃಷ್ಟಿ: ವಿಜಯ್ ಕೆದಿಯಾ

ಇದನ್ನೂ ಓದಿ: ಜ್ಯಾಕ್​ಪಾಟ್ ತರುವ ಮಲ್ಟಿಬ್ಯಾಗರ್ ಷೇರು ಪತ್ತೆ ಮಾಡುವುದು ಹೇಗೆ? ಕ್ರಿಸ್ ಮೇಯರ್ ಫಾರ್ಮುಲಾ ಇದು

ಅಮೆರಿಕದ ಟ್ಯಾರಿಫ್ ನೀತಿ ಆತ್ಮಹತ್ಯೆಗೆ ಸಮ ಎಂಬುದು ಹಲವು ತಜ್ಞರ ಅನಿಸಿಕೆ. ಟ್ಯಾರಿಫ್ ಹೇರಿಕೆಯಿಂದ ಅಮೆರಿಕದಲ್ಲಿ ಹಣದುಬ್ಬರ ಹೆಚ್ಚುತ್ತದೆ. ಆರ್ಥಿಕತೆಗೆ ಹಿನ್ನಡೆಯಾಗುತ್ತದೆ ಎನ್ನುವ ಭೀತಿ ಇದೆ. ಇದಕ್ಕೆ ಪೂರಕವಾಗಿ ಅಮೆರಿಕದ ವಿವಿಧ ಸೂಚಕಗಳು ಆರ್ಥಿಕ ಹಿನ್ನಡೆಯನ್ನು ಬಿಂಬಿಸುತ್ತಿವೆ.

ಹಣದುಬ್ಬರ ಏರಿಕೆ ಆಗಲಿರುವುದರಿಂದ ಬಡ್ಡಿದರ ಇಳಿಕೆಯಾಗುವ ಸಂಭವ ಇಲ್ಲ. ಈಗಾಗಲೇ ಫೆಡರಲ್ ರಿಸರ್ವ್​ನ ಮುಖ್ಯಸ್ಥ ಜೆರೋಮ್ ಪೋವೆಲ್ ಅವರು ಮುಂಬರುವ ತಿಂಗಳುಗಳಲ್ಲಿ ಇದೇ ಬಡ್ಡಿದರ ಮುಂದುವರಿಸುವುದಾಗಿ ಹೇಳಿದ್ದಾರೆ. ಇವೆಲ್ಲವೂ ಕೂಡ ಷೇರು ಮಾರುಕಟ್ಟೆಯ ಕುಸಿತಕ್ಕೆ ಎಡೆ ಮಾಡಿಕೊಡುತ್ತಿರಬಹುದು.

ಭಾರತದ ಷೇರು ಮಾರುಕಟ್ಟೆ ಮೇಲೇನು ಪರಿಣಾಮ?

ಅಮೆರಿಕದ ಷೇರು ಮಾರುಕಟ್ಟೆ ಕುಸಿತ ಕಾಣುತ್ತಿರುವಂತೆಯೇ, ಭಾರತದ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಿದವರಿಗೆ ನಡುಕ ಉಂಟಾಗಿದೆ. ಭಾರತದ ಷೇರು ಮಾರುಕಟ್ಟೆ ಕೂಡ ಹಿನ್ನಡೆ ಕಾಣಬಹುದು ಎಂದು ಹಲವರು ನಿರೀಕ್ಷಿಸಿದ್ದಾರೆ. ಅದರಂತೆ, ಇವತ್ತು ಮಂಗಳವಾರ ನಿಫ್ಟಿ ಮತ್ತು ಸೆನ್ಸೆಕ್ಸ್ ಎರಡೂ ಕೂಡ ನಷ್ಟ ಕಂಡಿವೆ. ಕಳೆದ ಮೂರ್ನಾಲ್ಕು ಸೆಷನ್​​ಗಳಲ್ಲಿ ಹೆಚ್ಚಳವಾಗಿದ್ದ ಷೇರುಬಜಾರು ಈಗ ಮತ್ತೆ ಹಿನ್ನಡೆಯ ಹಾದಿಗೆ ಬಂದಿದೆ.

ಇದನ್ನೂ ಓದಿ: ಭಾರತದ ಷೇರುಪೇಟೆ W ಆಕಾರದಲ್ಲಿ ಚೇತರಿಕೆ ಕಾಣಲಿದೆಯಂತೆ; ಏನಿದು ಡಬ್ಲ್ಯು ಶೇಪ್ ರಿಕವರಿ?

ಅಮೆರಿಕಕ್ಕೆ ರಫ್ತು ಮಾಡುವ ಬಿಸಿನೆಸ್​​ನಲ್ಲಿರುವ ಕಂಪನಿಗಳ ಷೇರುಗಳನ್ನು ಖರೀದಿಸಬೇಡಿ ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ. ಅಂದರೆ, ಇನ್ಫೋಸಿಸ್ ಇತ್ಯಾದಿ ಐಟಿ ಸ್ಟಾಕ್​​ಗಳಿಂದ ಸದ್ಯಕ್ಕೆ ದೂರ ಇರಿ ಎನ್ನುವುದು ಇವರ ಕಿವಿಮಾತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:02 am, Tue, 11 March 25

ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
VIDEO: ಆಂಬ್ಯುಲೆನ್ಸ್​ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!
VIDEO: ಆಂಬ್ಯುಲೆನ್ಸ್​ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!
ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ ಕಾರು ಜಸ್ಟ್​ ಮಿಸ್, ಬೈಕ್ ಹೋಗೇಬಿಡ್ತು
ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ ಕಾರು ಜಸ್ಟ್​ ಮಿಸ್, ಬೈಕ್ ಹೋಗೇಬಿಡ್ತು
Daily Devotional: ಪ್ರದೂಷ ಕಾಲದ ಮಹತ್ವ ಹಾಗೂ ಹಿಂದಿನ ರಹಸ್ಯ ತಿಳಿಯಿರಿ
Daily Devotional: ಪ್ರದೂಷ ಕಾಲದ ಮಹತ್ವ ಹಾಗೂ ಹಿಂದಿನ ರಹಸ್ಯ ತಿಳಿಯಿರಿ
ಬಾಂಬೆ ಹೈಕೋರ್ಟ್​ ಆವರಣದಲ್ಲಿ ವಾಮಾಚಾರ?
ಬಾಂಬೆ ಹೈಕೋರ್ಟ್​ ಆವರಣದಲ್ಲಿ ವಾಮಾಚಾರ?