AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಷೇರುಪೇಟೆ W ಆಕಾರದಲ್ಲಿ ಚೇತರಿಕೆ ಕಾಣಲಿದೆಯಂತೆ; ಏನಿದು ಡಬ್ಲ್ಯು ಶೇಪ್ ರಿಕವರಿ?

Geojit Financial Services CMS Anand James' opinion: 22,000 ಅಂಕಗಳ ಮಟ್ಟಕ್ಕೆ ಕುಸಿದಿದ್ದ ನಿಫ್ಟಿ50 ಸೂಚ್ಯಂಕ ಕಳೆದ ಕೆಲ ದಿನಗಳಿಂದ ಚೇತರಿಸಿಕೊಳ್ಳುತ್ತಿದ್ದು ಇದೀಗ 22,600 ಗಡಿ ದಾಟಿ ಹೋಗಿದೆ. ಷೇರುಮಾರುಕಟ್​ಟೆ ಇನ್ಮುಂದೆ ಮೇಲ್ಮುಖವಾಗಿಯೇ ಹೋಗುತ್ತಾ? ಇಲ್ಲ ಎನ್ನುತ್ತಾರೆ ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆಯ ಆನಂದ್ ಜೇಮ್ಸ್. ನಿಫ್ಟಿ 23,000 ಅಂಕ ತಲುಪಿ ಮತ್ತೆ 22,000 ಅಂಕಗಳಿಗೆ ಕುಸಿದು ಆ ಬಳಿಕ ಏರಿಕೆ ಕಾಣಬಹುದು ಎನ್ನುವುದು ಅವರ ಅಂದಾಜು.

ಭಾರತದ ಷೇರುಪೇಟೆ W ಆಕಾರದಲ್ಲಿ ಚೇತರಿಕೆ ಕಾಣಲಿದೆಯಂತೆ; ಏನಿದು ಡಬ್ಲ್ಯು ಶೇಪ್ ರಿಕವರಿ?
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 10, 2025 | 2:49 PM

Share

ನವದೆಹಲಿ, ಮಾರ್ಚ್ 10: ಭಾರತದ ಷೇರು ಮಾರುಕಟ್ಟೆ (stock market) ಕಳೆದ ಮೂರ್ನಾಲ್ಕು ಸೆಷನ್​​ಗಳಿಂದ (ಕಾರ್ಯ ದಿನ) ಚೇತರಿಕೆಯ ಹಾದಿಯಲ್ಲಿದೆ. 22,000 ಅಂಕಗಳ ಮಟ್ಟಕ್ಕೆ ಹೋಗಿದ್ದ ನಿಫ್ಟಿ50 ಸೂಚ್ಯಂಕ ಇದೀಗ 22,600 ಅಂಕಗಳಿಗಿಂತ ಮೇಲೆ ಹೋಗಿದೆ. ಈ ಮಧ್ಯೆ ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್ ಸಂಸ್ಥೆಯ ಚೀಫ್ ಮಾರ್ಕೆಟ್ ಸ್ಟ್ರಾಟಿಜಿಸ್ಟ್ ಆಗಿರುವ ಆನಂದ್ ಜೇಮ್ಸ್ ಒಂದು ಕುತೂಹಲ ವಿಚಾರ ಹಂಚಿಕೊಂಡಿದ್ದಾರೆ. ಎಕನಾಮಿಕ್ ಟೈಮ್ಸ್​​ಗೆ ನೀಡಿದ ಸಂದರ್ಶನದಲ್ಲಿ ಅವರು ನಿಫ್ಟಿ ಇಂಡೆಕ್ಸ್ ಇಂಗ್ಲೀಷ್​ನ W (ಡಬ್ಲ್ಯು) ಅಕ್ಷರ ಆಕಾರದಲ್ಲಿ ಚೇತರಿಕೆ (W shaped recovery) ಕಾಣಬಹುದು ಎಂದಿದ್ದಾರೆ. ಡಬ್ಲ್ಯು ಆಕಾರ ದಾಟಿದ ಬಳಿಕ ಷೇರು ಮಾರುಕಟ್ಟೆ ಗಟ್ಟಿಯಾಗಿ ಮೇಲೇರುತ್ತದೆ ಎಂಬುದು ಅವರ ಅನಿಸಿಕೆ.

ಏನಿದು W ಆಕಾರದ ಚೇತರಿಕೆ?

ಒಂದು ಆರ್ಥಿಕತೆ ಅಥವಾ ಮಾರುಕಟ್ಟೆ ಹೇಗೆ ಸಾಗಬಹುದು ಎಂಬುದಕ್ಕೆ ಸೂಚಕವಾಗಿ ನೀವು K, W, V ಇತ್ಯಾದಿ ಆಕಾರಗಳನ್ನು ತಜ್ಞರು ಬಳಸುವುದನ್ನು ಕೇಳಿರಬಹುದು. ಈ ಅಕ್ಷರಗಳು ಗ್ರಾಫಿಕಲ್ ಆಗಿರುತ್ತವೆ. V ಆಕಾರದಲ್ಲಿ ಮಾರುಕಟ್ಟೆ ಒಮ್ಮಿಂದೊಮ್ಮೆ ಕುಸಿಯುತ್ತದೆ. ನಂತರ ಅಷ್ಟೇ ವೇಗವಾಗಿ ಬೆಳೆಯುತ್ತದೆ. ಆದರೆ, W ಶೇಪ್ ರಿಕವರಿಯಲ್ಲಿ ಮಾರುಕಟ್ಟೆ ನಿರ್ದಿಷ್ಟ ಭಾಗದಷ್ಟು ಕುಸಿತ ಕಾಣುತ್ತದೆ. ಮತ್ತೆ ಅದು ಮೇಲೇರುತ್ತದೆ. ಮತ್ತೆ ಕುಸಿಯುತ್ತದೆ. ನಂತರ ಮತ್ತೆ ಅದೇ ಮೇಲ್ಮಟಕ್ಕೆ ವಾಪಸ್ ಬರುತ್ತದೆ. ಅಂದರೆ W ಆಕಾರದಲ್ಲಿ ಅದು ಏರಿಳಿತ ಕಾಣುತ್ತದೆ.

ಇದನ್ನೂ ಓದಿ: ಮಾರುಕಟ್ಟೆ ಅಸ್ಥಿರತೆ ತಾತ್ಕಾಲಿಕ, ಮುಂದುವರಿಸಿ ನಿಮ್ಮ ಎಸ್​ಐಪಿ ಕಾಯಕ: ತಜ್ಞರ ಅನಿಸಿಕೆ

ಇದನ್ನೂ ಓದಿ
Image
ಚಿನ್ನದ ಹೊಳಪಿನ ಹಿಂದೆ ತಳಮಳ
Image
ಡೊನಾಲ್ಡ್ ಟ್ರಂಪ್​ ವಿರುದ್ಧ ಕಿಡಿಕಾರಿದ ಬಾಬಾ ರಾಮದೇವ್
Image
ದುಬೈನಿಂದ ಎಷ್ಟು ಚಿನ್ನ ತಂದರೆ ಎಷ್ಟು ಟ್ಯಾಕ್ಸ್?
Image
ಶಿಸ್ತುಬದ್ಧ ಹೂಡಿಕೆದಾರರಿಗೆ ಇದು ಅಮೃತಕಾಲ: ತಜ್ಞರು

ನಿಫ್ಟಿ 23,000 ಅಂಕಗಳಲ್ಲಿ ತಳಮಳ

ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್​ನ ಆನಂದ್ ಜೇಮ್ಸ್ ಪ್ರಕಾರ ನಿಫ್ಟಿ ಸೂಚ್ಯಂಕ 23,000 ಅಂಕಗಳ ಸಮೀಪದ ಮಟ್ಟದಲ್ಲಿ ತೀವ್ರ ಒತ್ತಡ ಕಾಣಬಹುದು. ಬಳಿಕ ಅದು ಮತ್ತೊಮ್ಮೆ 22,000 ಅಂಕಗಳ ಮಟ್ಟಕ್ಕೆ ಕುಸಿಯಬಹುದು. ಅದಾದ ಬಳಿಕ ಮತ್ತೆ ಅದು ಚೇತರಿಸಿಕೊಂಡು 23,000 ಅಂಕಗಳ ಗಡಿ ದಾಟಬಹುದು. ಈ ಮಟ್ಟವನ್ನು ಮತ್ತೊಮ್ಮೆ ತಲುಪಿದ ಬಳಿಕ ನಿಫ್ಟಿಯ ಮುಂದಿನ ಮೇಲ್ಮುಖ ಹಾದಿ ಸುಗಮವಾಗಿ ಆಗಬಹುದು ಎನ್ನುವುದು ಆನಂದ್ ಜೇಮ್ಸ್ ಅಭಿಪ್ರಾಯ.

ಜೆನ್ಸಾಲ್ ಷೇರು ಖರೀದಿಗೆ ಸೂಕ್ತ ಸಮಯವಾ?

ಜೆನ್ಸಾಲ್ ಎಂಜಿನಿಯರಿಂಗ್ ಕಂಪನಿಯ ಷೇರು ಬೆಲೆ ಇತ್ತೀಚಿನ ದಿನಗಳಿಂದ ಪ್ರಪಾತಕ್ಕೆ ಬೀಳುತ್ತಿದೆ. ಇಷ್ಟು ತೀವ್ರ ಕುಸಿತದಲ್ಲಿರುವ ಷೇರನ್ನು ಮುಟ್ಟಬಾರದು ಎನ್ನುವ ಜಾಣ್ನುಡಿ ಷೇರುಮಾರುಕಟ್ಟೆಯಲ್ಲಿದೆ. ಆದರೆ, ಆನಂದ್ ಜೇಮ್ಸ್ ಅವರು ಈ ಷೇರಿಗೆ ಥಂಬ್ಸ್ ಅಪ್ ನೀಡಿದ್ದಾರೆ. ಶುಕ್ರವಾರ ಈ ಷೇರು ಬೆಳವಣಿಗೆ ಸ್ವರೂಪ ಗಮನಿಸಿದರೆ ಇದು ತಿರುಗಿ ಮೇಲೇರುವ ಸಾಧ್ಯತೆ ದಟ್ಟವಾಗಿದೆಯಂತೆ. ಸದ್ಯ 305 ರೂನಲ್ಲಿರುವ ಜೆನ್ಸಾಲ್ ಷೇರು ಬೆಲೆ 352 ರೂ ದಾಟಿದರೆ ನಂತರ ಸರಾಗವಾಗಿ ಮುಂದಡಿ ಇಡಬಲ್ಲುದು ಎನ್ನುತ್ತಾರೆ ಜೇಮ್ಸ್.

ಇದನ್ನೂ ಓದಿ: ದುಬೈಗೆ ಹೋಗಿ ಅಧಿಕೃತವಾಗಿ ಎಷ್ಟು ಚಿನ್ನ ತರಲು ಸಾಧ್ಯ? ಅಲ್ಲಿಗೂ ಇಲ್ಲಿಗೂ ಬೆಲೆ ವ್ಯತ್ಯಾಸ ಎಷ್ಟು?

ಇಪಿಎಲ್ ಷೇರು ಖರೀದಿಸಬಹುದಾ?

ಎಕನಾಮಿಕ್ ಟೈಮ್ಸ್​​ಗೆ ನೀಡಿದ ಸಂದರ್ಶನದಲ್ಲಿ ಆನಂದ್ ಜೇಮ್ಸ್ ಅವರು ಇಪಿಎಲ್ ಷೇರು ಖರೀದಿಸಬಹುದು ಎಂದಿದ್ದಾರೆ. ಮುಂಬೈ ಮೂಲದ ಟ್ಯೂಬ್ ಪ್ಯಾಕೇಜಿಂಗ್ ಕಂಪನಿಯಾದ ಇಪಿಎಲ್​ನ ಷೇರುಬೆಲೆ ಸದ್ಯ 205 ರೂನಲ್ಲಿದೆ. ಇದರ ಟಾರ್ಗೆಟ್ ಪ್ರೈಸ್ 225 ಎಂದು ಅಂದಾಜಿಸಲಾಗಿದೆ. ಅಂದರೆ, ಒಂದು ತಿಂಗಳಲ್ಲಿ ಶೇ. 10ರಷ್ಟು ಬೆಳವಣಿಗೆ ನಿರೀಕ್ಷಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ