ಟ್ರಂಪ್ ವಿರುದ್ಧ ಬಾಬಾ ರಾಮದೇವ್ ಕಿಡಿ; ತೆರಿಗೆ ಭಯೋತ್ಪಾದನೆ ವಿರುದ್ಧ ಭಾರತ ಸೆಣಸಬೇಕೆಂದು ಕರೆ
Baba Ramdev lashes out against Donald Trump:ಪತಂಜಲಿ ಸಹ-ಸಂಸ್ಥಾಪಕ ಬಾಬಾ ರಾಮದೇವ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಟ್ರಂಪ್ ನೀತಿಯನ್ನು ಸುಂಕ ಭಯೋತ್ಪಾದನೆ, ಆರ್ಥಿಕ ಭಯೋತ್ಪಾದನೆ ಎಂದು ಆರೋಪಿಸಿದ್ದಾರೆ. ಟ್ಯಾರಿಫ್ ಟೆರರಿಸಂನಲ್ಲಿ ಟ್ರಂಪ್ ದಾಖಲೆ ಬರೆದಿದ್ದಾರೆ. ಅವರ ವಿರುದ್ಧ ಭಾರತೀಯರು ಒಗ್ಗಟ್ಟಾಗಿ ಹೋರಾಡಬೇಕೆಂದು ಬಾಬಾ ರಾಮದೇವ್ ಕರೆ ನೀಡಿದ್ದಾರೆ.

ನಾಗಪುರ್, ಮಾರ್ಚ್ 9: ಎಲ್ಲಾ ದೇಶಗಳ ಮೇಲೂ ಆಮದು ಸುಂಕ (tariff) ಏರಿಸುವುದಾಗಿ ಬೆದರಿಕೆ ಹಾಕುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ದ ಯೋಗ ಗುರು ಮತ್ತು ಉದ್ಯಮಿ ಬಾಬಾ ರಾಮದೇವ್ ಕಿಡಿ ಕಾರಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ನೀತಿಯನ್ನು ತೆರಿಗೆ ಭಯೋತ್ಪಾದನೆ (Tariff Terrorism) ಎಂದು ಟೀಕಿಸಿದ್ದಾರೆ. ಟ್ರಂಪ್ ಟ್ಯಾರಿಫ್ ಟೆರರಿಸಂನಲ್ಲಿ ಹೊಸ ವಿಶ್ವದಾಖಲೆಯನ್ನೇ ಮಾಡಿದ್ದಾರೆ. ಬಡ ಹಾಗೂ ಅಭಿವೃದ್ಧಿಶೀಲ ದೇಶಗಳನ್ನು ಬೆದರಿಸುವ ಮೂಲಕ ಪ್ರಜಾತಂತ್ರವನ್ನೇ ಹಾಳುಗೆಡವಿದ್ದಾರೆ. ಈ ಟ್ರಂಪ್ ವಿರುದ್ದ ಭಾರತೀಯರು ಒಗ್ಗಟ್ಟಾಗಬೇಕು ಎಂದು ಪತಂಜಲಿ ಸಹ-ಸಂಸ್ಥಾಪಕರು ಕರೆ ನೀಡಿದ್ದಾರೆ.
ಬೌದ್ಧಿಕ ವಸಾಹತು ಕಾಲ ಇದು…
ಡೊನಾಲ್ಡ್ ಟ್ರಂಪ್ ಅವರ ನೀತಿಯನ್ನು ಸುಂಕ ಭಯೋತ್ಪಾದನೆ ಎಂದು ಜರೆದ ಬಾಬಾ, ಅಷ್ಟಕ್ಕೆ ಸುಮ್ಮನಾಗದೆ, ಆರ್ಥಿಕ ಭಯೋತ್ಪಾದನೆ ಎಂದೂ ಕರೆದಿದ್ದಾರೆ. ಹಾಗೆಯೇ ಈ ಕಾಲಘಟ್ಟವನ್ನು ಬೌದ್ಧಿಕ ವಸಾಹತು ಯುಗ ಎಂದೂ ಆರೋಪಿಸಿದ್ದಾರೆ.
ಇದನ್ನೂ ಓದಿ: ಭಾರತದ ಆರ್ಥಿಕತೆಗೆ ಕುಂಭಮೇಳದ ಕಿಕ್; ತಯಾರಿಕಾ ವಲಯದಿಂದಲೂ ಪುಷ್ಟಿ; ಏಜೆನ್ಸಿಗಳ ಸಕಾರಾತ್ಮಕ ಅಂದಾಜು
‘ಈ ಸನ್ನಿವೇಶದಲ್ಲಿ ಭಾರತ ಅಭಿವೃದ್ಧಿಯಾಗುವ ಅವಶ್ಯಕತೆ ಇದೆ. ಪ್ರಬಲ ರಾಷ್ಟ್ರ ನಿರ್ಮಾಣಕ್ಕೆ ಎಲ್ಲಾ ಭಾರತೀಯರು ಒಗ್ಗಟ್ಟಾಗಿ, ಈ ವಿನಾಶಕಾರಿ ಶಕ್ತಿಗಳಿಗೆ ತಕ್ಕ ಉತ್ತರ ನೀಡಬೇಕು’ ಎಂದು ಯೋಗ ಗುರು ಹೇಳಿದ್ದಾರೆ.
ಇದೇ ವೇಳೆ, ಮಹಾರಾಷ್ಟ್ರದ ನಾಗಪುರ್ನಲ್ಲಿ ಪತಂಜಲಿ ಸಂಸ್ಥೆ ಬೃಹತ್ ಫೂಡ್ ಮತ್ತು ಹರ್ಬಲ್ ಪಾರ್ಕ್ ಅನ್ನು ಆರಂಭಿಸಿದೆ. ಬಾಬಾ ಇವತ್ತು ಈ ಘಟಕಕ್ಕೆ ಚಾಲನೆ ನೀಡಿದ್ದಾರೆ. ಇದರಲ್ಲಿ ಕಿತ್ತಳೆ ಸೇರಿದಂತೆ ವಿವಿಧ ಹಣ್ಣುಗಳ ಸಂಸ್ಕರಣೆ ಮಾಡಲಾಗುತ್ತದೆ. ಅದರಲ್ಲೂ ಕಿತ್ತಳೆ ಸಂಸ್ಕರಣೆ ದೊಡ್ಡ ಮಟ್ಟದಲ್ಲಿ ನಡೆಸುವ ಸಾಮರ್ಥ್ಯ ಇದೆ. ಇದು ಏಷ್ಯಾದಲ್ಲೇ ಅತಿದೊಡ್ಡ ಕಿತ್ತಳೆ ಸಂಸ್ಕರಣಾ ಘಟಕವಾಗಿರಲಿದೆ.
ಇದನ್ನೂ ಓದಿ: ಭಾರತವೇ ಬೆಸ್ಟ್; ಸಾಲುಸಾಲಾಗಿ ತವರಿಗೆ ಬರುತ್ತಿರುವ ಭಾರತೀಯ ಸ್ಟಾರ್ಟಪ್ಗಳು
ಬಾಬಾ ರಾಮದೇವ್ ನೇತೃತ್ವದ ಪತಂಜಲಿ ಸಂಸ್ಥೆ ಈ ಘಟಕಕ್ಕಾಗಿ 1,500 ಕೋಟಿ ರೂ ಬಂಡವಾಳದ ವ್ಯವಸ್ಥೆ ಮಾಡಿದೆ. ಮಹಾರಾಷ್ಟ್ರದ ವಿದರ್ಭ ಪ್ರದೇಶಕ್ಕೆ ಈ ಘಟಕದಿಂದ ಸಾಕಷ್ಟು ಉಪಯೋಗವಾಗುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:05 pm, Sun, 9 March 25