AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Patanjali Nagpur: ಮಹಾರಾಷ್ಟ್ರದ ನಾಗಪುರದಲ್ಲಿ ಪತಂಜಲಿಯಿಂದ ಬೃಹತ್ ಆಹಾರ ಘಟಕ; 1,500 ಕೋಟಿ ರೂ ಹೂಡಿಕೆ

Mega food and herbal park by Patanjali at Nagpur: ಪತಂಜಲಿ ಸಂಸ್ಥೆ ಮಹಾರಾಷ್ಟ್ರದ ನಾಗಪುರ್​​ನಲ್ಲಿ ಬೃಹತ್ ಆಹಾರ ಮತ್ತು ಸಸ್ಯ ಸಂಸ್ಕರಣಾ ಘಟಕ ಆರಂಭಿಸಿದೆ. ಮಾರ್ಚ್ 9ರಂದು ಈ ಮೆಗಾ ಫುಡ್ ಪಾರ್ಕ್ ಕಾರ್ಯಾರಂಭಿಸಲಿದೆ. ಇದರಲ್ಲಿ ಹಣ್ಣು ಮತ್ತು ತರಕಾರಿಗಳ ಸಂಸ್ಕರಣಾ ಘಟಕಗಳಿದ್ದು, ಇದರ ಸ್ಥಾಪನೆಗೆ ಪತಂಜಲಿ ಸಂಸ್ಥೆ 1,500 ಕೋಟಿ ರೂ ಹೂಡಿಕೆ ಮಾಡಿದೆ. ವಿವಿಧ ಜ್ಯೂಸ್ ಕಾನ್ಸಂಟ್ರೇಟ್​​ಗಳು, ಸೌಂದರ್ಯವರ್ಧಕ ವಸ್ತುಗಳು ಇತ್ಯಾದಿಯನ್ನು ಇಲ್ಲಿ ತಯಾರಿಸಲಾಗುತ್ತದೆ.

Patanjali Nagpur: ಮಹಾರಾಷ್ಟ್ರದ ನಾಗಪುರದಲ್ಲಿ ಪತಂಜಲಿಯಿಂದ ಬೃಹತ್ ಆಹಾರ ಘಟಕ; 1,500 ಕೋಟಿ ರೂ ಹೂಡಿಕೆ
ಪತಂಜಲಿ ಮೆಗಾ ಫುಡ್ ಅಂಡ್ ಹರ್ಬಲ್ ಪಾರ್ಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 06, 2025 | 5:45 AM

Share

ಮುಂಬೈ, ಮಾರ್ಚ್ 6: ದೇಶದ ಪ್ರಮುಖ ಎಫ್​ಎಂಸಿಜಿ ಕಂಪನಿಯಾದ ಪತಂಜಲಿ ಮಹಾರಾಷ್ಟ್ರದ ನಾಗಪುರ್ ಜಿಲ್ಲೆಯಲ್ಲಿ 1,500 ಕೋಟಿ ರೂ ಹೂಡಿಕೆಯಲ್ಲಿ ಆಹಾರ ಸಂಸ್ಕರಣಾ ಘಟಕ ಸ್ಥಾಪಿಸುತ್ತಿದೆ. ಮಲ್ಟಿ ಮೋಡಲ್ ಇಂಟರ್ನ್ಯಾಷನಲ್ ಕಾರ್ಗೋ ಹಬ್ ಮತ್ತು ಏರ್ಪೋರ್ಟ್​ನಲ್ಲಿ (MIHAN) ಪತಂಜಲಿ ಮೆಗಾ ಫೂಡ್ ಮತ್ತು ಹರ್ಬಲ್ ಪಾರ್ಕ್ ಮಾರ್ಚ್ 9ರಂದು ಕಾರ್ಯನಿರ್ವಹಿಸಲು ಆರಂಭಿಸಲಾಗುತ್ತಿದೆ. ಈ ಸಂಸ್ಕರಣಾ ಘಟಕದಲ್ಲಿ ಹಣ್ಣು ಮತ್ತು ತರಕಾರಿಗಳಿಂದ ಜ್ಯೂಸ್, ಪಲ್ಪ್, ಪೇಸ್ಟ್ ಇತ್ಯಾದಿ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ.

ನಾಗಪುರ ಆರೆಂಜ್ ಸಿಟಿ ಅಥವಾ ಕಿತ್ತಳೆ ನಗರಿ ಎಂದೇ ಖ್ಯಾತವಾಗಿದೆ. ನಿಂಬೆ ಜಾತಿಗೆ ಸೇರಿದ ಕಿತ್ತಳೆ, ಮೂಸಂಬಿ ಇತ್ಯಾದಿ ಹಣ್ಣುಗಳನ್ನು ನಾಗಪುರದಲ್ಲಿ ಯಥೇಚ್ಛವಾಗಿ ಬೆಳೆಯಲಾಗುತ್ತಿದೆ. ಹೀಗಾಗಿ, ಸಿಟ್ರಸ್ ಸಂಸ್ಕರಣಾ ಘಟಕವನ್ನು ನಾಗಪುರದಲ್ಲಿ ಸ್ಥಾಪಿಸಲಾಗಿದೆ. ಪತಂಜಲಿಯ ಈ ಘಟಕದಲ್ಲಿ ದಿನಕ್ಕೆ 800 ಟನ್​ಗಳಷ್ಟು ಸಿಟ್ರಸ್ ಹಣ್ಣುಗಳನ್ನು ಸಂಸ್ಕರಿಸಿ ಜ್ಯೂಸ್ ಕಾನ್ಸಂಟ್ರೇಟ್ ತಯಾರಿಸಲಾಗುತ್ತದೆ. ಈ ರಸಕ್ಕೆ ಯಾವುದೇ ಸಕ್ಕರೆ ಅಥವಾ ಪ್ರಿಸರ್ವೇಟಿವ್​ಗಳನ್ನು ಹಾಕಲಾಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಭಾರತದ ಮೇಲೆ ಅಮೆರಿಕದ ಟ್ಯಾರಿಫ್ ಪರಿಣಾಮ ಯಾಕೆ ನಗಣ್ಯ? ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್​ನಲ್ಲಿ ಕೇಕಿ ಮಿಸ್ತ್ರಿ ಉತ್ತರ

ಇದು ಮಾತ್ರವಲ್ಲ, ನೆಲ್ಲಿಕಾಯಿ, ಮಾವಿನಹಣ್ಣು, ಸೀಬೆ ಹಣ್ಣು, ಪಪ್ಪಾಯ, ಸೇಬು, ದಾಳಿಂಬೆ, ಸ್ಟ್ರಾಬೆರಿ, ಪ್ಲಂ, ಮರಸೇಬು, ಟೊಮೆಟೋ, ಹಾಗಲು ಕಾಯಿ, ಕ್ಯಾರಟ್, ಆಲೂವೆರಾ ಇತ್ಯಾದಿ ಹಣ್ಣುಗಳನ್ನು ಈ ಘಟಕದಲ್ಲಿ ಸಂಸ್ಕರಿಸಲಾಗುತ್ತದೆ. ಇವುಗಳಿಂದಲೂ ವಿವಿಧ ಸಾಂದ್ರತೆಯ ರಸಗಳನ್ನು ಉತ್ಪಾದಿಸಲಾಗುತ್ತದೆ.

ಪತಂಜಲಿಯ ಘಟಕದಲ್ಲಿ ಹಣ್ಣ, ತರಕಾರಿಯ ಯಾವ ಭಾಗವೂ ವ್ಯರ್ಥವಾಗಲ್ಲ…

ನಾಗಪುರ್​ನಲ್ಲಿರುವ ಪತಂಜಲಿ ಫೂಡ್ ಪಾರ್ಕ್​ನಲ್ಲಿ ಟೆಟ್ರಾ ಪ್ಯಾಕ್ ಘಟಕವೊಂದನ್ನೂ ತೆರೆಯಲಾಗುತ್ತಿದೆ. ಈ ಪಾರ್ಕ್​ನ ಮತ್ತೊಂದು ವೈಶಿಷ್ಟ್ಯವೆಂದರೆ, ತಯಾರಿಕೆಯ ವೇಳೆ ಸಿಗುವ ಯಾವುದೇ ಉಪ ಉತ್ಪನ್ನ ಅಥವಾ ತ್ಯಾಜ್ಯವನ್ನು ವ್ಯರ್ಥವಾಗಲು ಬಿಡಲಾಗುವುದಿಲ್ಲ. ಕಿತ್ತಳೆ ಹಣ್ಣಿನಿಂದ ರಸ ಹೊರತೆಗೆದು ಉಳಿಯುವ ಸಿಪ್ಪೆಯಿಂದ ಎಣ್ಣೆ ಮಾಡಲಾಗುತ್ತದೆ. ಕಿತ್ತಳೆಯ ಸಿಪ್ಪೆಯಲ್ಲಿ ಕೋಲ್ಡ್ ಪ್ರೆಸ್ ಆಯಿಲ್ ಇರುತ್ತದೆ. ಇದಕ್ಕೆ ಬಹಳ ಬೇಡಿಕೆ ಇದೆ. ಹಾಗೆಯೇ, ಸಿಪ್ಪೆಯ ಪುಡಿಯನ್ನು ಸೌಂದರ್ಯವರ್ಧಕಗಳ ತಯಾರಿಕೆಗೆ ಉಪಯೋಗಿಸಲಾಗುತ್ತದೆ. ಪತಂಜಲಿ ಸಂಸ್ಥೆ ಈ ಉಪ ಉತ್ಪನ್ನದಿಂದಲೂ ಬೇರೆ ಉತ್ಪನ್ನ ತಯಾರಿಸುತ್ತದೆ.

ಇದನ್ನೂ ಓದಿ: ಮಹಾರಾಷ್ಟ್ರ ಬಹಳ ಬೇಗ ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಜ್ಯವಾಗಲಿದೆ: ಸಿಎಂ ದೇವೇಂದ್ರ ಫಡ್ನವಿಸ್

ಪತಂಜಲಿಯಿಂದ ಹಿಟ್ಟಿನ ಗಿರಣಿ

ನಾಗಪುರದ ಈ ಮೆಗಾ ಫುಡ್ ಪಾರ್ಕ್​ನಲ್ಲಿ ಪತಂಜಲಿ ಸಂಸ್ಥೆ ಒಂದು ಹಿಟ್ಟಿನ ಗಿರಣಿಯನ್ನೂ ಸ್ಥಾಪಿಸಿದೆ. ಪತಂಜಲಿ ಸಂಸ್ಥೆ ಗೋದಿಯನ್ನು ರೈತರಿಂದ ನೇರವಾಗಿ ಖರೀದಿಸುತ್ತದೆ. ಈ ಮಿಲ್​ನಲ್ಲಿ ದಿನಕ್ಕೆ ನೂರು ಟನ್​ಗಳಷ್ಟು ಗೋದಿಯನ್ನು ಪುಡಿ ಮಾಡಿ, ಜಲ್ನಾ, ಆಂಧ್ರ, ಮತ್ತು ತೆಲಂಗಾಣದಲ್ಲಿರುವ ಪತಂಜಲಿಯ ಬಿಸ್ಕತ್ ಫ್ಯಾಕ್ಟರಿಗಳಿಗೆ ಕಳುಹಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ