ಭಾರತದಲ್ಲೀಗ ಎಸ್ಐಪಿ ಮಂತ್ರ; ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ನಲ್ಲಿ ಮ್ಯೂಚುವಲ್ ಫಂಡ್ ಸಹೀ ಹೈ ಎಂದ ಎಎಂಎಫ್ಐ ಛೇರ್ಮನ್ ವೆಂಕಟ್ ಎನ್ ಚಲಸಾನಿ
AMFI chairman Venkat N Chalasani speaks at Money9 Financial Freedom Summit 2025: ಭಾರತದಲ್ಲಿ ಎಸ್ಐಪಿ ಜನಪ್ರಿಯತೆ ಬಹಳ ತೀವ್ರವಾಗಿ ಹೆಚ್ಚುತ್ತಿದೆ. ಪ್ರತಿ ತಿಂಗಳು ಸಾವಿರಾರು ಕೋಟಿ ರೂ ಹೂಡಿಕೆಗಳು ಮ್ಯೂಚುವಲ್ ಫಂಡ್ ಎಸ್ಐಪಿ ಮೂಲಕ ಷೇರು ಮಾರುಕಟ್ಟೆಗೆ ಹರಿದುಬರುತ್ತಿವೆ. ಈವರೆಗೆ 68 ಲಕ್ಷ ಕೋಟಿ ರೂ ಹೂಡಿಕೆಯು ಎಸ್ಐಪಿ ಮೂಲಕ ಸಲ್ಲಿಕೆಯಾಗಿವೆ ಎಂದು ಎಎಂಎಫ್ಐ ಛೇರ್ಮನ್ ವೆಂಕಟ್ ಎನ್ ಚಲಸಾನಿ ಹೇಳಿದ್ದಾರೆ. ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಮುಂಬೈ, ಮಾರ್ಚ್ 5: ಭಾರತದಲ್ಲಿ ಅತ್ಯಂತ ಪ್ರಮುಖ ಹಣಕಾಸು ಯಶೋಗಾಥೆಗಳನ್ನು ಪಟ್ಟಿ ಮಾಡಿದರೆ ಎಸ್ಐಪಿ ಇರುತ್ತದೆ. ಭಾರತದಲ್ಲಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಬಹಳ ಗಣನೀಯವಾಗಿ ಜನಪ್ರಿಯವಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ಗಳ ಸಂಘಟನೆಯಾದ ಎಎಂಎಫ್ಐ ಛೇರ್ಮನ್ ವೆಂಕಟ್ ಎನ್ ಚಲಸಾನಿ ಹೇಳಿದರು. ಟಿವಿ9 ನೆಟ್ವರ್ಕ್ ಮುಂಬೈನಲ್ಲಿ ಇಂದು ಬುಧವಾರ ಆಯೋಜಿಸಿದ ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ 2025ನ (Money9 Financial Freedom Summit 2025) ಸೆಷನ್ವೊಂದರಲ್ಲಿ ಮಾತನಾಡುತ್ತಿದ್ದ ಚಲಸಾನಿ, ಎಸ್ಐಪಿಗಳು ಹೇಗೆ ಮ್ಯೂಚುವಲ್ ಫಂಡ್ ಉದ್ಯಮ ಹಾಗೂ ಷೇರು ಮಾರುಕಟ್ಟೆಯನ್ನು ಎತ್ತರಿಸಿವೆ ಎನ್ನುವುದನ್ನು ಅಂಕಿ ಅಂಶ ಸಮೇತ ವಿವರಿಸಿದರು.
2018ರ ಮಾರ್ಚ್ನಲ್ಲಿ ಎಸ್ಐಪಿಗಳಿಂದ ಸೇರ್ಪಡೆಯಾದ ಒಟ್ಟು ನಿರ್ವಹಿತ ಆಸ್ತಿ 22 ಲಕ್ಷ ಕೋಟಿ ರೂ ಇತ್ತು. ಈಗ ಇದು 68 ಲಕ್ಷ ಕೋಟಿ ರೂಗೆ ಏರಿಕೆ ಆಗಿದೆ. ದೇಶದ ಜಿಡಿಪಿಯ ಶೇ. 12ರಷ್ಟು ಇದ್ದ ಎಯುಎಂ ಈಗ ಶೇ. 18ರಷ್ಟಾಗಿದೆ. ಈಗ ಪ್ರತೀ ತಿಂಗಳು ಎಸ್ಐಪಿ ಮೂಲಕ ಆಗುತ್ತಿರುವ ಸರಾಸರಿ ಹೂಡಿಕೆ 26,500 ಕೋಟಿ ರೂ ಆಗಿದೆ. ಭಾರತದ ಆರ್ಥಿಕತೆ ಮತ್ತು ಮಾರುಕಟ್ಟೆ ಬಗ್ಗೆ ದೇಶೀಯ ಹೂಡಿಕೆದಾರರಿಗೆ ವಿಶ್ವಾಸ ಹೆಚ್ಚುತ್ತಿರುವ ಕುರುಹು ಇದು ಎಂದು ವೆಂಕಟ್ ಎನ್ ಚಲಸಾನಿ ಅಭಿಪ್ರಾಯಪಟ್ಟರು.
2015ರಿಂದ ಷೇರು ಮಾರುಕಟ್ಟೆಯ ಚಹರೆ ಸಾಕಷ್ಟು ಬದಲಾವಣೆ ಆಗಿ ಹೋಗಿದೆ. ಮುಂಚೆಯಅದರೆ, ವಿದೇಶೀ ಸಾಂಸ್ಥಿಕ ಹೂಡಿಕೆಗಳು ಮಾರುಕಟ್ಟೆಯನ್ನು ಅತಿಹೆಚ್ಚು ಪ್ರಭಾವಿಸುತ್ತಿದ್ದವು. ಈಗ ದೇಶೀಯ ಹೂಡಿಕೆದಾರರ ಪಾತ್ರ ಹೆಚ್ಚಿದೆ. 10 ಕೋಟಿಗೂ ಅಧಿಕ ಎಸ್ಐಪಿ ಅಕೌಂಟ್ಗಳಿವೆ. ತಿಂಗಳು ಕಳೆದಂತೆ ಸಂಖ್ಯೆ ಹೆಚ್ಚಳ ಏರುತ್ತಲೇ ಇದೆ. ದೇಶದ ಮೂಲೆ ಮೂಲೆಗೂ ಈ ಯಶೋಗಾಥೆ ವಿಸ್ತರಿಸುವುದು ತಮ್ಮ ಸಂಘಟನೆಯ ಗುರಿ ಎಂದು ಎಎಂಎಫ್ಐ ಮುಖ್ಯಸ್ಥರು ತಿಳಿಸಿದರು.
ಜ್ಞಾನದ ಮೇಲೆ ಅತಿ ಹೆಚ್ಚು ಹೂಡಿಕೆಯಾಗಬೇಕು…
ಹೂಡಿಕೆ ಕುರಿತ ಅರಿವು ಎಷ್ಟು ಮುಖ್ಯ ಎನ್ನುವುದನ್ನು ವಿವರಿಸಿದ ವೆಂಕಟ್ ಚಲಸಾನಿ, ಜ್ಞಾನದ ಮೇಲೆ ಮಾಡುವ ಹೂಡಿಕೆಯೇ ಅತ್ಯಂತ ಪ್ರಮುಖ ಹೂಡಿಕೆಯಾಗಿದೆ. ಇದು ಅತಿಹೆಚ್ಚು ರಿಟರ್ನ್ ತರುತ್ತದೆ ಎಂದು ಹೇಳಿದರು.
ನೀವು ಟಿವಿಯಲ್ಲಿ ಮ್ಯೂಚುವಲ್ ಫಂಡ್ ಸಹೀ ಹೈ ಥೀಮ್ನಲ್ಲಿ ಸಾಕಷ್ಟು ಆ್ಯಡ್ಗಳನ್ನು ನೋಡಿರಬಹುದು. ಅದರ ಪರಿಕಲ್ಪನೆಯ ಕ್ರೆಡಿಟ್ ಅನ್ನು ಅಸೋಸಿಯೇಶನ್ ಆಫ್ ಮ್ಯೂಚುವಲ್ ಫಂಡ್ಸ್ ಆಫ್ ಇಂಡಿಯಾ ಸಂಸ್ಥೆಗೆ ಕೊಡಬೇಕು.
ಟಿವಿ9 ನೆಟ್ವರ್ಕ್ ಆಯೋಜಿಸಿರುವ ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ 2025 ಈ ಬಾರಿಯದ್ದು ಮೂರನೇ ಅವತರಣಿಕೆ. ಹಣಕಾಸು ನಿರ್ವಹಣೆ, ಹೂಡಿಕೆ ಇತ್ಯಾದಿ ಕುರಿತು ಜನಜಾಗೃತಿ ಮೂಡಿಸುವುದು ಈ ಶೃಂಗಸಭೆಯ ಮುಖ್ಯ ಉದ್ದೇಶವಾಗಿದೆ. ಹಣಕಾಸು ಕ್ಷೇತ್ರದ ದಿಗ್ಗಜರು, ವಿವಿಧ ಕಂಪನಿಗಳ ಸಿಇಒಗಳು, ಎಂಡಿಗಳು, ಛೇರ್ಮನ್ಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಸಲಹೆಗಳನ್ನು ನೀಡಿದ್ದಾರೆ.
Published On - 9:10 pm, Wed, 5 March 25




