Sign In

By signing in or creating an account, you agree with Associated Broadcasting Company's Terms & Conditions and Privacy Policy.

Money9 Financial Summit

Money9 Financial Summit

ಮನಿ9 ಎಂಬುದು ಟಿವಿ9 ನೆಟ್ವರ್ಕ್ ನಿರ್ವಹಿಸುತ್ತಿರುವ ಬ್ರ್ಯಾಂಡ್. ಪರ್ಸನಲ್ ಫೈನಾನ್ಸ್, ಮಾರುಕಟ್ಟೆ, ಆರ್ಥಿಕತೆ ಹೀಗೆ ವಿವಿಧ ಹಣಕಾಸು ಸಂಬಂಧಿ ವಿದ್ಯಮಾನಗಳ ವರದಿ, ವಿಶ್ಲೇಷಣೆ, ಸಲಹೆ ಇತ್ಯಾದಿ ಸೇವೆಗಳನ್ನು ಈ ಡಿಜಿಟಲ್ ಪ್ಲಾಟ್​ಫಾರ್ಮ್​ನಲ್ಲಿ ನೀಡಲಾಗುತ್ತದೆ. ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಮನಿ9 ಲಭ್ಯ ಇದೆ. ಜನರಿಗೆ ಹಣಕಾಸು ನಿರ್ವಹಣೆ, ಹೂಡಿಕೆ ಅವಕಾಶ ಇತ್ಯಾದಿ ಬಗ್ಗೆ ತಿಳಿವಳಿಕೆ ಮೂಡಿಸಲು ಆದ್ಯತೆ ನೀಡಲಾಗುತ್ತಿದೆ. 2023ರಿಂದ ಮನಿ9 ವತಿಯಿಂದ ಫೈನಾನ್ಷಿಯಲ್ ಫ್ರೀಡಂ ಶೃಂಗಸಭೆಯನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಹಣಕಾಸು ಮತ್ತು ಉದ್ಯಮ ಕ್ಷೇತ್ರದ ದಿಗ್ಗಜರು ಈ ಸಮಿಟ್​ನಲ್ಲಿ ಪಾಲ್ಗೊಂಡು ವಿವಿಧ ಹಣಕಾಸು ವಿಚಾರಗಳ ಬಗ್ಗೆ ಚರ್ಚೆ, ಸಲಹೆಗಳನ್ನು ನೀಡುತ್ತಾರೆ

ಇನ್ನೂ ಹೆಚ್ಚು ಓದಿ

ಮಾರುಕಟ್ಟೆ ಅಸ್ಥಿರತೆ ತಾತ್ಕಾಲಿಕ, ಮುಂದುವರಿಸಿ ನಿಮ್ಮ ಎಸ್​ಐಪಿ ಕಾಯಕ: ತಜ್ಞರ ಅನಿಸಿಕೆ

Mutual Funds industry leaders speak at Money9 Financial Freedom Summit 2025: ಷೇರು ಮಾರುಕಟ್ಟೆಯ ಸತತ ಕುಸಿತದಿಂದ ಕಂಗಾಲಾಗಿರುವ ಹೂಡಿಕೆದಾರರಿಗೆ ತಜ್ಞರು ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ ಕಾರ್ಯಕ್ರಮದಲ್ಲಿ ಮ್ಯೂಚುವಲ್ ಫಂಡ್ ಉದ್ಯಮಿಗಳು ಮಾತನಾಡುತ್ತಾ, ಮಾರುಕಟ್ಟೆ ಕುಸಿತ ಸಹಜ ಕ್ರಿಯೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮಾರುಕಟ್ಟೆಯ ಅಸ್ಥಿರತೆ ತಾತ್ಕಾಲಿಕ ಮಾತ್ರವೇ ಆಗಿರುತ್ತದೆ. ಕುಸಿತ ಕಂಡ ಬಳಿಕ ಏರಿಕೆ ಆಗಿಯೇ ಆಗುತ್ತದೆ ಎಂದು ಹೇಳಿದ್ದಾರೆ.

ಷೇರು ಮಾರುಕಟ್ಟೆ, ಗೂಳಿ, ಕರಡಿ, ಮೂರ್ಖ, ಜಾಣ… ಫೈನಾನ್ಷಿಯಲ್ ಫ್ರೀಡಂ ಸಮಿಟ್​​ನಲ್ಲಿ ಸತ್ಯ ಬಿಚ್ಚಿಟ್ಟ ವಿಜಯ್ ಕೆದಿಯಾ

Vijay Kedia speaks at Money9 Financial Summit 2025: ಮಾರುಕಟ್ಟೆ ಹೀಗೇ ಹೋಗುತ್ತೆ ಎಂದು ನಿಖರವಾಗಿ ಊಹಿಸಲು ಯಾರಿಂದಲೂ ಸಾಧ್ಯವಿಲ್ಲ. ಮಾರ್ಕೆಟ್ ಟೈಮಿಂಗ್ ಮಾಡಿ ಹೂಡಿಕೆ ಮಾಡುತ್ತೀನಿ ಎನ್ನುವುದು ಜಾಣತನವನ್ನ ಎಂದು ಖ್ಯಾತ ಹೂಡಿಕೆದಾರ ವಿಜಯ್ ಕೆದಿಯಾ ಹೇಳಿದ್ದಾರೆ. ಷೇರು ಮಾರುಕಟ್ಟೆಯ ಗೂಳಿ ಓಟದಲ್ಲಿ ಮೂರ್ಖರು ಸೃಷ್ಟಿಯಾಗುತ್ತಾರೆ. ಈ ಮೂರ್ಖರಿಂದ ಕರಡಿ ನೃತ್ಯ ಶುರುವಾಗುತ್ತೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ ವಿಜಯ್ ಕೆದಿಯಾ.

ಭಾರತದ ಮೇಲೆ ಅಮೆರಿಕದ ಟ್ಯಾರಿಫ್ ಪರಿಣಾಮ ಯಾಕೆ ನಗಣ್ಯ? ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್​ನಲ್ಲಿ ಕೇಕಿ ಮಿಸ್ತ್ರಿ ಉತ್ತರ

Keki Mistry speaks at Money9 Financial Freedom Summit 2025: ಅಮೆರಿಕದ ಸರ್ಕಾರ ಜಾರಿಗೆ ತಂದಿರುವ ರೆಸಿಪ್ರೋಕಲ್ ಟ್ಯಾರಿಫ್ ಕ್ರಮ ಭಾರತದ ಮೇಲೆ ಎಷ್ಟು ಪರಿಣಾಮ ಬೀರಬಹುದು ಎನ್ನುವುದು ಚರ್ಚೆಯ ಸರಕಾಗಿದೆ. ಟಿವಿ9 ನೆಟ್ವರ್ಕ್ ಆಯೋಜಿಸಿದ ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ ಕಾರ್ಯಕ್ರಮದಲ್ಲಿ ಎಚ್​ಡಿಎಫ್​ಸಿ ಸಿಇಒ ಕೇಕಿ ಮಿಸ್ತ್ರಿ ಮಾತನಾಡುತ್ತಾ, ಈ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಅವರ ಪ್ರಕಾರ ಅಮೆರಿಕದ ಟ್ಯಾರಿಫ್ ಕ್ರಮದಿಂದ ಭಾರತದ ಜಿಡಿಪಿ ಮೇಲೆ ಹೆಚ್ಚೆಂದರೆ ಶೇ. 2-3ರಷ್ಟು ಪರಿಣಾಮ ಬೀರಬಹುದು.

ಭಾರತದಲ್ಲೀಗ ಎಸ್​​ಐಪಿ ಮಂತ್ರ; ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್​​ನಲ್ಲಿ ಮ್ಯೂಚುವಲ್ ಫಂಡ್ ಸಹೀ ಹೈ ಎಂದ ಎಎಂಎಫ್​​ಐ ಛೇರ್ಮನ್ ವೆಂಕಟ್ ಎನ್ ಚಲಸಾನಿ

AMFI chairman Venkat N Chalasani speaks at Money9 Financial Freedom Summit 2025: ಭಾರತದಲ್ಲಿ ಎಸ್​ಐಪಿ ಜನಪ್ರಿಯತೆ ಬಹಳ ತೀವ್ರವಾಗಿ ಹೆಚ್ಚುತ್ತಿದೆ. ಪ್ರತಿ ತಿಂಗಳು ಸಾವಿರಾರು ಕೋಟಿ ರೂ ಹೂಡಿಕೆಗಳು ಮ್ಯೂಚುವಲ್ ಫಂಡ್ ಎಸ್​ಐಪಿ ಮೂಲಕ ಷೇರು ಮಾರುಕಟ್ಟೆಗೆ ಹರಿದುಬರುತ್ತಿವೆ. ಈವರೆಗೆ 68 ಲಕ್ಷ ಕೋಟಿ ರೂ ಹೂಡಿಕೆಯು ಎಸ್​ಐಪಿ ಮೂಲಕ ಸಲ್ಲಿಕೆಯಾಗಿವೆ ಎಂದು ಎಎಂಎಫ್​​ಐ ಛೇರ್ಮನ್ ವೆಂಕಟ್ ಎನ್ ಚಲಸಾನಿ ಹೇಳಿದ್ದಾರೆ. ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಬೆಳಗ್ಗೆ ಖರೀದಿಸಿ, ಮಧ್ಯಾಹ್ನ ಮಾರೋದು ಹೂಡಿಕೆ ಅಲ್ಲ: ಮನಿ9 ಸಮಿಟ್​ನಲ್ಲಿ ಎನ್​ಎಸ್​ಇ ಸಿಇಒ ಆಶೀಶ್ ಚೌಹಾಣ್ ಕಿವಿಮಾತು

NSE CEO Ashish Kumar Chauhan speaks at Money9 Financial Freedom Summit 2025: ಕಿರು ಅವಧಿಗೆ ಹೂಡಿಕೆ ಯಾವತ್ತೂ ಇರಬಾರದು. ದೀರ್ಘಾವಧಿ ಹೂಡಿಕೆ ಮಾಡಬೇಕು ಎಂದು ಯುವಜನರಿಗೆ ನ್ಯಾಷನಲ್ ಸ್ಟಾಕ್ ಎಕ್ಸ್​​ಚೇಂಜ್ ಸಿಇಒ ಆಶೀಶ್ ಚೌಹಾಣ್ ತಿಳಿಹೇಳಿದ್ದಾರೆ. ಇಂಟ್ರಾಡೇ ಟ್ರೇಡಿಂಗ್ ಮತ್ತು ಎಫ್ ಅಂಡ್ ಒ ಟ್ರೇಡಿಂಗ್​​ಗಳಿಂದ ದೂರ ಇರುವಂತೆ ಅವರು ಪರೋಕ್ಷವಾಗಿ ಮನವಿ ಮಾಡಿದ್ದಾರೆ. ಟಿವಿ9 ನೆಟ್ವರ್ಕ್ ಆಯೋಜಿಸಿದ ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ 2025 ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಮಹಾರಾಷ್ಟ್ರ ಬಹಳ ಬೇಗ ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಜ್ಯವಾಗಲಿದೆ: ಸಿಎಂ ದೇವೇಂದ್ರ ಫಡ್ನವಿಸ್

Maharashtra CM Devendra Fadnavis speaks at Money9 Financial Freedom Summit 2025: 2030ರೊಳಗೆ ಮಹಾರಾಷ್ಟ್ರ ರಾಜ್ಯದ ಆರ್ಥಿಕತೆ ಒಂದು ಟ್ರಿಲಿಯನ್ ಡಾಲರ್ ಗಾತ್ರದ್ದಾಗಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಹಿಂದಿನ ಮಹಾರಾಷ್ಟ್ರ ವಿಕಾಸ್ ಆಘಾಡಿ ಸರ್ಕಾರದ ಕಳಪೆ ಆಡಳಿತ ನಿರ್ವಹಣೆ ಹಾಗೂ ಕೋವಿಡ್ ಕಾರಣಕ್ಕೆ ಮಹಾರಾಷ್ಟ್ರದ ಗುರಿ ಸಾಧನೆ ತುಸು ವಿಳಂಬವಾಗಿದೆ ಎಂದೂ ಅವರು ಹೇಳಿದ್ದಾರೆ. ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ 2025ನಲ್ಲಿ ಸಂದರ್ಶನದಲ್ಲಿ ಅವರು ಪಾಲ್ಗೊಂಡು ಮಾತನಾಡುತ್ತಿದ್ದರು.

ಮೋದಿ ನಾಯಕತ್ವದಲ್ಲಿ ಹೊಸ ವಿಶ್ವ ಶ್ರೇಣಿಯಲ್ಲಿ ಭಾರತಕ್ಕೆ ವಿಶೇಷ ಸ್ಥಾನಮಾನ: ಟಿವಿ9 ನೆಟ್ವರ್ಕ್ ಸಿಇಒ ಬರುಣ್ ದಾಸ್

Money9 Financial Freedom Summit 2025: ಮುಂಬೈನಲ್ಲಿ ಇಂದು ಬುಧವಾರ ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ 2025 ಕಾರ್ಯಕ್ರಮ ನಡೆಸಲಾಗಿದೆ. ಟಿವಿ9 ನೆಟ್ವರ್ಕ್ ವತಿಯಿಂದ ಆಯೋಜನೆಯಾದ ಈ ಕಾರ್ಯಕ್ರಮವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಉದ್ಘಾಟಿಸಿದ್ದಾರೆ. ಟಿವಿ9 ನೆಟ್ವರ್ಕ್ ಸಿಇಒ ಬರುಣ್ ದಾಸ್ ಸ್ವಾಗತ ಭಾಷಣ ಮಾಡಿ, ಭಾರತ ಜಾಗತಿಕವಾಗಿ ಹೇಗೆ ಮಹತ್ವದ ಪಾತ್ರಧಾರಿಯಾಗಿದೆ ಎಂದು ವಿವರಿಸಿದ್ದಾರೆ.

ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ 2025, ಕಾರ್ಯಕ್ರಮ ಲೈವ್ ವೀಕ್ಷಿಸಿ

Money9 Financial Freedom Summit 2025: ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್​ನ ಮೂರನೇ ಆವೃತ್ತಿ ಇವತ್ತು ಆಯೋಜನೆಯಾಗುತ್ತಿದೆ. ಮುಂಬೈನ ಸಂತಾಕ್ರೂಜ್​ನಲ್ಲಿನ ತಾಜ್ ಹೋಟೆಲ್​ನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಅದರ ನೇರ ಪ್ರಸಾರವನ್ನು ಡಿಜಿಟಲ್ ಪ್ಲಾಟ್​ಫಾರ್ಮ್​​ಗಳಲ್ಲಿ ಕಾಣಬಹುದು. ಕಾರ್ಯಕ್ರಮದ ಪ್ರಮುಖ ದೃಶ್ಯ ತುಣುಕುಗಳನ್ನು ಟಿವಿ9 ಕನ್ನಡ ವೆಬ್​ಸೈಟ್​ನಲ್ಲೂ ನೋಡಬಹುದು.

ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ 2025; ಭಾರತದ ಮೊದಲ ಪರ್ಸನಲ್ ಫೈನಾನ್ಸ್ ಸಮಾವೇಶದ 3ನೇ ಆವೃತ್ತಿ

Money9 Financial Freedom Summit 2025: ಟಿವಿ9 ನೆಟ್ವರ್ಕ್​​ಗೆ ಸೇರಿದ ಮನಿ9ನಿಂದ ಫೈನಾನ್ಷಿಯಲ್ ಫ್ರೀಡಂ ಶೃಂಗಸಭೆ 2025 ಇಂದು ನಡೆಯಲಿದೆ. ಮುಂಬೈನ ತಾಜ್ ಹೋಟೆಲ್​ನಲ್ಲಿ ಮಾ. 5, ಮಧ್ಯಾಹ್ನ 3 ಗಂಟೆಗೆ ಆರಂಭವಾಗುವ ಈ ಸಮಿಟ್​ನಲ್ಲಿ ಹಣಕಾಸು ಕ್ಷೇತ್ರದ ದಿಗ್ಗಜರು ಪಾಲ್ಗೊಳ್ಳಲಿದ್ದಾರೆ. ವಿವಿಧ ವಿಚಾರಗಳ ಬಗ್ಗೆ ವಿವಿಧ ಚರ್ಚಾ ಕಾರ್ಯಕ್ರಮಗಳು, ಸಂವಾದ ಕಾರ್ಯಕ್ರಮಗಳು ನಡೆಯಲಿವೆ.

ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್
ತೀವ್ರ ಕುತೂಹಲ ಮೂಡಿಸಿರುವ ಬಸನಗೌಡ ಯತ್ನಾಳ್ ಮುಂದಿನ ನಡೆ
ತೀವ್ರ ಕುತೂಹಲ ಮೂಡಿಸಿರುವ ಬಸನಗೌಡ ಯತ್ನಾಳ್ ಮುಂದಿನ ನಡೆ
ಹನಿ ಟ್ರ್ಯಾಪ್ ಪ್ರಕರಣ ವೈಯಕ್ತಿಕವಾದದ್ದು, ಕಾಮೆಂಟ್ ಮಾಡಲಾರೆ: ರಾಜು ಕಾಗೆ
ಹನಿ ಟ್ರ್ಯಾಪ್ ಪ್ರಕರಣ ವೈಯಕ್ತಿಕವಾದದ್ದು, ಕಾಮೆಂಟ್ ಮಾಡಲಾರೆ: ರಾಜು ಕಾಗೆ