Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ 2025; ಭಾರತದ ಮೊದಲ ಪರ್ಸನಲ್ ಫೈನಾನ್ಸ್ ಸಮಾವೇಶದ 3ನೇ ಆವೃತ್ತಿ

Money9 Financial Freedom Summit 2025: ಟಿವಿ9 ನೆಟ್ವರ್ಕ್​​ಗೆ ಸೇರಿದ ಮನಿ9ನಿಂದ ಫೈನಾನ್ಷಿಯಲ್ ಫ್ರೀಡಂ ಶೃಂಗಸಭೆ 2025 ಇಂದು ನಡೆಯಲಿದೆ. ಮುಂಬೈನ ತಾಜ್ ಹೋಟೆಲ್​ನಲ್ಲಿ ಮಾ. 5, ಮಧ್ಯಾಹ್ನ 3 ಗಂಟೆಗೆ ಆರಂಭವಾಗುವ ಈ ಸಮಿಟ್​ನಲ್ಲಿ ಹಣಕಾಸು ಕ್ಷೇತ್ರದ ದಿಗ್ಗಜರು ಪಾಲ್ಗೊಳ್ಳಲಿದ್ದಾರೆ. ವಿವಿಧ ವಿಚಾರಗಳ ಬಗ್ಗೆ ವಿವಿಧ ಚರ್ಚಾ ಕಾರ್ಯಕ್ರಮಗಳು, ಸಂವಾದ ಕಾರ್ಯಕ್ರಮಗಳು ನಡೆಯಲಿವೆ.

ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ 2025; ಭಾರತದ ಮೊದಲ ಪರ್ಸನಲ್ ಫೈನಾನ್ಸ್ ಸಮಾವೇಶದ 3ನೇ ಆವೃತ್ತಿ
ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ 2025
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 06, 2025 | 10:58 AM

ಮುಂಬೈ, ಮಾರ್ಚ್ 5: ಭಾರತದ ಮೊದಲ ಪರ್ಸನಲ್ ಫೈನಾನ್ಸ್ ಸಮಾವೇಶ ಎನಿಸಿದ ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್​ನ ಮೂರನೇ ಆವೃತ್ತಿ ಆಯೋಜನೆಯಾಗುತ್ತಿದೆ. ಮುಂಬೈ ಸಾಂತಾಕ್ರೂಜ್​ನಲ್ಲಿನ ಹೋಟೆಲ್ ತಾಜ್​ನಲ್ಲಿ ಬುಧವಾರ ನಡೆಯುತತಿದೆ. ಟಿವಿ9 ನೆಟ್ವರ್ಕ್ ಆಯೋಜಿಸಿರುವ ಈ ಸಮಾವೇಶದಲ್ಲಿ ಹಣಕಾಸು ಕ್ಷೇತ್ರದ ದಿಗ್ಗಜರು ಪಾಲ್ಗೊಳ್ಳುತ್ತಿದ್ದಾರೆ. ಷೇರು ಮಾರುಕಟ್ಟೆಯ ಅಸ್ಥಿರ ವರ್ತನೆಯಿಂದ ಹಿಡಿದು ಆರ್ಥಿಕ ಬೆಳವಣಿಗೆಗೆ ಸರ್ಕಾರ ಯಾವ ರೀತಿಯ ಕಾರ್ಯತಂತ್ರ ರೂಪಿಸಿದೆ ಇತ್ಯಾದಿ ವಿಚಾರಗಳ ಕುರಿತು ಈ ಶೃಂಗಸಭೆಯಲ್ಲಿ ಚರ್ಚೆಗಳು, ವಿಚಾರ ವಿನಿಮಯಗಳು ನಡೆಯಲಿವೆ.

ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ 2025 ಕಾರ್ಯಕ್ರಮದ ವಿವರ

ಈ ಶೃಂಗಸಭೆ ಮಧ್ಯಾಹ್ನ 3:30ಕ್ಕೆ ಆರಂಭವಾಗುತ್ತದೆ. ಟಿವಿ9 ನೆಟ್ವರ್ಕ್ ಎಂಡಿ ಬರುಣ್ ದಾಸ್ ಅವರಿಂದ ಉದ್ಘಾಟನಾ ಭಾಷಣ ಇರಲಿದೆ. ಇದಾದ ಬಳಿಕ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಜೊತೆ ಬರುಣ್ ದಾಸ್ ಸಂವಾದ ಕಾರ್ಯಕ್ರಮ ಇರುತ್ತದೆ.

ಮಧ್ಯಾಹ್ನ 4ಕ್ಕೆ: ಎಚ್​​ಡಿಎಫ್​​ಸಿಯ ಮಾಜಿ ವೈಸ್ ಪ್ರೆಸಿಡೆಂಟ್ ಕೇಕಿ ಮಿಸ್ತ್ರಿ ಜೊತೆ ಟಿವಿ9 ನೆಟ್ವರ್ಕ್ ಸಂಪಾದಕ ಆರ್ ಶ್ರೀಧರನ್ ಸಂವಾದ ನಡೆಸಲಿದ್ದಾರೆ.

ನಂತರ ರಾತ್ರಿ 8:40ರವರೆಗೂ ವಿವಿಧ ಸಂವಾದ ಮತ್ತು ಚರ್ಚಾ ಕಾರ್ಯಕ್ರಮಗಳು ನಡೆಯಲಿವೆ. ಆಮದು ಸುಂಕದ ಅಡೆತಡೆಗಳನ್ನು ದಾಟುವುದು ಹೇಗೆ, ಮಾರುಕಟ್ಟೆ ಪುಟಿದೇಳುತ್ತದಾ, ಭಾರತದ ಎಸ್​​ಐಪಿ ಮಂತ್ರ, ಮಾರುಕಟ್ಟೆ ಕುಸಿತದಲ್ಲೂ ವಿಶ್ವಾಸ ಇಟ್ಟುಕೊಳ್ಳುವುದು ಹೇಗೆ, ಸರ್ವರಿಗೂ ವಿಮೆ ಇವೇ ಮುಂತಾದ ವಿಚಾರಗಳ ಬಗ್ಗೆ ಚರ್ಚೆಗಳು ನಡೆಯಲಿವೆ.

ಎನ್​ಎಸ್​ಇ, ಎಂಎಂಎಫ್​ಐ, ಆದಿತ್ಯ ಬಿರ್ಲಾ ಸನ್ ಲೈಫ್ ಎಎಂಸಿ, ಡಿಎಸ್​​ಪಿ ಮ್ಯೂಚುವಲ್ ಫಂಡ್, ನಿರ್ಮಲ್ ಬಾಂಗ್ ಸೆಕ್ಯೂರಿಟೀಸ್, ಆನಂದ್ ರಾಠಿ ವೆಲ್ತ್ ಮ್ಯಾನೇಜ್ಮೆಂಟ್, ಬಂಧನ್ ಲೈಫ್, ಕೋಟಕ್ ಲೈಫ್ ಇನ್ಷೂರೆನ್ಸ್ ಇತ್ಯಾದಿ ವಿವಿಧ ಕಂಪನಿಗಳ ಸಿಇಒ, ಪ್ರೆಸಿಡೆಂಟ್, ಸಂಸ್ಥಾಪಕರು ಪಾಲ್ಗೊಳ್ಳಲಿದ್ದಾರೆ. ವಿಜಯ್ ಕೇದಿಯಾ ಅವರಂಥ ಅಗ್ರಗಣ್ಯ ಹೂಡಿಕೆದಾರರೂ ಕೂಡ ತಮ್ಮ ಜಾಣ ನುಡಿಗಳನ್ನು ಹಂಚಿಕೊಳ್ಳಲಿದ್ದಾರೆ.

ಮನಿ9 ಬಗ್ಗೆ

ಟಿವಿ9 ನೆಟ್ವರ್ಕ್​ನ ಭಾಗವಾದ ಮನಿ9 ಕಳೆದ ನಾಲ್ಕು ವರ್ಷಗಳಿಂದ ವೈಯಕ್ತಿಕ ಹಣಕಾಸು, ಷೇರು ಮಾರುಕಟ್ಟೆ, ಉದ್ಯಮಗಳ ಸುದ್ದಿ ಮತ್ತು ವಿಶ್ಲೇಷಣೆಗೆ ದೇಶದಲ್ಲಿ ಪ್ರಮುಖ ಪ್ಲಾಟ್​​ಫಾರ್ಮ್ ಎನಿಸಿದೆ. ದೇಶದ ಆರ್ಥಿಕತೆ, ಹಣಕಾಸು, ಮಾರುಕಟ್ಟೆ ವಿಚಾರಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಕಳೆದ ಎರಡು ವರ್ಷಗಳಿಂದ ಫೈನಾನ್ಷಿಯಲ್ ಫ್ರೀಡಂ ಶೃಂಗಸಭೆ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯದ್ದು ಮೂರನೇ ಆವೃತ್ತಿ. ಈ ಕಾರ್ಯಕ್ರಮದ ನೇರ ವೀಕ್ಷಣೆಗೆ ಈ ಲಿಂಕ್ ಕ್ಲಿಕ್ ಮಾಡಿ: www.youtube.com/live/DdlRFolG_tA

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:30 am, Wed, 5 March 25

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!