AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ನಾಯಕತ್ವದಲ್ಲಿ ಹೊಸ ವಿಶ್ವ ಶ್ರೇಣಿಯಲ್ಲಿ ಭಾರತಕ್ಕೆ ವಿಶೇಷ ಸ್ಥಾನಮಾನ: ಟಿವಿ9 ನೆಟ್ವರ್ಕ್ ಸಿಇಒ ಬರುಣ್ ದಾಸ್

Money9 Financial Freedom Summit 2025: ಮುಂಬೈನಲ್ಲಿ ಇಂದು ಬುಧವಾರ ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ 2025 ಕಾರ್ಯಕ್ರಮ ನಡೆಸಲಾಗಿದೆ. ಟಿವಿ9 ನೆಟ್ವರ್ಕ್ ವತಿಯಿಂದ ಆಯೋಜನೆಯಾದ ಈ ಕಾರ್ಯಕ್ರಮವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಉದ್ಘಾಟಿಸಿದ್ದಾರೆ. ಟಿವಿ9 ನೆಟ್ವರ್ಕ್ ಸಿಇಒ ಬರುಣ್ ದಾಸ್ ಸ್ವಾಗತ ಭಾಷಣ ಮಾಡಿ, ಭಾರತ ಜಾಗತಿಕವಾಗಿ ಹೇಗೆ ಮಹತ್ವದ ಪಾತ್ರಧಾರಿಯಾಗಿದೆ ಎಂದು ವಿವರಿಸಿದ್ದಾರೆ.

ಮೋದಿ ನಾಯಕತ್ವದಲ್ಲಿ ಹೊಸ ವಿಶ್ವ ಶ್ರೇಣಿಯಲ್ಲಿ ಭಾರತಕ್ಕೆ ವಿಶೇಷ ಸ್ಥಾನಮಾನ: ಟಿವಿ9 ನೆಟ್ವರ್ಕ್ ಸಿಇಒ ಬರುಣ್ ದಾಸ್
ಬರುಣ್ ದಾಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 06, 2025 | 10:57 AM

Share

ಮುಂಬೈ, ಮಾರ್ಚ್ 5: ಪ್ರಧಾನಿ ನರೇಂದ್ರ ಮೋದಿ ನಾಯಕ್ವದಲ್ಲಿ ಭಾರತ ಜಾಗತಿಕವಾಗಿ ವಿಶೇಷ ಪಾತ್ರ ಪಡೆದಿದೆ. ಯಾರೊಂದಿಗೂ ವೈರತ್ವ ಬಯಸದ, ಪ್ರತಿಯೊಂದು ದೇಶದೊಂದಿಗೂ ಸ್ನೇಹ ಬಯಸುವ ಮತ್ತು ಪ್ರಗತಿಗೆ ಭಾಗಿದಾರನಾಗ ಬಯಸುವ ಪಾತ್ರ ಭಾರತದ್ದು ಎಂದು ಟಿವಿ9 ನೆಟ್ವರ್ಕ್​ನ ಎಂಡಿ ಮತ್ತು ಸಿಇಒ ಬರುಣ್ ದಾಸ್ ಹೇಳಿದ್ದಾರೆ. ಮುಂಬೈನಲ್ಲಿ ಇಂದು ಆರಂಭವಾದ ಮನಿ9 ಫೈನಾನ್ಷಿಯಲ್ ಫ್ರೀಡಂ ಶೃಂಗಸಭೆಯ (Money9 Financial Freedom Summit 2025) ಸ್ವಾಗತ ಭಾಷಣದಲ್ಲಿ ಬರುಣ್ ದಾಸ್ ಅವರು, ಜಾಗತಿಕ ಮಟ್ಟದಲ್ಲಿ ಭಾರತ ಹೇಗೆ ದಾಪುಗಾಲಿಡುತ್ತಿದೆ ಎಂದು ವಿವರಿಸುವ ಪ್ರಯತ್ನ ಮಾಡಿದ್ದಾರೆ.

‘ಸದ್ಯ ವಿಶ್ವದಲ್ಲಿ ತೀವ್ರತರವಾದ ಆರ್ಥಿಕ ಮತ್ತು ರಾಜಕೀಯ ಅನಿಶ್ಚಿತತೆಯ ಪರಿಸ್ಥಿತಿ ಇದೆ. ಅಪರಿಮಿತವೆನಿಸುವಂತಹ ವೇಗದಲ್ಲಿ ಹೊಸ ವಿಶ್ವ ವ್ಯವಸ್ಥೆ ನಿರ್ಮಾಣ ಆಗುತ್ತಿರುವುದನ್ನು ಪ್ರತ್ಯಕ್ಷವಾಗಿ ಕಾಣುತ್ತಿದ್ದೇವೆ’ ಎಂದು ಟಿವಿ9 ನೆಟ್ವರ್ಕ್​ನ ಮ್ಯಾನೇಜಿಂಗ್ ಡೈರೆಕ್ಟರ್ ಆದ ಅವರು ಹೇಳಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ಶೃಂಗಸಭೆಯ ಉದ್ಘಾಟನೆ ಮಾಡಿದರು. ಮುಂಬೈನಲ್ಲಿ ನಡೆಯುತ್ತಿರುವ ಈ ಶೃಂಗಸಭೆ ಮೂರನೇ ಆವೃತ್ತಿಯಾಗಿದ್ದು, ರಾತ್ರಿ 10 ಗಂಟೆಯವರೆಗೆ ವಿವಿಧ ಚರ್ಚೆ, ಭಾಷಣ, ಸಂವಾದ ಕಾರ್ಯಕ್ರಮಗಳು ನಡೆಯಲಿವೆ.

ಇದನ್ನೂ ಓದಿ: ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ 2025, ಕಾರ್ಯಕ್ರಮ ಲೈವ್ ವೀಕ್ಷಿಸಿ

ಬರುಣ್ ದಾಸ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಅಭಿವೃದ್ಧಿಪರ ನೀತಿಗಳ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದು, ಆ ರಾಜ್ಯವನ್ನು ಭಾರತದ ಆರ್ಥಿಕ ಯಂತ್ರವಾಗಿ ಮಾಡುವ ಕನಸಿಗೆ ಪೂರಕವಾದ ಸಲಹೆಗಳು ಈ ಶೃಂಗಸಭೆಯಲ್ಲಿ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಅವರು ಯುವ ಹೂಡಿಕೆದಾರರಿಗೆ ಈ ಕೆಳಕಾಣಿಸಿದ ಸಲಹೆಗಳನ್ನು ನೀಡಿದ್ದಾರೆ:

  1. ದಿಢೀರ್ ಶ್ರೀಮಂತರಾಗಲು ಶಾರ್ಟ್ ಕಟ್ ಬೇಡ. ದೀರ್ಘಾವಧಿ ಹೂಡಿಕೆಗಳತ್ತ ಗಮನ ಹರಿಸಿ
  2. ಕೇವಲ ಉಳಿತಾಯಕ್ಕೆ ಸೀಮಿತವಾಗದೇ ಹೂಡಿಕೆಯನ್ನೂ ಮಾಡಿರಿ. ಈ ಮೂಲಕ ಹಣಕಾಸು ಸ್ವಾತಂತ್ರ್ಯ ಪಡೆಯಿರಿ.
  3. ಸದ್ಯ ಇರುವ ವಿವಿಧ ಹೂಡಿಕೆ ಆಯ್ಕೆಗಳ ಬಗ್ಗೆ ತಿಳಿದುಕೊಳ್ಳಿ.
  4. ನೀವಷ್ಟೇ ಅಲ್ಲ, ನಿಮ್ಮ ಕುಟುಂಬದ ಇತರ ಸದಸ್ಯರು, ನಿಮ್ಮ ಮನೆಯ ಕೆಲಸಗಾರರು, ನೆರೆ ಹೊರೆಯವರು, ಸ್ನೇಹಿತರು ಇವರಿಗೂ ಕೂಡ ಉತ್ತಮ ಹಣಕಾಸು ಅಭ್ಯಾಸಗಳ ಬಗ್ಗೆ ಅರಿವು ಮೂಡಿಸಲು ಯತ್ನಿಸಿ.

ಇದನ್ನೂ ಓದಿ: ಸಾಲ ವಿಪರೀತವಾಯ್ತು; ಅಮೆರಿಕಕ್ಕೆ ‘ಹಾರ್ಟ್ ಅಟ್ಯಾಕ್’ ಆಗೋ ಮುನ್ನ ಸರಿಮಾಡಿ: ರೇ ಡೇಲಿಯೋ

ಟಿವಿ9 ನೆಟ್ವರ್ಕ್​ನಿಂದ ಈ ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ ಅನ್ನು ಆಯೋಜಿಸಲಾಗಿದೆ. ಹಣಕಾಸು ಕ್ಷೇತ್ರದ ಹಲವು ದಿಗ್ಗಜರು ಇದರಲ್ಲಿ ಪಾಲ್ಗೊಂಡಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ಕಾರ್ಯಕ್ರಮ ಉದ್ಘಾಟನೆ ಮಾಡಿದ ಬಳಿಕ ಸಂದರ್ಶನ ಕೂಡ ನೀಡಿದ್ದಾರೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:16 pm, Wed, 5 March 25