Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಆರ್ಥಿಕತೆಗೆ ಕುಂಭಮೇಳದ ಕಿಕ್; ತಯಾರಿಕಾ ವಲಯದಿಂದಲೂ ಪುಷ್ಟಿ; ಏಜೆನ್ಸಿಗಳ ಸಕಾರಾತ್ಮಕ ಅಂದಾಜು

India GDP growth rate: ಭಾರತದ ಆರ್ಥಿಕತೆ ಈ ಹಣಕಾಸು ವರ್ಷದಲ್ಲಿ ಶೇ. 6.5ರಷ್ಟು ಬೆಳೆಯಬಹುದು ಎಂದು ಬ್ಯಾಂಕ್ ಆಫ್ ಬರೋಡಾ, ಕ್ರಿಸಿಲ್ ಮೊದಲಾದ ಸಂಸ್ಥೆಗಳು ಅಂದಾಜು ಮಾಡಿವೆ. ಈ ವರ್ಷದ ಕೊನೆಯ ಕ್ವಾರ್ಟರ್​​ನಲ್ಲಿ ಜಿಡಿಪಿ ದರ ಉತ್ತಮವಾಗಿರಲಿದೆ. ಮಹಾ ಕುಂಭಮೇಳದಿಂದ ಆರ್ಥಿಕ ಬೆಳವಣಿಗೆಗೆ ಪುಷ್ಟಿ ಸಿಕ್ಕಿದೆ ಎಂದು ಹೇಳಲಾಗಿದೆ.

ಭಾರತದ ಆರ್ಥಿಕತೆಗೆ ಕುಂಭಮೇಳದ ಕಿಕ್; ತಯಾರಿಕಾ ವಲಯದಿಂದಲೂ ಪುಷ್ಟಿ; ಏಜೆನ್ಸಿಗಳ ಸಕಾರಾತ್ಮಕ ಅಂದಾಜು
ಭಾರತದ ಆರ್ಥಿಕತೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 09, 2025 | 5:37 PM

ನವದೆಹಲಿ, ಮಾರ್ಚ್ 9: ಈ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್ ಆದ ಜನವರಿಯಿಂದ ಮಾರ್ಚ್​​ವರೆಗಿನ ಅವಧಿಯಲ್ಲಿ ಭಾರತದ ಆರ್ಥಿಕ ಬೆಳವಣಿಗೆ (GDP growth) ಚುರುಕು ಪಡೆಯುವ ನಿರೀಕ್ಷೆ ಇದೆ. ಹೆಚ್ಚಿನ ಸೂಚಕಗಳು ಉತ್ತಮ ಜಿಡಿಪಿ ವೃದ್ಧಿ ಸಾಧ್ಯತೆಯನ್ನು ತೋರಿಸುತ್ತಿವೆ. ವಿಮಾನ ಪ್ರಯಾಣ, ಹೊಸ ವಾಹನ ಮಾರಾಟ ಕಡಿಮೆ ಆಗಿದ್ದರೂ, ಜಿಎಸ್​​ಟಿ ಸಂಗ್ರಹ, ಇ-ವೇ ಬಿಲ್ ಇತ್ಯಾದಿಗಳು ಹೆಚ್ಚಿರುವುದು ಗರಿಗೆದರಿದ ಆರ್ಥಿಕತೆಯ ಕುರುಹಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾದ ವರದಿಯಲ್ಲಿ ಹೇಳಲಾಗಿದೆ. ಕುಂಭಮೇಳದಲ್ಲಿ ನಡೆದ ಅಮೋಘ ವ್ಯಾಪಾರ ವಹಿವಾಟು, ಸರಕು ಮತ್ತು ಸೇವಾ ಮಾರಾಟವು ಜಿಡಿಪಿ ಬೆಳವಣಿಗೆಗೆ ಪುಷ್ಟಿ ನೀಡಿರಬಹುದು ಎಂದು ಈ ವರದಿಯಲ್ಲಿ ಅಂದಾಜಿಸಲಾಗಿದೆ.

ಮಾರ್ಚ್ ಅಂತ್ಯದ ಕ್ವಾರ್ಟರ್​​ನಲ್ಲಿ ಉತ್ತಮ ಬೆಳವಣಿಗೆ ಕಾಣುವ ಸಂಭವ ಇರುವ ಹಿನ್ನೆಲೆಯಲ್ಲಿ ಇಡೀ ಹಣಕಾಸು ವರ್ಷದಲ್ಲಿ (2024-25) ಜಿಡಿಪಿ ದರ ಶೇ. 6.5ರಷ್ಟಿರಬಹುದು ಎಂದು ಬಿಒಬಿ ಅಂದಾಜು. ಕೃಷಿ ವಲಯ ನಿರೀಕ್ಷೆಮೀರಿದ ಬೆಳವಣಿಗೆ ಕಂಡಿರುವುದು ಕೂಡ ಆರ್ಥಿಕತೆಗೆ ಪ್ಲಸ್ ಪಾಯಿಂಟ್. ಮೂರನೇ ಕ್ವಾರ್ಟರ್​​ನಲ್ಲಿ ಈ ಸೆಕ್ಟರ್ ಶೇ. 5.6ರಷ್ಟು ಬೆಳೆದಿತ್ತು. ಹಿಂದಿನ ವರ್ಷದ ಮೂರನೇ ಕ್ವಾರ್ಟರ್​​ನಲ್ಲಿ (2024ರ ಅಕ್ಟೋಬರ್​​ನಿಂದ ಡಿಸೆಂಬರ್) ಕೃಷಿ ಸೆಕ್ಟರ್ ಶೇ. 1.5ರಷ್ಟು ಮಾತ್ರ ಬೆಳೆದಿತ್ತು. ಈ ವರ್ಷ ಮುಂಗಾರು ಬೆಳೆಗಳು ಉತ್ತಮ ಫಸಲು ನೀಡಿವೆ. ಹಣ್ಣು, ತರಕಾರಿಗಳ ಬೆಲೆ ಸಾಕಷ್ಟು ಕಡಿಮೆ ಆಗಿದೆ. ನಾಲ್ಕನೇ ಕ್ವಾರ್ಟರ್​​ನಲ್ಲೂ ಕೃಷಿ ಕ್ಷೇತ್ರದ ದರ ಉತ್ತಮವಾಗಿಯೇ ಇರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಭಾರತವೇ ಬೆಸ್ಟ್; ಸಾಲುಸಾಲಾಗಿ ತವರಿಗೆ ಬರುತ್ತಿರುವ ಭಾರತೀಯ ಸ್ಟಾರ್ಟಪ್​ಗಳು

ಇದನ್ನೂ ಓದಿ
Image
ಭಾರತಕ್ಕೆ ಮರಳುತ್ತಿರುವ 70ಕ್ಕೂ ಹೆಚ್ಚು ಸ್ಟಾರ್ಟಪ್​​ಗಳು
Image
ಕುಂಭಮೇಳದಲ್ಲಿ ಖಾದಿ ಉತ್ಪನ್ನಗಳ ಮಾರಾಟ ದಾಖಲೆ
Image
ಗೋಲ್ಡ್ ಲೋನ್ ಮೇಲೆ ಆರ್​ಬಿಐ ಕಣ್ಣು?
Image
ಭಾರತೀಯ ನೌಕರರು ಬೇಜವಾಬ್ದಾರಿಗಳು: ಸಿಇಒ ಹರಿರಾಘವನ್

ಕ್ರಿಸಿಲ್ ವರದಿಯಲ್ಲೂ ಜಿಡಿಪಿ ದರ ಶೇ. 6.5 ಅಂದಾಜು

ಅಮೆರಿಕ ಮೂಲದ ರೇಟಿಂಗ್ ಏಜೆನ್ಸಿಯಾದ ಕ್ರಿಸಿಲ್ (Crisil) ಕೂಡ ಭಾರತದ ಆರ್ಥಿಕತೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. 6.5ರಷ್ಟು ಬೆಳೆಯಬಹುದು ಎಂದು ಅಂದಾಜು ಮಾಡಿದೆ. ಅಷ್ಟೇ ಅಲ್ಲ, ಮುಂಬರುವ ವರ್ಷಗಳಲ್ಲೂ ಭಾರತ ಸ್ಥಿರ ಬೆಳವಣಿಗೆ ಕಾಣಬಹುದು ಎಂದು ಈ ಏಜೆನ್ಸಿ ನಿರೀಕ್ಷಿಸಿದೆ.

ಕ್ರಿಸಿಲ್ ಪ್ರಕಾರ, ಭಾರತದ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ಮುಂದಿನ ಐದಾರು ವರ್ಷ ಶೇ. 9ರ ಸರಾಸರಿ ದರದಲ್ಲಿ ಬೆಳವಣಿಗೆ ಹೊಂದುವ ಸಾಧ್ಯತೆ ಇದೆ. 2020ಕ್ಕೆ ಮುನ್ನ ಈ ವಲಯದ ಸರಾಸರಿ ಬೆಳವಣಿಗೆ ಶೇ 6ರಷ್ಟಿತ್ತು. ಈಗ ಅದು ಉತ್ತಮ ರೀತಿಯಲ್ಲಿ ಬೆಳೆಯಲಿದೆ. 2030-31ರ ಹಣಕಾಸು ವರ್ಷದಷ್ಟರಲ್ಲಿ ತಯಾರಿಕಾ ವಲಯದ ಜಿಡಿಪಿ ಪಾಲು ಶೇ. 20ಕ್ಕೆ ಏರಬಹುದು ಎಂದು ಕ್ರಿಸಿಲ್ ಅಂದಾಜಿಸಿದೆ.

ಇದನ್ನೂ ಓದಿ: ಮಹಾಕುಂಭದಲ್ಲಿ ದಾಖಲೆಯ 12 ಕೋಟಿ ರೂ ಖಾದಿ ಉತ್ಪನ್ನಗಳ ಮಾರಾಟ

ಭಾರತದ ಆರ್ಥಿಕತೆಯ ಪ್ರಮುಖ ಬೆನ್ನೆಲುಬಾದ ಸರ್ವಿಸ್ ಸೆಕ್ಟರ್ ನಿಧಾನಗತಿಯಲ್ಲಿ ಬೆಳೆದರೂ ಕೂಡ ಮುಂದಿನ ಕೆಲ ವರ್ಷಗಳವರೆಗೂ ಜಿಡಿಪಿಗೆ ಈ ಸೆಕ್ಟರ್​​ನ ಕೊಡುಗೆ ಗರಿಷ್ಠವಾಗಿಯೇ ಇರಲಿದೆ ಎಂಬುದು ಈ ರೇಟಿಂಗ್ ಏಜೆನ್ಸಿಯ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ