AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏರ್ಟೆಲ್ ಆಯ್ತು, ಈಗ ಜಿಯೋ ಕೂಡ ಸ್ಟಾರ್​ಲಿಂಕ್ ಜೊತೆ ಒಪ್ಪಂದ; ಏನಿದು ಸ್ಟಾರ್​​ಲಿಂಕ್ ಇಂಟರ್ನೆಟ್?

Airtel and jio partnership with Starlink: ಇಲಾನ್ ಮಸ್ಕ್ ಮಾಲಕತ್ವದ ಸ್ಪೇಸ್​ಎಕ್ಸ್ ಸಂಸ್ಥೆಗೆ ಸೇರಿದ ಸ್ಟಾರ್​ಲಿಂಕ್ ಜೊತೆ ಭಾರ್ತಿ ಏರ್ಟೆಲ್ ಮತ್ತು ಜಿಯೋ ಪ್ಲಾಟ್​​ಫಾರ್ಮ್ಸ್ ಒಪ್ಪಂದ ಮಾಡಿಕೊಂಡಿವೆ. ನಿನ್ನೆಯಷ್ಟೇ (ಮಾ. 11) ಏರ್ಟೆಲ್ ಸಂಸ್ಥೆ ಸ್ಟಾರ್​​ಲಿಂಕ್ ಜೊತೆ ಒಪ್ಪಂದ ಮಾಡಿಕೊಂಡಿರುವುದನ್ನು ಘೋಷಿಸಿತ್ತು. ಇವತ್ತು (ಮಾ. 12) ಜಿಯೋ ಪ್ಲಾಟ್​​ಫಾರ್ಮ್ಸ್ ಕೂಡ ತಾನು ಸ್ಟಾರ್​​ಲಿಂಕ್ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದೆ.

ಏರ್ಟೆಲ್ ಆಯ್ತು, ಈಗ ಜಿಯೋ ಕೂಡ ಸ್ಟಾರ್​ಲಿಂಕ್ ಜೊತೆ ಒಪ್ಪಂದ; ಏನಿದು ಸ್ಟಾರ್​​ಲಿಂಕ್ ಇಂಟರ್ನೆಟ್?
ಸೆಟಿಲೈಟ್ ಇಂಟರ್ನೆಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 12, 2025 | 11:36 AM

Share

ನವದೆಹಲಿ, ಮಾರ್ಚ್ 12: ಹಲವು ದೇಶಗಳಲ್ಲಿ ಸೆಟಿಲೈಟ್ ಇಂಟರ್ನೆಟ್ ಸರ್ವಿಸ್ ನೀಡುತ್ತಿರುವ ಇಲಾನ್ ಮಾಸ್ಕ್ ಅವರ ಸ್ಟಾರ್​​ಲಿಂಕ್​ನ ಇಂಟರ್ನೆಟ್ ಸರ್ವಿಸ್ (Starlink satellite internet service) ಇದೀಗ ಭಾರತದಲ್ಲಿ ಲಭ್ಯವಾಗುತ್ತಿದೆ. ಏರ್ಟೆಲ್ ಮತ್ತು ರಿಲಾಯನ್ಸ್ ಜಿಯೋ ಸಂಸ್ಥೆಗಳು ಸ್ಟಾರ್​​ಲಿಂಕ್ ಇಂಟರ್ನೆಟ್ ಸೇವೆಯನ್ನು ಭಾರತದಲ್ಲಿ ತರಲು ಸ್ಪೇಸ್​ಎಕ್ಸ್ ಜೊತೆ ಒಪ್ಪಂದ ಮಾಡಿಕೊಂಡಿವೆ. ನಿನ್ನೆಯಷ್ಟೇ ಭಾರ್ತಿ ಏರ್ಟೆಲ್ ಸಂಸ್ಥೆ ಕೂಡ ಸ್ಪೇಸ್ ಎಕ್ಸ್ ಜೊತೆ ಪಾರ್ಟ್ನರ್​ಶಿಪ್ ಒಪ್ಪಂದ ಮಾಡಿಕೊಂಡಿತ್ತು. ಈಗ ಜಿಯೋ ಪ್ಲಾಟ್​​ಫಾರ್ಮ್ಸ್​ ಕೂಡ ಇದೇ ಹಾದಿ ತುಳಿದಿದೆ.

ಸ್ಪೇಸ್​ಎಕ್ಸ್ ಸಂಸ್ಥೆ ಸ್ವತಂತ್ರವಾಗಿ ಸ್ಟಾರ್​​ಲಿಂಕ್ ಇಂಟರ್ನೆಟ್ ಸೇವೆಯನ್ನು ಒದಗಿಸುತ್ತದೆ. ಈಗ ಟೆಲಿಕಾಂ ಕಂಪನಿಗಳಾದ ಏರ್​​ಟೆಲ್ ಮತ್ತು ಜಿಯೋ ಹೇಗೆ ಸ್ಟಾರ್​​ಲಿಂಕ್ ಸರ್ವಿಸ್ ಅನ್ನು ಅಳವಡಿಸಿಕೊಳ್ಳುತ್ತವೆ ಎಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ

ಸ್ಟಾರ್​​ಲಿಂಕ್ ಉಪಕರಣಗಳ ಮೂಲಕ ಇಂಟರ್ನೆಟ್

ಸ್ಟಾರ್​ಲಿಂಕ್​ನ ಸೆಟಿಲೈಟ್ ಇಂಟರ್ನೆಟ್ ಸೇವೆ ಪಡೆಯಲು ಅದರದ್ದೇ ಆದ ಒಂದು ವಿಶೇಷ ಉಪಕರಣವನ್ನು ಬಳಸಬೇಕು. ರೂಟರ್ ಮೂಲಕ ವೈಫೈ ಇಂಟರ್ನೆಟ್ ಪಡೆಯುವಂತೆ ಸ್ಟಾರ್​​ಲಿಂಕ್​​ನ ಉಪಕರಣವನ್ನು ಸ್ಥಾಪಿಸಿ ಆ ಮೂಲಕ ಸೆಟಿಲೈಟ್ ಇಂಟರ್ನೆಟ್ ಪಡೆಯಬಹುದು.

ಇದನ್ನೂ ಓದಿ
Image
ಡಿವಿಡೆಂಡ್ ಯೀಲ್ಡ್ ಮ್ಯೂಚುವಲ್ ಫಂಡ್​​ಗಳ ಸಾಧಕ-ಬಾಧಕಗಳು
Image
ಲೋನ್ ಆ್ಯಪ್ ಗಾಳಕ್ಕೆ ಬಿದ್ದಾಗ ಏನು ಮಾಡಬೇಕು?
Image
ಮೊಬೈಲ್ ಬಿಲ್​ಗೂ ಕ್ರೆಡಿಟ್ ಸ್ಕೋರ್​ಗೂ ಇದ್ಯಾ ಸಂಬಂಧ?
Image
ಅಪ್ಪನ ಗಿಫ್ಟ್; ರೋಷನಿ ಭಾರತದ ನಂ.1 ಶ್ರೀಮಂತ ಮಹಿಳೆ

ಇದನ್ನೂ ಓದಿ: ಅತಿಶ್ರೀಮಂತರ ಪಟ್ಟಿಯಲ್ಲಿ ಅಂಬಾನಿ, ಅದಾನಿ ನಂತರ 42 ವರ್ಷದ ರೋಷನಿ ಮಲ್ಹೋತ್ರಾ

ಏರ್ಟೆಲ್ ಮತ್ತು ಜಿಯೋ ಸಂಸ್ಥೆಗಳು ತಮ್ಮ ರೀಟೇಲ್ ಸ್ಟೋರ್​​ಗಳಲ್ಲಿ ಈ ಸ್ಟಾರ್​​ಲಿಂಕ್ ಉಪಕರಣಗಳನ್ನು ಗ್ರಾಹಕರಿಗೆ ಆಫರ್ ಮಾಡುವ ಸಾಧ್ಯತೆ ಇದೆ. ಟೆಲಿಕಾಂ ಕಂಪನಿಗಳ ನೆಟ್ವರ್ಕ್ ಸಿಗದ ಕೆಲ ಪ್ರದೇಶಗಳಲ್ಲಿ ಸ್ಟಾರ್​​ಲಿಂಕ್ ಉಪಯೋಗಿಸಬಹುದು.

ಸ್ಟಾರ್​​ಲಿಂಕ್​​ಗೂ ಸಾಂಪ್ರದಾಯಿಕ ಸೆಟಿಲೈಟ್ ಇಂಟರ್ನೆಟ್​​ಗೂ ಏನು ವ್ಯತ್ಯಾಸ?

ಸೆಟಿಲೈಟ್ ಇಂಟರ್ನೆಟ್ ಹೊಸದೇನೂ ಅಲ್ಲ, ಅದು ಮೂರು ದಶಕಗಳಿಂದಲೂ ಇದೆ. ಆದರೆ, ಇತ್ತೀಚೆಗೆ ಸ್ಟಾರ್​​ಲಿಂಕ್, ಒನ್​ವೆಬ್ ಇತ್ಯಾದಿ ಕಂಪನಿಗಳು ಹೊಸ ಸೆಟಿಲೈಟ್ ತಂತ್ರಜ್ಞಾನದೊಂದಿಗೆ ಇಂಟರ್ನೆಟ್ ಸರ್ವಿಸ್ ನೀಡುತ್ತಿವೆ. ಹಿಂದೆಲ್ಲಾ ಭೂಮಿಯ ಮೇಲೆ ಎತ್ತರದ ಕಕ್ಷೆಯಲ್ಲಿ (35,000 ಕಿಮೀ ಎತ್ತರ) ಕೆಲವೇ ಕೆಲವು ಸೆಟಿಲೈಟ್​​ಗಳ ಮೂಲಕ ಇಂಟರ್ನೆಟ್ ಪಡೆಯಲಾಗುತ್ತಿತ್ತು.

ಈಗ ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆ ಭೂಮಿಯ ಕೆಳ ಕಕ್ಷೆಯಲ್ಲಿ ಬರೋಬ್ಬರಿ 40,000 ಪುಟ್ಟ ಪುಟ್ಟ ಸೆಟಿಲೈಟ್​​ಗಳನ್ನು ವಿವಿಧೆಡೆ ಕೂರಿಸಿದೆ. ಭೂಮಿಯಿಂದ ಕೇವಲ 550 ಕಿಮೀ ಎತ್ತರದಲ್ಲಿರುವ ಈ ವಿಸ್ತೃತ ಸೆಟಿಲೈಟ್​ಗಳು ಬಹಳ ಪ್ರಬಲ ಇಂಟರ್ನೆಟ್ ಸರ್ವಿಸ್ ನೀಡಬಲ್ಲುವು. ಫೈಬರ್ ಇಂಟರ್ನೆಟ್​​ನಷ್ಟು ವೇಗ ಇಲ್ಲದಿದ್ದರೂ 250 ಎಂಬಿಪಿಎಸ್​​ವರೆಗೂ ಇಂಟರ್ನೆಟ್ ವೇಗ ಸಿಗುತ್ತದೆ.

ಇದನ್ನೂ ಓದಿ: ಸುಲಭ ಸಾಲದ ಆಸೆಗೆ ಬಿದ್ದು ನಕಲಿ ಲೋನ್ ಆ್ಯಪ್ ಜಾಲಕ್ಕೆ ಬೀಳದಿರಿ; ಈ ಅಂಶಗಳು ತಿಳಿದಿರಲಿ

ಒನ್​ವೆಬ್, ಹ್ಯೂಸ್​ನೆಟ್, ಕ್ಯೂಪರ್ ಸಿಸ್ಟಮ್ಸ್, ಟೆಲಿಸ್ಯಾಟ್ ಮೊದಲಾದವು ಸ್ಟಾರ್​​ಲಿಂಕ್​​​ಗೆ ಪ್ರಬಲ ಪ್ರತಿಸ್ಪರ್ಧಿಗಳಾಗಿವೆ. ಒನ್​​ವೆಬ್ ತುಸು ಎತ್ತರ ಕಕ್ಷೆಯಲ್ಲಿ ಕೆಲವೇ ನೂರು ಸೆಟಿಲೈಟ್​​ಗಳನ್ನು ಹರಿಬಿಟ್ಟಿದೆ. ಕ್ಯೂಪರ್ ಸಿಸ್ಟಮ್ಸ್, ಹ್ಯೂಸ್​​ನೆಟ್, ಟೆಲಿಸ್ಯಾಟ್ ಸಂಸ್ಥೆಗಳು ಸ್ಟಾರ್​​ಲಿಂಕ್​​ನಂತೆ ಕೆಳ ಕಕ್ಷೆಯಲ್ಲಿ ಸಾಕಷ್ಟು ಸೆಟಿಲೈಟ್​​ಗಳನ್ನು ಕೂರಿಸುತ್ತಿವೆ. ಆದರೆ, ಸ್ಟಾರ್​ಲಿಂಕ್​​ನ ಸೆಟಿಲೈಟ್​​ಗಳು ಬಹಳ ಪುಟ್ಟದಾಗಿದ್ದು, ಇವು ಲೆಸರ್ ಮೂಲಕ ಪರಸ್ಪರ ಸಂವಹನ ನಡೆಸುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:24 am, Wed, 12 March 25

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ