AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Free Wi-fi: ಬಿಟ್ಟಿ ಸಿಕ್ಕಿತೆಂದು ಉಚಿತ ವೈಫೈ ಬಳಸುವ ಮುನ್ನ ಎಚ್ಚರ! ಏನೆಲ್ಲ ಅಪಾಯ ಇದೆ ನೋಡಿ

ಹಲವು ಬಾರಿ ನಾವು ರೈಲ್ವೆ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿರುವಾಗ ಅಥವಾ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿರುವಾಗ ಅನೇಕ ಸಮಯವಿರುತ್ತದೆ. ಆಗ ನಮ್ಮ ಮೊಬೈಲ್‌ನಲ್ಲಿ ಇಂಟರ್ನೆಟ್ ಮೂಲಕ ಅನೇಕ ಕೆಲಸಗಳನ್ನು ಮಾಡಲು ನಾವು ಬಯಸುತ್ತೇವೆ. ಇಂಟರ್ನೆಟ್ ಇಲ್ಲದಿದ್ದರೆ, ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯವಿರುವ ಉಚಿತ ವೈ-ಫೈ ಅನ್ನು ಬಳಸುತ್ತೇವೆ. ಆದರೆ, ಇದು ಸುರಕ್ಷಿತವೇ?.

Free Wi-fi: ಬಿಟ್ಟಿ ಸಿಕ್ಕಿತೆಂದು ಉಚಿತ ವೈಫೈ ಬಳಸುವ ಮುನ್ನ ಎಚ್ಚರ! ಏನೆಲ್ಲ ಅಪಾಯ ಇದೆ ನೋಡಿ
Free Wifi
ಮಾಲಾಶ್ರೀ ಅಂಚನ್​
| Edited By: |

Updated on: Mar 04, 2025 | 1:01 PM

Share

(ಬೆಂಗಳೂರು, ಮಾ 04): ನಾವು ಸ್ಮಾರ್ಟ್​ಫೋನ್ (Smartphone) ಉಪಯೋಗಿಸುವಾಗ ಅದರಲ್ಲಿನ ಹಲವು ಕೆಲಸಗಳಿಗೆ ಇಂಟರ್ನೆಟ್ ಬೇಕಾಗುತ್ತವೆ. ಇಂಟರ್ನೆಟ್ ಇಲ್ಲದಿದ್ದರೆ ಕೆಲವು ಸಿಕ್ಕ-ಸಿಕ್ಕಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯವಿರುವ ಉಚಿತ ವೈ-ಫೈ ಅನ್ನು ಬಳಸುತ್ತಾರೆ. ಹೀಗೆ ಉಚಿತ ವೈ-ಫೈ ಬಳಸುವುದು ಸುರಕ್ಷಿತವೇ?. ಯಾವುದೇ ದೊಡ್ಡ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಹೋಟೆಲ್ ಇತ್ಯಾದಿಗಳಿಗೆ ಹೋದಾಗಲೆಲ್ಲಾ ಅಲ್ಲಿ ಉಚಿತ ವೈ-ಫೈ ಸಿಗುತ್ತದೆ. ಈ ಸ್ಥಳಗಳಲ್ಲಿ ನಿಮ್ಮ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಇತ್ಯಾದಿಗಳನ್ನು ವೈ-ಫೈಗೆ ಸಂಪರ್ಕಿಸುವ ಮೂಲಕ ನೀವು ಇಂಟರ್ನೆಟ್ ಅನ್ನು ಬಳಸುತ್ತೀರಿ. ಈ ರೀತಿಯ ವೈ-ಫೈ ವಲಯವನ್ನು ಸಾರ್ವಜನಿಕ ವೈ-ಫೈ ಎಂದು ಕರೆಯಲಾಗುತ್ತದೆ. ನೀವು ಅಂತಹ ಉಚಿತ ವೈ-ಫೈ ಬಳಸಬಹುದೇ ಅಥವಾ ಬೇಡವೇ?, ಇದು ಸುರಕ್ಷಿತವೇ?.

ಹಲವು ಬಾರಿ ನಾವು ರೈಲ್ವೆ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿರುವಾಗ ಅಥವಾ ಬಸ್ ನಿಲ್ದಾಣದಲ್ಲಿ ಬಸ್​ಗಾಗಿ ಕಾಯುತ್ತಿರುವಾಗ ಅನೇಕ ಸಮಯವಿರುತ್ತದೆ. ಆಗ ನಮ್ಮ ಮೊಬೈಲ್‌ನಲ್ಲಿ ಇಂಟರ್ನೆಟ್ ಮೂಲಕ ಅನೇಕ ಕೆಲಸಗಳನ್ನು ಮಾಡಲು ನಾವು ಬಯಸುತ್ತೇವೆ. ಆದರೆ ಇಂಟರ್ನೆಟ್ ಇಲ್ಲದಿದ್ದರೆ, ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯವಿರುವ ಉಚಿತ ವೈ-ಫೈ ಅನ್ನು ಬಳಸುತ್ತೇವೆ. ಹೀಗೆ ಉಚಿತ ವೈ-ಫೈ ಬಳಸುವ ಮುನ್ನ ಎಚ್ಚರ ವಹಿಸುವುದು ಬಹಳ ಮುಖ್ಯ.

ಡೇಟಾ ಹ್ಯಾಕ್: ಸಾರ್ವಜನಿಕ ವೈ- ಫೈನಲ್ಲಿ ಇಂಟರ್ನೆಟ್ ಬಳಸುವಾಗ, ನಿಮ್ಮ ವೈಯಕ್ತಿಕ ಡೇಟಾವನ್ನು ಹ್ಯಾಕ್ ಮಾಡಬಹುದು ಮತ್ತು ಈ ಸಂದರ್ಭ ನೀವು ವಂಚನೆಗೆ ಬಲಿಯಾಗಬಹುದು. ಅನೇಕ ಭದ್ರತಾ ಸಂಶೋಧನಾ ಸಂಸ್ಥೆಗಳು ಇಂತಹ ಸಾರ್ವಜನಿಕ ವೈ- ಫೈ ವಲಯಗಳನ್ನು ಅಸುರಕ್ಷಿತವೆಂದು ಪರಿಗಣಿಸಿವೆ. ಅಂತಹ ಸಾರ್ವಜನಿಕ ವೈ- ಫೈ ವಲಯಗಳಲ್ಲಿ ಬಳಕೆದಾರರು ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು, ವೈಯಕ್ತಿಕ ಇ- ಮೇಲ್ ಇತ್ಯಾದಿಗಳನ್ನು ಬಳಸಬಾರದು.

Tech Tips: ನಿಮ್ಮ ವಾಟ್ಸ್ಆ್ಯಪ್ ಅನ್ನು ಬೇರೆ ಯಾರಾದರೂ ಬಳಸುತ್ತಿದ್ದಾರೆಯೇ?: ಹೀಗೆ ತಿಳಿದುಕೊಳ್ಳಿ

ಫೋನ್​ನ ವೈಯಕ್ತಿಕ ಮಾಹಿತಿ ಸೋರಿಕೆ: ಯಾವುದೇ ಸಾರ್ವಜನಿಕ ವೈ- ಫೈ ವಲಯವನ್ನು ಸುರಕ್ಷಿತವೆಂದು ಪರಿಗಣಿಸಲಾಗುವುದಿಲ್ಲ, ಏಕೆಂದರೆ ಅಂತಹ ಉಚಿತ ವೈ- ಫೈ ಮೂಲಕ ಯಾರು ಬೇಕಾದರು ಪ್ರವೇಶಿಸಬಹುದಾಗಿದೆ. ಸಾರ್ವಜನಿಕ ವೈ- ಫೈ ಮೂಲಕ ಹ್ಯಾಕರ್‌ಗಳು ಮತ್ತು ಸೈಬರ್ ಅಪರಾಧಿಗಳು ಯಾರೊಬ್ಬರ ಸಾಧನವನ್ನು ಪ್ರವೇಶಿಸುವುದು ತುಂಬಾ ಸುಲಭ. ಆದ್ದರಿಂದ ನಿಮ್ಮ ಮೀಡಿಯಾ ಫೈಲ್‌ಗಳು, ಬ್ಯಾಂಕ್ ಖಾತೆ ವಿವರಗಳು, ಇಮೇಲ್ ವಿಳಾಸಗಳು ಮತ್ತು ಸಾಮಾಜಿಕ ಮಾಧ್ಯಮ ಐಡಿಗಳನ್ನು ಕದಿಯಬಹುದು.

ಗೌಪ್ಯತಾ ಸಮಸ್ಯೆಗಳು: ಹ್ಯಾಕರ್‌ಗಳು ನಿಮ್ಮ ಆನ್‌ಲೈನ್ ಚಟುವಟಿಕೆಯನ್ನು ಟ್ರ್ಯಾಕ್ ಮಾಡಬಹುದು ಮತ್ತು ನಿಮ್ಮನ್ನೂ ಸಹ ಟ್ರ್ಯಾಕ್ ಮಾಡುವ ಸಂಭವವಿದೆ.

ಮಾಲ್‌ವೇರ್: ಸೈಬರ್ ಅಪರಾಧಿಗಳು ನಿಮ್ಮ ಸಾಧನಕ್ಕೆ ವೈರಸ್‌ಗಳನ್ನು ಕಳುಹಿಸಲು ಈ ಸಾರ್ವಜನಿಕ ವೈ- ಫೈ ಅನ್ನು ಸಹ ಬಳಸಬಹುದು. ಇದು ಅವರಿಗಿರುವ ಸುಲಭ ಮಾರ್ಗವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಸಾರ್ವಜನಿಕ ವೈ- ಫೈ ಬಳಸುವಾಗ ನಾವು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಮ್ಮ ಒಂದು ಸಣ್ಣ ತಪ್ಪು ದೊಡ್ಡ ಹಾನಿಯನ್ನುಂಟುಮಾಡಬಹುದು.

ಆದಾಗ್ಯೂ, ತುರ್ತು ಪರಿಸ್ಥಿತಿಯಲ್ಲಿ ನಿಮಗೆ ಇಂಟರ್ನೆನೆಟ್ ಅಗತ್ಯವಿದ್ದರೆ, ಸಾರ್ವಜನಿಕ ವೈ- ಫೈ ಬಳಸುವಾಗ VPN ಬಳಸಿ. ಹಾಗೆ ಮಾಡುವುದರಿಂದ ನಿಮ್ಮ ಸಾಧನಕ್ಕೆ ಹೆಚ್ಚುವರಿ ಭದ್ರತೆ ಸಿಗುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ