AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜನಿಕಾಂತ್ ಸರಳತೆ ನೋಡಿ; ರಿಷಿಕೇಶದಲ್ಲಿ ರಸ್ತೆ ಬದಿನಿಂತು ಊಟ ಸವಿದ ಸೂಪರ್ ಸ್ಟಾರ್

Rajinikanth In Rishikesh: ನಟ ರಜನಿಕಾಂತ್ 'ಕೂಲಿ' ಸಿನಿಮಾ ಬಳಿಕ ಆಧ್ಯಾತ್ಮಿಕ ವಿರಾಮಕ್ಕಾಗಿ ರಿಷಿಕೇಶಕ್ಕೆ ತೆರಳಿದ್ದಾರೆ. ನೂರಾರು ಕೋಟಿ ಸಂಪಾದಿಸಿದರೂ, ಅಲ್ಲಿ ಸರಳವಾಗಿ ರಸ್ತೆ ಬದಿಯಲ್ಲಿ ಊಟ ಸವಿಯುತ್ತಿದ್ದಾರೆ. ಅವರ ಈ ಫೋಟೋ ವೈರಲ್ ಆಗಿದೆ. ದಯಾನಂದ ಆಶ್ರಮಕ್ಕೆ ಭೇಟಿ ನೀಡಿ, ಗಂಗಾ ನದಿಯಲ್ಲಿ ಧ್ಯಾನ ಮಾಡಿದ್ದಾರೆ.

ರಜನಿಕಾಂತ್ ಸರಳತೆ ನೋಡಿ; ರಿಷಿಕೇಶದಲ್ಲಿ ರಸ್ತೆ ಬದಿನಿಂತು ಊಟ ಸವಿದ ಸೂಪರ್ ಸ್ಟಾರ್
ರಜನಿಕಾಂತ್
ರಾಜೇಶ್ ದುಗ್ಗುಮನೆ
|

Updated on:Oct 06, 2025 | 10:00 AM

Share

ನಟ ರಜನಿಕಾಂತ್ (Rajinikanth) ಅವರು ಸೂಪರ್ ಸ್ಟಾರ್. ನೂರಾರು ಕೋಟಿ ರೂಪಾಯಿ ಆಸ್ತಿಯನ್ನು ಅವರು ಹೊಂದಿದ್ದಾರೆ. ಆದಾಗ್ಯೂ ಸರಳ ಜೀವನ ನಡೆಸಲು ಅವರು ಆದ್ಯತೆ ನೀಡುತ್ತಾರೆ. ಅವರ ತಲೆಯ ಮೇಲೆ ಕೂದಲು ಉದುರಿದೆ. ಆದರೆ, ಇತರ ಹೀರೋಗಳಂತೆ ತೆರೆ ಹಿಂದೆ ಅವರು ಟೋಪನ್ ಹಾಕುವುದಿಲ್ಲ. ಹೇಗಿದ್ದಾರೋ ಹಾಗೆಯೇ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ಈಗ ಅವರ ಹೊಸ ಫೋಟೋ ಒಂದು ವೈರಲ್ ಆಗಿದೆ. ರಿಷಿಕೇಶಕ್ಕೆ ತೆರಳಿರೋ ಅವರು ಅಲ್ಲಿ, ಸರಳವಾಗಿ ರಸ್ತೆ ಬದಿಯಲ್ಲಿ ನಿಂತು ಎಲೆಯ ಪ್ಲೇಟ್​ನಲ್ಲಿ ಊಟ ಸವಿಯುತ್ತಿದ್ದಾರೆ.

ರಜನಿಕಾಂತ್ ಅವರು ಪ್ರತಿ ಸಿನಿಮಾ ರಿಲೀಸ್ ಬಳಿಕ ಒಂದು ಆಧ್ಯಾತ್ಮಿಕ ಬ್ರೇಕ್ ಪಡೆಯುತ್ತಾರೆ. ರಿಷಿಕೇಶ ಹಾಗೂ ಇತರ ಪವಿತ್ರ ಸ್ಥಳಗಳಿಗೆ ತೆರಳಿ ಕೆಲ ದಿನ ಇದ್ದು ಬರುತ್ತಾರೆ. ಅವರ ನಟನೆಯ ‘ಕೂಲಿ’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಜನಿಕಾಂತ್ ಅವರು ರಿಷಿಕೇಶಕ್ಕೆ ತೆರಳಿದ್ದಾರೆ. ಅಲ್ಲಿ ಅವರು ಸರಳ ಜೀವನ ನಡೆಸುತ್ತಿದ್ದಾರೆ.

ಇದನ್ನೂ ಓದಿ
Image
‘ಅಮೃತಧಾರೆ’ ಧಾರಾವಾಹಿಯಲ್ಲಿ ರೋಚಕ ತಿರುವು; ಮಗಳು ಗೌತಮ್​ಗೆ ಸಿಕ್ಕೇ ಬಿಟ್ಳು
Image
ಪುನೀತ್​ಗೆ ರಚಿತಾ ಅವಮಾನ ? ನಾಲಿಗೆ ಮೇಲೆ ಹಿಡಿತ ಇರಲಿ ಎಂದ ಫ್ಯಾನ್ಸ್
Image
‘ಕಾಂತಾರ: ಚಾಪ್ಟರ್ 1’ ಚಿತ್ರದ ಭಾನುವಾರದ ಕಲೆಕ್ಷನ್ ಇಷ್ಟೊಂದಾ?
Image
‘ನೀವು ತೋರಿದ ದ್ವೇಷ ನೋಡಿ ಬೇಸರವಾಯಿತು’; ನೋವು ಹೊರ ಹಾಕಿದ ನಮ್ರತಾ ಗೌಡ

ರಿಷಿಕೇಶದಲ್ಲಿರುವ ರಜನಿ

ಉತ್ತರಾಖಾಂಡದ ರಿಷಿಕೇಷದಲ್ಲಿರುವ ಸ್ವಾಮಿ ದಯಾನಂದ ಆಶ್ರಮಕ್ಕೆ ರಜನಿಕಾಂತ್ ಭೇಟಿ ನಿಡಿದ್ದರು. ಈ ವೇಳೆ ಅವರು ತಮ್ಮ ಆಧ್ಯತ್ಮ ಗುರುವಿಗೆ ನಮನ ಸಲ್ಲಿಸಿದರು. ಗಂಗಾ ನದಿಯ ಪಕ್ಕದಲ್ಲಿ ಕುಳಿತು ಧ್ಯಾನ ಮಾಡಿದ್ದಾರೆ. ಗಂಗಾ ಆರತಿಯನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ.  ರಿಷಿಕೇಶದ ಬಳಿಕ ರಜನಿಕಾಂತ್ ಅವರು ದ್ವಾರಹಾತ್​ಗೆ ತೆರಳಿದ್ದಾರೆ.  ದಾರಿ ಮಧ್ಯೆ ನಿಂತು ಅವರು ಊಟ ಸವಿದಿದ್ದಾರೆ. ಬಿಳಿ ಬಣ್ಣದ ಪಂಚೆ, ಬಿಳಿ ಬಣ್ಣದ ಶರ್ಟ್ ಹಾಕಿದ್ದಾರೆ. ಹೆಗಲ ಮೇಲೆ ಬಿಳಿ ಬಣ್ಣದ ಶಾಲಿದೆ.

ಇದನ್ನೂ ಓದಿ: ನಟ ರಜನಿಕಾಂತ್ ಮೂರ್ತಿಗೆ ಪೂಜೆ ಮಾಡಿ ನವರಾತ್ರಿ ಆಚರಿಸುತ್ತಿರುವ ಅಭಿಮಾನಿ

ರಜನಿಕಾಂತ್ ಅವರು ರಿಷಿಕೇಶಕ್ಕೆ ತೆರಳುತ್ತಿರುವುದು ಇದೇ ಮೊದಲೇನು ಅಲ್ಲ. ‘ಜೈಲರ್’ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಅವರು ಈ ಭಾಗಕ್ಕೆ ತೆರಳಿ ಧ್ಯಾನ ಮಾಡಿ ಬಂದಿದ್ದರು. ಆ ಸಮಯದ ಫೋಟೋಗಳು ಹಾಗೂ ವಿಡಿಯೋಗಳು ವೈರಲ್ ಆಗಿ ಗಮನ ಸೆಳೆದಿದ್ದವು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:58 am, Mon, 6 October 25