ಕರ್ಣನ ತಂದೆ ರಮೇಶ್ ಮುಖವಾಡ ಕಳಚಿಬಿತ್ತು; ದೊಡ್ಡ ಸಂಚು ಬಯಲು
ಕರ್ಣ ಧಾರಾವಾಹಿಯಲ್ಲಿ ಕರ್ಣನ ತಂದೆ ರಮೇಶ್‌ನ ಅಸಲಿ ಬಣ್ಣ ಬಯಲಾಗಿದೆ. ಮೊದಲು ಒಳ್ಳೆಯವನಾಗಿ ನಾಟಕವಾಡಿದ ರಮೇಶ್, ಈಗ ಕರ್ಣನಿಗೆ ಮೋಸ ಮಾಡಲು ಮುಂದಾಗಿದ್ದಾನೆ. ನಿಧಿ ಜೊತೆ ಮದುವೆ ಮಾಡಿಸುವುದಾಗಿ ಹೇಳಿ, ಕರ್ಣನನ್ನು ನಿತ್ಯಾ ಜೊತೆ ಮದುವೆಗೆ ಸಿದ್ಧಗೊಳಿಸಿದ್ದಾನೆ. ಈ ಅನಿರೀಕ್ಷಿತ ತಿರುವು ಕರ್ಣ ಮತ್ತು ಅಭಿಮಾನಿಗಳಿಗೆ ಆಘಾತ ನೀಡಿದೆ.

‘ಕರ್ಣ’ ಧಾರಾವಾಹಿಯಲ್ಲಿ ಕರ್ಣನ ತಂದೆ ರಮೇಶ್ ತುಂಬಾನೇ ಒಳ್ಳೆಯವನಾಗಿ ಬದಲಾಗಿದ್ದ. ಒಂದೇ ರಾತ್ರಿಯಲ್ಲಿ ಅವನು ಈ ರೀತಿಯಲ್ಲಿ ಬದಲಾಗುತ್ತಾನೆ ಎಂದು ಯಾರೆಂದರೆ ಯಾರೂ ಊಹಿಸಿರಲಿಲ್ಲ. ಹೀಗಿರುವಾಗಲೇ ಅವನ ನಿಜವಾದ ಮುಖವಾಡ ಬಯಲಾಗಿದೆ. ಇಷ್ಟು ದಿನ ಬಣ್ಣ ಹಾಕಿಕೊಂಡು ಓಡಾಡುತ್ತಿದ್ದ ಆತನ ಅಸಲಿ ಬಣ್ಣ ಬಯಲಾಗಿದೆ. ಈ ಟ್ವಿಸ್ಟ್ನ ಯಾರೆಂದರೆ ಯಾರೂ ಕೂಡ ಊಹಿಸಿರಲಿಲ್ಲ. ರಮೇಶ್ ಮತ್ತೆ ಹೀಗಾಗಬಾರದಿತ್ತು ಎಂದು ಅನೇಕರು ಹೇಳಿದ್ದಾರೆ.
‘ಕರ್ಣ’ ಧಾರಾವಾಹಿಯಲ್ಲಿ ಸಾಕಷ್ಟು ತಿರುವುಗಳು ಎದುರಾಗಿವೆ. ಈ ಧಾರಾವಾಹಿಯಲ್ಲಿ ಕರ್ಣನ ತಂದೆ ರಮೇಶ್ ಒಂದೇ ದಿನಕ್ಕೆ ಬದಲಾಗಿದ್ದ. ಮೊದಲು ಕೆಟ್ಟವನಾಗಿದ್ದ ಆತ, ನಂತರ ಒಳ್ಳೆಯವನಾಗಿ ಕಾಣಿಸಿಕೊಂಡಿದ್ದ. ಈ ವಿಚಾರ ಕರ್ಣನಿಗೆ ಸಾಕಷ್ಟು ಖುಷಿ ನೀಡಿತ್ತು. ನಿತ್ಯಾ ಮದುವೆ ತನ್ನದೇ ಮನೆಯಲ್ಲಿ ಆಗುತ್ತದೆ ಎಂದಾಗ ಆತ ನೋ ಎಂದು ಹೇಳಲೇ ಇಲ್ಲ. ಈಗ ಕರ್ಣನಿಗೆ ಆತ ಖೆಡ್ಡ ತೋಡಿದ್ದಾನೆ.
View this post on Instagram
ಕರ್ಣ ಧಾರಾವಾಹಿಯಲ್ಲಿ ನಿಧಿ ಹಾಗೂ ಕರ್ಣ ಪ್ರೀತಿ ಮಾಡುತ್ತಿದ್ದಾರೆ. ಈ ವಿಚಾರ ರಮೇಶ್ಗೂ ತಿಳಿದಿದೆ. ಇಬ್ಬರ ಮದುವೆಯನ್ನು ನಾನೇ ಮಾಡಿಸುತ್ತೇನೆ ಎಂದು ಆತ ಪ್ರಾಮಿಸ್ ಕೂಡ ಮಾಡಿದ್ದ. ಆದರೆ, ಈಗ ಆತ ಕರ್ಣನಿಗೆ ಮೋಸ ಮಾಡಲು ಮುಂದಾಗಿದ್ದಾನೆ. ಮಗ ಸಂಜಯ್ ಬಳಿ ಈ ವಿಚಾರವನ್ನು ರಮೇಶ್ ರಿವೀಲ್ ಮಾಡಿದ್ದಾನೆ. ಇದನ್ನು ಕರ್ಣನ ತಾಯಿ ಕದ್ದು ಕೇಳಿದ್ದಾಳೆ. ಕರ್ಣನ ಬಳಿ ಈ ವಿಚಾರವನ್ನು ಅವಳು ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ: ಹೊಟ್ಟೆಯಲ್ಲಿರೋ ಮಗುವಿಗಾಗಿ ನಿತ್ಯಾಗೆ ತಾಳಿ ಕಟ್ಟೇಬಿಟ್ಟ ಕರ್ಣ; ಕಣ್ಣೀರಲ್ಲಿ ಮುಳುಗಿದ ನಿಧಿ
ಈ ಮೊದಲು ರಿಲೀಸ್ ಆಗಿರುವ ಪ್ರೋಮೋದಲ್ಲಿ ಕರ್ಣ ಹಾಗೂ ನಿತ್ಯಾ ಮದುವೆ ನಡೆಯುವಂತೆ ತೋರಿಸಲಾಗಿದೆ. ಈ ವಿಚಾರ ಅನೇಕ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈ ತಿರುವನ್ನು ಯಾರೆಂದರೆ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಮುಂದೆ ಧಾರಾವಾಹಿ ಯಾವ ರೀತಿಯಲ್ಲಿ ಸಾಗುತ್ತದೆ ಎಂಬ ಕುತೂಹಲ ಮೂಡಿದೆ. ನಿತ್ಯಾ ಹಾಗೂ ನಿಧಿ ಇಬ್ಬರೂ ಕರ್ಣ ಮದುವೆ ಆಗಬಹುದೇ ಎನ್ನುವ ಪ್ರಶ್ನೆ ಕೂಡ ಮೂಡುವಂತೆ ಆಗಿದೆ. ಈ ವಾರ ಪೂರ್ತಿ ‘ಕರ್ಣ’ ಧಾರಾವಾಹಿಯಲ್ಲಿ ಮದುವೆ ಸಂಭ್ರಮ ನಡೆಯಲಿದೆ. ಕರ್ಣನು ನಿತ್ಯಾನ ಏಕೆ ಮದುವೆ ಆಗುತ್ತಾನೆ ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:02 am, Mon, 6 October 25







