AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಟ್ಟೆಯಲ್ಲಿರೋ ಮಗುವಿಗಾಗಿ ನಿತ್ಯಾಗೆ ತಾಳಿ ಕಟ್ಟೇಬಿಟ್ಟ ಕರ್ಣ; ಕಣ್ಣೀರಲ್ಲಿ ಮುಳುಗಿದ ನಿಧಿ

ಕರ್ಣ ಧಾರಾವಾಹಿಯಲ್ಲಿ ಅಚ್ಚರಿಯ ತಿರುವು! ನಿಧಿ ಜೊತೆ ಮದುವೆಯಾಗಬೇಕಿದ್ದ ಕರ್ಣ, ಗರ್ಭಿಣಿ ನಿತ್ಯಾಗೆ ತಾಳಿ ಕಟ್ಟಿದ್ದಾನೆ. ನಿತ್ಯಾ ಒಡಲಲ್ಲಿರುವ ಮಗುವೇ ಈ ಮದುವೆಗೆ ಕಾರಣ. ಈ ಅನಿರೀಕ್ಷಿತ ಘಟನೆಯಿಂದ ನಿಧಿ ಕಣ್ಣೀರಲ್ಲಿ ಮುಳುಗಿದ್ದಾಳೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ಈ ಧಾರಾವಾಹಿಯ ಮುಂದಿನ ಕಥೆ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಹೊಟ್ಟೆಯಲ್ಲಿರೋ ಮಗುವಿಗಾಗಿ ನಿತ್ಯಾಗೆ ತಾಳಿ ಕಟ್ಟೇಬಿಟ್ಟ ಕರ್ಣ; ಕಣ್ಣೀರಲ್ಲಿ ಮುಳುಗಿದ ನಿಧಿ
ನಿತ್ಯಾ-ಕರ್ಣ ಮದುವೆ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Sep 30, 2025 | 9:33 AM

Share

‘ಕರ್ಣ’ ಧಾರಾವಾಹಿಯಲ್ಲಿ ಯಾರೂ ಊಹಿಸದ ತಿರುವು ಒಂದು ಎದುರಾಗಿದೆ. ಇಷ್ಟು ದಿನ ನಿಧಿಯನ್ನು ಪ್ರೀತಿಸುತ್ತಿದ್ದ ಕರ್ಣನಿಗೆ ಶಾಕ್ ಉಂಟಾಗಿದೆ. ಆತನ ವಿವಾಹವು ನಿಧಿಯ ಜೊತೆ ನಡೆದು ಹೋಗಿದೆ. ಈ ಪ್ರೋಮೋನ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಈ ಮದುವೆಯನ್ನು ನೋಡಿ ನಿಧಿ ಕಣ್ಣಲ್ಲಿ ಧಾರಾಕಾರ ಕಣ್ಣೀರು ಹರಿದು ಬಂದಿದೆ. ಮುಂದೆ ಧಾರಾವಾಹಿ ಯಾವ ರೀತಿಯಲ್ಲಿ ಸಾಗುತ್ತದೆ ಎಂಬ ಕುತೂಹಲವೂ ಮೂಡಿದೆ.

ನಿಧಿ ಹಾಗೂ ಕರ್ಣ ಮಧ್ಯೆ ಪ್ರೀತಿ ಮೂಡಿದೆ. ಕರ್ಣ ಡಾಕ್ಟರ್ ಆದರೆ, ನಿಧಿ ಸ್ಟೂಡೆಂಟ್. ನಿತ್ಯಾ ಮೊದಲು ಕರ್ಣನಿಗೆ ಪ್ರಪೋಸ್ ಮಾಡಿದ್ದಳು. ಈ ಪ್ರಪೋಸ್​ನ ಆತ ಒಪ್ಪಿಕೊಳ್ಳಲೇ ಇಲ್ಲ. ಆದರೆ, ಮಾರಿಗುಡಿಗೆ ಹೋಗಿ ಬರುವ ವೇಳೆಗೆ ಇಬ್ಬರ ಮಧ್ಯೆ ಪ್ರೀತಿ ಮೂಡಿದೆ. ಈ ವಿಚಾರ ಅಭಿಮಾನಿಗಳಿಗೆ ಖುಷಿ ಕೊಟ್ಟಿತ್ತು. ಹೀಗಿರುವಾಗಲೇ ಧಾರಾವಾಹಿಯಲ್ಲಿ ದೊಡ್ಡ ತಿರುವು ಬಂದಿದೆ.

ಕರ್ಣ ಧಾರಾವಾಹಿ ಪ್ರೋಮೋ

ಇದನ್ನೂ ಓದಿ
Image
ರಿಷಬ್ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಅಳುವವರು ಈ ವಿಡಿಯೋ ನೋಡಿ
Image
ಅನುಶ್ರೀ ಹನಿಮೂನ್ ಫೋಟೋಗೆ ಬಂತು ಆ ವಿಶೇಷ ಕಮೆಂಟ್
Image
ಬಿಗ್ ಬಾಸ್ ಮನೆಯಿಂದ ಮೊದಲ ವಾರವೇ ಎಲಿಮಿನೇಟ್ ಆಗಲಿದ್ದಾರೆ ಮಲ್ಲಮ್ಮ?
Image
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ

ಕರ್ಣ ಹಾಗೂ ನಿಧಿಯ ಮದುವೆ ಬದಲು, ಕರ್ಣ ಹಾಗೂ ನಿತ್ಯಾಳ ಮದುವೆ ನೆರವೇರಿದೆ. ಈ ಸಂದರ್ಭದ ಪ್ರೋಮೋನ ಜೀ ಕನ್ನಡ ವಾಹಿನಿಯು ಹಂಚಿಕೊಂಡಿದೆ. ಅದ್ದೂರಿಯಾಗಿ ವಿವಾಹ ಸಮಾರಂಭ ನಡೆದಿದ್ದು, ನಿಧಿ ಬದಲು, ನಿತ್ಯಾಗೆ ಕರ್ಣ ತಾಳಿ ಕಟ್ಟಿದ್ದಾನೆ. ಪ್ರೋಮೋದ ಕೊನೆಯಲ್ಲಿ ದೊಡ್ಡ ಟ್ವಿಸ್ಟ್ ಕೂಡ ಸಿಕ್ಕಿದೆ.

ಇದನ್ನೂ ಓದಿ: ‘ನೀವು ಊಹಿಸಿದಂತೆ ಕಥೆ ನಡೆಯಲ್ಲ’; ‘ಕರ್ಣ’ ಬಗ್ಗೆ ಕಿರಣ್ ರಾಜ್ ಹಿಂಟ್

ನಿತ್ಯಾಗೆ ಈಗಾಗಲೇ ವಿವಾಹ ಫಿಕ್ಸ್ ಆಗಿತ್ತು. ಇನ್ನು ಕೆಲವೇ ದಿನದಲ್ಲಿ ತೇಜಸ್ ಜೊತೆ ಮದುವೆ ಕೂಡ ಆಗುವುದರಲ್ಲಿ ಇತ್ತು. ಆದರೆ, ಈ ವಿವಾಹ ಹೇಗೋ ಮುರಿದು ಬಿದ್ದಿದೆ. ಕೊನೆಯ ಕ್ಷಣದಲ್ಲಿ ಆ ಹುಡುಗ ಹಿಂದಕ್ಕೆ ಸರಿದಿದ್ದಾನೆ. ಈ ವೇಳೆ ನಿತ್ಯಾ ಪ್ರೆಗ್ನೆಂಟ್ ಎಂಬ ವಿಚಾರವೂ ಪ್ರೋಮೋದಲ್ಲಿ ರಿವೀಲ್ ಆಗಿದೆ. ‘ನಿತ್ಯಾ ಒಡಲಲ್ಲಿ ಅಡಗಿದ ಸತ್ಯಕ್ಕೆ ನಾಡಿ ಬಡಿತವೇ ಸಾಕ್ಷಿ’ ಎಂದು ಪ್ರೋಮೋದಲ್ಲಿ ಹೇಳಲಾಗಿದೆ. ಈ ಮೂಲಕ ಆಕೆ ಪ್ರೆಗ್ನೆಂಟ್ ಎಂಬ ವಿಚಾರ ರಿವೀಲ್ ಆಗಿದೆ. ಈ ಟ್ವಿಸ್ಟ್ ಅನೇಕರಿಗೆ ಬೇಸರ ಮೂಡಿಸಿದೆ. ಮುಂದೆ ಕರ್ಣ ನಿತ್ಯಾ ನಿಧಿಯನ್ನೂ ಮದುವೆ ಆಗಬಹುದು ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.