‘ತನಿಷಾ ನನಗೆ ಅಕ್ಕ ಇದ್ದಂತೆ, ನೋವಾಗಿದ್ದರೆ ಅವರಿಗೆ ಕ್ಷಮೆ ಕೇಳುತ್ತೇನೆ’; ನೇರವಾಗಿ ಹೇಳಿದ ವರ್ತೂರು ಸಂತೋಷ್
ತನಿಷಾ ಕುಪ್ಪಂಡ ಹಾಗೂ ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಮನರಂಜನೆ ನೀಡಿದರು. ಇಬ್ಬರೂ ಒಟ್ಟಾಗಿ ಡ್ಯಾನ್ಸ್ ಮಾಡಿದ್ದು ಇದೆ. ಈ ಜೋಡಿಯನ್ನು ಅನೇಕರು ಇಷ್ಟಪಟ್ಟರು. ಇವರು ದೊಡ್ಮನೆಯಿಂದ ಹೊರ ಬಂದ ಬಳಿಕವೂ ಒಟ್ಟಾಗಿ ಕಾಣಿಸಿಕೊಂಡ ಉದಾಹರಣೆ ಇದೆ. ಆಗ ಕೆಲವು ವದಂತಿಗಳು ಹಬ್ಬಿದ್ದು ಸುಳ್ಳಲ್ಲ.

ವರ್ತೂರು ಸಂತೋಷ್ ಹಾಗೂ ಬೆಂಕಿ ತನಿಷಾ ಕುಪ್ಪಂಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಒಟ್ಟಾಗಿ ಸ್ಪರ್ಧೆ ಮಾಡಿದ್ದರು. ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಇವರ ಕೆಮಿಸ್ಟ್ರಿ ನೋಡಿ ಎಲ್ಲರೂ ಫಿದಾ ಆಗಿದ್ದರು ಎಂದರೂ ತಪ್ಪಾಗಲಾರದು. ಈಗ ತನಿಷಾ ಅವರನ್ನು ವರ್ತೂರು ಸಂತೋಷ್ ಅವರು ಅಕ್ಕ ಎಂದು ಕರೆದಿದ್ದಾರೆ. ಅವರ ಬಳಿ ಕ್ಷಮೆ ಕೂಡ ಕೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತನಿಷಾ ಕುಪ್ಪಂಡ ಹಾಗೂ ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಮನರಂಜನೆ ನೀಡಿದರು. ಇಬ್ಬರೂ ಒಟ್ಟಾಗಿ ಡ್ಯಾನ್ಸ್ ಮಾಡಿದ್ದು ಇದೆ. ಈ ಜೋಡಿಯನ್ನು ಅನೇಕರು ಇಷ್ಟಪಟ್ಟರು. ಇವರು ದೊಡ್ಮನೆಯಿಂದ ಹೊರ ಬಂದ ಬಳಿಕವೂ ಒಟ್ಟಾಗಿ ಕಾಣಿಸಿಕೊಂಡ ಉದಾಹರಣೆ ಇದೆ. ಆಗ ಕೆಲವು ವದಂತಿಗಳು ಹಬ್ಬಿದ್ದು ಸುಳ್ಳಲ್ಲ.
ವರ್ತೂರು ಸಂತೋಷ್ ಹಾಗೂ ತನಿಷಾ ಕುಪ್ಪಂಡ ಮದುವೆ ಆಗಬೇಕು ಎಂದು ಕೆಲವು ಅಭಿಮಾನಿಗಳು ಬಯಸಿದ್ದೂ ಇದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಳ್ಳಲಾಗಿತ್ತು. ಆದರೆ, ಇದನ್ನು ವರ್ತೂರು ಸಂತೋಷ್ ಅಲ್ಲಗಳೆಯುತ್ತಲೇ ಬರುತ್ತಿದ್ದರು. ನಾವಿಬ್ಬರೂ ಫ್ರೆಂಡ್ಸ್ ಎನ್ನುತ್ತಿದ್ದರು. ಈಗ ತನಿಷಾನ ಅಕ್ಕ ಎಂದು ಕರೆದಿದ್ದಾರೆ. ‘ಸಿನಿ ಸ್ಟೋರ್ ಕನ್ನಡ’ ಇನ್ಸ್ಟಾ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.
View this post on Instagram
‘ತನಿಷಾ ಅವರು ನನ್ನ ಜೊತೆ ಬಿಗ್ ಬಾಸ್ ಸ್ಪರ್ಧಿ ಆಗಿದ್ದರು. ಅವರಿಗೆ ಅಕ್ಕನ ಸ್ಥಾನ ನೀಡಿದ್ದೇನೆ. ಕೆಲವೊಂದು ಕೇಳಿ ನನಗೆ ಕಿವಿ ತೂತು ಬಿತ್ತು. ಅವರಿಗೂ ಕೆಲವೊಮ್ಮೆ ಮುಜುಗರ ಆಯ್ತು. ಬಿಗ್ ಬಾಸ್ನಲ್ಲಿ ಅವರು ಕೆಂಪು ಬಣ್ಣದ ಸೀರೆ ಉಟ್ಟು ಬಂದಾಗ ನಾನು ಅವರಿಗೆ ಅಕ್ಕ ಎಂದೇ ಕರೆದಿದ್ದು. ವಿಡಿಯೋನ ಈಗಲೂ ಬೇಕಿದ್ರೆ ನೋಡಬಹುದು’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ ವೇದಿಕೆ ಮೇಲೆ ವರ್ತೂರು ಸಂತೋಷ್ ಅನ್ನು ನೆನಪಿಸಿಕೊಂಡ ಸುದೀಪ್
‘ಇಬ್ಬರಿಗೂ ಮುಜುಗರ ಆಗಿದೆ. ನನ್ನ ವೈಯಕ್ತಿಕ ನಿಮ್ಮ ಬಳಿ ಕೇಳೋದು, ನಿಮ್ಮ ವೈಯಕ್ತಿಕ ನನ್ನ ಬಳಿ ಕೇಳೋದು ಎಷ್ಟು ಸರಿ? ನನ್ನಿಂದ ಬೇಸರ ಆಗಿದ್ದರೆ ತನಿಷಾಗೆ ಹಾಗೂ ಅವರ ಫ್ಯಾನ್ಸ್ಗೆ ಕ್ಷಮೆ ಕೇಳುತ್ತೇನೆ. ತನಿಷಾಗೆ ನನ್ನ ಅಕ್ಕನ ಸ್ಥಾನ’ ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







