ಹೃದಯಾಘಾತ: ಅಣ್ಣನಿಗಾಗಿ ಬೆಂಗಳೂರಿಗೆ ಓಡೋಡಿ ಬಂದಿದ್ದ ರಜನಿಕಾಂತ್ ವಿಡಿಯೋ ವೈರಲ್
ನಟ ರಜನಿಕಾಂತ್ ಅವರು ಚೆನ್ನೈನಿಂದ ಬೆಂಗಳೂರಿಗೆ ಆಗಮಿಸಿ ಸಹೋದರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರ ಸಲಹೆ ಮೇರೆಗೆ 2 ದಿನಗಳ ಕಾಲ ಸತ್ಯನಾರಾಯಣ ರಾವ್ ಗಾಯಕ್ವಾಡ್ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಶನಿವಾರ (ನ.8) ಡಿಸ್ಚಾರ್ಜ್ ಆಗಿದ್ದಾರೆ. ಆ ಸಂದರ್ಭದ ವಿಡಿಯೋ ಈಗ ವೈರಲ್ ಆಗುತ್ತಿದೆ.
ಇತ್ತೀಚೆಗೆ ರಜನಿಕಾಂತ್ ಅವರ ಸಹೋದರ ಸತ್ಯನಾರಾಯಣ ರಾವ್ ಗಾಯಕ್ವಾಡ್ ಅವರಿಗೆ ಹೃದಯಾಘಾತ (Heart Attack) ಆಗಿತ್ತು. ಆದರೆ ಆಸ್ಪತ್ರೆಗೆ ದಾಖಲಾಗಲು ಅವರು ನಿರಾಕರಿಸಿದ್ದರು. ಹಾಗಾಗಿ ಸ್ವತಃ ರಜನಿಕಾಂತ್ ಅವರು ಚೆನ್ನೈನಿಂದ ಬೆಂಗಳೂರಿಗೆ ಬಂದು ಸಹೋದರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರ ಸಲಹೆಯಂತೆ 2 ದಿನಗಳ ಕಾಲ ಚಿಕಿತ್ಸೆ ನೀಡಲಾಗಿದೆ. ಶನಿವಾರ (ನವೆಂಬರ್ 8) ಆಸ್ಪತ್ರೆಯಿಂದ ಸತ್ಯನಾರಾಯಣ (Sathyanarayana Rao Gaikwad) ಅವರು ಡಿಸ್ಚಾರ್ಜ್ ಆಗಿದ್ದಾರೆ. ಅಣ್ಣನ ಆರೈಕೆಗಾಗಿ ಬೆಂಗಳೂರಿಗೆ ದೌಡಾಯಿಸಿದ್ದ ರಜನಿಕಾಂತ್ ಅವರು ಸಂಜೆ ತನಕ ಅಣ್ಣನ ಜೊತೆಯಲ್ಲೇ ಇದ್ದರು. ಬಳಿಕ ಅವರು ಚೆನ್ನೈಗೆ ವಾಪಸ್ ತೆರಳಿದರು. ಆ ಸಂದರ್ಭದ ವಿಡಿಯೋ ಈಗ ವೈರಲ್ ಆಗುತ್ತಿದೆ. ಮತ್ತೆ ಸಹೋದರನ ಆರೋಗ್ಯ ವಿಚಾರಿಸಲು ರಜನಿಕಾಂತ್ (Rajinikanth) ಅವರು ಬೆಂಗಳೂರಿಗೆ ಬರುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

