PG Boys Assault Case: ಮನೆಗೆ ನುಗ್ಗಿ ಗಲಾಟೆ ಮಾಡಿದ PG ಹುಡುಗರು
ಬೆಂಗಳೂರಿನ ಯಲಹಂಕದ ಮುನೇಶ್ವರ ಬಡಾವಣೆಯಲ್ಲಿ ಶುಕ್ರವಾರ ರಾತ್ರಿ ಪಿಜಿ ಹುಡುಗರು ಶ್ರೀನಿವಾಸ್ ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. 30ರಿಂದ 50 ಜನರ ಗುಂಪು ಗೇಟ್ ಒಡೆದು ಪ್ರವೇಶಿಸಿ, ಮನೆಯವರ ಮೇಲೆ ಹಲ್ಲೆ ನಡೆಸಿ, ಮಹಿಳೆಯ ಸರ ಕದಿಯಲು ಯತ್ನಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಶ್ರೀನಿವಾಸ್ ಕುಟುಂಬ ಪೊಲೀಸ್ ದೂರು ದಾಖಲಿಸಿದೆ.
ಬೆಂಗಳೂರು, ನವೆಂಬರ್ 9: ಯಲಹಂಕದ ಮುನೇಶ್ವರ ಬಡಾವಣೆಯಲ್ಲಿ ಶುಕ್ರವಾರ ರಾತ್ರಿ 10:45ರ ಸುಮಾರಿಗೆ ಪಿಜಿ ಹುಡುಗರಿಂದ ದಂಪತಿಗಳ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ. ಶ್ರೀನಿವಾಸ್ ಮತ್ತು ಅವರ ಪತ್ನಿ ಪ್ರಮಿಳಾ ಅವರ ಮನೆಯ ಮೇಲೆ 30ರಿಂದ 50 ಜನ ಯುವಕರ ಗುಂಪು ದಾಳಿ ನಡೆಸಿದೆ ಎಂದು ಕುಟುಂಬ ಆರೋಪಿಸಿದೆ.
ಪ್ರಮಿಳಾ ಪಕ್ಕದ ಮನೆಯಲ್ಲಿ ಕೇರಳ ಮೂಲದ ಮೋಹನ್ ಮತ್ತು ರಕ್ಷಿತ್ ವಾಸವಿದ್ದರು. ಮೋಹನ್ ಮನೆಯಯಲ್ಲಿ ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮಕ್ಕೆ ಬರುತ್ತಿದ್ದ ಸಂಬಂಧಿಕರೊಬ್ಬರಿಗೆ ಪ್ರಮಿಳಾ ಮಗ ಬೈದಿದ್ದ. ಈ ವಿಷಯ ತ ಮೋಹನ್ ಮತ್ತು ರಕ್ಷಿತ್ ಎಂಬುವರ ಪ್ರಚೋದನೆಯಿಂದ ಮಲಯಾಳಿ ಪಿಜಿ ಹುಡುಗರು ಗಲಾಟೆ ಮಾಡಿದ್ದಾರೆಂದು ಪ್ರಮಿಳಾ ಆರೋಪಿಸಿದ್ದಾರೆ. ಶ್ರೀನಿವಾಸ್ ನೈಟ್ ಡ್ಯೂಟಿಯಿಂದ ಬಂದಾಗ, ಅವರ ಮೇಲೂ ಹಲ್ಲೆ ನಡೆಸಲಾಗಿದೆ. ಪೊಲೀಸರಿದ್ದರೂ ಲೆಕ್ಕಿಸದೆ ನೆರೆಹೊರೆಯವರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಶ್ರೀನಿವಾಸ್ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

