AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಸತತ 2ನೇ ಪಂದ್ಯದಲ್ಲಿ ಸ್ಮರಣೀಯ ಶತಕ ಬಾರಿಸಿದ ದೇವದತ್ ಪಡಿಕ್ಕಲ್

Devdutt Padikkal century: ಕೊಲಂಬೊದಲ್ಲಿ ನಡೆಯುತ್ತಿರುವ ಭಾರತ-ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಇದು ಸರಣಿಯಲ್ಲಿ ಅವರ ಸತತ ಎರಡನೇ ಶತಕ ಹಾಗೂ ವೃತ್ತಿಜೀವನದ ಎರಡನೇ ಟೆಸ್ಟ್ ಶತಕವಾಗಿದೆ. ಪಡಿಕ್ಕಲ್ ಅವರ ಅಮೋಘ ಪ್ರದರ್ಶನದಿಂದ ಟೀಂ ಇಂಡಿಯಾ 250 ರನ್‌ಗಳ ಗಡಿ ದಾಟಿ ಬೃಹತ್ ಮೊತ್ತದತ್ತ ಸಾಗಿದೆ. ಈ ಶತಕ ಭಾರತಕ್ಕೆ ಉತ್ತಮ ಬುನಾದಿ ಹಾಕಿಕೊಟ್ಟಿದೆ.

IND vs SL: ಸತತ 2ನೇ ಪಂದ್ಯದಲ್ಲಿ ಸ್ಮರಣೀಯ ಶತಕ ಬಾರಿಸಿದ ದೇವದತ್ ಪಡಿಕ್ಕಲ್
Devdutt Padikkal
ಪೃಥ್ವಿಶಂಕರ
|

Updated on:Aug 23, 2026 | 5:06 PM

Share

ಕೊಲಂಬೊದಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ (India vs Sri Lanka ) ನಡುವಿನ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಟೀಂ ಇಂಡಿಯಾ ಪರ ಕನ್ನಡಿಗ ದೇವದತ್ ಪಡಿಕ್ಕಲ್ ( Devdutt Padikkal) ತಮ್ಮ ಅಮೋಘ ಪ್ರದರ್ಶನವನ್ನು ಎರಡನೇ ಟೆಸ್ಟ್​ನಲ್ಲೂ ಮುಂದುವರೆಸಿ ಸ್ಮರಣೀಯ ಶತಕ ಬಾರಿಸಿದ್ದಾರೆ. ಈ ಸರಣಿಯಲ್ಲಿ ಪಡಿಕ್ಕಲ್ ಅವರ ಸತತ ಎರಡನೇ ಶತಕವಾಗಿದ್ದರೆ, ಅವರ ಟೆಸ್ಟ್ ವೃತ್ತಿಜೀವನದ ಎರಡನೇ ಶತಕವೂ ಇದಾಗಿದೆ. ಪಡಿಕ್ಕಲ್ ಅವರ ಶತಕದ ನೆರವಿನಿಂದ ಟೀಂ ಇಂಡಿಯಾ 250 ರನ್​ಗಳ ಗಡಿ ದಾಟಿದ್ದು, ದೊಡ್ಡ ಮೊತ್ತ ಪೇರಿಸುವತ್ತ ಹೆಜ್ಜೆ ಇಟ್ಟಿದೆ.

ಗಿಲ್ ಜೊತೆಗೆ 120 ರನ್​ಗಳ ಜೊತೆಯಾಟ

ಮೊದಲು ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ಸಾಧಾರಣ ಆರಂಭ ಲಭಿಸಿತು. ಮೊದಲ ವಿಕೆಟ್​ಗೆ ರಾಹುಲ್ ಮತ್ತು ಜೈಸ್ವಾಲ್ 37 ರನ್​ಗಳ ಜೊತೆಯಾಟ ನೀಡಿದರು. 18 ರನ್​ ಬಾರಿಸಿ ರಾಹುಲ್ ಔಟಾದ ಬಳಿಕ ಬ್ಯಾಟಿಂಗ್​ಗೆ ಬಂದ ಪಡಿಕ್ಕಲ್ ಮೊದಲ ಟೆಸ್ಟ್​ನಲ್ಲಿ ಎಲ್ಲಿಗೆ ನಿಲ್ಲಿಸಿದ್ದರೋ ಅಲ್ಲಿಂದಲೇ ತಮ್ಮ ಆಟವನ್ನು ಮುಂದುವರೆಸಿದರು. ಇದರ ಫಲವಾಗಿ ಪಡಿಕ್ಕಲ್ ದಿನದಾಟದ ಎರಡನೇ ಸೆಷನ್​ನಲ್ಲಿ 90 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದರು. ಇದರ ಜೊತೆಗೆ ಪಡಿಕ್ಕಲ್ ನಾಯಕ ಶುಭ್​ಮನ್ ಗಿಲ್ ಜೊತೆಗೆ ಮೂರನೇ ವಿಕೆಟ್​ಗೆ 120 ರನ್​ಗಳ ಜೊತೆಯಾಟವನ್ನು ನಿರ್ಮಿಸಿದರು.

ದಿಗ್ಗಜರ ಪಟ್ಟಿಯಲ್ಲಿ ಸ್ಥಾನ

ನಾಯಕ ಶುಭ್​ಮನ್ ಗಿಲ್ ಔಟಾದ ಬಳಿಕ ತಂಡದ ಇನ್ನಿಂಗ್ಸ್ ನಿಭಾಯಿಸಿದ ದೇವದತ್ ಪಡಿಕ್ಕಲ್ 7ನೇ ಓವರ್​ನಲ್ಲಿ ಸತತ ಎರಡು ಬೌಂಡರಿ ಹಾಗೂ 1 ಸಿಂಗಲ್ ಕದಿಯುವ ಮೂಲಕ ತಮ್ಮ ಎರಡನೇ ಶತಕವನ್ನು 178 ಎಸೆತಗಳಲ್ಲಿ ಪೂರೈಸಿದರು. ಈ ಮೂಲಕ ಪಡಿಕ್ಕಲ್ ಶ್ರೀಲಂಕಾದಲ್ಲಿ ಎರಡು ಟೆಸ್ಟ್ ಶತಕಳನ್ನು ಬಾರಿಸಿದ್ದ ದಿಗ್ಗಜರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಪಡಿಕ್ಕಲ್​ಗೂ ಮೊದಲು ವಿನೋದ್ ಕಾಂಬ್ಳಿ, ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ಶಿಖರ್ ಧವನ್ ಈ ಸಾಧನೆ ಮಾಡಿದ್ದರು. ಇದರರ್ಥ ಪಡಿಕ್ಕಲ್ ಶ್ರೀಲಂಕಾ ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ ಎರಡು ಶತಕಗಳನ್ನು ಬಾರಿಸಿದ ಏಳನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು.

IND vs SL: 2ನೇ ಟೆಸ್ಟ್​ನಲ್ಲೂ ಮಿಂಚಿದ ದೇವದತ್ ಪಡಿಕ್ಕಲ್

3ನೇ ಕ್ರಮಾಂಕದಲ್ಲಿ ಐತಿಹಾಸಿಕ ಶತಕ

ಸಾಯಿ ಸುದರ್ಶನ್ ಗಾಯಗೊಂಡ ಕಾರಣದಿಂದಾಗಿ ಮೂರನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆದಿರುವ ಪಡಿಕ್ಕಲ್ ಈ ಕ್ರಮಾಂಕದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಮೊದಲ ಟೆಸ್ಟ್​ನಲ್ಲಿ ಕ್ರಮವಾಗಿ 167 ಮತ್ತು 44 ರನ್​ಗಳ ಇನ್ನಿಂಗ್ಸ್ ಆಡಿದ್ದ ಪಡಿಕ್ಕಲ್ ಇದೀಗ ಎರಡನೇ ಟೆಸ್ಟ್​ನಲ್ಲೂ 117 ರನ್​​ಗಳ ಇನ್ನಿಂಗ್ಸ್ ಆಡಿದರು. ಇದರೊಂದಿಗೆ ಪಡಿಕ್ಕಲ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿ ಭಾರತದ ಪರ ಅತಿ ಹೆಚ್ಚು ಶತಕಗಳನ್ನು ಬಾರಿಸಿದ್ದ ದಾಖಲೆಯಲ್ಲಿ 6ನೇ ಸ್ಥಾನದಲ್ಲಿದ್ದ ಪಾಲಿ ಉಮ್ರಿಗರ್​ ಅವರನ್ನು ಸರಿಗಟ್ಟಿದ್ದಾರೆ. ಈ ಪಟ್ಟಿಯಲ್ಲಿ 28 ಶತಕಗಳನ್ನು ಬಾರಿಸಿರುವ ರಾಹುಲ್ ದ್ರಾವಿಡ್ ಮೊದಲ ಸ್ಥಾನದಲ್ಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:26 pm, Sun, 23 August 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ